• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

FASTag ಅಂದ್ರೇನು? ಡಿ.1 ರಿಂದ ಅದು ಎಲ್ಲಾ ವಾಹನಕ್ಕೂ ಕಡ್ಡಾಯ ಏಕೆ?

|
   FASTag is mandatory to all the vehicles but why ? | Oneindia Kannada

   "ಲೋ ಯಾಕಯ್ಯ ಅಷ್ಟೊತ್ತಿಂದ ಒಂದೇ ಸಮನೆ ಹಾರ್ನ್ ಮಾಡ್ತಿದಿಯಾ? ನಾನೇನ್ ಹಾರ್ಕೊಂಡ್ ಹೋಗ್ಲಾ? ತಡ್ಕೊಂಡ್ ಇರಯ್ಯ ಕಂಡಿದೀನಿ..." ಎಂಬೆಲ್ಲ 'ಸುಸಂಸ್ಕೃತ' ಪದಗಳನ್ನು ಬಳಸಿ ಟೋಲ್ ಗೇಟ್ ಮುಂದೆ ಬೈದುಕೊಳ್ಳುವ ಪ್ರಮೇಯ ಇನ್ನಿಲ್ಲ! ತಾಸುಗಟ್ಟಲೆ ಟೋಲ್ ಮುಂದೆ ನಿಂತು ದೇಶಕ್ಕೆ, ಸರ್ಕಾರಕ್ಕೆ, ಟ್ರಾಫಿಕ್ಕಿಗೆ, ಹಾರ್ನ್ ಸೌಂಡಿಗೆ ಕೊನೆಗೆ ಯಾರೂ ಸಿಗದೆ ಇದ್ದರೆ ಪಕ್ಕದಲ್ಲಿ ಕುಳಿತವರಿಗೆ ಬೈದುಕೊಳ್ಳುವ 'ಸದಾವಕಾಶಕ್ಕೆ(!)' ಕೇಂದ್ರ ಸರ್ಕಾರ ಬ್ರೇಕ್ ಹಾಕಿದೆ!

   ಹೌದು, ಇನ್ನು ಮೇಲೆ ನಿಮ್ಮ ವಾಹನಗಳು ಟೋಲ್ ಮುಂದೆ ನಿಲ್ಲುವ ಅಗತ್ಯವೇ ಇಲ್ಲ.... ಅಂದ್ರೆ ಇನ್ಮೇಲೆ ಟೋಲ್ ಕಟ್ಟೋ ಅಗತ್ಯ ಇಲ್ಲ ಅಂದ್ಕೊಂಡು ಖುಷಿ ಪಡ್ಬೇಡಿ, ಕಟ್ಟೋದ್ ಕಟ್ಲೇ ಬೇಕು. ಆದ್ರೆ ಡಿಜಿಟಲ್ ಆಗಿ!

   ಡಿಸೆಂಬರ್‌ನಿಂದ ಫಾಸ್ಟ್‌ಟ್ಯಾಗ್‌ ಕಡ್ಡಾಯ: ತಪ್ಪಿದರೆ ದುಪ್ಪಟ್ಟು ಟೋಲ್ ಕಟ್ಟಿ

   ಡಿಸೆಂಬರ್ 1 ರಿಂದ ಸರ್ಕಾರ ಎಲ್ಲಾ ವಾಹನಕ್ಕೂ ಫಾಸ್ ಟ್ಯಾಗ್ ಗಳನ್ನು ಕಡ್ಡಾಯಗೊಳಿಸಿದೆ. ಈ ಮೂಲಕ ಟೋಲ್ ಗಳಲ್ಲಿ ಪ್ರಯಾಣಿಕರ ಸಮಯ ವ್ಯರ್ಥವಾಗದಂತೆ ಮತ್ತು ಇಂಧನವೂ ಉಳಿತಾಯವಾಗುವಂತೆ ಕ್ರಮ ಕೈಗೊಂಡಿದೆ. ಅಷ್ಟಕ್ಕೂ ಈ ಫಾಸ್ ಟ್ಯಾಗ್ ಅಂದ್ರೇನು? ಅದು ಕಡ್ಡಾಯವೇಕೆ? ಇಲ್ಲಿದೆ ಸಂಪೂರ್ಣ ಮಾಹಿತಿ

   FASTag ಅಂದ್ರೇನು?

   FASTag ಅಂದ್ರೇನು?

   "FASTag" ಅಂದ್ರೆ ಎಲ್ಲಾ ವಾಹನಕ್ಕೂ ಆಧಾರ್ ಕಾರ್ಡ್ ಇದ್ದ ಹಾಗೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈಗಾಗಲೇ ಹೇಳಿದ್ದಾರೆ. ನ್ಯಾಶ್ನಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ(NPCI) ಆರಂಭಿಸಿದ ಹೆದ್ದಾರಿಯ ಟೋಲ್ ಗಳ ವಿದ್ಯುನ್ಮಾನ ಸುಂಕ ಸಂಗ್ರಹ (electronic toll collection system) ಪದ್ಧತಿಯೇ "FASTag." ಎಲ್ಲಾ ವಾಹನಗಳಿಗೂ ಇದನ್ನು ಕಡ್ಡಾಯಗೊಳಿಸಲಾಗಿದ್ದು, ವಾಹನಕ್ಕೆ ಅಂಟಿಸಲಾದ ಫಾಸ್ ಟ್ಯಾಗ್ ಅನ್ನು ಗ್ರಹಿಸಿ ತನ್ನಿಂತಾನೇ ಟೋಲ್ ಓಪನ್ ಆಗುತ್ತದೆ. ಫಾಸ್ ಟ್ಯಾಗ್ ಅನ್ನು ವಾಹನದ ಮಾಲೀಕರು ಮೊದಲೇ ರೀಚಾರ್ಜ್ ಮಾಡಿಕೊಂಡಿರಬೇಕಾಗುತ್ತದೆ.

   ಕಡ್ಡಾಯವೇಕೆ?

   ಕಡ್ಡಾಯವೇಕೆ?

   ಎಲ್ಲ ಹೊಸ ವಾಹನಗಳ ವಿಂಡ್ ಸ್ಕ್ರೀನ್ ಮೇಲೆ ಫಾಸ್‌ಟ್ಯಾಗ್ ಅಂಟಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಡಿಜಿಟಲ್ ವ್ಯವಹಾರಗಳಿಗೆ ಉತ್ತೇಜನ ನೀಡುವ ಮತ್ತು ನಗದು ಹಣದ ಬಳಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಸರ್ಕಾರ ಫಾಸ್ ಟ್ಯಾಗ್ ಅನ್ನು ಕಡ್ಡಾಯಗೊಳಿಸಿದ್ದು, ಟೋಲ್ ಗಳಲ್ಲಿ ಹಣ ಕಟ್ಟುವುದಕ್ಕಾಗಿಯೇ ಸಾಲುಗಟ್ಟಿ ನಿಲ್ಲುವ ವಾಹನಗಳಿಂದಾಗಿ ಸಮಯ ವ್ಯರ್ಥವಾಗುವುದನ್ನು ಮತ್ತು ಇಂಧನ ವ್ಯಯವಾಗುವುದನ್ನು ತಪ್ಪಿಸುವ ಸಲುವಾಗಿಯೂ ಈ ಪದ್ಧತಿ ಜಾರಿಗೆ ತಂದಿರುವುದಾಗಿ ಸರ್ಕಾರ ಹೇಳಿದೆ.

   ಡಿ.1ರಿಂದ ಫಾಸ್ಟ್‌ ಟ್ಯಾಗ್ ಇಲ್ಲದಿದ್ದರೆ ದುಪ್ಪಟ್ಟು ಟೋಲ್ ಕಟ್ಬೇಕು

   ವಾಹನ ಗುರುತಿಸುವುದೂ ಸುಲಭ

   ವಾಹನ ಗುರುತಿಸುವುದೂ ಸುಲಭ

   ಫಾಸ್ ಟ್ಯಾಗ್ ನೀಡುವ ಸಂದರ್ಭದಲ್ಲಿ ವಾಹನ ಮಾಲೀಕರಿಗೆ ನೀಡಲಾಗುವ ಸಾರ್ವತ್ರಿಕ ಗುರುತಿನ ಸಂಖ್ಯೆಯಿಂದಾಗಿ ಎಲ್ಲಾ ವಾಹನಗಳನ್ನೂ ಸುಲಭವಾಗಿ ಗುರುತಿಸಬಹುದು. ಈ ಎಲ್ಲಾ ಕಾರಣಗಳಿಂದ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಲ್ಲೂ ಡಿಸೆಂಬರ್ 1 ರಿಂದ ಫಾಸ್ ಟ್ಯಾಗ್ ಅನ್ನು ಕಡ್ಡಾಯಗೊಳಿಸಲಾಗಿದೆ.

   ವಾಯುಮಾಲಿನ್ಯ ತಡೆ

   ವಾಯುಮಾಲಿನ್ಯ ತಡೆ

   ಇವೆಲ್ಲದರೊಟ್ಟಿಗೆ ಟೋಲ್ ನಲ್ಲಿ ಗಂಟೆಗಟ್ಟಲೆ ವಾಹನದ ಎಂಜಿನ್ ಆಫ್ ಮಾಡದೆ ನಿಲ್ಲಿಸ್ಕೊಂಡಿರುವುದರಿಂದ ಉಂಟಾಗುವ ವಾಯುಮಾಲಿನ್ಯವನ್ನೂ ತಡೆಯುವ ಉದ್ದೇಶವಿದೆ ಎಂದು ಸರ್ಕಾರ ಹೇಳಿದೆ. ಈಗಾಗಲೇ ವಾಹನಗಳ ದಟ್ಟಣೆಯಿಂದಲೇ ಹಲವು ರಾಜ್ಯಗಳು ವಾಯುಮಾಲಿನ್ಯದ ಸಮಸ್ಯೆ ಎದುರಿಸುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು.

   ಇಲ್ಲಿ ಅಜ್ಜನೇ ಟೋಲ್‌ಗೇಟ್: ಸುಂಕ ಕೊಡದೆ ಮುಂದೆ ಹೋಗುವಂತೆ ಇಲ್ಲ!

   English summary
   Whats Is FASTag? Why Government Of India Made It A Mandatory Thing To All Vehicles? Here Are The details.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X