ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇರಾನ್ ಕಡೆಗೆ ಹೋದರೆ ಪುಟಿನ್; ಬೆಚ್ಚಿ ಬೀಳುವುದೇಕೆ ತೆಹರಾನ್!?

|
Google Oneindia Kannada News

ಮಾಸ್ಕೋ, ಜುಲೈ 20: ಉಕ್ರೇನ್ ನೆಲದಲ್ಲಿ ನೆತ್ತರು ಹರಿಸಿದ ರಷ್ಯಾವನ್ನು ಜಗತ್ತಿನ ದೈತ್ಯ ರಾಷ್ಟ್ರಗಳೇ ಉಗಿದು ದೂರವಿಟ್ಟಿದೆ. ಅಮೆರಿಕಾ ಸೇರಿ ಹಲವು ರಾಷ್ಟ್ರಗಳು ವ್ಲಾಡಿಮಿರ್ ಪುಟಿನ್ ಮೇಲೆ ಒಂದು ಕಣ್ಣಿಟ್ಟಿವೆ. ಇದರ ಮಧ್ಯೆ ರಷ್ಯಾದ ಅಧಿಪತಿ ಮತ್ತೊಂದು ರಾಷ್ಟ್ರಕ್ಕೆ ಹಾರಿದ್ದಾರೆ.

ಫೆಬ್ರವರಿ 24ರಂದು ಉಕ್ರೇನ್ ಮೇಲೆ ಯುದ್ಧ ಆರಂಭಿಸಿದ ನಂತರದಲ್ಲಿ ಮೊದಲ ಬಾರಿಗೆ ಜುಲೈ 19ರ ಮಂಗಳವಾರ ವ್ಲಾಡಿಮಿರ್ ಪುಟಿನ್ ವಿದೇಶ ಪ್ರವಾಸ ತೆರಳಿದ್ದಾರೆ. ರಷ್ಯಾ ಮತ್ತು ಇರಾನ್ ನಡುವಿನ ಉದಯೋನ್ಮುಖ ಸಂಬಂಧ ಪಾಶ್ಚಿಮಾತ್ಯ ರಾಷ್ಟ್ರಗಳ ಪಾಲಿಗೆ ಸಹಿಸಲಾರದ ಬೆಳವಣಿಗೆಯಾಗಿದೆ. ತರ್ಹಾನ್ ಸುಪ್ರೀಂ ನಾಯಕರಾಗಿರುವ ಅಯತೊಲ್ಲಾ ಅಲಿ ಖಮೇನಿ ಮತ್ತು ಅಧ್ಯಕ್ಷ ಇಬ್ರಾಹಿಂ ರೈಸಿ ಹಾಗೂ ಟರ್ಕಿ ಅಧ್ಯಕ್ಷ ತಯ್ಯಿಪ್ ಎರ್ಡೋಗನ್ ಜೊತೆಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಚರ್ಚೆ ನಡೆಸಿದ್ದಾರೆ.

ನಿಮ್ಮ ಜೊತೆ ನಮಗೇನ್ ಒಪ್ಪಂದ: ಭಾರತದ ಕಂಪನಿಗಳಿಗೆ ಕಚ್ಚಾತೈಲ ನೀಡಲ್ಲ ಎಂದ ರಷ್ಯಾ!ನಿಮ್ಮ ಜೊತೆ ನಮಗೇನ್ ಒಪ್ಪಂದ: ಭಾರತದ ಕಂಪನಿಗಳಿಗೆ ಕಚ್ಚಾತೈಲ ನೀಡಲ್ಲ ಎಂದ ರಷ್ಯಾ!

ಜಗತ್ತಿನಲ್ಲಿ ಶಕ್ತಿ ಉತ್ಪಾದಿಸುವ ಅಗ್ರಮಾನ್ಯ ರಾಷ್ಟ್ರಗಳು ಪರಸ್ಪರ ಪೈಪೋಟಿಗೆ ಇಳಿಯುವಷ್ಟು ಸಾಮರ್ಥ್ಯವನ್ನು ಹೊಂದಿವೆ. ಹೀಗಿರುವಾಗ ಉಭಯ ರಾಷ್ಟ್ರದ ನಾಯಕರ ಭೇಟಿಯು ಎರಡು ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಅನುಮಾನವನ್ನು ಹುಟ್ಟು ಹಾಕುತ್ತಿದೆ. ರಷ್ಯಾ ಮತ್ತು ಇರಾನ್ ನಡುವಿನ ನಂಟು ಬೇರೆ ರಾಷ್ಟ್ರಗಳ ನಿದ್ದೆಗೆಡಿಸಿದೆ. ಉಕ್ರೇನ್ ನೆಲದ ಶಾಂತಿ ಕೆಡಿಸಿದ ಪುಟಿನ್ ಸರ್ಕಾರಕ್ಕೆ ಇರಾನ್ ಬೆಂಬಲ ನೀಡುತ್ತದೆಯೇ ಎಂಬ ಸಂಶಯ ಹೆಚ್ಚುತ್ತಿದೆ. ಈ ಅನುಮಾನ ಮತ್ತು ಸಂಶಯಗಳ ಸುತ್ತ ಎದ್ದಿರುವ ಹಲವು ಪ್ರಶ್ನೆಗಳನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾ ಬೆನ್ನಿಗೆ ಇರಾನ್?

ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾ ಬೆನ್ನಿಗೆ ಇರಾನ್?

ರಷ್ಯಾದ ಯುದ್ಧದಾಹಕ್ಕೆ ಇರಾನ್ ನೀರೆರೆಯುವ ಕೆಲಸ ಮಾಡುತ್ತದೆಯೇ ಎಂಬ ಅನುಮಾನ ಹುಟ್ಟಿಕೊಂಡಿದೆ. ಏಕೆಂದರೆ ರಷ್ಯಾಕ್ಕೆ ನೂರಾರು ಮಾನವರಹಿತ ವೈಮಾನಿಕ ವಾಹನ, (UAV) ಅಥವಾ ಡ್ರೋನ್‌ಗಳನ್ನು ಪೂರೈಸುವುದಕ್ಕಾಗಿ ಇರಾನ್ ಸಿದ್ಧವಾಗುತ್ತಿದೆ ಎಂದು US ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದರೆ ಈ ಸಂಬಂಧ ಅಧ್ಯಕ್ಷ ಪುಟಿನ್ ಇರಾನ್ ನಾಯಕರ ಜೊತೆಗೆ ಯಾವುದೇ ಚರ್ಚೆ ನಡೆಸಿಲ್ಲ ಎನ್ನಲಾಗಿದೆ. "ಉಕ್ರೇನ್ ಜನರ ಹತ್ಯೆಗಾಗಿ ಇರಾನ್ ಜೊತೆಗೆ ರಷ್ಯಾ ಮೈತ್ರಿ ಮಾಡಿಕೊಳ್ಳುತ್ತಿರುವುದನ್ನು ಇಡೀ ಜಗತ್ತು ಗಂಭೀರ ಮತ್ತು ಬೆದರಿಕೆಯ ವಿಷಯವನ್ನಾಗಿ ನೋಡಬೇಕಿದೆ," ಎಂದು ಯುಎಸ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಹೇಳಿದ್ದಾರೆ.

ರಷ್ಯಾದ ಬೃಹತ್ ಪ್ರಮಾಣದ ಟ್ಯಾಂಕ್‌ಗಳು ಮತ್ತು ಇತರ ಶಸ್ತ್ರಸಜ್ಜಿತ ವಾಹನಗಳನ್ನು ನಾಶಪಡಿಸುವುದಕ್ಕೆ ಉಕ್ರೇನ್ ಸೇನೆಯು ಈ ಹಿಂದೆ ಟರ್ಕಿಯಿಂದ ರವಾನಿಸಲಾಗಿದ್ದ ಬೈರಕ್ಟರ್ ಡ್ರೋನ್‌ಗಳನ್ನು ಬಳಸಿತ್ತು.

ಇರಾನಿನ ಡ್ರೋನ್‌ಗಳು ರಷ್ಯಾದ ಪಾಲಿಗೆ ಯುದ್ಧಸಾಮಗ್ರಿ ಆಗಿ ಉಪಯುಕ್ತವಾಗಿರಲಿದೆ. ಅದು ನಿಗದಿತವಾಗಿ ಪತ್ತೆ ಹಚ್ಚಿದ ಗುರಿಯ ಮೇಲೆ ದಾಳಿ ನಡೆಸುವುದಕ್ಕೆ ಸಹಕಾರಿ ಆಗಿರಲಿದೆ ಎಂದು ಲಂಡನ್‌ನಲ್ಲಿರುವ RUSI ಥಿಂಕ್-ಟ್ಯಾಂಕ್‌ನ ಯುದ್ಧ ತಜ್ಞ ಜ್ಯಾಕ್ ವಾಟ್ಲಿಂಗ್ ಹೇಳಿದ್ದಾರೆ.

ಇರಾನ್ ನಿರ್ಬಂಧ ನೀತಿಯಿಂದ ರಷ್ಯಾ ಕಲಿಯಬೇಕಾದ ಪಾಠ

ಇರಾನ್ ನಿರ್ಬಂಧ ನೀತಿಯಿಂದ ರಷ್ಯಾ ಕಲಿಯಬೇಕಾದ ಪಾಠ

ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳ ನಿರ್ಬಂಧಗಳ ವಿರುದ್ಧ ತನ್ನನ್ನು ತಾನು ರಕ್ಷಿಸಿಕೊಳ್ಳುವಲ್ಲಿ ಇರಾನ್ ಹಲವು ವರ್ಷಗಳ ಅನುಭವವನ್ನು ಹೊಂದಿದೆ. ಹೀಗಾಗಿ ರಷ್ಯಾದ ಪಾಲಿಗೆ ಇರಾನ್ ಎಂಬುದು ಪಾಶ್ಚಿಮಾತ್ಯ ರಾಷ್ಟ್ರಗಳ ನಿರ್ಬಂಧವನ್ನು ಯಶಸ್ವಿಯಾಗಿ ಎದುರಿಸಿದ ಮೌಲ್ಯಯುತ ಪಾಲುದಾರ ರಾಷ್ಟ್ರದಂತೆ ಕಾಣುತ್ತಿದೆ.

ಇದರ ಮಧ್ಯೆ ಉಕ್ರೇನ್ ಮೇಲಿನ ಯುದ್ಧದಿಂದಾಗಿ ರಷ್ಯಾ ಕೂಡ ಬ್ಯಾಂಕ್ ವಹಿವಾಟು, ವ್ಯವಹಾರ ಮತ್ತು ವೈಯಕ್ತಿಕ ವಿಷಯಗಳಲ್ಲಿ ನಿರ್ಬಂಧವನ್ನು ಎದುರಿಸುತ್ತಿದೆ. ಈ ಎರಡೂ ರಾಷ್ಟ್ರಗಳು ಪಾಶ್ಚಿಮಾತ್ಯ ತಂತ್ರಜ್ಞಾನದ ಬಂಡವಾಳ ಹೂಡಿಕೆಗೆ ಅವಕಾಶಮುಕ್ತವಾಗಿಲ್ಲ," ಎಂದು ಬರ್ಲಿನ್‌ನ SWP ಥಿಂಕ್-ಟ್ಯಾಂಕ್‌ನ ಜಾನಿಸ್ ಹೇಳಿದ್ದಾರೆ. ಇರಾನ್ ಮೂಲಕ ರಷ್ಯಾ ಕೆಲವು ಪಾಠಗಳನ್ನು ಕಲಿಯಬಹುದು. ಇದಕ್ಕೆ ಪರ್ಯಾಯವಾಗಿ ರಷ್ಯಾ ತನ್ನ ಸೇನಾ ಸರಕುಗಳು, ಕಚ್ಚಾವಸ್ತುಗಳು ಮತ್ತು ಧಾನ್ಯವನ್ನು ನೀಡಬಹುದು. ಈ ನಿಟ್ಟಿನಲ್ಲಿ ರಷ್ಯಾ ಈಗಾಗಲೇ ತೆರ್ಹಾನ್ ರಾಷ್ಟ್ರಕ್ಕೆ ಗೋಧಿ ಪೂರೈಸುವ ಪ್ರಮುಖ ರಾಷ್ಟ್ರವಾಗಿದೆ.

ರಷ್ಯಾದ ಕೆಲವು ಬ್ಯಾಂಕುಗಳಿಗೆ SWIFT ಅಂತರಾಷ್ಟ್ರೀಯ ಪಾವತಿ ವ್ಯವಸ್ಥೆಯನ್ನು ಕಡಿತಗೊಳಿಸಲಾಗಿದೆ. ಇದಕ್ಕೆ ಪರ್ಯಾಯವಾಗಿ ಇರಾನ್ ಬ್ಯಾಂಕುಗಳೊಂದಿಗೆ ಸೇರುವುದಕ್ಕೆ ಮಾಸ್ಕೋ ಯೋಜನೆ ಹಾಕಿಕೊಂಡಿದೆ.

ತೈಲ ವಲಯದಲ್ಲಿ ರಷ್ಯಾ ಮತ್ತು ಇರಾನ್ ಸಹಕಾರ

ತೈಲ ವಲಯದಲ್ಲಿ ರಷ್ಯಾ ಮತ್ತು ಇರಾನ್ ಸಹಕಾರ

ಜಾಗತಿಕ ಮಟ್ಟದಲ್ಲಿ ತೈಲ ಮತ್ತು ಅನಿಲ ಉತ್ಪಾದನೆಯಲ್ಲಿ ರಷ್ಯಾ ಮತ್ತು ಇರಾನ್ ಪರಸ್ಪರ ಸೆಡ್ಡು ಹೊಡೆಯುವಂತಿವೆ. ಅದಾಗ್ಯೂ, ಈ ವಿಷಯದಲ್ಲಿ ಉಭಯ ರಾಷ್ಟ್ರಗಳು ಹೇಗೆ ಸಹಕಾರವನ್ನು ನೀಡಲಿವೆ ಎಂಬುದು ಸೂಕ್ಷ್ಮ ಅಂಶವಾಗಿದೆ. ಫೆಬ್ರುವರಿ 24ರಂದು ಉಕ್ರೇನ್ ಮೇಲೆ ರಷ್ಯಾ ಯುದ್ಧ ಘೋಷಿಸಿದ ಬಳಿಕ ರಷ್ಯಾದಿಂದ ಇಂಧನ ಆಮದು ಮಾಡಿಕೊಳ್ಳುವುದಕ್ಕೆ ಹಲವು ರಾಷ್ಟ್ರಗಳು ನಿರ್ಬಂಧ ವಿಧಿಸಿದವು. ಈ ಹಂತದಲ್ಲಿ ರಷ್ಯಾ ತನ್ನಲ್ಲಿ ಉತ್ಪಾದಿಸುವ ಇಂಧನವನ್ನು ಕಡಿಮೆ ದರದಲ್ಲಿ ಚೀನಾ ಮತ್ತು ಭಾರತಕ್ಕೆ ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡುವುದಕ್ಕೆ ಶುರು ಮಾಡಿತು.

"ಆರ್ಥಿಕ ದೃಷ್ಟಿಯಲ್ಲಿ ನೋಡುವುದಾದರೆ, ಯುದ್ಧದಿಂದ ರಷ್ಯಾದ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಆದಾಗ್ಯೂ, ಪುಟಿನ್ ಭೇಟಿಯು ರಾಷ್ಟ್ರೀಯ ಇರಾನಿನ ತೈಲ ಕಂಪನಿ ಮತ್ತು ರಷ್ಯಾದ ಗಾಜ್‌ಪ್ರೊಮ್ ಸುಮಾರು $40 ಬಿಲಿಯನ್ ಡಾಲರ್ ಮೌಲ್ಯದ ಒಪ್ಪಂದಕ್ಕೆ ಸಾಕ್ಷಿ ಆಗಲಿದೆ. ಇದರ ಅಡಿಯಲ್ಲಿ NIOC ಗೆ ಎರಡು ಅನಿಲ ಘಟಕ ಮತ್ತು ಆರು ತೈಲ ಘಟಕಗಳನ್ನು ಅಭಿವೃದ್ಧಿಪಡಿಸಲು ಮತ್ತು ದ್ರವೀಕೃತ ನೈಸರ್ಗಿಕ ಅನಿಲ (LNG) ನಲ್ಲಿ ಭಾಗವಹಿಸಲು Gazprom ಸಹಾಯ ಮಾಡುತ್ತದೆ.

ಇರಾನ್ ಜೊತೆಗಿನ ಮಾತುಕತೆಯಿಂದ ಬದಲಾವಣೆ ಸಾಧ್ಯವೇ?

ಇರಾನ್ ಜೊತೆಗಿನ ಮಾತುಕತೆಯಿಂದ ಬದಲಾವಣೆ ಸಾಧ್ಯವೇ?

ಉಕ್ರೇನ್ ವಿರುದ್ಧ ನಡೆಯುತ್ತಿರುವ ಯುದ್ಧ JCPOA ಎಂದು ಕರೆಯುವ 2015ರ ಇರಾನ್ ಪರಮಾಣು ಒಪ್ಪಂದವನ್ನು ರಷ್ಯಾ ನೋಡುವ ಪರಿ ಬದಲಾಗಿದೆ. ಈ ಒಪ್ಪಂದವನ್ನು ಪುನಃಸ್ಥಾಪಿಸಲು ಹನ್ನೊಂದು ತಿಂಗಳ ಚರ್ಚೆಯು ಪರಮಾಣು ಕಾರ್ಯಕ್ರಮದ ಮೇಲಿನ ನಿರ್ಬಂಧಗಳಿಗೆ ಪ್ರತಿಯಾಗಿ ಇರಾನ್ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಲಾಯಿತು. ಆದರೆ ಉಕ್ರೇನ್ ಮೇಲಿನ ಆಕ್ರಮಣ ರಷ್ಯಾಗೆ ನಿರ್ಬಂಧವನ್ನು ಹೇರಿದರೂ, ಅದರಿಂದ ಇರಾನ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವಾಷಿಂಗ್ಟನ್ ಹೇಳಿದೆ.

"JCPOA ಮಾತುಕತೆಗಳಲ್ಲಿ ರಷ್ಯಾದ ಹಸ್ತಕ್ಷೇಪವು ಸಾಂಪ್ರದಾಯಿಕ ರಷ್ಯಾದ ವಿಧಾನದ ಗಮನಾರ್ಹ ಬದಲಾವಣೆ ಆಗಿದೆ. ಇದು ಮಾಸ್ಕೋದ ವಿಶ್ವಾಸಾರ್ಹತೆಯ ಬಗ್ಗೆ ತೆರ್ಹಾನ್‌ನಲ್ಲಿ ಅನುಮಾನಗಳನ್ನು ಹೆಚ್ಚಿಸಿದೆ," ಎಂದು ಯುರೇಷಿಯಾ ಗ್ರೂಪ್‌ನ ರೋಮ್ ಹೇಳಿದ್ದಾರೆ.

English summary
What Russian President Vladimir Putin Wants from Iran and Why Tehran Might Be Cautious; Here's a look at some of the key questions that their developing relationship poses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X