ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಮಾರಸ್ವಾಮಿ ಹೇಳುತ್ತಿದ್ದಾರಲ್ಲಾ ವ್ಯಾಕ್ಸಿಂಗ್, ಹಾಗಂದರೇನು?

|
Google Oneindia Kannada News

Recommended Video

Lok Sabha Elections 2019 : ಮೋದಿ ವ್ಯಾಕ್ಸಿಂಗ್ ಬಗ್ಗೆ ಟೀಕಿಸಿದ ಎಚ್.ಡಿ.ಕುಮಾರಸ್ವಾಮಿ

"ಪ್ರಧಾನಿ ಮೋದಿ ಅವರಂತೆ ನಾನೇನೂ ಪ್ರತಿ ದಿನ ಮುಖಕ್ಕೆ ವ್ಯಾಕ್ಸಿಂಗ್ ಮಾಡಿಸಲ್ಲ" ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈ ಬಾರಿಯ ಚುನಾವಣೆ ಪ್ರಚಾರದಲ್ಲಿ ಹಲವು ಸಲ ಹೇಳಿಬಿಟ್ಟರು. ಏನಿದು ವ್ಯಾಕ್ಸಿಂಗ್? ಇದನ್ನು ಮಾಡಿಸುವುದರಿಂದ ಏನು ಲಾಭ ಅಂತ ನಿಮಗೆ ಯೋಚನೆ ಬಂದಿಲ್ಲವಾ?

ಈ ಪ್ರಣಾಳಿಕೆಗಳಲ್ಲಿ ಯಾವುದು ನಿಮ್ಮ ಗಮನ ಸೆಳೆದಿದೆ?

ವ್ಯಾಕ್ಸಿಂಗ್ ಅಂದರೆ ಬೇಡದ ಕೂದಲನ್ನು ತೊಲಗಿಸಿಕೊಳ್ಳುವ ವಿಧಾನ. ಅದು ಕೂಡ ಬೇರು ಸಹಿತವಾಗಿ ತೆಗೆದುಹಾಕಲಾಗುತ್ತದೆ. ಎರಡರಿಂದ ಎಂಟು ವಾರಗಳ ಕಾಲ ಆ ಜಾಗದಲ್ಲಿ ಹೊಸದಾಗಿ ಕೂದಲು ಬೆಳೆಯುವುದಿಲ್ಲ. ಕಣ್ಣಿನ ಹುಬ್ಬು, ಮುಖ, ಕಾಲು, ತೋಳು, ಹೊಟ್ಟೆ ಭಾಗ, ಪಾದ ಹೀಗೆ ದೇಹದ ನಾನಾ ಭಾಗದಲ್ಲಿ ವ್ಯಾಕ್ಸಿಂಗ್ ಮಾಡಿಸಬಹುದು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಬೇಡದ ಕೂದಲನ್ನು ತೆಗೆಯುವ ಈ ವ್ಯಾಕ್ಸಿಂಗ್ ನಲ್ಲಿ ನಾನಾ ವಿಧ ಇದೆ. ಇದನ್ನು ತರಬೇತಿ ಪಡೆದವರೇ ಮಾಡಬೇಕು. ಇನ್ನೂ ಕೆಲವಕ್ಕೆ ಲೈಸೆನ್ಸ್ ಅಥವಾ ತರಬೇತಿ ಪಡೆದ ಕಾಸ್ಮೆಟಾಲಜಿಸ್ಟ್ ಅಥವಾ ಎಸ್ಥೆಟಿಷಿಯನ್ ಮಾತ್ರ ಮಾಡಬೇಕು. ಈ ರೀತಿ ವ್ಯಾಕ್ಸಿಂಗ್ ಮಾಡಿಸಿಕೊಳ್ಳುವುದರಿಂದ ಹಲವು ಅನುಕೂಲ ಹಾಗೂ ಅನಾನುಕೂಲ ಇವೆ.

What is waxing, which is the word used by Kumaraswamy against Narendra Modi

ಈ ವಿಧಾನದಲ್ಲಿ ಒಂದೇ ಸಲಕ್ಕೆ ದೊಡ್ಡ ಮಟ್ಟದಲ್ಲಿ ಬೇಡದ ಕೂದಲು ತೆಗೆಯಬಹುದು. ಬೇರೆ ವಿಧಾನಕ್ಕಿಂತ ಇದು ಹೆಚ್ಚು ಪರಿಣಾಮಕಾರಿ. ಮತ್ತೆ ಕೂದಲು ಬೆಳೆಯಲು ಎರಡರಿಂದ ಎಂಟು ವಾರ ಸಮಯ ತೆಗೆದುಕೊಳ್ಳುತ್ತದೆ. ಬೇರೆ ವಿಧಾನದಲ್ಲಾದರೆ ಕೂದಲು ಮೇಲ್ಮಟ್ಟದಲ್ಲಿ ಮಾತ್ರ ಹೋಗುತ್ತದೆ. ಆದರೆ ವ್ಯಾಕ್ಸಿಂಗ್ ನಲ್ಲಿ ಬೇರು ಸಹಿತ ತೆಗೆದು ಹಾಕಲಾಗುತ್ತದೆ. ಆ ನಂತರ ಬೆಳೆಯಲು ಎರಡರಿಂದ ಎಂಟು ವಾರ ಬೇಕು.

ಪ್ರಧಾನಿಯಂತೆ ಮುಖಕ್ಕೆ ವ್ಯಾಕ್ಸಿಂಗ್ ಮಾಡಿಸಿಕೊಳ್ಳೊಲ್ಲ: ಕುಮಾರಸ್ವಾಮಿಪ್ರಧಾನಿಯಂತೆ ಮುಖಕ್ಕೆ ವ್ಯಾಕ್ಸಿಂಗ್ ಮಾಡಿಸಿಕೊಳ್ಳೊಲ್ಲ: ಕುಮಾರಸ್ವಾಮಿ

ಹೀಗೆ ವ್ಯಾಕ್ಸಿಂಗ್ ಮಾಡಿದ ನಂತರ ಚರ್ಮವು ನುಣುಪಾಗಿ, ರೇಷ್ಮೆಯಂತೆ ವಾರಗಳ ಕಾಲ ಕಾಣುತ್ತದೆ. ದೀರ್ಘ ಕಾಲದ ತನಕ ವ್ಯಾಕ್ಸಿಂಗ್ ಮಾಡುವುದರಿಂದ ಕೂದಲು ಇನ್ನಷ್ಟು ಚೆನ್ನಾಗಿ ಕಾಣುತ್ತದೆ. ಇದರಿಂದ ಸಮಸ್ಯೆಗಳೂ ಇವೆ. ಮುಖ್ಯವಾಗಿ ಈ ವಿಧಾನದಲಿ ಬೇರುಸಹಿತವಾಗಿ ಕೂದಲು ತೆಗೆಯುವುದರಿಂದ ನೋವಾಗುತ್ತದೆ. ಆದರೆ ಅದು ಬಹಳ ಕಾಲ ಅಲ್ಲದೇ ಇರಬಹುದು. ಆದರೆ ತುಂಬ ನೋವಾಗುತ್ತದೆ.

What is waxing, which is the word used by Kumaraswamy against Narendra Modi

ಮತ್ತೊಂದು ಸಮಸ್ಯೆ ಏನೆಂದರೆ, ವ್ಯಾಕ್ಸಿಂಗ್ ಬಹಳ ದುಬಾರಿ. ವ್ಯಾಕ್ಸಿಂಗ್ ಅನ್ನು ಲೈಸೆನ್ಸ್ ಇರುವವರೇ ಮಾಡಬೇಕಾದ್ದರಿಂದ ತುಂಬ ದುಬಾರಿ. ಇದರ ಜತೆಗೆ ಕೆಲವರಿಗೆ ಕೆಂಪು ಗುರುತುಗಳು ಕಾಣಿಸಿಕೊಳ್ಳುತ್ತವೆ. ತುಂಬ ಅಲ್ಪ ಪ್ರಮಾಣದಲ್ಲಿ ರಕ್ತ ಒಸರುತ್ತದೆ. ತುಂಬ ಒತ್ತೊತ್ತಾಗಿ ಕೂದಲು ಬೆಳೆದ ಜಾಗದಲ್ಲಿ ವ್ಯಾಕ್ಸಿಂಗ್ ಮಾಡಿಸಿದರೆ ಹೀಗಾಗುತ್ತದೆ. ಅದಕ್ಕೂ ಪರಿಹಾರೋಪಾಯಗಳಿವೆ ಎನ್ನುತ್ತಾರೆ ತಜ್ಞರು.

English summary
Here is an explanatory article about Waxing. This is the word used by Karnataka CM HD Kumaraswamy against PM Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X