ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಸಿಕೆ ಪಡೆದ ನಂತರ ಮಧುಮೇಹಿಗಳು ಯಾವ ಆಹಾರ ಸೇವಿಸಬೇಕು? ಏನನ್ನು ತ್ಯಜಿಸಬೇಕು?

|
Google Oneindia Kannada News

ನವದೆಹಲಿ, ಜುಲೈ 06: ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಕೇಂದ್ರ ಬೃಹತ್ ಲಸಿಕಾ ಅಭಿಯಾನ ಆರಂಭಿಸಿದೆ. ಆದರೆ ಲಸಿಕೆ ಪಡೆದ ನಂತರ ಉಂಟಾಗುವ ಅಡ್ಡ ಪರಿಣಾಮಗಳ ಭೀತಿಯಿಂದ ಹಲವರು ಲಸಿಕೆ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.

ಅದರಲ್ಲೂ ಮಧುಮೇಹಿಗಳು ಲಸಿಕೆ ಪಡೆದುಕೊಳ್ಳಲು ಹಿಂಜರಿಯುತ್ತಿದ್ದಾರೆ. ಆದರೆ ಕೊರೊನಾ ಲಸಿಕೆ ಪಡೆದ ನಂತರ ವಿಶ್ರಾಂತಿ, ಆಹಾರ, ಕಾಳಜಿ ತೆಗೆದುಕೊಂಡರೆ ಲಸಿಕೆಯ ಅಡ್ಡಪರಿಣಾಮಗಳನ್ನು ನಿರ್ವಹಿಸಬಹುದು ಎನ್ನುತ್ತಿದ್ದಾರೆ ವೈದ್ಯರು. ಇದರೊಂದಿಗೆ ಲಸಿಕೆ ಪಡೆದ ನಂತರ ಕೆಲವು ಆಹಾರ ಕ್ರಮಗಳನ್ನು ಪಾಲಿಸುವುದು ಅವಶ್ಯಕ ಎಂದು ಹೇಳುತ್ತಿದ್ದಾರೆ. ನೀವು ಮಧುಮೇಹಿಗಳಾಗಿದ್ದಲ್ಲಿ ಲಸಿಕೆ ಪಡೆದ ನಂತರ ಯಾವ ಆಹಾರ ಸೇವನೆ ಮಾಡಬೇಕು? ಯಾವುದನ್ನು ತ್ಯಜಿಸಬೇಕು ಎಂಬ ಸಲಹೆಯನ್ನು ನೀಡಿದ್ದಾರೆ. ಮುಂದೆ ಓದಿ...

 ಕೊರೊನಾ ನಂತರ ರಕ್ತದಲ್ಲಿನ ಸಕ್ಕರೆ ಅಂಶದಲ್ಲಿ ಅಸಹಜ ಏರಿಕೆ; ಏಮ್ಸ್ ಕೊರೊನಾ ನಂತರ ರಕ್ತದಲ್ಲಿನ ಸಕ್ಕರೆ ಅಂಶದಲ್ಲಿ ಅಸಹಜ ಏರಿಕೆ; ಏಮ್ಸ್

 ಮೊದಲು ಗಮನಿಸಬೇಕಾದ್ದು...

ಮೊದಲು ಗಮನಿಸಬೇಕಾದ್ದು...

ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಸೂಕ್ತ ಆಹಾರ ಕ್ರಮ ಅನುಸರಿಸುವುದು ಅವಶ್ಯಕ. ಲಸಿಕೆ ಪಡೆದವರು ರೋಗನಿರೋಧಕ ಶಕ್ತಿ ಹೆಚ್ಚಿಸುವ ಹಾಗೂ ಉರಿಯೂತ ನಿರೋಧಕ ಅಂಶಗಳಿರುವ ಆಹಾರ ಸೇವನೆ ಮಾಡಬೇಕು.

 ಮೀನು, ಮೊಟ್ಟೆ, ಕೋಳಿ ಮಾಂಸ ಸೇವನೆ

ಮೀನು, ಮೊಟ್ಟೆ, ಕೋಳಿ ಮಾಂಸ ಸೇವನೆ

ಮೀನು; ಮೀನಿನಲ್ಲಿ ಉರಿಯೂತ ನಿವಾರಕ ಅಂಶವಿದ್ದು, ರೋಗನಿರೋಧಕ ಶಕ್ತಿ ಹೆಚ್ಚಿಸುವ ಒಮೆಗಾ 3 ಆಮ್ಲ ಇರುವ ಕಾರಣ ಮೀನು ಸೇವನೆ ಉತ್ತಮ. ಕೋಳಿ ಮಾಂಸ ಸೇವನೆ ಮಧುಮೇಹಿಗಳು ಹಾಗು ರಕ್ತದೊತ್ತಡ ಇರುವವರಿಗೆ ಸೂಕ್ತ. ಕೋಳಿ ಮಾಂಸದಲ್ಲಿ ಪ್ರೊಟೀನ್ ಇದ್ದು, ಲಸಿಕೆ ಪಡೆದ ನಂತರ ವಾರಕ್ಕೆ ಎರಡು ಬಾರಿ ಸೇವನೆ ಮಾಡಬಹುದು.

ಮೊಟ್ಟೆಯಲ್ಲಿ ಪ್ರೊಟೀನ್ ಇದ್ದು, ಅಮಿನೊ ಆಮ್ಲ ಇರುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಲಸಿಕೆ ಪಡೆದುಕೊಂಡ ಮಧುಮೇಹಿಗಳು ಮೊಟ್ಟೆಯನ್ನು ತಮ್ಮ ಆಹಾರದ ಭಾಗವಾಗಿಟ್ಟುಕೊಳ್ಳುವುದು ಉಚಿತ.

 ಎರಡು ಕಪ್ ತರಕಾರಿ ಸೇವನೆ

ಎರಡು ಕಪ್ ತರಕಾರಿ ಸೇವನೆ

ಯಾವುದೇ ಹಣ್ಣು, ತರಕಾರಿಗಳಲ್ಲಿ ಆ್ಯಂಟಿಯಾಕ್ಸಿಡಂಟ್, ಖನಿಜಾಂಶಗಳು, ವಿಟಮಿನ್‌ಗಳು ಹೆಚ್ಚಿರುತ್ತದೆ. ಹೀಗಾಗಿ ದಿನಕ್ಕೆ ಒಂದು ಕಪ್ ಹಣ್ಣು ಹಾಗೂ ಎರಡು ಅಥವಾ ಮೂರು ಕಪ್‌ನಷ್ಟು ತರಕಾರಿಯನ್ನು ತಮ್ಮ ಆಹಾರ ಕ್ರಮದಲ್ಲಿರುವಂತೆ ನೋಡಿಕೊಳ್ಳಬೇಕು.

 ಅರಿಶಿಣ ಬೆರೆಸಿದ ಹಾಲು ಸೇವನೆ

ಅರಿಶಿಣ ಬೆರೆಸಿದ ಹಾಲು ಸೇವನೆ

ಅರಿಶಿಣದಲ್ಲಿ ಕರ್ಕುಮಿನ್ ಎಂಬ ಅಂಶವು ಆರೋಗ್ಯಕ್ಕೆ ಉತ್ತಮ. ಅರಿಶಿಣ ಒತ್ತಡ ನಿವಾರಣೆಗೆ ಔಷಧಿಯಂತೆ ಕೆಲಸ ಮಾಡುತ್ತದೆ. ಲಸಿಕೆ ಪಡೆದ ನಂತರ ಕೆಲವರಲ್ಲಿ ಒತ್ತಡ ಹೆಚ್ಚಾಗುವುದರಿಂದ, ಹಾಲಿನಲ್ಲಿ ಅರಿಶಿಣ ಬೆರೆಸಿ ಸೇವನೆ ಮಾಡುವುದು ಸೂಕ್ತ. ಒತ್ತಡವು ರಕ್ತದಲ್ಲಿನ ಸಕ್ಕರೆ ಅಂಶ ಹೆಚ್ಚಳಕ್ಕೆ ಕಾರಣವಾಗಿರುವುದರಿಂದ ಮಧುಮೇಹಿಗಳು ಅರಿಶಿಣವನ್ನು ತಮ್ಮ ಆಹಾರ ಕ್ರಮದಲ್ಲಿರುವಂತೆ ನೋಡಿಕೊಳ್ಳಬೇಕು.

Recommended Video

ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಅಮೃತಬಳ್ಳಿ ತಂದಿಟ್ಟ ಅಪಾಯ ನೋಡಿ | Oneindia Kannada
 ಲಸಿಕೆ ಪಡೆದುಕೊಂಡ ನಂತರ ಏನನ್ನು ತ್ಯಜಿಸಬೇಕು?

ಲಸಿಕೆ ಪಡೆದುಕೊಂಡ ನಂತರ ಏನನ್ನು ತ್ಯಜಿಸಬೇಕು?

* ಖಾಲಿ ಹೊಟ್ಟೆಯಲ್ಲಿ ಲಸಿಕೆ ಪಡೆದುಕೊಳ್ಳಬಾರದು.
* ಲಸಿಕೆ ಪಡೆದ ನಂತರ ಹದಿನೈದು ದಿನಗಳವರೆಗೂ ಸಿಗರೇಟ್ ಸೇವನೆ ಮಾಡಬಾರದು.
* ಲಸಿಕೆ ಪಡೆದ ನಂತರ 15 ದಿನಗಳವರೆಗೂ ಮದ್ಯ ಸೇವನೆ ಮಾಡಬಾರದು.
* ಕೆಫೇನ್ ಅಂಶವಿರುವ ಪಾನೀಯಗಳ ಸೇವನೆ ಮಾಡಬಾರದು.

English summary
Here is a diet for diabetic patient after Covid Vaccination,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X