ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಪಾಸಿಟಿವ್ ಇದ್ದರೂ "ನೆಗೆಟಿವ್" ವರದಿ; ಹೀಗಾಗುತ್ತಿರುವುದೇಕೆ?

|
Google Oneindia Kannada News

ನವದೆಹಲಿ, ಏಪ್ರಿಲ್ 17: ದೇಶದಲ್ಲಿ ಕೊರೊನಾ ಎರಡನೇ ಅಲೆ ಆತಂಕ ಹೆಚ್ಚಿಸಿದೆ. ಇದಕ್ಕೆ ಕೊರೊನಾ ಸೋಂಕಿನ ರೂಪಾಂತರಗಳು ಕಾರಣ ಎಂದು ಕೆಲವು ತಜ್ಞರು ಹೇಳುತ್ತಿದ್ದರೆ, ಸೂಕ್ತ ಸಮಯದಲ್ಲಿ ಕೊರೊನಾ ಪರೀಕ್ಷೆ ನಡೆಸದಿರುವುದು ಸೋಂಕು ಹೆಚ್ಚಾಗಲು ಪ್ರಮುಖ ಕಾರಣ ಎಂದು ಇನ್ನೂ ಕೆಲವು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆದರೆ ಕೊರೊನಾ ಪರೀಕ್ಷಾ ವರದಿಯಲ್ಲೂ ಈಗೀಗ ಗೊಂದಲ ಏರ್ಪಡುತ್ತಿದೆ. ಕೊರೊನಾ ಪರೀಕ್ಷಾ ವರದಿ ನೆಗೆಟಿವ್ ಎಂದು ಬಂದ ನಾಲ್ಕೇ ದಿನಗಳ ನಂತರ ಜ್ವರ ಕಾಣಿಸಿಕೊಂಡು, ಮತ್ತೆ ಪರೀಕ್ಷೆಗೆ ಒಳಗಾದಾಗ ಕೊರೊನಾ ಪಾಸಿಟಿವ್ ವರದಿ ಬರುತ್ತಿರುವ ಹಲವು ಉದಾಹರಣೆಗಳು ಸಿಗುತ್ತಿವೆ. ಆರ್‌ಟಿಪಿಸಿಆರ್ ಪರೀಕ್ಷೆಯಲ್ಲಿಯೇ ದೋಷವಿದೆಯೇ? ಪರೀಕ್ಷಾ ಪ್ರಕ್ರಿಯೆಯಲ್ಲಿ ಲೋಪವಿದೆಯೇ? ಏಕೆ ಹೀಗಾಗುತ್ತಿದೆ? ಮುಂದೆ ಓದಿ...

 ಪರೀಕ್ಷೆ ಕುರಿತು ಹೀಗೊಂದು ಸಂಗತಿ...

ಪರೀಕ್ಷೆ ಕುರಿತು ಹೀಗೊಂದು ಸಂಗತಿ...

ಹೀಗೊಂದು ಘಟನೆ. 22 ವರ್ಷದ ಯುವಕನಿಗೆ ಇದ್ದಕ್ಕಿದ್ದಂತೆ ತೀವ್ರ ಜ್ವರ ಕಾಣಿಸಿಕೊಂಡಿತ್ತು. ಆನಂತರ ಆತನನ್ನು ಕ್ವಾರಂಟೈನ್‌ನಲ್ಲಿರಿಸಿ ಕೊರೊನಾ ಪರೀಕ್ಷೆ ನಡೆಸಲಾಗಿತ್ತು. ವರದಿ ಕೊರೊನಾ ನೆಗೆಟಿವ್ ಎಂದು ಬಂದಿತ್ತು. ಮತ್ತೆ ಎಂದಿನಂತೆ ಆತ ಇದ್ದ. ಆದರೆ ಕೆಲವೇ ದಿನಗಳಲ್ಲಿ ಕುಟುಂಬಸ್ಥರಲ್ಲೂ ಜ್ವರ ಕಾಣಿಸಿಕೊಂಡಿತ್ತು. ಆ ಯುವಕನಲ್ಲೂ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಮತ್ತೆ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಿದಾಗ ಕುಟುಂಬ ಸದಸ್ಯರೆಲ್ಲರಿಗೂ ಕೊರೊನಾ ಇರುವುದು ದೃಢಪಟ್ಟಿತ್ತು.

ಕೊರೊನಾ ವರದಿ ಕೊರೊನಾ ವರದಿ "ನೆಗೆಟಿವ್" ಬಂದಿದ್ದಕ್ಕೆ ವೈದ್ಯರನ್ನು ಹಿಗ್ಗಾಮುಗ್ಗ ಥಳಿಸಿದ ವ್ಯಕ್ತಿ

 ರೂಪಾಂತರಗಳು ಪರೀಕ್ಷೆಯನ್ನೇ ತಲೆಕೆಳಗು ಮಾಡಿದೆಯೇ?

ರೂಪಾಂತರಗಳು ಪರೀಕ್ಷೆಯನ್ನೇ ತಲೆಕೆಳಗು ಮಾಡಿದೆಯೇ?

ದೆಹಲಿ ಹಾಗೂ ಲಖ್ನೋದಲ್ಲಿ ಇಂಥ ತಪ್ಪು ವರದಿಗಳು ಹೆಚ್ಚಾಗಿ ಕಂಡುಬರುತ್ತಿವೆ. ಈಚೆಗೆ ಐದು ಆರ್‌ಟಿಪಿಸಿಆರ್ ಪರೀಕ್ಷೆಗಳು ಸುಳ್ಳು ನೆಗೆಟಿವ್ ವರದಿ ನೀಡಿರುವುದಾಗಿ ಟೈಮ್ಸ್‌ ಆಫ್ ಇಂಡಿಯಾ ವರದಿ ಮಾಡಿತ್ತು. ಆದರೆ ಇದು ಹೇಗಾಯಿತು? ಇದಕ್ಕೆ ರೂಪಾಂತರ ಕಾರಣವೇ. ಈ ಪರೀಕ್ಷೆಯನ್ನು ರೂಪಾಂತರ ಸೋಂಕು ತಲೆಕೆಳಗು ಮಾಡಿದೆಯೇ ಎಂಬ ಪ್ರಶ್ನೆಯನ್ನೂ ಹುಟ್ಟುಹಾಕಿದೆ. ಆದರೆ ಈ ಆರ್‌ಟಿಪಿಸಿಆರ್ ಪರೀಕ್ಷೆಯು ಬ್ರಿಟನ್, ಬ್ರೆಝಿಲ್, ದಕ್ಷಿಣ ಆಫ್ರಿಕಾದ ರೂಪಾಂತರಗಳನ್ನು ಪತ್ತೆಹಚ್ಚುವಲ್ಲಿ ಸಮರ್ಥವಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

 ದ್ರವ ಮಾದರಿ ಸಂಗ್ರಹಣೆಯಲ್ಲಿನ ಲೋಪ ಕಾರಣವೇ?

ದ್ರವ ಮಾದರಿ ಸಂಗ್ರಹಣೆಯಲ್ಲಿನ ಲೋಪ ಕಾರಣವೇ?

ಆರ್‌ಟಿ ಪಿಸಿಆರ್ ಪರೀಕ್ಷೆಯನ್ನು ಸೋಲಿಸುವಂಥ ಯಾವುದೇ ಕೊರೊನಾ ರೂಪಾಂತರ ಇರುವುದಾಗಿ ಯಾವುದೇ ಮಾಹಿತಿ, ಸಾಕ್ಷ್ಯ, ಅಧ್ಯಯನ ತಿಳಿಸಿಲ್ಲ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಸಂಸ್ಥೆಯ ಎಪಿಡೆಮಿಯಾಲಜಿಸ್ಟ್ ಡಾ. ರಾಮನ್ ಗಂಗಾಕೇಡ್ಕರ್ ಹೇಳುತ್ತಾರೆ. ಆದರೆ ದ್ರವ ಮಾದರಿ ಸಂಗ್ರಹಣೆಯಲ್ಲಿನ ಲೋಪ ಕೊರೊನಾ ಪರೀಕ್ಷೆ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದಕ್ಕೆ ಉದಾಹರಣೆಗಳು ದೊರೆಯುತ್ತವೆ ಎಂದಿದ್ದಾರೆ.

ಕೋವಿಡ್ ಪರೀಕ್ಷೆ ತಪ್ಪಿಸಿಕೊಳ್ಳಲು ಹಾರಿಬಿದ್ದು ಓಡಿದ ಜನಕೋವಿಡ್ ಪರೀಕ್ಷೆ ತಪ್ಪಿಸಿಕೊಳ್ಳಲು ಹಾರಿಬಿದ್ದು ಓಡಿದ ಜನ

 ಕೊರೊನಾ ಪರೀಕ್ಷಾ ಅವಧಿಯೂ ಮುಖ್ಯ

ಕೊರೊನಾ ಪರೀಕ್ಷಾ ಅವಧಿಯೂ ಮುಖ್ಯ

ಕೆಲವು ಪ್ರಕರಣಗಳಲ್ಲಿ, ಗಂಟಲ ದ್ರವ ಸಂಗ್ರಹಕ್ಕೆ ನಿಯೋಜಿಸಿರುವ ಕೆಲ ಸಿಬ್ಬಂದಿ ಸರಿಯಾಗಿ ತರಬೇತಿ ಪಡೆದಿರುವಿಲ್ಲ. ಅಲ್ಲಿ ನಡೆದಿರುವ ಲೋಪಗಳು ಪರೀಕ್ಷೆ ಮೇಲೆ ಪರಿಣಾಮ ಬೀರಿರಬಹುದು ಎಂದು ಅಶೋಕ ವಿಶ್ವವಿದ್ಯಾಲಯದ ಡಾ. ಸಹೀಗ್ ಜಮೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕೊರೊನಾ ಪರೀಕ್ಷೆ ನಡೆಸುವ ಅವಧಿಯೂ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದಿದ್ದಾರೆ. ದ್ರವ ಮಾದರಿ ತೆಗೆದುಕೊಂಡ ನಂತರ ನಡೆಸುವ ಪರೀಕ್ಷಾ ಅವಧಿಯೂ ಸೋಂಕಿನ ಸಾಧ್ಯತೆಯನ್ನು ಮರೆಮಾಚಬಹುದು. ಸೋಂಕಿನ ಜೀವಿತಾವಧಿ ಇಲ್ಲಿ ಬಹುಮುಖ್ಯ ಪಾತ್ರ ವಹಿಸಿರುತ್ತದೆ. ಈ ಸಂಗತಿಯೇ ಪರೀಕ್ಷಾ ವರದಿಯಲ್ಲಿ ಲೋಪ ಕಾಣಿಸಿಕೊಳ್ಳಲು ಕಾರಣವಾಗಬಹುದು ಎಂದಿದ್ದಾರೆ.
ಹಲವು ಪ್ರಕರಣಗಳಲ್ಲಿ, ಸೋಂಕು ತಗುಲಿದ್ದರೂ ತಡವಾಗಿ ಲಕ್ಷಣಗಳನ್ನು ತೋರಬಹುದು. ಹೀಗಾಗಿ ಆರ್‌ಟಿಪಿಸಿಆರ್ ಪರೀಕ್ಷೆಯನ್ನು ಏಳನೇ ದಿನಕ್ಕೆ ನೆರವೇರಿಸುವುದು ಸೂಕ್ತ ಎಂದು ಹೇಳಿದ್ದಾರೆ.

English summary
You feel unwell and get tested, Your report comes negative. But then you develop symptoms four days later and are found to be positive. what may be the reason behind false negative corona report? Here is some points
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X