ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಧವ್ ಪ್ರಕರಣ: ವಿಯೆನ್ನಾ ರಾಜತಾಂತ್ರಿಕ ಒಪ್ಪಂದ ಎಂದರೇನು?

|
Google Oneindia Kannada News

ಪಾಕಿಸ್ತಾನದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿದ್ದ ಭಾರತದ ಮಾಜಿ ನೌಕಾಪಡೆ ಅಧಿಕಾರಿ ಕುಲಭೂಷಣ್ ಜಾಧವ್ ಅವರ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಜಾಧವ್‌ಗೆ ವಿಧಿಸಿರುವ ಗಲ್ಲುಶಿಕ್ಷೆ ತೀರ್ಪನ್ನು ಅಮಾನತು ಮಾಡಿದ ಅಂತಾರಾಷ್ಟ್ರೀಯ ನ್ಯಾಯಾಲಯ. ಜಾಧವ್ ಅವರನ್ನು ಭೇಟಿ ಮಾಡಲು ಭಾರತದ ರಾಜತಾಂತ್ರಿಕರಿಗೆ ಅವಕಾಶ ನೀಡಿದೆ. ಈ ಸಂದರ್ಭದಲ್ಲಿ ವಿಯೆನ್ನಾ ರಾಜತಾಂತ್ರಿಕ ಒಪ್ಪಂದದ ಬಗ್ಗೆ ಬೆಳಕು ಚೆಲ್ಲುವ ಯತ್ನ ನಮ್ಮದಾಗಿದೆ...

"ವಿಯೆನ್ನಾ ಒಪ್ಪಂದದಂತೆ ಭಾರತದ ಹೂಡಿರುವ ವಾದ ಸರಿಯಾಗಿದೆ. ಜತೆಗೆ ವಿಚಾರಣೆ ವೇಳೆಯಲ್ಲಿ ಕುಲಭೂಷಣ್ ಜಾಧವ್ ರನ್ನು ಪಾಕಿಸ್ತಾನ ಗಲ್ಲು ಶಿಕ್ಷೆಗೆ ದೂಡಬಹುದು ಎಂಬ ಭಾರತದ ಆತಂಕವೂ ಸಮಂಜಸವಾಗಿದೆ," ಎಂದು ಅಂದು ನ್ಯಾ. ರೋನಿ ಅಬ್ರಹಾಂ ಹೇಳಿದ್ದರು. ಇಂದು ಐಸಿಜೆ ನ್ಯಾ. ಎಎ ಯೂಸುಫ್ ಅವರು ಕೂಡ ಪಾಕಿಸ್ತಾನವು ವಿಯೆನ್ನಾ ಒಪ್ಪಂದ ಉಲ್ಲಂಘನೆ ಮಾಡಿದೆ ಎಂದು ಹೇಳಿದ್ದಾರೆ. ಹಾಗಾದರೆ, ವಿಯೆನ್ನಾ ಒಪ್ಪಂದ ಅಂದರೇನು? ಮುಂದೆ ಓದಿ..

"ಕುಲಭೂಷಣ್ ಕುರಿತ ತೀರ್ಪು, ಕೋಟ್ಯಂತರ ಭಾರತೀಯರ ಜಯ"

1961ರ ಆಸ್ಟ್ರೀಯಾದ ವಿಯೆನ್ನಾದಲ್ಲಿ ರಾಜತಾಂತ್ರಿಕ ಮತ್ತು ಐಚ್ಛಿಕ ಶಿಷ್ಟಾಚಾರಕ್ಕಾಗಿ ಮಾಡಿಕೊಂಡ ಅಂತಾರಾಷ್ಟ್ರೀಯ ಮಟ್ಟದ ಒಪ್ಪಂದವಾಗಿದೆ. ಈ ಒಪ್ಪಂದವು 1961ರ ಏಪ್ರಿಲ್ 18ರಂದು ಜಾರಿಗೆ ಬಂದಿದ್ದು, ಇದು ವಿಶ್ವದ ವಿವಿಧ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ ಕುರಿತ ಒಪ್ಪಂದವಾಗಿದೆ. 189 ದೇಶಗಳು Vienna Convention on Diplomatic Relations (VCDR) ಕ್ಕೆ ಒಪ್ಪಿಗೆ ಸೂಚಿಸಿವೆ.

What is Vienna convention on Diplomatic Relations

ಅಂತಾರಾಷ್ಟ್ರೀಯ ಶಾಂತಿ ಹಾಗೂ ಸುಭದ್ರತೆಯನ್ನು ಕಾಪಾಡಿಕೊಳ್ಳುವುದು ಹಾಗೂ ದೇಶಗಳ ನಡುವೆ ಸ್ನೇಹಪರ ಸಂಬಂಧವನ್ನು ಉಳಿಸಿ, ಬೆಳೆಸುವುದು ಈ ಒಪ್ಪಂದದ ಉದ್ದೇಶವಾಗಿದೆ.

ಎಲ್ಲ ಸಾರ್ವಭೌಮ ಸಮಾಜ ದೇಶಗಳು, ಅಂತರರಾಷ್ಟ್ರೀಯ ಶಾಂತಿ ಹಾಗೂ ಸುಭದ್ರತೆಯನ್ನು ಕಾಪಾಡಿಕೊಂಡು ಬರುವ ಸಲುವಾಗಿ ಹಾಗೂ ಪರಸ್ಪರ ದೇಶಗಳ ನಡುವೆ ಸ್ನೇಹಪರ ಸಂಬಂಧವನ್ನು ಬೆಳೆಸಿಕೊಂಡು ಬರುವ ಸಲುವಾಗಿ ಈ ಒಪ್ಪಂದವನ್ನು ಜಾರಿಗೆ ತರಲಾಗಿದೆ.

ಭಾರತಕ್ಕೆ ರಾಜತಾಂತ್ರಿಕ ಜಯ: ಜಾಧವ್ ಶಿಕ್ಷೆ ಅಮಾನತುಭಾರತಕ್ಕೆ ರಾಜತಾಂತ್ರಿಕ ಜಯ: ಜಾಧವ್ ಶಿಕ್ಷೆ ಅಮಾನತು

ಪರಸ್ಪರ ದೇಶಗಳ ನಡುವೆ ಸಂಬಂಧವನ್ನು ಸ್ನೇಹಯುತವಾಗಿ ಮುಂದುವರಿಸಿಕೊಂಡು ಬರುವ ಸಲುವಾಗಿ ರಾಜತಾಂತ್ರಿಕ ಸಿಬ್ಬಂದಿಗೆ ಅವರ ಕಾರ್ಯನಿರ್ವಹಣೆಗೆ ಅನುಕೂಲವಾಗುವಂತ ಕೆಲವೊಂದು ವಿಶೇಷ ಸವಲತ್ತುಗಳು ಮತ್ತು ವಿಶೇಷ ಸ್ಥಾನಮಾನವನ್ನು ನೀಡಲಾಗಿದೆ.

ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಪಾಕಿಸ್ತಾನಕ್ಕೆ ಮುಖಭಂಗಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಪಾಕಿಸ್ತಾನಕ್ಕೆ ಮುಖಭಂಗ

ಇಂಥ ವಿಶೇಷ ಸವಲತ್ತು ಹಾಗೂ ಕಾನೂನಿನಿಂದ ಹೊರತಾದ ಅವಕಾಶಗಳು ವೈಯಕ್ತಿಕ ಲಾಭಕ್ಕಾಗಿ ಅಲ್ಲ. ಆದರೆ ಅವರು ಪ್ರತಿನಿಧಿಸುವ ದೇಶಗಳ ಪರವಾಗಿ ಪರಿಣಾಮಕಾರಿ ಹಾಗೂ ದಕ್ಷವಾಗಿ ರಾಜತಾಂತ್ರಿಕ ಕಾರ್ಯಗಳನ್ನು ಮಾಡಲು ಅನುಕೂಲವಾಗುವಂತೆ ಈ ವಿಶೇಷ ಸವಲತ್ತುಗಳನ್ನು ಕಲ್ಪಿಸಲಾಗಿದೆ,ಅಂತಾರಾಷ್ಟ್ರೀಯ ಕಾನೂನುಗಳಿಗೆ ಬದ್ಧವಾಗಿರುತ್ತವೆ ಹಾಗೂ ಈ ಒಪ್ಪಂದವನ್ನು ಉಲ್ಲಂಘಿಸಿ ಯಾವುದೇ ಸವಲತ್ತುಗಳನ್ನು ನಿರಾಕರಿಸುವಂತಿಲ್ಲ.ರಾಜತಾಂತ್ರಿಕತೆಗೆ ಸಂಬಂಧಿಸಿದಂತೆ ಹಾಲಿ ಇರುವ ಒಪ್ಪಂದವು, ಅಂತರರಾಷ್ಟ್ರೀಯ ಕಾನೂನು ಆಯೋಗದ ಕರಡು ನಿಯಮಾವಳಿಯ ಪರಿಣಾಮವಾಗಿದೆ. ರಾಷ್ಟ್ರೀಯತೆಯನ್ನು ಪಡೆಯುವುದು ಇದರಲ್ಲಿ ಸೇರಿದೆ. ಕಡ್ಡಾಯವಾಗಿ ವ್ಯಾಜ್ಯವನ್ನು ಬಗೆಹರಿಸುವುದು ಕೂಡಾ ಅಂತಿಮ ಕಾಯ್ದೆಯಲ್ಲಿ ಸೇರಿದೆ. ಇತರ ನಾಲ್ಕು ನಿರ್ಣಯಗಳನ್ನೂ ಆಂಗೀಕರಿಸಲಾಗಿದೆ.

ಜೈಹೋ ಕುಲಭೂಷಣ್ ಜಾಧವ್ : ತೀರ್ಪಿನ 8 ಪ್ರಮುಖ ಸಂಗತಿಗಳುಜೈಹೋ ಕುಲಭೂಷಣ್ ಜಾಧವ್ : ತೀರ್ಪಿನ 8 ಪ್ರಮುಖ ಸಂಗತಿಗಳು

ಕುಲಭೂಷಣ್ ಜಾಧವ್ ಕೇಸಿನಲ್ಲಿ ಪಾಕಿಸ್ತಾನ ವಿಯೆನ್ನಾ ಒಪ್ಪಂದ ಮುರಿದಿದ್ದು ಹೇಗೆ?
* ಭಾರತದ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರ ಬಂಧನದ ವಿಷಯವನ್ನು ಪಾಕಿಸ್ತಾನವು ಮುಚ್ಚಿಟ್ಟಿತ್ತು. ಈ ಮೂಲಕ ವಿಯೆನ್ನಾ ಒಪ್ಪಂದ ಮುರಿದಿದೆ.
ಜಾಧವ್ ಅವರನ್ನು ಗೂಢಾಚಾರಿ ಎಂದು ಪರಿಗಣಿಸಿ ಅವರಿಗೆ ಪಾಕಿಸ್ತಾನದ ಮಿಲಿಟರಿ ನ್ಯಾಯಾಲವು ಗಲ್ಲು ಶಿಕ್ಷೆ ವಿಧಿಸಿತ್ತು. ಈ ವಿಷಯ ತಡವಾಗಿ ತಿಳಿದ ಬಳಿಕ, ಭಾರತ ಈ ಪ್ರಕರಣವನ್ನು ಅಂತಾರಾಷ್ಟ್ರೀಯ ಕೋರ್ಟಿಗೆ ತರುವುದು ಅನಿವಾರ್ಯವಾಯಿತು.
* ಭಾರತದ ರಾಜತಾಂತ್ರಿಕ ಪ್ರತಿನಿಧಿಯನ್ನು ಭೇಟಿ ಮಾಡಲು ಜಾಧವ್ ಗೆ ಅವಕಾಶ ನೀಡದೆ ಮತ್ತೊಮ್ಮೆ ವಿಯೆನ್ನಾ ಒಪ್ಪಂದವನ್ನು ಮುರಿದಿದೆ ಎಂದು ಭಾರತ ವಾದ ಮಂಡಿಸಿದೆ.

* ವಿಯೆನ್ನಾ ಒಪ್ಪಂದವನ್ನು ಒಂದಲ್ಲ, ಎರಡಲ್ಲ 16 ಬಾರಿ ಪಾಕಿಸ್ತಾನ ಉಲ್ಲಂಘನೆ ಮಾಡಿದೆ. 16 ಬಾರಿ ರಾಜತಾಂತ್ರಿಕ ಪ್ರತಿನಿಧಿ ಭೇಟಿಯನ್ನು ನಿರಾಕರಿಸಿದ್ದನ್ನು ಭಾರತ ತನ್ನ ವಾದದಲ್ಲಿ ಉಲ್ಲೇಖಿಸಿದ್ದನ್ನು ಅಂತಾರಾಷ್ಟ್ರೀಯ ನ್ಯಾಯಲವು ಮಾನ್ಯ ಮಾಡಿದೆ.

English summary
What is Vienna convention? Inked in 1961, the Vienna Convention on Diplomatic Relations (VCDR) is an international treaty accepted by 189 states.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X