ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವೆಂಬರ್ 1ರಿಂದ ಈ ಫೋನ್‌ಗಳಲ್ಲಿ ವಾಟ್ಸಾಪ್ ವರ್ಕ್ ಆಗಲ್ಲ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 27: ಫೇಸ್ ಬುಕ್ ಸ್ವಾಮ್ಯದ ಅತ್ಯಂತ ಜನಪ್ರಿಯ ಚಾಟಿಂಗ್ ಅಪ್ಲಿಕೇಷನ್ ವಾಟ್ಸಾಪ್ ಕಾಲಕಾಲಕ್ಕೆ ಅಪ್ಡೇಟ್ ಆಗುತ್ತಿರುತ್ತದೆ. ಆದರೆ, ನವೆಂಬರ್ 1ರಿಂದ ಹಲವು ಫೋನ್ ಗಳಲ್ಲಿ ವಾಟ್ಸಾಪ್ ವರ್ಕ್ ಆಗಲ್ಲ.

ಭಾರತದಲ್ಲಿ ಅತಿ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ ಮೆಸೆಜಿಂಗ್ ಅಪ್ಲಿಕೇಶನ್. ಎಲ್ಲಾ ವಯಸ್ಸಿನವರು ವಾಟ್ಸಾಪ್ ಅಪ್ಲಿಕೇಶನ್‌ಗೆ ಮಾರು ಹೋಗಿದ್ದಾರೆ. ಹೊಸ ಹೊಸ ಅಪ್‌ಡೇಟ್‌ಗಳನ್ನು ಮಾಡುವ ಮೂಲಕ ಮತ್ತಷ್ಟು ಜನರಿಗೆ ಹತ್ತಿರವಾಗುತ್ತಿದೆ. ಆದರೆ 2011ಕ್ಕೂ ಹಳೆ ಸ್ಮಾರ್ಟ್ ಫೋನ್ ಗಳಲ್ಲಿ ವಾಟ್ಸಾಪ್ ಕಾರ್ಯ ನಿರ್ವಹಿಸುವುದಿಲ್ಲ ಎಂದು ಸಂಸ್ಥೆ ಹೇಳಿದೆ. ಇದು ಆಂಡ್ರಾಯ್ಡ್ ಹಾಗೂ ಐಒಎಸ್ ಆಧಾರಿತ ಸ್ಮಾರ್ಟ್ ಫೋನ್ ಗಳೆರಡಕ್ಕೂ ಅನ್ವಯವಾಗಲಿದೆ.

ವಾಟ್ಸಪ್ ಮೆಸೇಜ್ ಹ್ಯಾಕ್ ಹೇಗೆ? ಸೇಫ್ ಮಾಡೋದು ಹೇಗೆ?ವಾಟ್ಸಪ್ ಮೆಸೇಜ್ ಹ್ಯಾಕ್ ಹೇಗೆ? ಸೇಫ್ ಮಾಡೋದು ಹೇಗೆ?

ನೀವು ಹಳೆಯ ಆಂಡ್ರಾಯ್ಡ್, ಐಒಎಸ್ ಫೋನ್‌ಗಳನ್ನು ಬಳಸುತ್ತಿದ್ದರೆ ಒಎಸ್ ಅಪ್ಡೇಟ್ ಜೊತೆಗೆ ವಾಟ್ಸಾಪ್ ಅಪ್ಡೇಟ್ ಮಾಡಿಕೊಳ್ಳುವುದು ಮುಖ್ಯ. ಪ್ರಸ್ತುತ ಮೆಸೇಜಿಂಗ್ ಅಪ್ಲಿಕೇಶನ್‌ಗೆ ಹೊಂದಿಕೆಯಾಗುವ ಕೆಲವು ಹಳೆಯ ಸಾಧನಗಳಿಗೆ ಬೆಂಬಲವನ್ನು ಹಿಂತೆಗೆದುಕೊಳ್ಳುವುದಾಗಿ ವಾಟ್ಸಾಪ್ ಮತ್ತೊಮ್ಮೆ ಘೋಷಿಸಿದೆ. ಹೀಗಾಗಿ ಇಂತಹ ಮೊಬೈಲ್‌ಗಳಲ್ಲಿ ವಾಟ್ಸಾಪ್ ಕಾರ್ಯ ನಿರ್ವಹಿಸುವುದಿಲ್ಲ.

ವಾಟ್ಸಾಪ್ ಡೆಸ್ಕ್‌ಟಾಪ್ ಬಳಸಿ ವಾಯ್ಸ್/ವಿಡಿಯೋ ಕರೆ ಹೇಗೆ?ವಾಟ್ಸಾಪ್ ಡೆಸ್ಕ್‌ಟಾಪ್ ಬಳಸಿ ವಾಯ್ಸ್/ವಿಡಿಯೋ ಕರೆ ಹೇಗೆ?

ಹಳೆಯ ಆಂಡ್ರಾಯ್ಡ್ ಮೊಬೈಲ್ ಮೂಲಕ ಕೆಲವು ಬಳಕೆದಾರರು ಇತ್ತೀಚಿನ ಸಾಫ್ಟ್‌ವೇರ್‌ಗೆ ನವೀಕರಿಸುವ ಮೂಲಕ ವಾಟ್ಸಾಪ್ ಅನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ. ಆದರೆ, ಕೆಲವು ಮೊಬೈಲ್‌ಗಳಿಗೆ ನವೆಂಬರ್ 1, 2021 ರಿಂದ ವಾಟ್ಸಾಪ್ ಶಾಶ್ವತವಾಗಿ ಪ್ರವೇಶಿಸಲಾಗುವುದಿಲ್ಲ.

 ಐಒಎಸ್ 10 ಗಿಂತ ಹಳೆಯ ಐಫೋನ್

ಐಒಎಸ್ 10 ಗಿಂತ ಹಳೆಯ ಐಫೋನ್

ಐಒಎಸ್ 10 ಗಿಂತ ಹಳೆಯ ಆಪರೇಟಿಂಗ್ ಸಿಸ್ಟಮ್ ಸಾಫ್ಟ್‌ವೇರ್‌ನಲ್ಲಿ ಚಾಲನೆಯಲ್ಲಿರುವ ಯಾವುದೇ ಐಫೋನ್‌ನಲ್ಲಿ ಕಾರ್ಯ ನಿರ್ವಹಿಸುವುದಿಲ್ಲ. ಈ ಫೋನ್‌ಗಳನ್ನು ಹೊಂದಿರುವ ಬಳಕೆದಾರರು ನವೆಂಬರ್ 1, 2021 ರಿಂದ ವಾಟ್ಸಾಪ್ ಅನ್ನು ಬಳಸಲು ಸಾಧ್ಯವಾಗುವುದಿಲ್ಲ.

ಮುಂದಿನ ವರ್ಷದ ಆರಂಭದಿಂದ ಐಫೋನ್ 4 ಮಾಡೆಲ್‌ಗಳಿಗೆ ಮೆಸೇಜಿಂಗ್ ಅಪ್ಲಿಕೇಶನ್ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಐಫೋನ್ 4 ಎಸ್, 5, 5 ಎಸ್, 5 ಸಿ, 6 ಮತ್ತು 6 ಎಸ್ ಎಲ್ಲವನ್ನೂ ಐಒಎಸ್ 10ಕ್ಕೆ ನವೀಕರಿಸಬಹುದು, ಆದ್ದರಿಂದ ಒಮ್ಮೆ ನವೀಕರಿಸಿದ ನಂತರ ಅವರು ವಾಟ್ಸಾಪ್ ಅನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

 2021 ರ ನವೆಂಬರ್ 1 ರ ಮೊದಲು ಬ್ಯಾಕಪ್

2021 ರ ನವೆಂಬರ್ 1 ರ ಮೊದಲು ಬ್ಯಾಕಪ್

ಇದರ ಜೊತೆಗೆ ಆಂಡ್ರಾಯ್ಡ್ 4.1 ಅಥವಾ ಆಪರೇಟಿಂಗ್ ಸಿಸ್ಟಂನ ಹಳೆಯ ಆವೃತ್ತಿಗಳಲ್ಲಿ ಚಾಲನೆಯಲ್ಲಿರುವ ಆಂಡ್ರಾಯ್ಡ್ ಸಾಧನಗಳಲ್ಲಿ ವಾಟ್ಸಾಪ್ ಇನ್ನು ಮುಂದೆ ಕಾರ್ಯನಿರ್ವಹಿಸುವುದಿಲ್ಲ. ಬಳಕೆದಾರರು ವಾಟ್ಸಾಪ್‌ಗೆ ಹೊಂದಿಕೆಯಾಗದಂತಹ ಫೋನ್‌ಗಳನ್ನು ಹೊಂದಿದ್ದರೆ, ಅವರು ತಮ್ಮ ಚಾಟ್‌ಗಳನ್ನು 2021 ರ ನವೆಂಬರ್ 1 ರ ಮೊದಲು ಬ್ಯಾಕಪ್ ಮಾಡಬೇಕು.

ವಾಟ್ಸಾಪ್‌ ಸೆಟ್ಟಿಂಗ್‌ಗಳಲ್ಲಿನ ಚಾಟ್ಸ್ ವಿಭಾಗದ ಅಡಿಯಲ್ಲಿ 'ಚಾಟ್ ಬ್ಯಾಕಪ್' ಆಯ್ಕೆಗೆ ಹೋಗುವ ಮೂಲಕ ಅವರು ಬ್ಯಾಕಪ್ ಮಾಡಬಹುದು. ಜೊತೆಗೆ 2011ಕ್ಕಿಂತ ಹಿಂದಿನ ಫೋನ್ ಬಳಸುವವರು ಕೂಡಾ ತಮ್ಮ ವಾಟ್ಸಾಪ್ ನವೆಂಬರ್ 1ರೊಳಗೆ ಅಪ್ಡೇಟ್ ಮಾಡಿಕೊಳ್ಳಬೇಕಾಗಿದೆ. ಈ ಬಗ್ಗೆ ಫೋನ್ ಸೆಟ್ಟಿಂಗ್ ನಲ್ಲಿ ಮಾಹಿತಿ ಇರಲಿದೆ.

 ಯಾವ ಯಾವ ಫೋನ್ ಗಳಲ್ಲಿ ವಾಟ್ಸಾಪ್ ಬಂದ್ ಆಗಲಿದೆ?

ಯಾವ ಯಾವ ಫೋನ್ ಗಳಲ್ಲಿ ವಾಟ್ಸಾಪ್ ಬಂದ್ ಆಗಲಿದೆ?

ಐಫೋನ್ 6ಎಸ್, ಐಫೋನ್ 6ಎಸ್ ಪ್ಲಸ್, ಆಪಲ್ ಐಫೋನ್ ಎಸ್ಇ.. ಫಸ್ಟ್ ಜನರೇಷನ್ ಐಫೋನ್ ಗಳಲ್ಲಿ ವಾಟ್ಸಾಪ್ ಕಾರ್ಯ ನಿರ್ವಹಿಸುವುದಿಲ್ಲ.

ಸ್ಯಾಮ್ ಸಂಗ್: ಸ್ಯಾಮ್ ಸಂಗ್ ಗ್ಯಾಲಕ್ಸಿ ಟ್ರೆಂಡ್ ಲೈಟ್, ಗ್ಯಾಲಕ್ಸಿ ಎಸ್II, ಗ್ಯಾಲಕ್ಸಿ ಎಸ್ 3 ಮಿನಿ, ಗ್ಯಾಲಕ್ಸಿ ಕೋರ್, ಗ್ಯಾಲಕ್ಸಿ ಎಕ್ಸ್ ಕವರ್ 2, ಗ್ಯಾಲಕ್ಸಿ ಏಸ್ 2.

ಎಲ್ ಜಿ: ಎಲ್ ಜಿ ಲ್ಯೂಸಿಡ್ 2, ಆಪ್ಟಿಮಸ್ ಎಲ್ 5 ಡುಯಲ್, ಆಪ್ಟಿಮಸ್ ಎಲ್ 4 II ಡುಯಲ್, ಆಪ್ಟಿಮಸ್ ಎಫ್ 3ಕ್ಯೂ, ಆಪ್ಟಿಮಸ್ ಎಫ್7, ಆಪ್ಟಿಮಸ್ ಎಫ್ 5, ಆಪ್ಟಿಮಸ್ ಎಲ್3 II ಡುಯಲ್, ಆಪ್ಟಿಮಸ್ ಎಲ್ 5, ಆಪ್ಟಿಮಸ್ ಎಲ್5 II, ಆಪ್ಟಿಮಸ್ ಎಲ್3 II, ಆಪ್ಟಿಮಸ್ ಎಲ್3 7, ಆಪ್ಟಿಮಸ್ ಎಲ್7 ಡುಯಲ್, ಆಪ್ಟಿಮಸ್ ಎಲ್7 II, ಆಪ್ಟಿಮಸ್ ಎಲ್6, ಎನಾಕ್ಟ್, ಆಪ್ಟಿಮಸ್ ಎಫ್ 3, ಆಪ್ಟಿಮಸ್ ಎಲ್4 II, ಆಪ್ಟಿಮಸ್ ಎಲ್2 II, ಆಪ್ಟಿಮಸ್ ನೈಟ್ರೋ ಎಚ್ ಡಿ ಹಾಗೂ 4ಎಕ್ಸ್ ಎಚ್ ಡಿ.

ZTE
ZTE ಗ್ರ್ಯಾಂಡ್ ಎಸ್ ಫ್ಲೆಕ್ಸ್, ಗ್ರ್ಯಾಂಡ್ ಎಕ್ಸ್ ಕ್ವೃ ವಿ 987, ZTE ವ್956, ಗ್ರ್ಯಾಂಡ್ ಮೆಮೊ

ಹ್ಯುವೈ
ಹ್ಯುವೈ ಅಸೆಂಡ್ ಜಿ 740, ಅಸೆಂಡ್ ಡಿ ಕ್ವಾಡ್ ಎಕ್ಸ್ ಎಲ್, ಅಸೆಂಡ್ ಮೇಟ್, ಅಸೆಂಡ್ ಪಿ1 ಎಸ್, ಅಸೆಂಡ್ ಡಿ 2, ಅಸೆಂಡ್ ಡಿ1 ಕ್ವಾಡ್ ಎಕ್ಸ್ ಎಲ್.

ಯಾವುದರಲ್ಲಿ ವಾಟ್ಸಾಪ್ ವರ್ಕ್ ಆಗಲ್ಲ?

ಯಾವುದರಲ್ಲಿ ವಾಟ್ಸಾಪ್ ವರ್ಕ್ ಆಗಲ್ಲ?

ನೋಕಿಯಾ S40 ಫೋನ್
2.3.3 ಅಂಡ್ರಾಯ್ಡ್ ವರ್ಶನ್ ಮತ್ತು ಅದಕ್ಕಿಂತ ಹಳೆಯದು
ವಿಂಡೋಸ್ ಫೋನ್ 7 ಐಫೋನ್ 3GS/iOS 6 ನೋಕಿಯಾ ಸಿಂಬಿಯನ್ S60

ಖಾಸಗಿತನ ನೀತಿ ಮತ್ತು ಸೇವೆಗಳ ನಿಬಂಧನೆಗಳ ಹೊಸ ಅಪ್ಡೇಟ್ ಕುರಿತಂತೆ ವಾಟ್ಸಾಪ್ ಕಾನೂನು ಸಮರ ನಡೆಸಿದ್ದನ್ನು ಮರೆಯುವಂತಿಲ್ಲ, ತಂತ್ರಾಂಶ ಅಪ್ಡೇಟ್ ಇಲ್ಲದಿದ್ದರೆ ವಾಟ್ಸಾಪ್ ಬಳಕೆ ಸುರಕ್ಷಿತವಾಗಿರಲ್ಲ. ವಾಟ್ಸಾಪ್ ಈಗ ಬಳಕೆದಾರರ ಗೌಪ್ಯ ಮಾಹಿತಿ, ಚಾಟ್ ಹಿಸ್ಟರಿಯನ್ನು ಮೂಲ ಸಂಸ್ಥೆ ಫೇಸ್ಬುಕ್ ಜೊತೆಗೆ ಹಂಚಿಕೊಳ್ಳಲು ಮುಂದಾಗಿದೆ. ಅತ್ಯಂತ ಜನಪ್ರಿಯ ಮೆಸೆಜಿಂಗ್ ಅಪ್ಲಿಕೇಷನ್ ವಾಟ್ಸಾಪ್ ತನ್ನ ಬಳಕೆದಾರರಿಗೆ ಇತ್ತೀಚೆಗೆ ಹಲವು ಹೊಸ ಸೌಲಭ್ಯಗಳು, ಕಠಿಣ ಭದ್ರತಾ ನಿಯಮಗಳನ್ನು ಹೊರ ತಂದಿದೆ.

English summary
The Facebook-backed Chatting platform WhatsApp will stop supporting a lot of old devices from November 1, Here is the full list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X