ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಥಾಮಸ್ ಹಿಕ್ಕಿಯ 19 ನೇ ಶತಮಾನದ ಈ ಚಿತ್ರಕಲೆಯಲ್ಲಿರುವ ಮೈಸೂರಿನ ಮೂವರು ಮಹಿಳೆಯರು ಯಾರು?

|
Google Oneindia Kannada News

ಮೈಸೂರು, ಮೇ, 29: ಕೊರೊನಾ ಎರಡನೇ ಅಲೆಯ ಈ ಸಂದರ್ಭದಲ್ಲಿ ಭಾರತವು ತನ್ನ ಕೋವಿಡ್ -19 ಲಸಿಕೆ ಬೇಡಿಕೆಯನ್ನು ಪೂರೈಸಲು ಪ್ರಯತ್ನಿಸುತ್ತಿರುವಾಗ 19 ನೇ ಶತಮಾನದ ಮೈಸೂರಿನ ಮೂವರು ಮಹಿಳೆಯರ ಭಾವಚಿತ್ರವು ವೈರಲ್ ಆಗುತ್ತಿದೆ. ಭಾರತದ ವೈದ್ಯಕೀಯ ಇತಿಹಾಸದ ಪ್ರಮುಖ ವೈಜ್ಞಾನಿಕ ಚಿತ್ರಗಳಲ್ಲಿ ಈ ಮೈಸೂರಿನ ಮೂವರು ಮಹಿಳೆಯರ ಚಿತ್ರವೂ ಒಂದಾಗಿದೆ ಎಂದು ಹೇಳಲಾಗಿದೆ.

ವಾಡಿಯಾರ್‌ ರಾಜವಂಶದ ಈ ಮೂವರು ಮಹಿಳೆಯರು, ಈ ರಾಜವಂಶದ ಆಳ್ವಿಕೆಯ ಅವಧಿಯಲ್ಲಿ ಸಿಡುಬು ರೋಗಕ್ಕೆ ಲಸಿಕೆ ಪಡೆಯುವ ಕಾರ್ಯಕ್ರಮದಲ್ಲಿ ಜನರು ಭಾಗಿಯಾಗುವುದನ್ನು ಉತ್ತೇಜಿಸಲು ಈ ಚಿತ್ರ ರಚಿಲಾಗಿತ್ತು.

ಕೊರೊನಾವೈರಸ್ ಲಸಿಕೆ ಸಂಶೋಧನೆಯಲ್ಲಿ ಭಾರತವೇ ಬೆಸ್ಟ್!ಕೊರೊನಾವೈರಸ್ ಲಸಿಕೆ ಸಂಶೋಧನೆಯಲ್ಲಿ ಭಾರತವೇ ಬೆಸ್ಟ್!

ಸಿಡುಬು ರೋಗವು ಭಾರತದಲ್ಲಿ ಹಲವಾರು ಜೀವಗಳನ್ನು ಬಲಿಪಡೆದುಕೊಂಡಿತ್ತು. ಈ ಕೊರೊನಾ ಆರಂಭವಾದ ಸಂದರ್ಭದಲ್ಲಿ ಲಸಿಕೆ ಅಭಿವೃದ್ದಿ ಬಹುಮುಖ್ಯ ಪಾತ್ರವಹಿಸಿದ್ದಂತೆ ಆ ಸಂದರ್ಭದಲ್ಲಿ ಲಸಿಕೆ ಅಭಿವೃದ್ದಿ ಮುಖ್ಯ ಪಾತ್ರವಹಿಸಿತು. ಬಳಿಕೆ ಲಸಿಕೆ ಅಭಿಯಾನವು ನಡೆದಿದ್ದು ಇದು ಭಾರತದ ಮೊದಲ ಲಸಿಕೆ ಅಭಿಯಾನ ಎನ್ನಲಾಗಿದೆ.

ಲಸಿಕೆ ಅಭಿಯಾನ ಚಿತ್ರ ಎಂದು ಗುರುತಿಸಿದ ಇತಿಹಾಸಕಾರ ಡಾ. ನಿಗೆಲ್ ಚಾನ್ಸೆಲರ್

ಲಸಿಕೆ ಅಭಿಯಾನ ಚಿತ್ರ ಎಂದು ಗುರುತಿಸಿದ ಇತಿಹಾಸಕಾರ ಡಾ. ನಿಗೆಲ್ ಚಾನ್ಸೆಲರ್

1805 ರಲ್ಲಿ ಐರಿಶ್ ಮೂಲದ ಕಲಾವಿದ ಥಾಮಸ್ ಹಿಕ್ಕಿ ರಚಿಸಿದ್ದಾರೆ ಎಂದು ಹೇಳಲಾದ ಈ ಚಿತ್ರವು ಆರಂಭದಲ್ಲಿ ರಾಜಗೃಹದಲ್ಲಿ ನೃತ್ಯ ಮಾಡುವ ಯುವತಿಯರು ಅಥವಾ ವೇಶ್ಯೆಯರದ್ದು ಭಾವಿಸಲಾಗಿತ್ತು. ಆದರೆ ಈ ಬಗ್ಗೆ 1990 ರಲ್ಲಿ ಅಧ್ಯಯನ ಮಾಡಿದ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಇತಿಹಾಸಕಾರ ಡಾ. ನಿಗೆಲ್ ಚಾನ್ಸೆಲರ್, ಈ ಚಿತ್ರಕಲೆ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಭಾರತದ ಮೊದಲ ಲಸಿಕೆ ಅಭಿಯಾನದ ಭಾಗವಾಗಿ ಈ ಚಿತ್ರವನ್ನು ರಚಿಸಲಾಗಿದೆ. ವಾಡಿಯಾರ್ ರಾಜವಂಶದ ಮಹಿಳೆಯರು ಈ ಅಭಿಯಾನಕ್ಕಾಗಿ ಈ ಚಿತ್ರ ರಚನೆಗೆ ಪೋಸ್‌ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ವಿಶ್ವದಲ್ಲಿ 20 ಕೋಟಿಗೂ ಹೆಚ್ಚು ಮಂದಿ ಬಲಿ ಪಡೆದಿತ್ತು 'ದ ಬ್ಲ್ಯಾಕ್ ಡೆತ್'ವಿಶ್ವದಲ್ಲಿ 20 ಕೋಟಿಗೂ ಹೆಚ್ಚು ಮಂದಿ ಬಲಿ ಪಡೆದಿತ್ತು 'ದ ಬ್ಲ್ಯಾಕ್ ಡೆತ್'

ಈ ಮಹಿಳೆಯರು ಯಾರು?

ಈ ಮಹಿಳೆಯರು ಯಾರು?

ಇನ್ನು ಚಿತ್ರದಲ್ಲಿ ಬಲಭಾಗದಲ್ಲಿರುವ ಸಣ್ಣ ಪ್ರಾಯದ ಮಹಿಳೆಯನ್ನು ಮೂರನೇ ಕೃಷ್ಣರಾಜ ವಾಡಿಯಾರ್‌ರ ಕಿರಿಯ ರಾಣಿ ದೇವಜಮ್ಮನಿ ಎಂದು ಗುರುತಿಸಲಾಗಿದೆ. ಸಿಡುಬಿನ ವಿರುದ್ಧ ಲಸಿಕೆ ಹಾಕಲಾಗಿದೆ ಎಂದು ಸೂಚಿಸಲು ರಾಣಿ ತನ್ನ ಎಡಗೈ ಮೇಲೆ ಬಲಗೈ ಇರಿಸಿದ್ದಾರೆ ಎಂದು ಹೇಳಲಾಗಿದೆ. ಎಡಭಾಗದಲ್ಲಿರುವ ವಯಸ್ಸಾದ ರಾಣಿಯಾಗಿದ್ದು, ರಾಣಿಯ ಬಾಯಿಯ ಸುತ್ತ ವರ್ಣದ್ರವ್ಯವಿದೆ. ಇದು ಸಿಡುಬು ಇರುವ ಸಂಕೇತವಾಗಿರಬಹುದು, ಸಿಡುಬಿನಿಂದ ಶಾಶ್ವತ ರೋಗನಿರೋಧಕ ಶಕ್ತಿ ಕಳೆದುಕೊಂಡ ಪ್ರತೀಕವಾಗಿರಬಹುದು ಎಂದು ಹೇಳಲಾಗಿದೆ. ಇನ್ನು ಸೋಥೆಬಿಸ್‌ನಲ್ಲಿ 2007 ರಲ್ಲಿ ಮಾರಾಟವಾದ ಈ ಚಿತ್ರದಲ್ಲಿರುವ ಮಧ್ಯದ ಮಹಿಳೆ ರಾಜನ ಸಹೋದರಿಯರಲ್ಲಿ ಒಬ್ಬಾಕೆ ಎನ್ನಲಾಗಿದೆ.

ಸಿಡುಬು ಲಸಿಕೆ ಭಾರತಕ್ಕೆ ಹೇಗೆ ಮತ್ತು ಯಾವಾಗ ತಲುಪಿತು?

ಸಿಡುಬು ಲಸಿಕೆ ಭಾರತಕ್ಕೆ ಹೇಗೆ ಮತ್ತು ಯಾವಾಗ ತಲುಪಿತು?

ಮೊದಲಿಗೆ ಈಜಿಪ್ಟ್‌ನಲ್ಲಿ ಕಾಣಿಸಿಕೊಂಡಿದ್ದ ಈ ಸಿಡುಬು ಬಳಿಕ ವ್ಯಾಪಾರಿಗಳ ಮೂಲಕ ಭಾರತಕ್ಕೆ ಹಬ್ಬಿತು ಎಂದು ಹೇಳಲಾಗಿದೆ. ಕೃಷ್ಣರಾಜ ವಾಡಿಯಾರ್‌ರ ಆಳ್ವಿಕೆ ಅವಧಿಯಲ್ಲಿ ಈ ರೋಗವು ಹಲವಾರು ಮಂದಿಯ ಸಾವಿಗೆ ಕಾರಣವಾಗಿತ್ತು. 1796 ರಲ್ಲಿ ಎಡ್ವರ್ಡ್ ಜೆನ್ನರ್ ಕಂಡುಹಿಡಿದ ಸಿಡುಬು ಲಸಿಕೆ, ಅಭಿವೃದ್ಧಿಪಡಿಸಿದ ಮೊದಲ ಯಶಸ್ವಿ ಲಸಿಕೆ. ಜೂನ್ 14, 1802 ರಂದು, ಆಂಗ್ಲೋ-ಇಂಡಿಯನ್ ಅನ್ನಾ ಡಸ್ಟಾಲ್, ಈ ಸಿಡುಬಿನ ಇನ್ನೊಂದು ವಿಧವಾದ ದೊಡ್ಡ ಸಿಡುಬಿಗೆ ಮೊದಲು ಲಸಿಕೆ ಪಡೆದ ವ್ಯಕ್ತಿ. ಬಳಿಕ ಈ ಲಸಿಕೆಯು ಹೈದರಾಬಾದ್, ಕೊಚ್ಚಿನ್, ಮದ್ರಾಸ್ ಮತ್ತು ಮೈಸೂರು ಸೇರಿದಂತೆ ಭಾರತದ ವಿವಿಧ ಭಾಗಗಳಿಗೆ ರವಾನಿಸಲಾಗಿದೆ.

ಸಿಡುಬಿನ ದೇವಿ ಲಸಿಕೆಯಿಂದ ಕೋಪಗೊಳ್ಳುತ್ತಾಳೆ ಎಂಬ ನಂಬಿಕೆ

ಸಿಡುಬಿನ ದೇವಿ ಲಸಿಕೆಯಿಂದ ಕೋಪಗೊಳ್ಳುತ್ತಾಳೆ ಎಂಬ ನಂಬಿಕೆ

ಈ ಲಸಿಕೆಯನ್ನು ಗಾಜಿನ ಫಲಕಗಳ ನಡುವೆ ಮೊಹರು ಮಾಡಿ ಕಳುಹಿಸಿದರೂ ಅದು ದೀರ್ಘ ಪ್ರಯಾಣದಿಂದಾಗಿ ಲಸಿಕೆ ಕಾಲಾವಧಿ ಮುಗಿಯುತ್ತಿತ್ತು. ಈ ಕಾರಣದಿಂದಾಗಿ ಬ್ರಿಟಿಷರು ಪ್ರಾಥಮಿಕವಾಗಿ ಮಾನವ ಸರಪಳಿಯನ್ನು ಅವಲಂಬಿಸಬೇಕಾಯಿತು. ಆದರೆ ಭಾರತದ ಸ್ಥಳೀಯ ಜನರು ಈ ಲಸಿಕೆ ನೀಡುವಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದರು. ಭಾರತದಲ್ಲಿ ಹಿಂದೂಗಳು ಸಣ್ಣ ಸಿಡುಬು ಬಂದಾಗ ಶೀತಲಾ ದೇವಿ ಎಂಬ ದೇವತೆಯನ್ನು ಪೂಜಿಸಿದರೆ ಸಿಡುಬು ವಾಸಿಯಾಗುತ್ತದೆ ಎಂಬ ನಂಬಿಕೆ ಹೊಂದಿದ್ದರು. ಈಗಲೂ ಹಲವಾರು ಮಂದಿ ಸಿಡುಬು ಬಂದಾಗ ಮಾರಿಯಮ್ಮ ದೇವಿಯನ್ನು ಪೂಜಿಸುವುದು ಇದೆ. ಸಿಡುಬು ರೋಗಕ್ಕೆ ಲಸಿಕೆ ನೀಡಲು ಆರಂಭ ಮಾಡಿದ ಸಂದರ್ಭದಲ್ಲಿ ದೇಶದ ಗ್ರಾಮೀಣ ಜನರು ವಿರೋಧ ವ್ಯಕ್ತಪಡಿಸಿದ್ದು ಸಿಡುಬಿನ ದೇವಿಯು ಲಸಿಕೆ ಪಡೆದರೆ ಕೋಪಗೊಳ್ಳುತ್ತಾಳೆ ಎಂದು ಹೇಳುತ್ತಿದ್ದರು.

ಟಿಪ್ಪು ಸುಲ್ತಾನ್ ಮೈಸೂರಿನಲ್ಲಿ ಸೋಲನುಭವಿಸಿ, ವಾಡಿಯಾರ್‌ಗಳು ಮತ್ತೆ ಆಡಳಿತ ಆರಂಭಿಸಿದ ಬಳಿಕ ಈಸ್ಟ್ ಇಂಡಿಯಾ ಕಂಪನಿ ದಕ್ಷಿಣ ಭಾರತದಲ್ಲಿ ತನ್ನ ಸ್ಥಾನವನ್ನು ಬಲಪಡಿಸಲು ಮತ್ತು ತಮ್ಮ ದೇಶದಿಂದ ಬರುವ ವಲಸಿಗರನ್ನು ಸಾಂಕ್ರಾಮಿಕ ರೋಗದಿಂದ ರಕ್ಷಿಸಲು ಪ್ರಯತ್ನ ಮಾಡುತ್ತಿತ್ತು. ಇದಕ್ಕೆ ಲಸಿಕೆ ಅತೀ ಮುಖ್ಯ ಎಂದು ಅರಿತ ಈಸ್ಟ್ ಇಂಡಿಯಾ ಕಂಪನಿಯು ತನ್ನ ದೇಶದವರಿಗೆ ಲಸಿಕೆ ನೀಡಲು ಆರಂಭಿಸಿತ್ತು. ಸಿಡುಬು ರೋಗದಿಂದ ಪತಿಯನ್ನು ಕಳೆದುಕೊಂಡಿದ್ದ ರಾಣಿ ಲಕ್ಷ್ಮಿ ಅಮ್ಮನ್ನಿ, ಈ ಲಸಿಕೆ ಹಾಕಿಸಿಕೊಳ್ಳುವುದಕ್ಕೆ ಬೆಂಬಲ ವ್ಯಕ್ತಪಡಿಸಿದ್ದು ಮಾರಣಾಂತಿಕ ವೈರಸ್ ವಿರುದ್ಧ ತನ್ನ ಆಡಳಿತ ಪ್ರದೇಶದ ಜನರಿಗೆ ಲಸಿಕೆ ನೀಡಲು ಮುಂದಾದರು. ಈ ಚಿತ್ರಕಲೆ ದೇಶದ ಮೊದಲ ಲಸಿಕೆ ಅಭಿಯಾನದ ಭಾಗವಾಗಿದೆ ಎಂದು ಹೇಳಲಾಗಿದೆ.

English summary
A 19th century portrait of three women from Mysore has been going viral as "one of the most important scientific pictures in the history of medicine in India". Who are they, and what did the portrait depict?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X