• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೋದಿಯನ್ನು ಒಬಾಮಾ ಪ್ರತಿ ಬಾರಿ ಕೇಳುವ ಆಪ್ತ ಪ್ರಶ್ನೆ ಏನು?

|
   Narendra Modi with Akshay Kumar: ನರೇಂದ್ರ ಮೋದಿ, ಬರಾಕ್ ಒಬಾಮಾ ಸ್ನೇಹ ಹೇಗಿದೆ ಗೊತ್ತಾ? | Oneindia Kannada

   ನಟ ಅಕ್ಷಯ್ ಕುಮಾರ್ ಅವರು ಪ್ರಧಾನಿ ಮೋದಿ ಅವರ ಜತೆ ನಡೆಸಿದ ರಾಜಕೀಯೇತರ ಸಂದರ್ಶನ ಸದ್ಯ ಎಲ್ಲಾ ಸಾಮಾಜಿಕ ಜಾಲ ತಾಣಗಳಲ್ಲಿನ ಬಹುಚರ್ಚಿತ ವಿಷಯವಾಗಿದೆ. ಮೋದಿ ಅವರ ಜೀವನ ಶೈಲಿಯ ಬಗ್ಗೆ ಇಣುಕು ನೋಟ, ಸ್ಥೂಲ ಚಿತ್ರಣ ಸಿಗುತ್ತಿದ್ದು, ಹಲವರ ಕುತೂಹಲ ಕೆರಳಿಸಿದೆ.

   ಈ ಸಂದರ್ಶನದಲ್ಲಿ ಮಾತನಾಡುತ್ತಾ, ಮೋದಿ ಅವರು ತಮ್ಮ ಹಾಗೂ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಜೊತೆಗಿನ ಸ್ನೇಹ ಸಂಬಂಧದ ಬಗ್ಗೆ ಹೇಳಿಕೊಂಡರು.

   ದೆಹಲಿಯ ಮೋದಿ ಮನೆಯಲ್ಲೇ ತಾಯಿ ಹೀರಾಬೆನ್ ವಾಸಿಸೋಲ್ಲ ಯಾಕೆ?

   ಪ್ರತಿ ಬಾರಿಯೂ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ತನ್ನನ್ನು ಭೇಟಿಯಾದಾಗ, ನನ್ನ ಮಲಗುವ ಅವಧಿಯ ಬಗ್ಗೆ ಕಾಳಜಿ ತೋರುತ್ತಾ, "ನೀವು ಏಕೆ ಹೆಚ್ಚು ಹೊತ್ತು ಮಲಗುವುದಿಲ್ಲ?" ಎಂದು ಪ್ರಶ್ನಿಸುತ್ತಾರೆ ಎಂದು ಪ್ರಧಾನಿ ಮೋದಿ ಹೇಳಿದರು.

   "ನೀವು ಕೇವಲ ಮೂರು ಗಂಟೆಗಳ ಕಾಲ ಮಾತ್ರ ನಿದ್ರಿಸುತ್ತೀರಿ. ದೇಹಕ್ಕೆ 7 ಗಂಟೆಗಳ ನಿದ್ರೆಯ ಅವಶ್ಯಕತೆ ಇದೆ" ಎಂದು ಅಕ್ಷಯ್ ಇದಕ್ಕೆ ಪ್ರತಿಯಾಗಿ ಪ್ರಶ್ನಿಸಿದ್ದಾರೆ.

   ಅಂತಾರಾಷ್ಟ್ರೀಯ ಯೋಗದಿನ: ಪ್ರಧಾನಿ ಮೋದಿ ಭಾಷಣದ ಮುಖ್ಯಾಂಶ

   2014ರಲ್ಲಿ ಮೊದಲ ಬಾರಿಗೆ ವಾಷಿಂಗ್ಟನ್ ನಲ್ಲಿ ಇಬ್ಬರು ನಾಯಕರು ಭೇಟಿಯಾದ ಬಳಿಕ ಬೆಳೆದ ಬಾಂಧವ್ಯ ಇಂದಿಗೂ ಉಳಿಸಿಕೊಂಡಿದ್ದಾರೆ.

   ಮೋದಿಗೆ ವರ್ಕೊಹಾಲಿಕ್ ಆಗಿದ್ದೀರಿ ಎಂದಿದ್ದ ಒಬಾಮಾ

   ಮೋದಿಗೆ ವರ್ಕೊಹಾಲಿಕ್ ಆಗಿದ್ದೀರಿ ಎಂದಿದ್ದ ಒಬಾಮಾ

   "ನೀವು ಕೇವಲ ಮೂರು ಗಂಟೆಗಳ ಕಾಲ ಮಾತ್ರ ನಿದ್ರಿಸುತ್ತೀರಿ. ದೇಹಕ್ಕೆ 7 ಗಂಟೆಗಳ ನಿದ್ರೆಯ ಅವಶ್ಯಕತೆ ಇದೆ" ಎಂದು ಅಕ್ಷಯ್ ಇದಕ್ಕೆ ಪ್ರತಿಯಾಗಿ ಪ್ರಶ್ನಿಸಿದ್ದಾರೆ.

   ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, "ಬರಾಕ್ ಒಬಾಮಾ ನನ್ನನ್ನು ಮೊದಲ ಬಾರಿ ಭೇಟಿಯಾದಾಗ ನೀವು ಏಕೆ ಹೀಗೆ ಮಾಡುತ್ತಿದ್ದೀರಿ(ಕಾರ್ಯತತ್ಪರರಾಗಿದ್ದೀರಿ) ಎಂದು ಪ್ರಶ್ನಿಸುತ್ತಾರೆ. ನೀವು ನಿದ್ದೆಯ ಸಮಯವನ್ನು ಹೆಚ್ಚಿಸಿದ್ದೀರಾ, ನಿಮ್ಮನ್ನು ನೀವು ದಂಡಿಸುಕೊಳ್ಳಬೇಡಿ ಎಂದು ಕೇಳುತ್ತಿರುತ್ತಾರೆ ಎಂದರು.

   ದಿನಕ್ಕೆ 20 ಗಂಟೆ ದುಡಿಯುವ ಪ್ರಧಾನಿ ಮೋದಿ

   ದಿನಕ್ಕೆ 20 ಗಂಟೆ ದುಡಿಯುವ ಪ್ರಧಾನಿ ಮೋದಿ

   ಪ್ರಧಾನಿ ನರೇಂದ್ರ ಮೋದಿ ಅವರು ದಿನಕ್ಕೆ 20 ಗಂಟೆ ಕಾರ್ಯತತ್ಪರರಾಗಿರುತ್ತಾರೆ. 'ನಾನು ತುಂಬಾ ಕಡಿಮೆ ಅವಧಿ ನಿದ್ರಿಸುತ್ತೇನೆ. ನನ್ನ ಎಲ್ಲಾ ವೈದ್ಯ ಮಿತ್ರರು ನಿರಂತರವಾಗಿ ನಾನು ಹೆಚ್ಚು ನಿದ್ರಿಸಬೇಕು ಎಂದು ಸಲಹೆ ನೀಡುತ್ತಿರುತ್ತಾರೆ. ನಾನು 5 ರಿಂದ 6 ಗಂಟೆಗಳ ಕಾಲ ನಿದ್ರಿಸಬೇಕು ಎಂಬ ಸಲಹೆ ಕೇಳಿ ಬರುತ್ತದೆ. ಆದರೆ, ನಾನು ವರ್ಕೋಹಾಲಿಕ್ ಆಗಿದ್ದೇನೆ. ಇದು ನಾನು ಹಲವು ವರ್ಷಗಳಿಂದ ರೂಢಿಸಿಕೊಂಡ ವಿಧಾನವಾಗಿದೆ. ನಾನು ಬಹುತೇಕ 3.5 ಗಂಟೆಗಳ ಕಾಲ ಗಾಢವಾದ ನಿದ್ರೆ ಮಾಡುತ್ತೇನೆ. ಮಲಗಿಕೊಂಡ 30 ಸೆಕೆಂಡುಗಳಲ್ಲಿ ನಿದ್ರೆಗೆ ಜಾರುತ್ತೇನೆ ಎಂದು ಮೋದಿ ಅವರು 2011ರಿಂದ ಇಲ್ಲಿ ತನಕ ತಮ್ಮ ನಿದ್ರಾವಧಿ ಬಗ್ಗೆ ಇರುವ ಕುತೂಹಲಕ್ಕೆ ಉತ್ತರಿಸುತ್ತಾ ಬಂದಿದ್ದಾರೆ.

   ಅಧ್ಯಕ್ಷರಾಗಿದ್ದಾಗ ಒಬಾಮಾ ಎಷ್ಟು ಕಾಲ ನಿದ್ರಿಸುತ್ತಿದ್ದರು?

   ಅಧ್ಯಕ್ಷರಾಗಿದ್ದಾಗ ಒಬಾಮಾ ಎಷ್ಟು ಕಾಲ ನಿದ್ರಿಸುತ್ತಿದ್ದರು?

   ಅಮೆರಿಕ ಅಧ್ಯಕ್ಷರಾಗಿದ್ದಾಗ ಒಬಾಮಾ ಎಷ್ಟು ಕಾಲ ನಿದ್ರಿಸುತ್ತಿದ್ದರು? ಎಂಬ ಪ್ರಶ್ನೆಗೆ ಟಾಕ್ ಶೋವೊಂದರಲ್ಲಿ ಒಬಾಮಾ ಅವರೇ ಉತ್ತರಿಸಿದ್ದರು. ರಾತ್ರಿ 2 ಗಂಟೆ ತನಕವೂ ಎಚ್ಚರವಿರುತ್ತೇನೆ. ನಾಳೆ ದಿನ ಕಾರ್ಯಕ್ರಮ ವಿವರ ಪರಿಶೀಲಿಸಿ, ತಯಾರಿಗೊಳ್ಳುತ್ತೇನೆ ಎಂದಿದ್ದರು. ನ್ಯೂಯಾರ್ಕ್ ಟೈಮ್ಸ್ ವರದಿಯಂತೆ ಒಬಾಮಾ ಅವರ ಕಚೇರಿ ರಾತ್ರಿ 1 ಗಂಟೆ ತನಕವೂ ಇಮೇಲ್ ಗಳನ್ನು ಸ್ವೀಕರಿಸಿರುತ್ತದೆ. ರಾತ್ರಿ 11 ಗಂಟೆಗೂ ಒಮ್ಮೊಮ್ಮೆ ಕಾನ್ಫರೆನ್ಸ್ ಕಾಲ್ ಬಂದಿದ್ದಿದೆ ಎಂದು ರಾಜಕೀಯ ತಜ್ಞರೊಬ್ಬರು ಹೇಳಿದ್ದರು. ಒಬಾಮಾ ರಾತ್ರಿ 5 ಗಂಟೆಗಳ ಕಾಲ ನಿದ್ರಿಸುತ್ತಾರೆರ್.

   ಕಡಿಮೆ ಅವಧಿಯಲ್ಲಿ ನಿದ್ದೆ ಮಾಡುವವರ ವಂಶವಾಹಿ

   ಕಡಿಮೆ ಅವಧಿಯಲ್ಲಿ ನಿದ್ದೆ ಮಾಡುವವರ ವಂಶವಾಹಿ

   ಕಡಿಮೆ ಅವಧಿಯಲ್ಲಿ ನಿದ್ದೆ ಮಾಡುವ ಸೆಲೆಬ್ರಿಟಿಗಳ ನಿದ್ರಾವಧಿಯನ್ನು ಅಭ್ಯಸಿಸಿರುವ ವಿಜ್ಞಾನಿಗಳು ಈ ರೀತಿ ನಿದ್ದೆ ಮಾಡುವವರಲ್ಲಿ ವಿಶೇಷ ವಂಶವಾಹಿ(gene) ಇರುತ್ತದೆ. 'ಪಿರೀಡ್ 3' ಅಥವಾ 'ಕ್ಲಾಕ್ ಜೀನ್' ಎಂದು ಕರೆಯಲಾಗುತ್ತದೆ. ಸಾಮಾನ್ಯ ಮನುಷ್ಯರಿಗೆ 7 ರಿಂದ 8 ಅವಧಿ ನಿದ್ರೆಬೇಕಾದರೆ, ಈ ಜೀನ್ ಉಳ್ಳವರಿಗೆ ರಾತ್ರಿ 4 ಗಂಟೆ ನಿದ್ದೆ ಸಾಕು.

   ಕಡಿಮೆ ನಿದ್ದೆ ಮಾಡುವ ಸೆಲೆಬ್ರಿಟಿಗಳು

   ಕಡಿಮೆ ನಿದ್ದೆ ಮಾಡುವ ಸೆಲೆಬ್ರಿಟಿಗಳು

   ಮೈಕಲ್ ಏಂಜೆಲೋ, ನೆಪೋಲಿಯನ್, ಥಾಮಸ್ ಎಡಿಸನ್, ಡಾ ವಿಂಚಿ, ಪ್ರತಿರಾತ್ರಿ ಸರಾಸರಿ 4 ಗಂಟೆ ಮಾತ್ರ ನಿದ್ದೆ ಮಾಡುತ್ತಿದ್ದರು ಎಂಬ ವರದಿಯಿದೆ. ಈಗಿನ ಕಾಲದಲ್ಲಿ ಮಡೋನ್ನಾ, ಜೆ ಲೆನೋ, ಮಾರ್ಗರೇಟ್ ಥ್ಯಾಚರ್, ಅನೇಕ ಪೋಟಸ್(ಅಮೆರಿಕದ ಅಧ್ಯಕ್ಷರುಗಳು), ಮರಿಸ್ಸಾ ಮೆಯರ್ ಅವರು ಕಡಿಮೆ ಅವಧಿ ನಿದ್ದೆ ಮಾಡಿ ಕೂಡಾ ಸಕ್ರಿಯವಾಗಿ ಕಾರ್ಯ ನಿರ್ವಹಿಸಿ ಅಚ್ಚರಿ ಮೂಡಿಸಿದ್ದಾರೆ. ಈ ವಿಷಯದಲ್ಲಿ ಕನ್ನಡ ಚಿತ್ರಕರ್ಮಿ ದಿವಂಗತ ಶಂಕರ್ ನಾಗ್ ಅವರನ್ನು ಸ್ಮರಿಸಬಹುದು.

   English summary
   Prime Minister Narendra Modi gave a peek into his friendship with former US president Barack Obama. Modi said, Obama shows concern about my sleeping pattern. He asked me why I sleep so less.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X