ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಸಲ್ ಸ್ಪ್ರೇ ಯಾವಾಗ ಲಭ್ಯ, BBV154 ಮಕ್ಕಳು ಕೊರೊನಾ ವಿರುದ್ಧ ಹೋರಾಡಲು ಸಹಕಾರಿಯೇ?

|
Google Oneindia Kannada News

ನವದೆಹಲಿ, ಜೂನ್ 07: ಕೊರೊನಾ ಎರಡನೇ ಅಲೆ ದೇಶದಲ್ಲಿ ಹೆಚ್ಚಾದಂತೆ ಕೊರೊನಾ ಲಸಿಕೆ ಉತ್ಪಾದನಾ ಪ್ರಮಾಣವನ್ನು ಕೂಡ ಹೆಚ್ಚಿಸಲಾಗಿದ್ದು, ಶೀಘ್ರದಲ್ಲಿ ಎಲ್ಲರಿಗೂ ಲಸಿಕೆ ನೀಡುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ.

ಇಂಟ್ರಾನಾಸಲ್ ಸ್ಪ್ರೇಗಳು ಸೂಚಿ ಆಧಾರಿತ ಲಸಿಕೆಗಳಿಗಿಂತಲೂ ಬಹುಬೇಗ ವಿತರಣೆ ಮಾಡಬಹುದಾಗಿದೆ, ಹಾಗಾಗಿ ಎಲ್ಲರಿಗೂ ಕೊರೊನಾ ಲಸಿಕೆ ದೊರೆಯಲು ಸಹಕಾರಿಯಾಗಲಿದೆ.

ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಮಾಹಿತಿ ಪ್ರಕಾರ , ಭಾರತದಲ್ಲಿ ಕ್ಲಿನಿಕಲ್ ಪ್ರಯೋಗಗಳು ನಡೆಯುತ್ತಿರುವ ಈ ಮೂಗಿನ ಲಸಿಕೆಗಳಿಂದಾಗಿ ಮಕ್ಕಳಿಗೂ ಅನುಕೂಲವಾಗಬಹುದು ಎಂದು ಹೇಳಲಾಗಿದೆ.

ಈಗ ಜಗತ್ತಿನಲ್ಲಿ ಲಭ್ಯವಿರುವ ಎಲ್ಲಾ ಕೋವಿಡ್ ಲಸಿಕೆಗಳು ಇಂಜೆಕ್ಷನ್ ರೂಪದಲ್ಲೇ ಇವೆ. ಹಾಗಾಗಿ ಲಸಿಕೆ ಜೊತೆಗೆ ಸಿರಿಂಜ್​ಗಳ ಬೇಡಿಕೆ ಕೂಡಾ ಹೆಚ್ಚೇ ಇದೆ. ಭಾರತದ ಎಲ್ಲಾ ನಾಗರಿಕರಿಗೆ ವ್ಯಾಕ್ಸಿನ್ ನೀಡಲು ಕನಿಷ್ಠ 260 ಕೋಟಿ ಸಿರಿಂಜ್​ಗಳು ಬೇಕಾಗುತ್ತವೆ. ಈ ಎಲ್ಲಾ ವಿಚಾರಗಳನ್ನು ಗಮನಿಸಿದಾಗ ನೇಸಲ್ ಡ್ರಾಪ್ಸ್ ಅಥವಾ ಮೂಗಿಗೆ ಹಾಕುವ ಹನಿಗಳ ರೂಪದ ವ್ಯಾಕ್ಸಿನ್ ಬಹು ದೊಡ್ಡ ವರದಾನದಂತೆ ಕಂಡುಬಂದಿದೆ.

ಅಷ್ಟೇ ಅಲ್ಲ, ಈ ಮೂಗಿನ ಹನಿಗಳ ಲಸಿಕೆ ಕೇವಲ ಒಂದೇ ಡೋಸ್ ಪಡೆದರೆ ಸಾಕು. ಬೇರೆ ಬಗೆಯ ಲಸಿಕೆಗಳಿಗೆ ಹೋಲಿಸಿದ್ರೆ ಇದರಲ್ಲಿ ಅಡ್ಡಪರಿಣಾಮಗಳು ಕೂಡಾ ಕಡಿಮೆಯೇ.

ಕೊರೊನಾವೈರಸ್ ಔಷಧಿ: ಹೈದ್ರಾಬಾದ್ ಕಂಪನಿಯಲ್ಲಿ 2ನೇ ಹಂತದ ಪ್ರಯೋಗಕೊರೊನಾವೈರಸ್ ಔಷಧಿ: ಹೈದ್ರಾಬಾದ್ ಕಂಪನಿಯಲ್ಲಿ 2ನೇ ಹಂತದ ಪ್ರಯೋಗ

ಸದ್ಯ ಭಾರತದಲ್ಲಿ ನೀಡಲಾಗುತ್ತಿರುವ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಎರಡೂ ಲಸಿಕೆ ನೀಡಿ ಎರಡು ವಾರಗಳ ನಂತರ ಪ್ರತಿರೋಧಕ ಶಕ್ತಿ ಬೆಳೆಸುವ ಸಾಮರ್ಥ್ಯ ಹೊಂದಿವೆ.

ಇಂಜೆಕ್ಷನ್ ಭಯಕ್ಕೆ ಲಸಿಕೆ ಪಡೆಯದೆ ಉಳಿದ ಅನೇಕರ ಪಾಲಿಗಂತೂ ಇದು ಬಹಳ ದೊಡ್ಡ ಶುಭಸುದ್ದಿಯಾಗಿದೆ. ಕೋವಿಡ್ ಭಯ ಇದ್ದರೂ ಸೂಜಿಯ ಭಯ ಅದಕ್ಕಿಂತ ದೊಡ್ಡದಿರುವ ಎಷ್ಟೋ ಜನ ಇನ್ನೂ ಇದ್ದಾರೆ. ಜೊತೆಗೆ ಹನಿಗಳ ರೂಪದ ಲಸಿಕೆ ಮಕ್ಕಳಿಗೆ ನೀಡಲು ಸಾಧ್ಯವಾಗುತ್ತದೆಯಾ ಎನ್ನುವ ಆಶಾಭಾವನೆಯೂ ಇದರಲ್ಲಿದೆ.

 ನಾಸಲ್ ಸ್ಪ್ರೇ ಯಾವಾಗ ಲಭ್ಯ?

ನಾಸಲ್ ಸ್ಪ್ರೇ ಯಾವಾಗ ಲಭ್ಯ?

ಭಾರತ್ ಬಯೋಟೆಕ್ ಈಗಾಗಲೇ ಕೋವ್ಯಾಕ್ಸಿನ್ ಲಸಿಕೆಯನ್ನು ಹೊರತಂದಿದೆ, ಭಾರತದಲ್ಲಿ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆಯನ್ನು ಜನರಿಗೆ ಈಗಾಗಲೇ ನೀಡಲಾಗುತ್ತಿದೆ. ಇದೀಗ ನಾಸಲ್ ಸ್ಪ್ರೇ ಕುರಿತು ಸಂಸ್ಥೆಯು 1 ಮತ್ತು 2ನೇ ಹಂತದ ಪ್ರಯೋಗವನ್ನು ಮಾಡಿದೆ. ಡಿಸೆಂಬರ್ ಒಳಗೆ 10 ಕೋಟಿ ನಾಸಲ್ ಸ್ಪ್ರೇ ಉತ್ಪಾದಿಸುವ ಗುರಿಯನ್ನು ಭಾರತ್ ಬಯೋಟೆಕ್ ಹೊಂದಿದೆ.

 ಸೋಂಕು ಮತ್ತು ಹರಡುವಿಕೆ ಎರಡನ್ನೂ ತಡೆಯುತ್ತದೆ.

ಸೋಂಕು ಮತ್ತು ಹರಡುವಿಕೆ ಎರಡನ್ನೂ ತಡೆಯುತ್ತದೆ.

ಭಾರತ್ ಬಯೋಟೆಕ್ ಸಿದ್ಧಪಡಿಸುತ್ತಿರುವ ಬಿಬಿವಿ 154, ಮೂಗಿನ ಮೂಲಕ ಸ್ಪ್ರೇ ಮಾಡಲಾಗುತ್ತಿದ್ದು, ಅದರಿಂದ ಸೋಂಕು ಮತ್ತು ಹರಡುವಿಕೆ ಎರಡನ್ನೂ ತಡೆಗಟ್ಟಲು ಸಾಧ್ಯ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಈ ನಾಸಲ್ ಲಸಿಕೆಗಳು ಕೋವಿಡ್ 19 ರೂಪಾಂತರಿ ವಿರುದ್ಧವೂ ಪರಿಣಾಮಕಾರಿಯಾಗಿದೆ. ಆ ಸ್ಪ್ರೇನಿಂದಾಗಿ ಕೊರೊನಾ ಮೂರನೇ ಅಲೆಯನ್ನು ತಡೆಗಟ್ಟಬಹುದು ಎಂದು ಅಂದಾಜಿಸಲಾಗಿದೆ.

 ಸೂಜಿ ಅಗತ್ಯವಿಲ್ಲದ ಲಸಿಕೆ

ಸೂಜಿ ಅಗತ್ಯವಿಲ್ಲದ ಲಸಿಕೆ

ಈ ಲಸಿಕೆಗೆ ಸೂಜಿಯ ಅಗತ್ಯವಿಲ್ಲದ ಕಾರಣ ಅಡ್ಡಪರಿಣಾಮಗಳೂ ಕೂಡ ಕಡಿಮೆ ಎನ್ನಲಾಗಿದೆ, ಲಸಿಕೆಗಾಗಿ ಜನರು ವೈದ್ಯರ ಬಳಿಗೆ ಹೋಗಬೇಕಾಗಿಲ್ಲ, ಅದನ್ನು ಮೂಗಿನ ಮೂಲಕ ಸ್ವತಃ ಹಾಕಿಕೊಳ್ಳಬಹುದಾಗಿದೆ. ಲಸಿಕೆ ಮಾರುಕಟ್ಟೆಗೆ ಬಂದ ಬಳಿಕ ಈಗಿರುವ ಲಸಿಕೆಗಳಿಗಿಂತ ಅಗ್ಗದಲ್ಲಿ ದೊರೆಯಲಿದೆ. ಮಕ್ಕಳಿಗೆ ಹಾಗೂ ವಯಸ್ಕರಿಗೆ ಸೂಕ್ತವಾಗಿದೆ ಎಂದು ಕಂಪನಿ ಹೇಳಿದೆ.

Recommended Video

ಯಾವ Vaccine ಬೆಸ್ಟ್ ಅನ್ನೋದು ಗೊತ್ತಾಗಿದೆ! | Oneindia Kannada
 ಬಿಬಿವಿ 154 ಬಗ್ಗೆ ನೀವು ತಿಳಿಯಬೇಕಾದ ಅಂಶ

ಬಿಬಿವಿ 154 ಬಗ್ಗೆ ನೀವು ತಿಳಿಯಬೇಕಾದ ಅಂಶ

-ಈ ಸ್ಪ್ರೇಗೆ ಸೂಜಿಯ ಅಗತ್ಯವಿರುವುದಿಲ್ಲ
-ಯಾವುದೇ ಆರೋಗ್ಯ ಕಾರ್ಯಕರ್ತರ ಸಹಾಯವಿಲ್ಲದೆ ಲಸಿಕೆ ಪಡೆಯಬಹುದು
-ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ವಾಷಿಂಗ್ಟನ್ ಯೂನಿವರ್ಸಿಟಿ ಆಫ್ ಮೆಡಿಸಿನ್ ಜೊತೆಗೆ ಭಾರತ್ ಬಯೋಟೆಕ್ ಈ ಸಂಬಂಧ ಒಪ್ಪಂದ ಮಾಡಿಕೊಂಡಿತ್ತು. BBV154 ಎನ್ನುವ ಈ ಲಸಿಕೆಯ ಪ್ರಿ-ಕ್ಲಿನಿಕಲ್ ಟ್ರಯಲ್ ಈಗಾಗಲೇ ಆರಂಭವಾಗಿದೆ. ಎಲ್ಲಾ ಅಂದುಕೊಂಡಂತೆ ಆದರೆ ಜುಲೈ ವೇಳೆಗೆ ಕ್ಲಿನಿಕಲ್ ಟ್ರಯಲ್​ಗಳು ಮುಗಿದು ಆಗಸ್ಟ್​ಗೆ ಈ ಲಸಿಕೆ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ.
-ಲಸಿಕೆ ಪಡೆದ 14 ದಿನಗಳೊಳಗೆ ದೇಹದೊಳಗೆ ಪ್ರತಿರೋಧಕ ಶಕ್ತಿಯನ್ನು ಇದು ಪ್ರಚೋದಿಸುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಹೆಚ್ಚಾಗಿ ಮೂಗಿನಿಂದಲೇ ವೈರಸ್ ದೇಹದೊಳಗೆ ಹೋಗೋದ್ರಿಂದ ಆ ಮಾರ್ಗವನ್ನೇ ಮೊದಲು ಕ್ಲಿಯರ್ ಮಾಡಿದಂತಾಗುತ್ತದೆ. ಯಾಕೆಂದರೆ ಕೊರೊನಾ ವೈರಸ್ ಮೊದಲು ಮೂಗಿನೊಳಗೆ ಭದ್ರವಾಗಿ ನೆಲೆಯೂರಿ ನಂತರ ಅಲ್ಲಿಂದ ದೇಹದ ಇತರೆ ಭಾಗಗಳಿಗೆ ಸರಾಗವಾಗಿ ಹರಡುತ್ತದೆ ಎನ್ನಲಾಗಿದೆ.
-ಚೀನಾ ಮತ್ತು ಬ್ರಿಟನ್​ನಲ್ಲೂ ಇಂಥದ್ದೇ ಸಂಶೋಧನೆಗಳು ನಡೆಯುತ್ತಿವೆ. ಮೂಗಿಗೆ ಹಾಕುವ ವೆಕ್ಟರ್ಡ್​ ಲಸಿಕೆ ಕೋವಿಡ್ ವಿರುದ್ಧದ ಹೋರಾಟಕ್ಕೆ ಭಾರೀ ವೇಗ ಕೊಡಲಿದೆ ಎನ್ನುವ ನಂಬಿಕೆ ವಿಜ್ಞಾನಿಗಳದ್ದು.

English summary
As the second wave of Covid-19 recedes, eEfforts are being ramped up for massive production of vaccines and make them available in the shortest possible time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X