ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಮಾರಸ್ವಾಮಿ ಅವರು ಪೆಟ್ರೋಲ್ ಬೆಲೆ ಎಷ್ಟು ಇಳಿಸ್ಬಹುದು?

By Mahesh
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 10: ಪೆಟ್ರೋಲ್, ಡೀಸೆಲ್ ದರ ನಿಯಂತ್ರಣ ಸಾಧ್ಯವಾಗದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಚೆಲ್ಲಿ ಕೂತಿವೆ. ಯುಪಿಎ ಹಾಗೂ ಎನ್ಡಿಎ ಕಾಲದ ದರಗಳ ತುಲನೆ ಇನ್ನೂ ಜಾರಿಯಲ್ಲಿದೆ. ಈ ನಡುವೆ ರಾಜ್ಯಗಳು ಏಕೆ ಸ್ವಯಂ ಪ್ರೇರಿತರಾಗಿ ಜನರ ಕಷ್ಟಕ್ಕೆ ಸ್ಪಂದಿಸಿ, ವ್ಯಾಟ್, ಸೆಸ್ ಇಳಿಸಬಾರದು ಎಂಬ ಚರ್ಚೆ ಮತ್ತೊಮ್ಮೆ ಆರಂಭವಾಗಿದೆ.

ಕೇಂದ್ರ ಸರ್ಕಾರ ಎಂದಿನಂತೆ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಹೆಚ್ಚಿಸಿ ಜನ ಸಾಮಾನ್ಯರ ಮೇಲೆ ಹೊರೆ ಹಾಕಿದೆ. ಆದರೆ, ರಾಜ್ಯ ಸರ್ಕಾರಗಳು ತಮ್ಮ ಜನರ ಕಷ್ಟ ನಷ್ಟಗಳನ್ನು ಗಮನಿಸಿ ಹೆಚ್ಚುವರಿ ತೆರಿಗೆಗಳನ್ನು ಮನ್ನಾ ಮಾಡುವ ಅಧಿಕಾರ ಚಲಾಯಿಸಬಹುದು. ಗೋವಾ ಸರ್ಕಾರ ಈ ನಿಟ್ಟಿನಲ್ಲಿ ಹೆಜ್ಜೆ ಇಡುವುದಾಗಿ ಭರವಸೆ ನೀಡಿ ಹುಸಿಗೊಳಿಸಿದೆ. ಆಂಧ್ರಪ್ರದೇಶ ಹಾಗೂ ರಾಜಸ್ಥಾನಗಳಲ್ಲಿ ಪೆಟ್ರೋಲ್ ಮೇಲಿನ ವೌಲ್ಯವರ್ಧಿತ ತೆರಿಗೆ (ವ್ಯಾಟ್) ಯನ್ನು ಇಳಿಸಲಾಗಿದೆ.

ನಿಮ್ಮ ನಗರದಲ್ಲಿ ಇಂದು ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ?

ಕರ್ನಾಟಕದಲ್ಲಿ ವ್ಯಾಟ್ ತಗ್ಗಿಸುವ ಬಗ್ಗೆ ಚರೆ ಮಾಡುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಆದರೆ, ಕೇಂದ್ರ ಸರ್ಕಾರ ಮಾತ್ರ ತನ್ನ ಪಾಲಿನ ವ್ಯಾಟ್ ತಗ್ಗಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ತೆರಿಗೆ ಲೆಕ್ಕಾಚಾರ ಏನಾದರೂ ಇರಲಿ ಪೆಟ್ರೋಲ್, ಡೀಸೆಲ್ ಬೆಲೆ ತಗ್ಗಿದರೆ ಸಾಕು ಎಂದು ಜನ ಸಾಮಾನ್ಯರು ಗೋಳಾಡುತ್ತಿದ್ದಾರೆ. ಕರ್ನಾಟಕದ ವ್ಯಾಟ್ ಲೆಕ್ಕಾಚಾರ, ಎಷ್ಟು ಪ್ರಮಾಣ ಸೆಸ್ ಇಳಿಸಬಹುದು? ಇಳಿಕೆ ಮಾಡಿದರೆ ರಾಜ್ಯದ ಬೊಕ್ಕಸಕ್ಕೆ ನಷ್ಟವಾಗುವುದಿಲ್ಲವೆ? ಎಂಬ ಪ್ರಶ್ನೆ ಎದ್ದಿದೆ. ಕುಮಾರಸ್ವಾಮಿ ಅವರು ಹೆಚ್ಚೆಂದರೆ ಶೇ 4 ರಷ್ಟು ಅಥವಾ 2 ರು ನಷ್ಟು ಬೆಲೆ ಇಳಿಸಬಹುದಾಗಿದೆ. ಆದರೆ, ಇದರಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟ ತಪ್ಪಿಸಲು ಸಾಧ್ಯವಿಲ್ಲ.

ರಾಜ್ಯ ಸರ್ಕಾರಗಳು ವ್ಯಾಟ್, ಸೆಸ್ ಸೇರಿಸಬಹುದು

ರಾಜ್ಯ ಸರ್ಕಾರಗಳು ವ್ಯಾಟ್, ಸೆಸ್ ಸೇರಿಸಬಹುದು

ಕೇಂದ್ರ ಸರ್ಕಾರಿ ಸ್ವಾಮ್ಯದ ಪ್ರಮುಖ ಮೂರು ತೈಲ ಕಂಪನಿಗಳು ಪ್ರತಿದಿನದಂದು ಇಂಧನ ಬೆಲೆ ಪರಿಷ್ಕರಣೆ ಮಾಡಿದ ಬಳಿಕ ಆಯಾ ರಾಜ್ಯಗಳು ತಮ್ಮ ಆರ್ಥಿಕ ಮಾರ್ಗದರ್ಶನಕ್ಕೆ ಅನುಗುಣವಾಗಿ ವ್ಯಾಟ್, ಸೆಸ್ ಸೇರಿಸಬಹುದು.

ಬೇರೆ ಎಲ್ಲಾ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಕಡಿಮೆಯೇ ಇದೆ, ಆದರೂ ಸಾಧ್ಯವಾದಷ್ಟರ ಮಟ್ಟಿಗೆ ತೆರಿಗೆ ಇಳಿಸಲು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಕುಮಾರಸ್ವಾಮಿ ಅವರು ಭರವಸೆ ನೀಡಿದ್ದಾರೆ.

ಹೆಚ್ಚುವರಿ ತೆರಿಗೆಯನ್ನು ಇಳಿಸಬಹುದಾಗಿದೆ

ಹೆಚ್ಚುವರಿ ತೆರಿಗೆಯನ್ನು ಇಳಿಸಬಹುದಾಗಿದೆ

ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ಸಿನ ವೀರಭದ್ರಸಿಂಗ್ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಶೇ.2ರಷ್ಟು ತೆರಿಗೆಯನ್ನು ಕಡಿತ ಗೊಳಿಸಲಾಗಿದೆ ಎಂದಿದ್ದಾರೆ. ರಾಜಸ್ಥಾನ ಹಾಗೂ ಆಂಧ್ರಪ್ರದೇಶದಲ್ಲಿ ತೆರಿಗೆ ಇಳಿಕೆ ಮಾಡಲಾಗಿದೆ.

ಕರ್ನಾಟಕದಲ್ಲಿ ಚೊಚ್ಚಲ ಬಜೆಟ್ ಮಂಡನೆ ಮಾಡಿದ್ದ ಎಚ್‌ಡಿ ಕುಮಾರಸ್ವಾಮಿ ಅವರು ಪ್ರತಿ ಲೀಟರ್ ಪೆಟ್ರೋಲ್ ಮೇಲಿನ ತೆರಿಗೆಯನ್ನು 1.14 ರೂ ಹಾಗೂ ಡೀಸೆಲ್ ಮೇಲಿನ ತೆರಿಗೆಯನ್ನು 1.12ರೂ.ನಷ್ಟು ಏರಿಕೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಈಗ ಹೆಚ್ಚುವರಿ ತೆರಿಗೆಯನ್ನು ಇಳಿಸಬಹುದಾಗಿದೆ.

ಇಂಧನ ಮೇಲಿನ ತೆರಿಗೆ ಇಳಿಸಲು ಸಾಧ್ಯವೇ ಇಲ್ಲ: ಕೇಂದ್ರ ಸ್ಪಷ್ಟನೆಇಂಧನ ಮೇಲಿನ ತೆರಿಗೆ ಇಳಿಸಲು ಸಾಧ್ಯವೇ ಇಲ್ಲ: ಕೇಂದ್ರ ಸ್ಪಷ್ಟನೆ

ಸಿದ್ದರಾಮಯ್ಯ ಅವರು ವ್ಯಾಟ್ ತಗ್ಗಿಸಿರಲಿಲ್ಲ

ಸಿದ್ದರಾಮಯ್ಯ ಅವರು ವ್ಯಾಟ್ ತಗ್ಗಿಸಿರಲಿಲ್ಲ

2016ರಲ್ಲಿ ರಾಜ್ಯದಲ್ಲಿ ಪೆಟ್ರೋಲ್ ಮೇಲಿನ ಮಾರಾಟ ತೆರಿಗೆಯನ್ನು ಶೇ. 26ರಿಂದ ಶೇಕಡಾ 30ಕ್ಕೆ ಹೆಚ್ಚಿಸಲಾಗಿತ್ತು. ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡಿದ ಹಿನ್ನೆಲೆಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 1.89 ರೂ ಹಾಗೂ ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಶೇ 16.65 ರಿಂದ ಶೇಕಡಾ 19 ಕ್ಕೆ ಹೆಚ್ಚಿಸಿದ್ದರಿಂದ ಪ್ರತಿ ಲೀಟರ್ ಡೀಸೆಲ್ ಬೆಲೆ 98 ಪೈಸೆ ಏರಿಕೆಯಾಗಿತ್ತು.

ಆಗ ಪೆಟ್ರೋಲ್ ಮೇಲಿನ ಮೌಲ್ಯವರ್ಧಿತ ತೆರಿಗೆ(ವ್ಯಾಟ್) ದರವನ್ನು ಶೇ 5ರಷ್ಟು ಇಳಿಕೆ ಮಾಡುವಂತೆ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರಲಾಗಿತ್ತು. ಆದರೆ, ಸಿದ್ದರಾಮಯ್ಯ ಅವರು ರಾಜ್ಯ ಬೊಕ್ಕಸಕ್ಕೆ ನಷ್ಟ ತಪ್ಪಿಸಲು ವ್ಯಾಟ್ ತಗ್ಗಿಸಲು ಸಾಧ್ಯವಿಲ್ಲ ಎಂದಿದ್ದರು.

ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲ್ ತರುವ ಬಗ್ಗೆ

ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲ್ ತರುವ ಬಗ್ಗೆ

ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲ್ ತರುವ ಬಗ್ಗೆ ಹಲವಾರು ಬಾರಿ ಚರ್ಚೆಗಳು ನಡೆದಿವೆ. ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರೂ ಸಹ ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲ್ ತರಬೇಕಿದೆ ಎಂದು ಹೇಳಿದ್ದರು.

ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲಿಯಂ ಉತ್ಪನ್ನಗಳನ್ನು ತರುವುದರಿಂದ ಪೆಟ್ರೋಲ್ ಮೇಲಿನ ಬೆಲೆ ನಿಯಂತ್ರಣ ಸಾಧ್ಯವಿದ್ದು, ಪ್ರತಿ ಲೀಟರ್ ಪೆಟ್ರೋಲ್ ಬೆಲೆ 38ರು ಆಗಲಿದೆ ಎಂಬ ಎಣಿಕೆಯಿದೆ. ಆದರೆ, ಪೆಟ್ರೋಲ್-ಡಿಸೇಲ್ ಮೇಲೆ ಸಂಪೂರ್ಣ ಜಿಎಸ್ಟಿ ಪ್ರಪಂಚದಲ್ಲಿ ಎಲ್ಲೂ ಜಾರಿಗೆ ಬಂದಿಲ್ಲ. ಭಾರತದಲ್ಲೂ ಜಿಎಸ್ಟಿ ಜೊತೆ ಆಯಾ ರಾಜ್ಯಗಳ ಸೆಸ್ ಹಾಗೂ ಇನ್ನಿತರ ತೆರಿಗೆಗಳ ಸಮ್ಮಿಶ್ರದೊಂದಿಗೆ ಜಾರಿಗೊಳಿಸಬೇಕಾಗುತ್ತದೆ.

ಪೆಟ್ರೋಲ್ ಮೇಲಿನ ವ್ಯಾಟ್ ಶೇ. 39.12

ಪೆಟ್ರೋಲ್ ಮೇಲಿನ ವ್ಯಾಟ್ ಶೇ. 39.12

ಕರ್ನಾಟಕದಲ್ಲಿ ಪೆಟ್ರೋಲ್ ಮೇಲೇ ಶೇ 30 ಹಾಗೂ ಡೀಸೆಲ್ ಮೇಲೆ ಶೇ 19ರಷ್ಟು ವ್ಯಾಟ್ ಹಾಕಲಾಗುತ್ತಿದೆ. ಮುಂಬೈನಲ್ಲಿ ಪೆಟ್ರೋಲ್ ಮೇಲಿನ ವ್ಯಾಟ್ ಶೇ. 39.12 ಗಳಷ್ಟಿದೆ. ತೆಲಂಗಾಣದಲ್ಲಿ ಡೀಸೆಲ್ ಮೇಲೆ ಶೇ.26ರ ವ್ಯಾಟ್ ಹೇರಲಾಗುತ್ತಿದೆ. ವ್ಯಾಟ್ ಶೇ 4ರಷ್ಟು ಅಥವಾ 2 ರು ತಗ್ಗಿಸಿದರೂ ರಾಜ್ಯಕ್ಕೆ ವಾರ್ಷಿಕ ಸಾವಿರದಿಂದ 2 ಸಾವಿರ ಕೋಟಿ ರು ಹೊರೆ ಬೀಳಲಿದೆ. ಈಗಾಗಲೇ ಜಿಎಸ್ಟಿ ಬಂದ ಮೇಲೆ ಪ್ರವೇಶ ದರ ರದ್ದಾಗಿ ವಾರ್ಷಿಕ 2 ಸಾವಿರ ಕೋಟಿ ರು ನಷ್ಟವಾಗುತ್ತಿದೆ.


ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಹೆಚ್ಚಿನ ತೆರಿಗೆ ವಿಧಿಸುತ್ತಿರುವುದನ್ನು ಕೇಂದ್ರ ಸರ್ಕಾರದ ಉನ್ನತ ಮೂಲಗಳು ಸಮರ್ಥಿಸಿಕೊಂಡಿದ್ದು, ಇದರಿಂದ ಬರುವ ಆದಾಯದಿಂದ ಹಿಂದಿನ ಯುಪಿಎ ಸರ್ಕಾರ ಪಾವತಿಸದೇ ಬಾಕಿ ಉಳಿಸಿದ್ದ ತೈಲ ಸಬ್ಸಿಡಿ ನಿಭಾಯಿಸಲಾಗುತ್ತಿದೆ. ಅಲ್ಲದೇ ಅಭಿವೃದ್ಧಿ ಕಾರ್ಯಗಳಿಗೆ ಹಣ ಬಳಕೆಯಾಗುತ್ತಿದೆ ಎಂದಿದೆ.

ಶೇ 18ರಷ್ಟು ತೆರಿಗೆ ವಿಧಿಸಿದರೆ ಮಾತ್ರ ಗ್ರಾಹಕರಿಗೆ ಲಾಭ

ಶೇ 18ರಷ್ಟು ತೆರಿಗೆ ವಿಧಿಸಿದರೆ ಮಾತ್ರ ಗ್ರಾಹಕರಿಗೆ ಲಾಭ

ಈ ಎಲ್ಲಾ ಲೆಕ್ಕಾಚಾರ ಗರಿಷ್ಠ ಶೇ 18ರಷ್ಟು ತೆರಿಗೆ ವಿಧಿಸಿದರೆ ಬರುವ ಮೊತ್ತವಾಗಿದೆ. ಆದರೆ, ಜಿಎಸ್ಟಿ ವ್ಯಾಪಿಗೆ ಬಂದರೆ ಶೇ 5 ರಿಂದ ಶೇ 28ರಷ್ಟು ವಿಧಿಸಬಹುದಾಗಿದೆ. ಹೀಗಾಗಿ, ಶೇ 28ರಷ್ಟು ಜಿಎಸ್ಟಿ ಹೇರಿಕೆಯಾದರೆ ಜತೆಗೆ ಆಯಾ ರಾಜ್ಯಗಳ ಮಾರಾಟ ತೆರಿಗೆ, ಸೆಸ್ ಸೇರಿಸಿದರೆ ತೈಲ ಬೆಲೆ ಈಗಿನಷ್ಟೇ ಆಗಲಿದೆ. ಉದಾಹರಣೆಗೆ ಸದ್ಯ ದೆಹಲಿಯಲ್ಲಿ ಪೆಟ್ರೋಲ್ ಮೇಲೆ ವ್ಯಾಟ್ ಶೇ 27ರಷ್ಟಿದ್ದರೆ, ಡೀಸೆಲ್ ಮೇಲೆ 17.2ರು ಪ್ರತಿ ಲೀಟರ್ ಗೆ ಪಡೆಯಲಾಗುತ್ತಿದೆ. ಮುಂಬೈ, ಥಾಣೆ ಹಾಗೂ ನವೀ ಮುಂಬೈನಲ್ಲಿ ಈ ಪ್ರಮಾಣ ಶೇ 39.12ರಷ್ಟಿದೆ, ತೆಲಂಗಾಣದಲ್ಲಿ ಶೇ26ರಷ್ಟಿದೆ. ಕರ್ನಾಟಕದಲ್ಲಿ ಶೇ30ರಷ್ಟಿದೆ.

ಅಬಕಾರಿ ಸುಂಕದ ಲೆಕ್ಕಾಚಾರ

ಅಬಕಾರಿ ಸುಂಕದ ಲೆಕ್ಕಾಚಾರ

ಅಬಕಾರಿ ಸುಂಕದ ಲೆಕ್ಕಾಚಾರ: ಪ್ರತಿ ಲೀಟರ್ ಪೆಟ್ರೋಲ್ ಮೇಲೆ 19.48ರು ನಷ್ಟಿದ್ದರೆ, ಡೀಸೆಲ್ ಮೇಲೆ 15.33ರು ಪ್ರತಿ ಲೀಟರ್ ಸುಂಕ ತೆರಬೇಕಾಗಿದೆ. ಅಂಡಮಾನ್ ಹಾಗೂ ನಿಕೋಬಾರ್ ದ್ವೀಪದಲ್ಲಿ ಶೇ6ರಷ್ಟು ಮಾರಾಟ ತೆರಿಗೆ ಹಾಕಲಾಗುತ್ತಿದೆ. ಅಲ್ಲದೆ, ಇಂಧನ ಮೇಲಿನ ಅಬಕಾರಿ ಸುಂಕ ಇಳಿಸುವ ಗೋಜಿಗೆ ಕೇಂದ್ರ ಸರ್ಕಾರ ಹೋಗುತ್ತಿಲ್ಲ. ಅಬಕಾರಿ, ಇಂಧನ ಮುಂತಾದ ಉತ್ಪನ್ನಗಳ ಮೇಲೆ ಸದ್ಯ ಜಿಎಸ್ಟಿ ಜಾರಿಯಾಗಿಲ್ಲ. ಜಿಎಸ್ಟಿ ಜಾರಿಗೆ ಬಂದರೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಮಾನವಾಗಿ ತೆರಿಗೆ ವಿಧಿಸಲಿದೆ. ಸದ್ಯ ವಾಹನ ಸವಾರರು ಪೆಟ್ರೋಲ್ ಗೆ ಶೇಕಡಾ 55.5 ಹಾಗೂ ಡಿಸೇಲ್ ಗೆ 47.3ರಷ್ಟು ತೆರಿಗೆ ನೀಡುತ್ತಾರೆ. ಇದ್ರಲ್ಲಿ ಮುಖ್ಯವಾಗಿ ಕೇಂದ್ರ ಸರ್ಕಾರದ ತೆರಿಗೆ ಸುಂಕ ಹಾಗೂ ರಾಜ್ಯ ಸರ್ಕಾರಗಳ ವ್ಯಾಟ್, ಸೆಸ್ ಕೂಡಾ ಸೇರಿವೆ. ಪೆಟ್ರೋಲ್ ಗೆ ಶೇ 97.54ರಷ್ಟು ತೆರಿಗೆ ಹಾಕಲಾಗುತ್ತಿದೆ

English summary
When can we expect HD Kumaraswamy led JDS- Congress government in Karnataka ti reduce VAT on Petrol, Diesel. How much state can reduce VAT?.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X