ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಂಡತಿ ಊರಿಗೆ ಹೋದರೆ ಎಂಬ ಅದ್ಭುತ ಸಬ್ಜೆಕ್ಟಿನ ಸುತ್ತ...

By ಅನಿಲ್
|
Google Oneindia Kannada News

ಹೆಂಡತಿ ಊರಿಗೆ ಹೋದರೆ... ಎಂಬ ಸಬ್ಜೆಕ್ಟಿನ ಬಗ್ಗೆಯೇ ಒಂದು ಪ್ರೌಢ ಪ್ರಬಂಧ ಮಂಡಿಸಬಹುದೇನೋ! ಹೆಂಡತಿ ಬಗ್ಗೆ ಅಪಾರ ಮೋಹ ಇದ್ದವರಿಗೆ ಆಕೆ ಹೇಳಿದ ಮಾತೇ ಪ್ರೇರಣೆಯಾಗಿ, ಮುಂಚಿನ ಮೋಹ ಕರಗಿ, ದೇವರೆಡೆಗೆ ಬುದ್ಧಿ ತಿರುಗಿ ದೊಡ್ಡ ಪವಾಡಗಳಾಗಿವೆ. ಇನ್ನು ಕೆ.ಎಸ್.ನರಸಿಂಹಸ್ವಾಮಿ ಅವರಿಂದ ಹೃದಯ ಅರಳಿಸುವ ಕವಿತೆಗಳನ್ನು ಬರೆಸಿದೆ.

ಮದುವೆಯಾದ ಹೊಸತರಲ್ಲಿನ ಮೋಹ, ಪ್ರೀತಿ, ಆ ನಂತರದ ಅವಲಂಬನೆ... ಇವೆಲ್ಲದರ ಮಧ್ಯೆಯೂ ಹೆಂಡತಿ ಒಂದೆರಡು ದಿನದ ಮಟ್ಟಿಗಾದರೂ ಊರಿಗೆ ಹೋಗಲಿ ಎಂದು ಬಯಸುವ ಗಂಡು ಜೀವಗಳು ಜಗತ್ತಿನಲ್ಲಿ ಇದ್ದೇ ಇರುತ್ತವೆ ಅನ್ನೋದು ನನ್ನ ಬಲವಾದ ನಂಬಿಕೆ. ದೂರದ ಊರಿನ ಹುಡುಗಿಯನ್ನು ಮದುವೆಯಾದ ಸ್ನೇಹಿತನನ್ನು ಅಭಿನಂದಿಸುವ ಮಂದಿಯೂ ಬಹಳಷ್ಟು ಇರುತ್ತಾರೆ.

ನನ್ನ ಮದುವೆಯ ಸಂದರ್ಭದಲ್ಲಿ ಯಾಕೆ ಕೂಗಿ..ಕೂಗಿ ಹೇಳಲಿಲ್ಲ?ನನ್ನ ಮದುವೆಯ ಸಂದರ್ಭದಲ್ಲಿ ಯಾಕೆ ಕೂಗಿ..ಕೂಗಿ ಹೇಳಲಿಲ್ಲ?

"ನಮ್ಮ ಮನೆ ಬೆಂಗಳೂರಿನ ರಾಜರಾಜೇಶ್ವರಿ ನಗರ. ಅವರ ಅಪ್ಪನ ಮನೆ ಸುಬ್ರಹ್ಮಣ್ಯಪುರ. ಅಲ್ಲಿಗೆ ಹೋಗಿ ಬಿಟ್ಟು ಬಂದು ಮನೆಯಲ್ಲಿ ಸುಧಾರಿಸಿಕೊಳ್ಳುವ ಹೊತ್ತಿಗೆ, "ಬಂದು ಕರೆದುಕೊಂಡು ಹೋಗಿ" ಅಂತ ಮೊಬೈಲ್ ಗೆ ಕಾಲ್ ಬಂದಿರುತ್ತದೆ" ಎಂದು ಅಲವತ್ತುಕೊಳ್ಳುವ ಅಥವಾ ತಮಾಷೆ ಮಾಡುವ ಸ್ನೇಹಿತನನ್ನು ನಾವು ಚೆನ್ನಾಗಿ ಕಾಲೆಳೆಯುತ್ತೀವಿ.

ತವರಿಗೆ ಹೋದ ದಿನ ಮನೆಯಲ್ಲಿನ ಕೋಣೆ ಸ್ವರ್ಗ

ತವರಿಗೆ ಹೋದ ದಿನ ಮನೆಯಲ್ಲಿನ ಕೋಣೆ ಸ್ವರ್ಗ

ಅಪರೂಪಕ್ಕೆ ಬಿಯರ್, ವಿಸ್ಕಿ ಕುಡಿಯುವ ಅಭ್ಯಾಸ ಕೂಡ ಮದುವೆ ಆದ ಮೇಲೆ ಅಪರೂಪದಲ್ಲಿ ಅಪರೂಪ ಆಗಿಬಿಡುತ್ತದೆ. ಕುಡಿಯುವ ವಿಚಾರ ಅವಳಿಗೆ ಗೊತ್ತಿಲ್ಲ ಅಂತೇನೂ ಅಲ್ಲ. ಕುಡಿದ ನಂತರ ಅವಳ ಮಾತು, ಸಿಟ್ಟು, ನಡವಳಿಕೆ.... ಅಬ್ಬಬ್ಬಾ ಅವೆಲ್ಲವನ್ನೂ ಸಹಿಸಿಕೊಳ್ಳಬೇಕಲ್ಲ, ಅದರ ಬದಲು ಕುಡಿಯದಿರುವುದೇ ಲೇಸು. ಅವಳು ತವರಿಗೆ ಹೋದ ದಿನ ಮನೆಯಲ್ಲಿನ ಕೋಣೆ ಸ್ವರ್ಗ ಆಗಿ, ಸ್ನೇಹಿತರು ಗಂಧರ್ವರಂತೆಯೂ ಕಾಣಿಸ್ತಾರೆ.

ನಮ್ಮಲ್ಲಿ ಇಷ್ಟೆಲ್ಲ ನ್ಯೂನತೆ ಇತ್ತೇ ಎಂಬುದೇ ಗೊತ್ತಿರಲ್ಲ

ನಮ್ಮಲ್ಲಿ ಇಷ್ಟೆಲ್ಲ ನ್ಯೂನತೆ ಇತ್ತೇ ಎಂಬುದೇ ಗೊತ್ತಿರಲ್ಲ

ಇನ್ನು ಮದುವೆಗೆ ಮುಂಚೆ ನಮ್ಮಲ್ಲಿ ಇಷ್ಟೆಲ್ಲ ನ್ಯೂನತೆ ಇತ್ತೇ ಎಂಬುದೇ ಗೊತ್ತಿರಲ್ಲ. ನಿಮಗೆ ಸ್ನಾನ ಮಾಡುವುದಕ್ಕೆ ಬರಲ್ಲ. ಸರಿಯಾಗಿ ಹಲ್ಲು ಉಜ್ಜಲ್ಲ. ಅದೇನು ಷರಟು- ಪ್ಯಾಂಟು ಹಾಕಿಕೊಳ್ತೀರೋ, ನಿಮ್ಮ ರೂಮಿನ ಬಣ್ಣವೋ, ನೀವು ಹಾಕಿಕೊಂಡಿರೋ ಷೂನೋ, ಆ ಕಟ್ಟಿಂಗೋ... ಹೆಂಡತಿ ಅನ್ನೋಳನ್ನು ಆಯ್ಕೆ ಮಾಡಿಕೊಂಡಿರ್ತೀವಲ್ಲ ಆ ಬಗ್ಗೆ ಬಿಟ್ಟು ಉಳಿದೆಲ್ಲವೂ ತಪ್ಪು ಅಂತ ನಿಂತಿದ್ದಕ್ಕೆ- ಕೂತಿದ್ದಕ್ಕೆ ಬೈಸಿಕೊಳ್ಳಬೇಕು.

ಅಮ್ಮನ ಅಡುಗೆ ಹೊಗಳಬಹುದು, ಅಪ್ಪನ ಜತೆಗೆ ಹರಟಬಹುದು

ಅಮ್ಮನ ಅಡುಗೆ ಹೊಗಳಬಹುದು, ಅಪ್ಪನ ಜತೆಗೆ ಹರಟಬಹುದು

ನಮಗೆ ಆಯ್ಕೆಯೇ ಅಲ್ಲದ ಅಪ್ಪ- ಅಮ್ಮ. ಅದು ಹೌದೋ- ಅಲ್ಲವೋ, ಆ ಬಗ್ಗೆ ಕೂಡ ಅದೇನು ಅಪ್ಪ- ಅಮ್ಮನೋ ಅಂತ ಕೊಂಕು ಕೇಳಬೇಕು. ಹೆಂಡತಿ ಊರಿಗೆ ಹೋದರೆ ಅವಳು ವಾಪಸ್ ಬರುವವರೆಗೆ ನಿತ್ಯವೂ ಸ್ವಾತಂತ್ರ್ಯೋತ್ಸವ. ಮನೆಯಲ್ಲಿ ಬೇಕಾದ ರೀತಿಯಲ್ಲಿ ಬದುಕಬಹುದು. ಅಮ್ಮನ ಅಡುಗೆ ಹೊಗಳಬಹುದು. ಅಪ್ಪನ ಜತೆಗೆ ಹರಟಬಹುದು. ಸ್ನೇಹಿತರ ಜತೆಗೆ ಹೊರಗೆ ಸುತ್ತಾಡಬಹುದು.

ಖಳರಂತೆ ಕಾಣುವುದು ಗಂಡನ ಸ್ನೇಹಿತರನ್ನ

ಖಳರಂತೆ ಕಾಣುವುದು ಗಂಡನ ಸ್ನೇಹಿತರನ್ನ

ಹೆಂಡತಿ ಅನಿಸಿಕೊಂಡ ದೇವತೆ ತನ್ನ ಅತ್ತೆಯನ್ನು ದ್ವೇಷಿಸುವ ಮುಂಚೆ ಅಥವಾ ದ್ವೇಷಿಸುವುದಕ್ಕಿಂತ ಹೆಚ್ಚು ಖಳರಂತೆ ಕಾಣುವುದು ಗಂಡನ ಸ್ನೇಹಿತರನ್ನ. ಕೆಲವರಂತೂ ಮೇಲುನೋಟಕ್ಕೆ ನಗುತ್ತಾ ಮಾತನಾಡಿದರೂ ಅವರು ಇನ್ನೊಂದು ಸಲ ಮನೆಗೆ ಬಂದರೆ ನಿಮಗೆ ಗ್ರಹಚಾರ ಅಂತಲೂ ಅವರೆದುರೇ ಮುಖ ಊದಿಸಿ, ತಮ್ಮ ಸಿಟ್ಟು ತೋರಿಸುವುದು ಸಹ ಉಂಟು. ಮದುವೆಗೆ ಮುಂಚೆ ಸಯಾಮಿಗಳಂತೆ ಇದ್ದ ಸ್ನೇಹಿತರು ದುಷ್ಮನಿಗಳಂತೆ ಆಗಿರುತ್ತಾರೆ. ಆ ಸ್ನೇಹದ ರಿನೀವಲ್ ಗಾದರೂ ಹೆಂಡತಿ ಕೆಲ ದಿನ ಮನೆಯಲ್ಲಿರಬಾರದು.

ಅದೆಂಥ ಪರಿಹಾರಕ್ಕೂ ಭೀಕರ ಸಮಸ್ಯೆಗಳು ಕಾಣಿಸುತ್ತವೆ

ಅದೆಂಥ ಪರಿಹಾರಕ್ಕೂ ಭೀಕರ ಸಮಸ್ಯೆಗಳು ಕಾಣಿಸುತ್ತವೆ

ಅದೆಂಥ ಪರಿಹಾರವಾದರೂ ಸೂಚಿಸಿ, ಹೆಂಡತಿ ಎಂಬ ಮಹಾನ್ ಕಣ್ಣಿಗೆ ಅದಕ್ಕಿಂತ ಭೀಕರ ಸಮಸ್ಯೆಗಳು ಕಾಣಿಸುತ್ತವೆ. ದಿನದಲ್ಲಿ ಅದೆಷ್ಟು ಸಲ ನಾನು ಇಷ್ಟು ದಡ್ಡನೆ ಎಂದು ಅನಿಸುತ್ತಲೇ ಇರುತ್ತದೆ. ಆ ಮೂಲಕ ಅಹಂಕಾರಕ್ಕೆ ಪೆಟ್ಟು. ಆಫೀಸಿಗೆ ಹೋದ ಮೇಲೂ ಆತ್ಮವಿಶ್ವಾಸವೇ ಇರಲ್ಲ. ಅವಳು ಊರಿಗೆ ಹೋದ ಸಮಯದಲ್ಲಿ ಅದೆಂಥ, ಅದೆಷ್ಟು ಆತ್ಮವಿಶ್ವಾಸ, ಏನು ಕಥೆ? ಅವಳು ಊರಿಂದ ಬಂದ ಕೆಲ ದಿನವೂ ಆ ಕಾನ್ಫಿಡೆನ್ಸ್ ಹಾಗೇ ಇರುತ್ತದೆ.

English summary
When wife went to out of station, what husband thinks? Here is the humorous article about this subject.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X