ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಯಪಡಬೇಡಿ, ವೈಟ್ ಫಂಗಸ್ ಎಂಬ ಸೋಂಕೇ ಇಲ್ಲ ಎಂದ ವೈದ್ಯರು

|
Google Oneindia Kannada News

ನವದೆಹಲಿ, ಮೇ 22: ಕೊರೊನಾ ಸೋಂಕಿನಿಂದ ಗುಣಮುಖರಾಗುತ್ತಿರುವವರಲ್ಲಿ ಬ್ಲ್ಯಾಕ್ ಫಂಗಸ್ ಸೋಂಕು ಕಾಣಿಸಿಕೊಳ್ಳುತ್ತಿರುವ ಬೆನ್ನಲ್ಲೇ ಎರಡು ದಿನಗಳಿಂದೀಚೆಗೆ ವೈಟ್ ಫಂಗಸ್ ಪ್ರಕರಣಗಳು ಪತ್ತೆಯಾಗಿರುವುದು ಈಗಿರುವ ಆತಂಕವನ್ನು ಮತ್ತಷ್ಟು ಹೆಚ್ಚು ಮಾಡಿದೆ.

ಬಿಳಿ ಶಿಲೀಂಧ್ರ ಎಂಬ ಈ ಸೋಂಕು ಬ್ಲ್ಯಾಕ್ ಫಂಗಸ್‌ಗಿಂತಲೂ ಅತಿ ಹೆಚ್ಚು ಅಪಾಯಕಾರಿ ಎಂದು ಕೆಲವು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ ನಂತರ ಭೀತಿ ಇನ್ನಷ್ಟು ಹೆಚ್ಚಾಗಿತ್ತು. ಆದರೆ ಬಿಳಿ ಶಿಲೀಂಧ್ರ ಎಂಬ ಸೋಂಕೇ ಇಲ್ಲ. ಇದು ಕ್ಯಾಂಡಿಸಿಯಾಸಿಸ್ ಎಂಬ ಸಾಮಾನ್ಯ ಶಿಲೀಂಧ್ರ ಸೋಂಕು ಅಷ್ಟೆ. ಭಯ ಪಡುವ ಅಗತ್ಯವೇ ಇಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ. ಮುಂದೆ ಓದಿ...

ವೈಟ್ ಫಂಗಸ್ ಕುರಿತು ಚರ್ಚೆ

ವೈಟ್ ಫಂಗಸ್ ಕುರಿತು ಚರ್ಚೆ

ಗುರುವಾರ ಬಿಹಾರ, ಪಾಟ್ನಾದಲ್ಲಿ ವೈಟ್ ಫಂಗಸ್ ಪ್ರಕರಣ ಪತ್ತೆಯಾಗಿರುವುದಾಗಿ ವರದಿಯಾಗಿತ್ತು. ಆದರೆ ಪಾಟ್ನಾದ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಈ ವರದಿಯನ್ನು ತಳ್ಳಿಹಾಕಿದೆ. ಈ ಬೆನ್ನಲ್ಲೇ ಶುಕ್ರವಾರ ಉತ್ತರ ಪ್ರದೇಶದ ಮಾವ್‌ ಪ್ರದೇಶದಲ್ಲಿ 70 ವರ್ಷದ ವೃದ್ಧರೊಬ್ಬರಲ್ಲಿ ವೈಟ್ ಫಂಗಸ್ ಸೋಂಕು ಪತ್ತೆಯಾಗಿರುವುದಾಗಿ ವರದಿಯಾಗಿದೆ. ಈ ವೃದ್ಧನಿಗೆ ಹಿಂದೆ ಕೊರೊನಾ ಸೋಂಕು ಬಂದಿ‌ದ್ದು ಸೋಂಕಿನಿಂದ ಗುಣಮುಖರಾಗಿದ್ದರು. ಇದೀಗ ಹಲವು ರಾಜ್ಯಗಳಲ್ಲಿ ವೈಟ್ ಫಂಗಸ್ ಕುರಿತ ಚರ್ಚೆ ವಿಶ್ಲೇಷಣೆಗಳು ನಡೆಯುತ್ತಿವೆ.

"ವೈಟ್ ಫಂಗಸ್ ಎನ್ನುವುದು ತಪ್ಪು ಕಲ್ಪನೆ"

ವೈಟ್ ಫಂಗಸ್ ಎನ್ನುವುದು ತಪ್ಪು ಕಲ್ಪನೆ. ಇದು ಕ್ಯಾಂಡಿಡಿಯಾಸಿಸ್ ಎಂದು ಕರೆಯಲ್ಪಡುವ ಒಂದು ಸಾಮಾನ್ಯ ಶಿಲೀಂಧ್ರ ಸಮಸ್ಯೆಯಷ್ಟೆ. ಕ್ಯಾಂಡಿಡಾ ಎಂಬ ಶಿಲೀಂಧ್ರದಿಂದ ಸೋಂಕು ಉಂಟಾಗುತ್ತದೆ. ಇದು ಅತಿ ಸಾಮಾನ್ಯ ಶಿಲೀಂಧ್ರ ಸೋಂಕು ಎಂದು ಸೋಂಕು ತಜ್ಞ ಡಾ. ಈಶ್ವರ್ ಗಿಲಾಡಾ ತಿಳಿಸಿದ್ದಾರೆ. ಬ್ಲ್ಯಾಕ್‌ ಫಂಗಸ್‌ನಂತೆಯೇ, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ, ಮಧುಮೇಹಿಗಳಲ್ಲಿ ಹಾಗೂ ದೀರ್ಘಾವಧಿಯಿಂದ ಸ್ಟೆರಾಯ್ಡ್ ಬಳಕೆ ಮಾಡುತ್ತಿರುವವರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಕೊರೊನಾ ಸೋಂಕಿಗೆ ಸಹಜವಾಗಿ ಸ್ಟೆರಾಯ್ಡ್‌ಗಳ ಬಳಕೆ ಮಾಡುವುದರಿಂದ ಶಿಲೀಂಧ್ರ ಸೋಂಕು ಉಂಟಾಗಿರುತ್ತದೆ ಅಷ್ಟೆ ಎಂದು ತಿಳಿಸಿದ್ದಾರೆ.

"ಕ್ಯಾಂಡಿಡಿಯಾಸಿಸ್ ಅಪಾಯಕಾರಿಯಲ್ಲ"

ವೈಟ್ ಫಂಗಸ್ ಬ್ಲ್ಯಾಕ್ ಫಂಗಸ್‌ಗಿಂತ ಅಪಾಯಕಾರಿ ಎಂಬುದನ್ನು ಸಾಬೀತುಪಡಿಸುವ ಯಾವುದೇ ವರದಿಗಳಿಲ್ಲ ಎಂದಿದ್ದಾರೆ ವೈದ್ಯರು. ಬ್ಲ್ಯಾಕ್ ಫಂಗಸ್ ಅಥವಾ ಮ್ಯೂಕರ್‌ಮೈಕೋಸಿಸ್ ಎಂಬುದು ಅಪಾಯಕಾರಿಯಾಗಿದ್ದು, ಸೈನಸ್, ಕಣ್ಣು, ಮೆದುಳಿಗೆ ನೇರ ಹಾನಿ ಮಾಡುತ್ತದೆ. ಇದಕ್ಕೆ ಶಸ್ತ್ರಚಿಕಿತ್ಸೆಯನ್ನೂ ಮಾಡಬೇಕಾಗುತ್ತದೆ. ಆದರೆ ಕ್ಯಾಂಡಿಡಿಯಾಸಿಸ್‌ಗೆ ಸುಲಭವಾಗಿ ಚಿಕಿತ್ಸೆ ನೀಡಬಹುದು. ಇದು ಜೀವಕ್ಕೆ ಅಪಾಯಕಾರಿಯಲ್ಲ ಎಂದು ಬಾಂಬೆ ಆಸ್ಪತ್ರೆಯ ವೈದ್ಯ ಕಪಿಲ್ ಸಾಲ್ಗಿಯಾ ತಿಳಿಸಿದ್ದಾರೆ.

ಉತ್ತರಪ್ರದೇಶ: ಕೋವಿಡ್‌ನಿಂದ ಚೇತರಿಸಿಕೊಂಡ 70 ರ ವೃದ್ದನಲ್ಲಿ ವೈಟ್‌ ಫಂಗಸ್‌ ಸೋಂಕು ಪತ್ತೆ

"ಈ ಶಿಲೀಂಧ್ರ ಸಮಸ್ಯೆಗೆ ಔಷಧಗಳು ಲಭ್ಯವಿವೆ"

ವೈಟ್ ಫಂಗಸ್ ನೇರ ಶ್ವಾಸಕೋಶಗಳಿಗೆ ಹಾನಿ ಮಾಡುತ್ತದೆ. ಉಗುರು, ಚರ್ಮ, ಹೊಟ್ಟೆ, ಕಿಡ್ನಿ, ಮೆದುಳು, ಬಾಯಿ ಹಾಗೂ ಖಾಸಗಿ ಭಾಗಗಳಿಗೆ ಹೆಚ್ಚು ಹಾನಿ ಮಾಡುತ್ತದೆ ಎನ್ನಲಾಗಿತ್ತು. ಇದೀಗ ವೈದ್ಯರು ವಿಶ್ಲೇಷಣೆ ನಡೆಸಿ ಮಾಹಿತಿ ನೀಡಿದ್ದು, ಈ ಕ್ಯಾಂಡಿಡಿಯಾಸಿಸ್ ಸೋಂಕು ಬಾಯಿಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ತೆಳು ಚರ್ಮವನ್ನು ಹೊಂದಿರುವ ಅಂಗಗಳಲ್ಲಿ ಈ ಸೋಂಕು ಬೇಗನೆ ಉಂಟಾಗುತ್ತದೆ. ತುಟಿ, ಮೂಗು, ಬಾಯಿಯ ಒಳಗೆ ಅಥವಾ ಖಾಸಗಿ ಅಂಗಗಳಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ತಿಳಿಸಿದ್ದಾರೆ. ಮುಖದಲ್ಲಿ ನೋವು, ತಲೆನೋವು, ಊತ, ಬಾಯಿಯಲ್ಲಿ ಹುಣ್ಣು ಕಾಣಿಸಿಕೊಳ್ಳುವುದು ಇದರ ಲಕ್ಷಣ ಎಂದಿದ್ದಾರೆ. ಇದಕ್ಕೆ ಹಲವು ಔಷಧಗಳೂ ಇವೆ. ಫ್ಲುಕೊನಾಝೋಲ್ ಎಂಬ ಔಷಧಿಯನ್ನು ಕ್ಯಾಂಡಿಡಿಯಾಸಿಸ್‌ಗೆ ಬಳಸಲಾಗುತ್ತದೆ ಎಂದು ಹೇಳಿದ್ದಾರೆ.

English summary
There is no such disease as white fungus. The infection is called as candidiasis and it is not dangerous than black fungus says experts
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X