• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಂದಿರಾ ಗಾಂಧಿ ಮಾಡಿದ 'ಆ ಎರಡು ಗಂಭೀರ ತಪ್ಪುಗಳು' ಯಾವುದು?

|
   ಇಂದಿರಾ ಗಾಂಧಿ ಮಾಡಿದ ಎರಡು ತಪ್ಪುಗಳಿವು | Oneindia Kannada

   "ಇಂದಿರಾ ಗಾಂಧಿ ಅವರು ಎರಡು ಗಂಭೀರ ಪ್ರಮಾದಗಳನ್ನು ಎಸಗಿದರು. 1975ರಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದು ಹಾಗೂ ಆಪರೇಷನ್ ಬ್ಲೂ ಸ್ಟಾರ್ ಗೆ ಒಪ್ಪಿಗೆ ಸೂಚಿಸಿದ್ದು ಅವರು ಮಾಡಿದ ತಪ್ಪುಗಳು" ಎಂದಿದ್ದಾರೆ ಕಾಂಗ್ರೆಸ್ ನ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ವಿದೇಶಾಂಗ ಸಚಿವ ನಟವರ್ ಸಿಂಗ್.

   ಮುಂದುವರಿದು, ಇವೆಲ್ಲ ಹೊರತುಪಡಿಸಿಯೂ ಅವರು ಅದ್ಭುತ ಹಾಗೂ ಪ್ರಭಾವಿ ಪ್ರಧಾನಿ ಆಗಿದ್ದರು. ಜತೆಗೆ ಮಾನವೀಯತೆ ಗುರುತಿಸುತ್ತಿದ್ದರು ಎಂದು ನಟವರ್ ಸಿಂಗ್ ಹೇಳಿದ್ದಾರೆ. ನಟವರ್ ಸಿಂಗ್ 1980ರ ದಶಕದಲ್ಲಿ ಕಾಂಗ್ರೆಸ್ ಸೇರುವ ಮುನ್ನ ನಾಗರಿಕ ಸೇವಾ ಅಧಿಕಾರಿಯಾಗಿ ಇಂದಿರಾಗಾಂಧಿ ಅವರ ಕಚೇರಿಯಲ್ಲಿ 1966ರಿಂದ 1971ರವರೆಗೆ ಕಾರ್ಯ ನಿರ್ವಹಿಸಿದ್ದರು. ರಾಜೀವ್ ಗಾಂಧಿ ಅವರ ಸಂಪುಟದಲ್ಲಿ ಸಚಿವರಾಗಿದ್ದರು.

   ಇಂದಿರಾ ಹತ್ಯೆಗೆ ಕಾರಣವಾದ ಆಪರೇಶನ್ ಬ್ಲೂ ಸ್ಟಾರ್: 10 ಸಂಗತಿ

   ತಮ್ಮ ಸ್ನೇಹಿತರೂ ಸೇರಿದ ಹಾಗೆ ಹಲವರಿಗೆ ಬರೆದ ಪತ್ರಗಳನ್ನು ಒಟ್ಟು ಮಾಡಿ, ಪುಸ್ತಕವಾಗಿ ಪ್ರಕಟಿಸಿರುವ ನಟವರ್ ಸಿಂಗ್ ರ 'Treasured Epistles'ನಲ್ಲಿ ಈ ಬಗ್ಗೆ ಪ್ರಸ್ತಾವ ಮಾಡಲಾಗಿದೆ. ಇಂದಿರಾ ಗಾಂಧಿ, ಇ.ಎಮ್.ಫಾರ್ ಸ್ಟರ್, ಸಿ.ರಾಜಗೋಪಾಲಾಚಾರಿ, ಲಾರ್ಡ್ ಮೌಂಟ್ ಬ್ಯಾಟನ್, ಆರ್.ಕೆ.ನಾರಾಯಣನ್ ಮತ್ತಿತರರ ಪತ್ರಗಳು ಒಳಗೊಂಡಿವೆ.

   ಕರುಣೆ ಇಲ್ಲದಂಥ ವ್ಯಕ್ತಿತ್ವ ಎಂಬ ಚಿತ್ರಣ

   ಕರುಣೆ ಇಲ್ಲದಂಥ ವ್ಯಕ್ತಿತ್ವ ಎಂಬ ಚಿತ್ರಣ

   ಇಂದಿರಾ ಗಾಂಧಿ ಅವರನ್ನು ಗಂಭೀರ, ತೀವ್ರ, ಕರುಣೆ ಇಲ್ಲದಂಥವರು ಅಂತೆಲ್ಲ ಪದೇ ಪದೇ ಚಿತ್ರಿಸಲಾಗಿತ್ತು. ಆದರೆ ಅವರು ಸುಂದರ, ಕಾಳಜಿ ಇರುವ, ಕೃತಜ್ಞತೆ ಸೂಚಿಸುವ, ಮಾನವೀಯತೆ ಗುರುತಿಸುವಂಥ ವ್ಯಕ್ತಿ ಆಗಿದ್ದರೆ. ಇದರ ಜತೆಗೆ ಇಂದಿರಾ ಗಾಂಧಿ ಅಪಾರವಾಗಿ ಓದಿಕೊಂಡಿದ್ದರು. ಅದರ ಮೂಲಕವಾಗಿಯೂ ಆಕರ್ಷಕ ಗುಣ, ಸದಭಿರುಚಿ ಅವರಿಗೆ ಇತ್ತು ಎಂದು ನಟವರ್ ಸಿಂಗ್ ಹೇಳಿದ್ದಾರೆ.

   ಪಾಕಿಸ್ತಾನ ಹೈಕಮಿಷನರ್ ಆಗಿದ್ದಾಗ ಬರೆದ ಪತ್ರ

   ಪಾಕಿಸ್ತಾನ ಹೈಕಮಿಷನರ್ ಆಗಿದ್ದಾಗ ಬರೆದ ಪತ್ರ

   ಇಂದಿರಾ ಗಾಂಧಿ ಅವರು ಜನ್ಮ ದಿನದ ಶುಭಾಶಯ ಹೇಳಿರುವುದು, ಬೇಗ ಚೇತರಿಸಿಕೊಳ್ಳಿ ಎಂದು ಹಾರೈಸಿರುವುದು ಸೇರಿದಂತೆ ವಿವಿಧ ಪತ್ರಗಳನ್ನು ಪುಸ್ತಕ ಒಳಗೊಂಡಿದೆ. 1980ರಲ್ಲಿ ಲೋಕಸಭೆ ಚುನಾವಣೆ ಗೆದ್ದ ನಂತರ ನಟವರ್ ಸಿಂಗ್ ಅವರಿಗೆ ಇಂದಿರಾ ಗಾಂಧಿ ಪತ್ರ ಬರೆದಿದ್ದಾರೆ. ಆಗ ಸಿಂಗ್ ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲಿ ಭಾರತದ ಹೈ ಕಮಿಷನರ್ ಆಗಿರುತ್ತಾರೆ.

   ಇಂದಿರಾಗಿತ್ತೆ ನೆಹರೂ ಸೆಕ್ರೆಟರಿ ಜೊತೆ ಸೀಕ್ರೆಟ್ ಸಂಬಂಧ?

   ನಿಜವಾದ ಕಷ್ಟ ಈಗ ಶುರುವಾಗಿದೆ

   ನಿಜವಾದ ಕಷ್ಟ ಈಗ ಶುರುವಾಗಿದೆ

   "ನಿಜವಾದ ಕಷ್ಟ ಈಗ ಶುರುವಾಗಿದೆ. ಜನರ ನಿರೀಕ್ಷೆಗಳು ಭಾರೀ ಎತ್ತರದಲ್ಲಿವೆ. ಆದರೆ ರಾಜಕೀಯ ಅಥವಾ ಆರ್ಥಿಕ ಸನ್ನಿವೇಶವು ಬಹಳ ಬಿಕ್ಕಟ್ಟಿನಲ್ಲಿದೆ. ಬರೀ ಆಶಾವಾದದಿಂದ ಏನೂ ಆಗುವುದಿಲ್ಲ. ನಮ್ಮ ಜನಪ್ರತಿನಿಧಿಗಳು ಹಾಗೂ ಜನರು ತಾಳ್ಮೆಯಿಂದ ಮುಂದಿನ ಕೆಲವು ತಿಂಗಳ ಕಾಲ ಕಲ್ಲಿನ ಹಾದಿ ತುಳಿಯಬೇಕಾಗುತ್ತದೆ. ಅಡೆತಡೆಗಳನ್ನು ದಾಟಿದ ಮೇಲೆ ಒಂದು ಸ್ಥಳ ತಲುಪುತ್ತೇವೆ. ಅಲ್ಲಿಂದ ಮತ್ತೊಮ್ಮೆ ಅಭಿವೃದ್ಧಿ ಸಾಧ್ಯ" ಎಂದು ಇಂದಿರಾ ಗಾಂಧಿ ಪತ್ರದಲ್ಲಿ ಬರೆದಿದ್ದಾರೆ.

   ದೇಶ ಇಬ್ಭಾಗದ ಆಲೋಚನೆ 'ಮಾರಾಟ'

   ದೇಶ ಇಬ್ಭಾಗದ ಆಲೋಚನೆ 'ಮಾರಾಟ'

   ದೇಶ ಇಬ್ಭಾಗ ಎಂಬ ಆಲೋಚನೆಯನ್ನು 'ದೇಶ ಇಬ್ಭಾಗ ಆಗುವುದೊಂದೇ ಪರಿಹಾರ' ಎಂದು ಲಾರ್ಡ್ ಮೌಂಟ್ ಬ್ಯಾಟನ್ ಗೆ 'ಮಾರಾಟ' ಮಾಡಿದೆ ಎಂಬ ಮಾತನ್ನು ಸಿ.ರಾಜಗೋಪಾಲಾಚಾರಿ ಅವರು ನಟವರ್ ಸಿಂಗ್ ಗೆ ಹೇಳಿದ್ದ ಬಗ್ಗೆ ಕೂಡ ಪುಸ್ತಕದಲ್ಲಿ ಮಾಹಿತಿ ಇದೆ. ಮಹಾತ್ಮ ಗಾಂಧಿ ಅವರು ದೇಶ ಇಬ್ಭಾಗ ಆಗುವ ನಿರ್ಧಾರಕ್ಕೆ ವಿರುದ್ಧ ಆಗಿದ್ದರಲ್ಲ ಎಂಬ ಮಾತಿಗೆ ಪ್ರತಿಕ್ರಿಯಿಸಿರುವ ರಾಜಗೋಪಾಲಾಚಾರಿ, "ಗಾಂಧಿ ಅದ್ಭುತವಾದ ವ್ಯಕ್ತಿ. ಆದರೆ ಏನು ನಡೆಯುತ್ತಿದೆ ಎಂಬುದನ್ನು ಮಾತ್ರ ನೋಡುತ್ತಿದ್ದರು. ಅವರು ಬಹಳ ಭ್ರಮನಿರಸನಗೊಂಡಿದ್ದರು. ನಾವೆಲ್ಲರೂ ದೇಶ ಇಬ್ಭಾಗ ಆಗುವ ನಿರ್ಧಾರದ ಪರ ಇದ್ದದ್ದು ಅವರಿಗೆ ಗೊತ್ತಾಯಿತು. 'ನೀವೆಲ್ಲ ಒಪ್ಪುವುದಾದರೆ ನಿಮ್ಮ ನಿರ್ಧಾರದ ಜತೆಯೇ ನಾನು ಬರ್ತೀನಿ' ಎಂದರು. ಮತ್ತು ಮರುದಿನ ದೆಹಲಿಯನ್ನು ತೊರೆದರು" ಎಂದು ರಾಜಗೋಪಾಲಾಚಾರಿ ಹೇಳಿರುವುದಾಗಿ ದಾಖಲಾಗಿದೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Indira Gandhi made two serious mistakes -- declaring the Emergency in 1975 and allowing Operation Blue Star to happen, but regardless of these she was a great and powerful prime minister and a considerate humanist, feels veteran Congressman K Natwar Singh in his new book 'Treasured Epistles'.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more