ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ ಬೈಡನ್ ಬಲ, ನಡುಗುತ್ತಿದೆ ಚೀನಿಯರ ಬುಡ..!

|
Google Oneindia Kannada News

ಅಮೆರಿಕ ಅಧ್ಯಕ್ಷೀಯ ಚುನಾವಣೆ ಮುಗಿದಾಗಿದೆ, ಫಲಿತಾಂಶ ಹೊರಬಿದ್ದು ಜೋ ಬೈಡನ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದೂ ಆಗಿದೆ. ಆದರೆ ಈ ಹೊತ್ತಲ್ಲಿ ಜಗತ್ತಿನಾದ್ಯಂತ ಬೈಡನ್ ಆಯ್ಕೆಯ ಲಾಭ ಮತ್ತು ನಷ್ಟದ ಲೆಕ್ಕಾಚಾರ ಶುರುವಾಗಿದೆ. ಏಕೆಂದರೆ ಜಗತ್ತಿಗೆ ಇರುವುದು ಎರಡೇ ಸೂಪರ್ ಪವರ್ ದೇಶಗಳು. ಈ ಪೈಕಿ ರಷ್ಯಾ 2ನೇ ಸ್ಥಾನದಲ್ಲಿದ್ದರೆ ಮೊದಲ ಸ್ಥಾನದಲ್ಲಿ ಅಮೆರಿಕ ನಿಲ್ಲುತ್ತದೆ.

Recommended Video

Joe Biden ಅಧ್ಯಕ್ಷರಾಗುತ್ತಿದ್ದ ಹಾಗೆಯೇ ಭಾರತೀಯರಿಗೆ ಸಂತಸದ ಸುದ್ದಿ | Oneindia Kannada

ಅಮೆರಿಕ ಜಗತ್ತಿನ ಪಾಲಿಗೆ ದೊಡ್ಡಣ್ಣ ಕೂಡ ಹೌದು. ಚೀನಾ ರೀತಿಯ ಅದೆಷ್ಟೇ ದೇಶಗಳು ಬೆಳೆದು ನಿಂತರೂ ಸೂಪರ್ ಪವರ್ ಆಗಲು ಸದ್ಯದ ಮಟ್ಟಿಗೆ ಸಾಧ್ಯವಿಲ್ಲ. ಹೀಗಾಗಿಯೇ ಅಮೆರಿಕದ ಮೇಲೆ ಜಗತ್ತಿನ ಬಹುಪಾಲು ದೇಶಗಳು ಅವಲಂಬಿಸಿವೆ. ಈ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷರ ಆಯ್ಕೆ ಒಂದರ್ಥದಲ್ಲಿ ಜಗತ್ತಿನ ನಾಯಕನ ಆಯ್ಕೆಯೂ ಆಗಿತ್ತು.

ಅಮೆರಿಕದ 46ನೇ ಅಧ್ಯಕ್ಷ ಜೋಸೆಫ್ ಬೈಡನ್ ವ್ಯಕ್ತಿಚಿತ್ರಅಮೆರಿಕದ 46ನೇ ಅಧ್ಯಕ್ಷ ಜೋಸೆಫ್ ಬೈಡನ್ ವ್ಯಕ್ತಿಚಿತ್ರ

ಭಾರತದ ಪಾಲಿಗೆ ಈ ಮಾತು ಅಕ್ಷರಶಃ ಸತ್ಯ. ಏಕೆಂದರೆ ಭಾರತ-ಅಮೆರಿಕ ಪಾಲಿಗೆ ಸಮಾನ ಶತ್ರು ಚೀನಾ ಅಹಂಕಾರ ಬಗ್ಗುಬಡಿಯಲು ಅಮೆರಿಕ ಬೆಂಬಲ ಅನಿವಾರ್ಯ. ಭಾರತ ಮಾತ್ರವಲ್ಲ ಇದೇ ರೀತಿ ಜಗತ್ತಿನ ವಿವಿಧ ರಾಷ್ಟ್ರಗಳು ಅಮೆರಿಕದ ಮೇಲೆ ಅವಲಂಬಿತವಾಗಿವೆ. ಅದರ ಸಂಪೂರ್ಣ ವಿವರ ಮುಂದೆ ನೋಡೋಣ.

ಭಾರತಕ್ಕೆ ಬಲವೇ ರಷ್ಯಾ-ಅಮೆರಿಕ

ಭಾರತಕ್ಕೆ ಬಲವೇ ರಷ್ಯಾ-ಅಮೆರಿಕ

ಜಗತ್ತಿನ ಪಾಲಿಗೆ ಅಮೆರಿಕ ದೊಡ್ಡಣ್ಣನಾಗಿದ್ದರೆ, ಭಾರತ ಎಲ್ಲರಿಗೂ ಬೇಕಾದ ಸ್ನೇಹಿತ. ಅಕ್ಕಪಕ್ಕದ ಕೆಲವು ನರಿ ಬುದ್ಧಿ ರಾಷ್ಟ್ರಗಳನ್ನು ಬಿಟ್ಟರೆ ಇಡೀ ಜಗತ್ತು ಭಾರತದ ಸಂಬಂಧವನ್ನು ಬಯಸುತ್ತದೆ. ಪಾಕಿಸ್ತಾನ ಮತ್ತು ಚೀನಾ ನಾಯಕರಿಗೆ ಇದೇ ಹೊಟ್ಟೆ ಉರಿ. ಅದರಲ್ಲೂ ರಷ್ಯಾ ಪಾಲಿಗೆ ಭಾರತ ಪರಮಾಪ್ತ ಗೆಳೆಯ. ಇನ್ನು ಅಮೆರಿಕದ ಕತೆ ಎಲ್ಲರಿಗೂ ತಿಳಿದಿದೆ. ಗೆದ್ದ ಎತ್ತಿನ ಬಾಲ ಇಡಿಯುವುದು ಅಮೆರಿಕದ ನಾಯಕರ ಮನಸ್ಥಿತಿ. ಅಲ್ಲಿ ಯಾವ ಪಕ್ಷ ಅಥವಾ ಯಾವುದೇ ನಾಯಕ ಅಧಿಕಾರಕ್ಕೆ ಬಂದರೂ ಇದೇ ಸ್ಥಿತಿ ಇರುತ್ತದೆ.

ಹೀಗೆ ಅಮೆರಿಕದ ದ್ವಂದ್ವ ನಿಲುವು ತಾಳಿದ ಪರಿಣಾಮ ಇಂದು ಚೀನಾ ಅಗಾಧವಾಗಿ ಬೆಳೆದು ನಿಂತಿದೆ. ಅಮೆರಿಕದ ನಾಯಕರು ಈಗಿನ ರೀತಿ ಈ ಹಿಂದೆಯೇ ಭಾರತವನ್ನು ಸಂಪೂರ್ಣವಾಗಿ ಬೆಂಬಲಿಸಿದ್ದರೆ, ಅಮೆರಿಕದ ಬುಡ ಅಲುಗಾಡುತ್ತಿರಲಿಲ್ಲ. ಚೀನಾ ನಂಬರ್ ಒನ್ ಪಟ್ಟಕ್ಕೆ ಅಮೆರಿಕದ ಜೊತೆ ಪೈಪೋಟಿಗೆ ನಿಲ್ಲುತ್ತಿರಲಿಲ್ಲ. ಆದರೆ ಅಮೆರಿಕ ನಾಯಕರ ಡಬಲ್ ಗೇಮ್ ಉಲ್ಟಾ ಹೊಡೆದಿದೆ. ಇದನ್ನ ಅರ್ಥ ಮಾಡಿಕೊಂಡಿರುವ ಅಮೆರಿಕ ಭಾರತಕ್ಕೆ ಸಂಪೂರ್ಣ ಬೆಂಬಲ ನೀಡುತ್ತಿದೆ. ಬೈಡನ್ ಕೂಡ ಇದನ್ನು ಮುಂದುವರಿಸಿಕೊಂಡು ಬರುವುದರಲ್ಲಿ ಅನುಮಾನವಿಲ್ಲ.

ಏಷ್ಯಾದಲ್ಲಿ ಭಾರತ ಬೇಕೆ ಬೇಕು..!

ಏಷ್ಯಾದಲ್ಲಿ ಭಾರತ ಬೇಕೆ ಬೇಕು..!

ಏಷ್ಯಾದಲ್ಲಿ ಬಲಾಢ್ಯ ರಾಷ್ಟ್ರಗಳು ಎಂದರೆ ಅದು ಭಾರತ ಹಾಗೂ ಚೀನಾ ಮಾತ್ರ. ಈಗಾಗಲೇ ಚೀನಾ ಅಮೆರಿಕ ಸಂಬಂಧ ಹಳಸಿದ್ದು, ಇದೇ ಕಾರಣಕ್ಕೆ ಏಷ್ಯಾದಲ್ಲಿ ತನ್ನ ಪ್ರಾಬಲ್ಯ ಉಳಿಸಿಕೊಳ್ಳಲು ಅಮೆರಿಕದ ನಾಯಕರಿಗೆ ಭಾರತ ಬೇಕೆ ಬೇಕು. ಇಷ್ಟಾದರೂ ಈ ಹಿಂದೆ ಪಾಕಿಸ್ತಾನದ ಬೆಂಬಲಕ್ಕೆ ನಿಂತಂತೆ ಈ ಬಾರಿ ಅಮೆರಿಕ ಪಾಕ್‌ ಸಪೋರ್ಟ್ ಪಡೆಯುವುದು ಅನುಮಾನ. ಇದಕ್ಕೆ ಹಲವು ಕಾರಣಗಳು ಇದ್ದರೂ, ಚೀನಾ ಜೊತೆಗಿನ ಪಾಕ್ ಸಂಬಂಧ ಹಾಗೂ ಭಯೋತ್ಪಾದನೆಗೆ ಪಾಪಿ ನಾಯಕರು ಬೆಂಬಲ ನೀಡುತ್ತಿರುವುದು ಪ್ರಮುಖ ಕಾರಣ. ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಹೇಳುವುದಾದರೆ ಅಮೆರಿಕ ಪ್ರಸಕ್ತ ಸ್ಥಿತಿಯಲ್ಲಿ ಪಾಕ್ ಜೊತೆ ಹೋಗಲಾರದು. ಆದರೆ ಭಾರತ ಅನಿವಾರ್ಯ. ಚೀನಾ ಮಗ್ಗುಲಲ್ಲೇ ಬೆಳೆದು ನಿಲ್ಲುತ್ತಿರುವ ಭಾರತಕ್ಕೆ ಬೆಂಬಲ ನೀಡಲೇಬೇಕಿದೆ. ಭಾರತವನ್ನು ಬೆಂಬಲಿಸಿದರೆ ಚೀನಾಗೆ ಮರ್ಮಾಘಾತ ನೀಡಿದಂತಾಗುತ್ತದೆ ಎಂಬುದು ಅಮೆರಿಕದ ಲೆಕ್ಕಾಚಾರ.

ಸೆನೆಟರ್, ಉಪಾಧ್ಯಕ್ಷ, POTUS ಬೈಡನ್ ಜತೆ ಒಬಾಮಾ ಗೆಳೆತನಸೆನೆಟರ್, ಉಪಾಧ್ಯಕ್ಷ, POTUS ಬೈಡನ್ ಜತೆ ಒಬಾಮಾ ಗೆಳೆತನ

ಭಾರತವನ್ನು ಬೈದಿದ್ದ ಡೊನಾಲ್ಡ್ ಟ್ರಂಪ್‌..!

ಭಾರತವನ್ನು ಬೈದಿದ್ದ ಡೊನಾಲ್ಡ್ ಟ್ರಂಪ್‌..!

ಕಳೆದ ತಿಂಗಳು ಅಮೆರಿಕ ಚುನಾವಣೆಗೆ ಮುನ್ನ ನಡೆದಿದ್ದ ಎಲೆಕ್ಷನ್ ಡಿಬೆಟ್ ಸಂದರ್ಭದಲ್ಲಿ ಭಾರತ ಗಾಳಿಗೆ ಹೊಲಸು ಎಂಬ ಪಟ್ಟಕಟ್ಟಿದ್ದ ಟ್ರಂಪ್ ವಿರುದ್ಧ ಬೈಡನ್ ಗರಂ ಆಗಿದ್ದರು. ಬೈಡನ್ ಟ್ರಂಪ್ ವರ್ತನೆಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದರು. ಅಲ್ಲದೆ ಭಾರತ ಅಮೆರಿಕದ ಸ್ನೇಹಿತ ರಾಷ್ಟ್ರ. ನಮ್ಮ ಸ್ನೇಹಿತ ರಾಷ್ಟ್ರದ ಜೊತೆ ಹೇಗೆ ವರ್ತಿಸಬೇಕು ಎಂಬುದನ್ನು ಮೊದಲು ಕಲಿ ಎಂದು ಟ್ರಂಪ್‌ಗೆ ವಾರ್ನಿಂಗ್ ಕೊಟ್ಟಿದ್ದರು. ಹೀಗೆ ಭಾರತವನ್ನು ಬೆಂಬಲಿಸುವುದಾಗಿ ಬೈಡನ್ ಸುಳಿವು ಕೊಟ್ಟಿದ್ದರು. ಅಲ್ಲದೆ ಚೀನಾ ವಿರುದ್ಧ ಟ್ರಂಪ್‌ಗಿಂತ ಹೆಚ್ಚಾಗಿ ಬೈಡನ್‌ಗೆ ಕೋಪವಿದೆ. ಚೀನಾ ವಿರುದ್ಧ ಸೇಡು ತೀರಿಸಿಕೊಳ್ಳಲು ಭಾರತವನ್ನು ಜೋ ಬೈಡನ್ ಬೆಂಬಲಿಸುವುದರಲ್ಲಿ ಅನುಮಾನವೇ ಇಲ್ಲ. ಈ ಭರವಸೆ ನಿಜವಾದರೆ ಭಾರತಕ್ಕೆ ಡಬಲ್ ಪ್ರಾಫಿಟ್ ಗ್ಯಾರಂಟಿ.

ಭಾರತೀಯರ ಬಲದಿಂದ ಬೈಡನ್ ಅಧ್ಯಕ್ಷ

ಭಾರತೀಯರ ಬಲದಿಂದ ಬೈಡನ್ ಅಧ್ಯಕ್ಷ

ಅಮೆರಿಕದ 46ನೇ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬೈಡನ್ ಭಾರತೀಯರ ಪರ ನಿಲ್ಲುವುದಕ್ಕೆ ಇನ್ನೊಂದು ಬಲವಾದ ಕಾರಣವಿದೆ. ಈ ಬಾರಿ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತೀಯರ ಮತಗಳು ಭಾರಿ ಪ್ರಭಾವ ಬೀರಿವೆ. ಸುಮಾರು 1 ಕೋಟಿಯಷ್ಟು ಭಾರತ ಮೂಲದ ಅಮೆರಿಕನ್ನರು ಬೈಡನ್ ಬೆಂಬಲಿಸಿದ್ದಾರೆ. ಹೀಗಾಗಿ ಭಾರತೀಯರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಲು ಬೈಡನ್ ಮುಂದಾಗಿದ್ದಾರೆ. ಪ್ರಮುಖವಾಗಿ ಬೈಡನ್ ವಲಸೆ ನೀತಿ ಭಾರತಕ್ಕೆ ಹಾಗೂ ಭಾರತೀಯರಿಗೆ ವರವಾಗುವ ಸಾಧ್ಯತೆ ದಟ್ಟವಾಗಿದೆ.

'ಅಮೆರಿಕ ಗ್ರೇಟ್' ಮಾಡಲು ಹೊರಟ ಟ್ರಂಪ್ ಸೋಲಿನಲ್ಲಿ ಈ ಪಾಠಗಳು ಇವೆಯೇ?'ಅಮೆರಿಕ ಗ್ರೇಟ್' ಮಾಡಲು ಹೊರಟ ಟ್ರಂಪ್ ಸೋಲಿನಲ್ಲಿ ಈ ಪಾಠಗಳು ಇವೆಯೇ?

 ಕಮಲಾ ಹ್ಯಾರಿಸ್ ಭಾರತ ಮೂಲದವರು

ಕಮಲಾ ಹ್ಯಾರಿಸ್ ಭಾರತ ಮೂಲದವರು

ಮೊಟ್ಟ ಮೊದಲಬಾರಿ ಅಮೆರಿಕದ ಮಹಿಳಾ ಉಪಾಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಳ್ಳುತ್ತಿರುವ ಭಾರತ ಮೂಲದ ಕಮಲಾ ಹ್ಯಾರಿಸ್ ಹಲವು ದಾಖಲೆಗಳನ್ನ ನಿರ್ಮಿಸಿದ್ದಾರೆ. ಅಲ್ಲದೆ ಕಮಲಾ ಆಯ್ಕೆ ಭಾರತಕ್ಕೆ ಹಾಗೂ ಭಾರತೀಯರಿಗೆ ದೊಡ್ಡ ಲಾಭ ತಂದುಕೊಡಲಿದೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಭಾರತದ ಆರ್ಥಿಕತೆಗೆ ಪೆಟ್ಟು ಬಿದ್ದಿದ್ದು, ಇಂತಹ ಸಂದರ್ಭದಲ್ಲಿ ಅಮೆರಿಕ ಭಾರತ ಜೊತೆಗಿರಲು ಕಮಲಾ ಹ್ಯಾರಿಸ್ ಕೂಡ ಸಹಾಯ ಮಾಡಬಹುದು. ಹಾಗೇ ಚೀನಿ ಗ್ಯಾಂಗ್‌ ಆಟೋಟೋಪ ತಗ್ಗಿಸಲು ಇದು ಸಹಕಾರಿ ಕೂಡ.

ಮಿಕ್ಕವರಿಗೆ ಏನು ಲಾಭ..?

ಮಿಕ್ಕವರಿಗೆ ಏನು ಲಾಭ..?

ಜಗತ್ತಿನಲ್ಲಿ ಏಷ್ಯಾ ರಾಷ್ಟ್ರಗಳು ಅನುಭವಿಸಿದಷ್ಟು ಕಿರುಕುಳವನ್ನು ಯಾವುದೇ ದೇಶಗಳು ಅನುಭವಿಸುತ್ತಿಲ್ಲ. ಈ ಪೈಕಿ ಚೀನಾ ನೀಡುತ್ತಿರುವ ಕಾಟಕ್ಕೆ ಭಾರತ ಸೇರಿದಂತೆ ದಕ್ಷಿಣ ಚೀನಾ ಸಮುದ್ರ ತೀರದ ದೇಶಗಳು ತತ್ತರಿಸಿ ಹೋಗಿವೆ. ಚೀನಾದ ಕುತಂತ್ರ ಬುದ್ಧಿಗೆ ವಿಯೇಟ್ನಾಂ, ತೈವಾನ್ ಮತ್ತಿತರ ರಾಷ್ಟ್ರಗಳು ಬೆಚ್ಚಿಬಿದ್ದಿವೆ. ಹೀಗಾಗಿ ತಮಗೆ ಅಮೆರಿಕದ ಬೆಂಬಲ ಬೇಕೆ ಬೇಕು ಎಂಬುದು ಈ ದೇಶಗಳ ಆಶಯ. ಆದರೆ ಈ ದೇಶಗಳು ಟ್ರಂಪ್ ಮತ್ತೆ ಆಯ್ಕೆಯಾದರೆ ಒಳಿತು ಎಂಬ ನಿಲುವು ಹೊಂದಿದ್ದವು. ಈಗ ಬೈಡನ್ ಆಯ್ಕೆಯಾಗಿದ್ದರೂ ಯಾವ ನಷ್ಟವೂ ಇಲ್ಲ. ಏಕೆಂದರೆ ಅಮೆರಿಕದ ಪಾಲಿಗೆ ಚೀನಾ ದೊಡ್ಡ ಶತ್ರು. ಈ ಶತ್ರು ನಾಶಕ್ಕೆ ಅಮೆರಿಕ ಬೆಂಬಲ ನೀಡುವುದು ಖಚಿತ. ಜಪಾನ್-ಅಮೆರಿಕ ಸಂಬಂಧ ಕೂಡ ಮತ್ತಷ್ಟು ಚೇತರಿಕೆ ಕಾಣುವ ಸಾಧ್ಯತೆ ಇದೆ.

ಯುರೋಪ್‌ಗೆ ಹಾಲು ಕುಡಿದಷ್ಟು ಖುಷಿ

ಯುರೋಪ್‌ಗೆ ಹಾಲು ಕುಡಿದಷ್ಟು ಖುಷಿ

ಅಮೆರಿಕ ಮತ್ತು ಯುರೋಪ್ ಸಂಬಂಧಕ್ಕೆ ನೂರಾರು ವರ್ಷ ಇತಿಹಾಸವಿದೆ. ಯುರೋಪ್ ಮೂಲದಿಂದ ವಲಸೆ ಹೋದವರೇ ಬಹುಪಾಲು ಅಮೆರಿಕದಲ್ಲಿ ನೆಲೆಸಿದ್ದು. ಆದರೆ ಟ್ರಂಪ್ ಆಡಳಿತದಲ್ಲಿ ಯುರೋಪ್ ಮತ್ತು ಅಮೆರಿಕ ಸಂಬಂಧ ಹಳಸಿತ್ತು. ಟ್ರಂಪ್ ರಷ್ಯಾಗೆ ಬೆಂಬಲ ನೀಡಲು ಯುರೋಪ್ ರಾಷ್ಟ್ರಗಳನ್ನ ಬಲಿ ಕೊಡುತ್ತಿದ್ದಾರೆ ಎಂಬ ಆರೋಪವಿತ್ತು. ಹೀಗಾಗಿ ಯುರೋಪ್‌ನ ಬಹುಪಾಲು ದೇಶಗಳು ಚೀನಾ ಬಳಿಯೇ ಸಹಾಯ ಕೇಳುವಂತಾಗಿತ್ತು. ಇದೇ ಕಾರಣಕ್ಕೆ ಕೆಲ ತಿಂಗಳ ಹಿಂದೆ ಜರ್ಮನಿ ಮತ್ತು ಚೀನಾ ನಡುವೆ ನಡೆದಿದ್ದ ಗಲಾಟೆಯನ್ನು ಸ್ಮರಿಸಬಹುದು. ಇದೀಗ ಬೈಡನ್ ಅಧ್ಯಕ್ಷರಾಗಿ ಬಂದಿರುವ ಬೆನ್ನಲ್ಲೇ ಮತ್ತೆ ಹಳೆಯ ಸಂಬಂಧ ಸುಧಾರಿಸುವ ಆಶಯದಲ್ಲಿ ಯುರೋಪ್ ರಾಷ್ಟ್ರಗಳಿವೆ. ಸಂಕಷ್ಟದಲ್ಲಿರುವ ಯುರೋಪ್‌ಗೆ ಬೈಡನ್ ದೊಡ್ಡ ಮೊತ್ತದ ಪ್ಯಾಕೇಜ್ ಘೋಷಿಸುವ ಸಾಧ್ಯತೆ ದಟ್ಟವಾಗಿದೆ.

ಜಾಗತಿಕ ಬದ್ಧತೆ ಪ್ರದರ್ಶನ

ಜಾಗತಿಕ ಬದ್ಧತೆ ಪ್ರದರ್ಶನ

ಟ್ರಂಪ್ ಮಾಡಿಕೊಂಡ ಎಡವಟ್ಟುಗಳು ಒಂದೆರಡಲ್ಲ. ಅದರಲ್ಲೂ ಅಮೆರಿಕದ ಮಾನ ಜಾಗತಿಕ ಮಟ್ಟದಲ್ಲಿ ಹರಾಜಾಗಲು ಟ್ರಂಪ್ ನೀಡಿರುವ ಹಲವು ಹೇಳಿಕೆಗಳೇ ಕಾರಣ. ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಟ್ರಂಪ್‌ ಜಾಗತಿಕ ಮಟ್ಟದ ಅನೇಕ ಸಂಘ-ಸಂಸ್ಥೆಗಳ ಜೊತೆ ಕಿತ್ತಾಡಿದ್ದರು. ಅಲ್ಲದೆ ಅಮೆರಿಕ ಅಂತಹ ಸಂಘಗಳಿಂದ ಹೊರ ಬರುವಂತೆ ಮಾಡಿದ್ದರು. ಆದರೆ ಬೈಡನ್ ಅಧಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಈ ಸಂಬಂಧ ಮತ್ತೆ ಸುಧಾರಿಸುವ ಲಕ್ಷಣಗಳು ಗೋಚರಿಸಿದೆ. ತಮ್ಮ ಗೆಲುವು ಅಧಿಕೃತವಾಗುವ ಮೊದಲೇ ಬೈಡನ್ ಸುಳಿವನ್ನು ಕೊಟ್ಟಿದ್ದರು. ತಾಪಮಾನ ಏರಿಕೆ ತಡೆ ಸಂಬಂಧ ನಡೆದಿದ್ದ ಪ್ಯಾರಿಸ್‌ ಒಪ್ಪಂದಕ್ಕೆ ಪುನಃ ಸೇರುವುದಾಗಿ ಬೈಡನ್ ಭರವಸೆ ನೀಡಿದ್ದರು. ಇದು ಟ್ರಂಪ್‌ಗೆ ಟಾಂಗ್ ಕೊಟ್ಟಿರುವುದಲ್ಲದೆ ಟ್ರಂಪ್ ಮಾಡಿರುವ ಡ್ಯಾಮೇಜ್ ಸರಿ ಮಾಡಲು ಬೈಡನ್ ಮುಂದಾಗಿರುವುದರ ಮುನ್ಸೂಚನೆಯೂ ಆಗಿದೆ.

English summary
Calculation of profits and losses has begun in Europe and Asia, after Joe Biden selecting as the 46th President of the United States.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X