ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಧಿ ಸರಬರಾಜಿನಲ್ಲಿ ಕೊರತೆ, ಪರಿಹಾರಗಳು

|
Google Oneindia Kannada News

ನವದೆಹಲಿ ಮೇ 26: ಹವಾಮಾನ ಬದಲಾವಣೆ, ರಷ್ಯಾ-ಉಕ್ರೇನ್‌ ಯುದ್ಧದಿಂದಾಗಿ ಗೋಧಿ ಸರಬರಾಜಿನಲ್ಲಿ ಕೊರತೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಗೋಧಿ ರಫ್ತಿಗೆ ನಿಷೇಧ ಹೇರಿದೆ.

ಪ್ರಸಕ್ತ ವರ್ಷದ ಬೇಸಗೆಯಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗಿದ್ದರಿಂದ ಭಾರತದಲ್ಲಿ ಗೋಧಿಯ ಒಟ್ಟಾರೆ ಇಳುವರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಅಲ್ಲದೇ ಕಳೆದ 122 ವರ್ಷಗಳಲ್ಲೇ ಅತ್ಯಂತ ಹೆಚ್ಚಿನ ಬಿಸಿಲನ್ನು ಈ ವರ್ಷದ ಮಾರ್ಚ್ ತಿಂಗಳಲ್ಲಿ ಭಾರತ ಅನುಭವಿಸಿದೆ. ಇನ್ನೊಂದೆಡೆ ರಷ್ಯಾ-ಉಕ್ರೇನ್‌ ಯುದ್ಧದಿಂದಾಗಿ ಈ ಎರಡೂ ದೇಶಗಳಿಂದ ಗೋಧಿ ರಫ್ತು ಸಂಪೂರ್ಣ ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಹಲವು ರಾಷ್ಟ್ರಗಳಿಂದ ಗೋಧಿಗೆ ಭಾರೀ ಬೇಡಿಕೆ ವ್ಯಕ್ತವಾಗಿದೆ.

ಕ್ವಾಡ್ ಶೃಂಗಸಭೆಯಲ್ಲಿ ಮೋದಿ-ಬೈಡನ್ ನಡುವೆ 'ಗೋಧಿ' ಚರ್ಚೆ!ಕ್ವಾಡ್ ಶೃಂಗಸಭೆಯಲ್ಲಿ ಮೋದಿ-ಬೈಡನ್ ನಡುವೆ 'ಗೋಧಿ' ಚರ್ಚೆ!

ಹವಾಮಾನ ವೈಪರೀತ್ಯದಿಂದ ಸಮಸ್ಯೆ ಹೆಚ್ಚಳ:

ಹವಾಮಾನ ವೈಪರೀತ್ಯದಿಂದ ಸಮಸ್ಯೆ ಹೆಚ್ಚಳ:

ಹವಾಮಾನ ವೈಪರೀತ್ಯದಿಂದಾಗಿ ಈ ಬಾರಿ ಭಾರತದಲ್ಲಿ ಗೋಧಿ ಇಳುವರಿಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ತಾಪಮಾನ ಹೆಚ್ಚಳ, ನೀರಿನ ಲಭ್ಯತೆಯಲ್ಲಿ ಕೊರತೆ ಕೂಡ ಇಳುವರಿ ಕಡಿಮೆಯಾಗಲು ಕಾರಣವಾಗಿದೆ. ನಿರೀಕ್ಷೆಗಿಂತ ಉತ್ಪಾದನೆ ಕಡಿಮೆಯಾದ ಹಿನ್ನೆಲೆಯಲ್ಲಿ ಇದು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಆಹಾರ ಭದ್ರತೆಯ ಕುರಿತು ಕಳವಳ ಉಂಟು ಮಾಡುವಂತೆ ಮಾಡಿದೆ. ಇನ್ನೊಂದೆಡೆ ಇಳುವರಿ ತಗ್ಗಿರುವುದರಿಂದ ಗೋಧಿ ಮತ್ತು ಅದರ ಹಿಟ್ಟಿನ ಬೆಲೆಯಲ್ಲಿ ಏರಿಕೆಯಾಗುತ್ತಿದೆ.

ಭಾರತ ಬ್ಯಾನ್ ಮಾಡಿದ್ದೇ ಬಂತು, ವಿಶ್ವದೆಲ್ಲೆಡೆ ಗೋಧಿ ದುಬಾರಿಭಾರತ ಬ್ಯಾನ್ ಮಾಡಿದ್ದೇ ಬಂತು, ವಿಶ್ವದೆಲ್ಲೆಡೆ ಗೋಧಿ ದುಬಾರಿ

ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮ:

ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮ:

ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮ ಈ ವರ್ಷ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗೋಧಿ ಬೆಲೆ ಶೇ.60 ರಷ್ಟು ಜಿಗಿತವಾಗಿದೆ. ವಿಶ್ವದ ಗೋಧಿ ಉತ್ಪಾದನೆಯ ಮೂರನೇ ಒಂದು ಭಾಗವನ್ನು ಉಕ್ರೇನ್‌ ಮತ್ತು ರಷ್ಯಾ ಉತ್ಪಾದಿಸುತ್ತದೆ. ಆದರೆ ಈಗ ನಡೆಯುತ್ತಿರುವ ಯುದ್ಧದಿಂದಾಗಿ ಉತ್ಪಾದನೆ ಮತ್ತು ಪೂರೈಕೆ ಮೇಲೆ ಹೊಡೆತ ಬಿದ್ದಿದೆ. ರಷ್ಯಾ ಮತ್ತು ಉಕ್ರೇನ್ ದೇಶಗಳಿಂದ ರಫ್ತು ಸ್ಥಗಿತಗೊಂಡಿದೆ.

100 ಮಿಲಿಯನ್‌ ಟನ್‌ಗೆ ತಗ್ಗಿದ ಇಳುವರಿ:

100 ಮಿಲಿಯನ್‌ ಟನ್‌ಗೆ ತಗ್ಗಿದ ಇಳುವರಿ:

ಈ ಬಾರಿ ಭಾರತದಲ್ಲಿ 111.3 ಮಿಲಿಯನ್‌ ಟನ್‌ ಗೋಧಿ ಉತ್ಪಾದನೆಯ ನಿರೀಕ್ಷೆ ಮಾಡಲಾಗಿತ್ತು. ಆದರೆ ಇಳುವರಿ 100 ಮಿಲಿಯನ್‌ ಟನ್‌ಗಳಿಂತ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಈ ವರ್ಷ ಸರಕಾರಿ ಸಂಸ್ಥೆಗಳಿಂದ ಗೋಧಿ ಸಂಗ್ರಹ 18 ಮಿಲಿಯನ್‌ ಟನ್‌ಗಳಿಗೆ ಇಳಿದಿದೆ. ಇದು ಕಳೆದ 15 ವರ್ಷಗಳಲ್ಲೇ ಅತ್ಯಂತ ಕಡಿಮೆ.

ಎಫ್ ಸಿಐ ಯಿಂದ ಗೋಧಿ ಖರೀದಿ:

ಎಫ್ ಸಿಐ ಯಿಂದ ಗೋಧಿ ಖರೀದಿ:

ಕಡಿಮೆ ಗೋಧಿ ಉತ್ಪಾದನೆಯ ಪರಿಣಾವು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೇಲೆ ಬೀಳಬಹುದು. ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾ(ಎಫ್ ಸಿಐ) ಬಡವರಿಗೆ ಪಡಿತರ ವಿತರಿಸುವ ಉದ್ದೇಶದಿಂದ ರೈತರಿಂದ ಗೋಧಿಯನ್ನು ಸಂಗ್ರಹಿಸುತ್ತದೆ. ಇಳುವರಿ ಕಡಿಮೆ ಇರುವುದರ ಹಿನ್ನೆಲೆಯಲ್ಲಿ ಬಡವರ ಪಡಿತರಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವ ದೃಷ್ಟಿಯಿಂದ ಕೇಂದ್ರ ಸರಕಾರ ಗೋಧಿ ರಫ್ತು ನಿಷೇಧಿಸಿದೆ.

ಕನಿಷ್ಠ ಬೆಂಬಲ ಬೆಲೆ ಪ್ರತಿ ಟನ್ ಗೆ 20,150 ರು. :

ಕನಿಷ್ಠ ಬೆಂಬಲ ಬೆಲೆ ಪ್ರತಿ ಟನ್ ಗೆ 20,150 ರು. :

2021 ರಲ್ಲಿ ಭಾರತ ಸರಕಾರವು ಒಟ್ಟು 43.33 ಮಿಲಿಯನ್‌ ಟನ್‌ ಗೋಧಿಯನ್ನು ಸಂಗ್ರಹಿಸಿದೆ. ಈ ವರ್ಷ ಕೇವಲ 19.5 ಮಿಲಿಯನ್‌ ಟನ್‌ ಗೋಧಿಯನ್ನು ಸಂಗ್ರಹಿಸುವ ನಿರೀಕ್ಷೆಯಿದೆ. ಪ್ರಸ್ತುತ ದೇಶದ ಮಾರುಕಟ್ಟೆಗಳಲ್ಲಿ ಗೋಧಿ ಬೆಲೆ ಪ್ರತಿ ಟನ್‌ಗೆ 25 ಸಾವಿರ ರು. ಇದೆ. ಗೋದಿಗೆ ಕನಿಷ್ಠ ಬೆಂಬಲ ಬೆಲೆ ಟನ್‌ಗೆ 20,150 ರು. ಇದೆ.

ಕೇಂದ್ರ ಸರಕಾರ ತೆಗೆದುಕೊಳ್ಳಬೇಕಾದ ಕ್ರಮಗಳು:

ಕೇಂದ್ರ ಸರಕಾರ ತೆಗೆದುಕೊಳ್ಳಬೇಕಾದ ಕ್ರಮಗಳು:

* ಗೋಧಿ ಸಂಗ್ರಹ ತೀವ್ರವಾಗಿ ತಗ್ಗಿದರೆ, ಸಾರ್ವಜನಿಕರಿಗೆ ಪಡಿತರ ವಿತರಿಸುವ ಸಂದರ್ಭದಲ್ಲಿ ಗೋದಿ ಬದಲಾಗಿ ಅಕ್ಕಿ ವಿತರಿಸಬಹುದು.
* ವ್ಯಾಪಾರಿಗಳ ಬಳಿ ಇರುವ ದಾಸ್ತಾನು ಮೇಲೆ ಮಿತಿ ಹೇರುವುದು. ಇದು ದಾಸ್ತಾನಾಗಿರುವ ಗೋಧಿ ಮಾರುಕಟ್ಟೆಗೆ ಬರುವಂತೆ ಮಾಡಲಿದೆ. ಜತೆಗೆ ಬೆಲೆಯೂ ತಗ್ಗಲಿದೆ.
* ರಷ್ಯಾ ಮತ್ತು ಉಕ್ರೇನ್‌ಗಳಿಂದ ಧಾನ್ಯಗಳ ಸಾಗಣೆಗೆ ಲಿಥುವೇನಿಯಾ ಸರಕಾರ ಸುರಕ್ಷಿತ ಕಾ

English summary
Climate change, Russia-Ukraine war leading to wheat deficiency in India; the possible solutions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X