ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾವೈರಸ್ ಪತ್ತೆಗೆ 'ಫೆಲುಡಾ' ಪರೀಕ್ಷೆ: 500 ರೂ. ಮಾತ್ರ!

|
Google Oneindia Kannada News

ನವದೆಹಲಿ, ಸಪ್ಟೆಂಬರ್.21: ಕೊರೊನಾವೈರಸ್ ಸೋಂಕು ತಪಾಸಣೆ ವೇಗ ಹೆಚ್ಚಿಸುವ ಅನಿವಾರ್ಯತೆ ಎದುರಾಗಿದೆ. ಭಾರತದಲ್ಲಿ ಫಲುಡಾ ಮಾದರಿಯಲ್ಲಿ ಕೊವಿಡ್-19 ಸೋಂಕಿನ ತಪಾಸಣೆ ನಡೆಸುವುದಕ್ಕೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅನುಮೋದನೆ ನೀಡಿದೆ.

ಭಾರತದಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆ ಶರವೇಗದಲ್ಲಿ ಏರಿಕೆಯಾಗುತ್ತಿದೆ. ಕೊವಿಡ್-19 ಸೋಂಕಿನ ತಪಾಸಣೆ ಸುಲಭಗೊಳಿಸುವುದು. ಕಡಿಮೆ ಅವಧಿ ಹಾಗೂ ಕಡಿಮೆ ವೆಚ್ಚದಲ್ಲಿ ಸೋಂಕಿನ ತಪಾಸಣೆ ನಡೆಸುವುದಕ್ಕೆ ಹೊಸ ಮಾರ್ಗವನ್ನು ಕಂಡುಕೊಳ್ಳಲಾಗಿದೆ.

ಮೈ ಮೇಲೆ ಸೂರ್ಯನ ಕಿರಣ ಬೀಳದಿದ್ದರೆ ಕೊರೊನಾವೈರಸ್ ಪಾಸಿಟಿವ್!ಮೈ ಮೇಲೆ ಸೂರ್ಯನ ಕಿರಣ ಬೀಳದಿದ್ದರೆ ಕೊರೊನಾವೈರಸ್ ಪಾಸಿಟಿವ್!

ಕೌನ್ಸಿಲ್ ಆಫ್ ಸೈಂಟಿಫಿಕ್ ಆಂಡ್ ಇಂಡಸ್ಟ್ರಿಯಲ್ ರಿಸರ್ಚ್ ಮತ್ತು ಟಾಟಾ ಗ್ರೂಪ್ ಗೆ ಸೇರಿದ ದೆಬೊಜ್ಯೋತಿ ಚಕ್ರಬೊರ್ತಿ ಮತ್ತು ಸೌವಿಕ್ ಮೈತಿ ನೇತೃತ್ವದ ಸಂಶೋಧನಾ ತಂಡವು ಕಾಗದದ ಹಾಳೆಯನ್ನು ಇಟ್ಟುಕೊಂಡು (ಪೇಪರ್ ಬೇಸಡ್) ಕೊವಿಡ್-19 ಸೋಂಕು ಪತ್ತೆ ಮಾಡುವ ರೀತಿಯನ್ನು 'ಫಲುಡಾ' ಮಾದರಿ ಎಂದು ಗುರತಿಸಿದ್ದಾರೆ. ಅಸಲಿಗೆ ಫಲುಡಾ ಮಾದರಿ ಎಂದರೇನು, ಕೊವಿಡ್-19 ಸೋಂಕು ತಪಾಸಣೆ ನಡೆಸುವುದಕ್ಕೆ ಫಲುಡಾ ಮಾದರಿ ಹೇಗೆ ಉಪಯುಕ್ತ ಮತ್ತು ಸಹಕಾರಿಯಾಗಲಿದೆ ಎನ್ನುವುದರ ಕುರಿತು ಒಂದು ವಿಸ್ತೃತ ವರದಿ "ಒನ್ ಇಂಡಿಯಾ" ಓದುಗರಿಗಾಗಿ.

'ಫೆಲುಡಾ' ಮಾದರಿ ತಪಾಸಣೆ ಎಂದರೇನು?

'ಫೆಲುಡಾ' ಮಾದರಿ ತಪಾಸಣೆ ಎಂದರೇನು?

ಕೊರೊನಾವೈರಸ್ ಸೋಂಕು ತಪಾಸಣೆಗೂ ಫಲುಡಾ ಪರೀಕ್ಷೆಗೂ ಏನು ಸಂಬಂಧ ಎಂಬ ಅನುಮಾನ ಹುಟ್ಟಿಕೊಳ್ಳಬಹುದು. ಕೌನ್ಸಿಲ್ ಆಫ್ ಸೈಂಟಿಫಿಕ್ ಆಂಡ್ ಇಂಡಸ್ಟ್ರಿಯಲ್ ರಿಸರ್ಚ್ ಅಭಿವೃದ್ಧಿಪಡಿಸಿದ ಸಂಕ್ಷಿಪ್ತ ರೂಪವನ್ನು ಎಫ್ಎನ್ ಸಿಎಎಸ್-9 ಎಂದು ಗುರುತಿಸಲಾಗಿದೆ. ಸಾರ್ಸ್ ಕೊವಿಡ್-2 ನಲ್ಲಿ ಇರುವ ಅನುವಂಶೀಯ ಧಾತುಗಳ ಪತ್ತೆಗೆ ಫಲುಡಾ ತಪಾಸಣೆ ನಡೆಸಲಾಗುತ್ತದೆ. ಕಾಗದವನ್ನು ಆಧಾರವಾಗಿಟ್ಟುಕೊಂಡು ಈ ತಪಾಸಣೆ ನಡೆಸಲಾಗುತ್ತಿದೆ. ಕೊವಿಡ್-19 ಸೋಂಕು ತಪಾಸಣೆ ವೇಗವನ್ನು ಹೆಚ್ಚಿಸುವ ಉದ್ದೇಶದಿಂದ ಈ ಮಾದರಿಯ ತಪಾಸಣೆಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅನುಮೋದನೆ ನೀಡಿದೆ.

ಭಾರತದಲ್ಲಿ ಪ್ರತಿದಿನ 10 ಜನರಿಗೆ ಕೊವಿಡ್-19 ಪರೀಕ್ಷೆ

ಭಾರತದಲ್ಲಿ ಪ್ರತಿದಿನ 10 ಜನರಿಗೆ ಕೊವಿಡ್-19 ಪರೀಕ್ಷೆ

ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿಯು ಪ್ರತಿನಿತ್ಯ 10 ಲಕ್ಷಕ್ಕಿಂತ ಹೆಚ್ಚು ಜನರಿಗೆ ಕೊವಿಡ್-19 ಸೋಂಕು ತಪಾಸಣೆ ನಡೆಸುವ ಗುರಿಯನ್ನು ಹೊಂದಿದೆ. ಗಂಟಲು, ರಕ್ತದ ಮಾದರಿ ಪರೀಕ್ಷೆಯಿಂದ ಪರೀಕ್ಷೆ ಪ್ರಕ್ರಿಯೆ ನಿಧಾನವಾಗುತ್ತಿದೆ. ಈ ಪ್ರಕ್ರಿಯೆಗೆ ಚುರುಕು ಮುಟ್ಟಿಸುವ ಉದ್ದೇಶದಿಂದಲೇ 'ಫಲುಡಾ' ಮಾದರಿಯಲ್ಲಿ ವೈದ್ಯಕೀಯ ತಪಾಸಣೆ ನಡೆಸಲು ತೀರ್ಮಾನಿಸಲಾಗಿದೆ. 'ಫಲುಡಾ' ಮಾದರಿ ಆದಲ್ಲಿ ಪ್ರತಿನಿತ್ಯ 10 ಲಕ್ಷ ಜನರಿಗೆ ಕೊವಿಡ್-19 ಸೋಂಕು ತಪಾಸಣೆ ನಡೆಸುವುದಕ್ಕೆ ಸಾಧ್ಯವಾಗುತ್ತದೆ.

ಫಲುಡಾ ಪರೀಕ್ಷೆಯು RT-PCR ಪರೀಕ್ಷೆಗಿಂತಲೂ ನಿಖರ

ಫಲುಡಾ ಪರೀಕ್ಷೆಯು RT-PCR ಪರೀಕ್ಷೆಗಿಂತಲೂ ನಿಖರ

ಕೊರೊನಾವೈರಸ್ ಸೋಂಕು ಪತ್ತೆಗೆ RT-PCR ಮಾದರಿಯ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ವೈದ್ಯಕೀಯ ತಪಾಸಣೆಗಿಂತಲೂ 'ಫಲುಡಾ' ಮಾದರಿಯ ತಪಾಸಣೆಯು ಹೆಚ್ಚು ನಿಖರತೆಯನ್ನು ಹೊಂದಿರುತ್ತದೆ. ಈ ಪರೀಕ್ಷೆಗೆ ಹೆಚ್ಚಿನ ಹಣ ಖರ್ಚಾಗುವುದಿಲ್ಲ. ಅಲ್ಲದೇ ಅತ್ಯಾಧುನಿಕ ಮತ್ತು ದುಬಾರಿ ತಂತ್ರಜ್ಞಾನದ ಅಗತ್ಯತೆಯೂ ತೀರಾ ಕಡಿಮೆಯಾಗಿರುತ್ತದೆ ಎಂದು ಕೌನ್ಸಿಲ್ ಆಫ್ ಸೈಂಟಿಫಿಕ್ ಆಂಡ್ ಇಂಡಸ್ಟ್ರಿಯಲ್ ರಿಸರ್ಚ್ ತಿಳಿಸಿದೆ.

ಒಂದು ಹೊತ್ತಿನ ಊಟವಿಲ್ಲದೇ 5 ವರ್ಷದ ಮಗು ಸಾವು?ಒಂದು ಹೊತ್ತಿನ ಊಟವಿಲ್ಲದೇ 5 ವರ್ಷದ ಮಗು ಸಾವು?

ಇತರೆ ಪರೀಕ್ಷಾ ಮಾದರಿಗಿಂತ ಫೆಲುಡಾ ಹೆಚ್ಚು ಪರಿಣಾಮಕಾರಿ

ಇತರೆ ಪರೀಕ್ಷಾ ಮಾದರಿಗಿಂತ ಫೆಲುಡಾ ಹೆಚ್ಚು ಪರಿಣಾಮಕಾರಿ

ಕ್ಲಸ್ಟರ್ಡ್ ರೆಗ್ಯುಲರ್ಲಿ ಇಂಟರ್ ಸ್ಪೇಸಡ್ ಶಾರ್ಟ್ ಪ್ಯಾಲಿಡ್ರಾಮಿಕ್ ರಿಪೀಟ್ಸ್ (CRISPR) ತಂತ್ರಜ್ಞಾನದ ಪ್ರಕಾರ, ಫಲುಡಾ ಪರೀಕ್ಷೆಯು ಶೇ.98ರಷ್ಟು ನಿಖರ ಮತ್ತು ಶೇ.96ರಷ್ಟು ಸೂಕ್ಷ್ಮತೆಯನ್ನು ಹೊಂದಿರುತ್ತದೆ ಎಂದು ಕೌನ್ಸಿಲ್ ಆಫ್ ಸೈಂಟಿಫಿಕ್ ಆಂಡ್ ಇಂಡಸ್ಟ್ರಿಯಲ್ ರಿಸರ್ಚ್ ತಿಳಿಸಿದೆ. ವೈರಸ್ ಪತ್ತೆ ಮಾಡುವುದಕ್ಕೆ ವಿಶ್ವದಲ್ಲೇ ಮೊದಲು ರೋಗ ನಿರ್ಣಯಗೊಳಿಸುವ ಪರೀಕ್ಷಾ ವಿಧಾನವೇ ಫೆಲುಡಾ ಎಂದು ಹೇಳಲಾಗುತ್ತದೆ. ಕೊರೊನಾವೈರಸ್ ಸೋಂಕಿನ ರೋಗನಿರ್ಣಯ ಪರೀಕ್ಷೆಗೆ ಒಂದು ಹೊಸ ಕಿಟ್ ನ್ನು ಸಿದ್ಧಪಡಿಸಲಾಗಿದೆ. ಈ ವೈದ್ಯಕೀಯ ಕಿಟ್ ನ್ನು ತ್ವರಿತವಾಗಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನ ಬಳಸಿಕೊಂಡು ಕೊವಿಡ್-19 ಸೋಂಕು ತಪಾಸಣೆ ನಡೆಸಬಹುದು ಎಂದು ಸಿಎಸ್ಐಆರ್ ತಿಳಿಸಿದೆ.

CRISPR ತಂತ್ರಜ್ಞಾನದ ಅರ್ಥವೇನು?

CRISPR ತಂತ್ರಜ್ಞಾನದ ಅರ್ಥವೇನು?

ಫಲುಡಾ ಪರೀಕ್ಷೆಯಲ್ಲಿ CRISPR ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತದೆ ಎಂದು ಈಗಾಗಲೇ ತಿಳಿದಿದೆ. ಹಾಗಿದ್ದಲ್ಲಿ CRISPR ತಂತ್ರಜ್ಞಾನ ಎಂದರೇನು ಎಂಬ ಪ್ರಶ್ನೆಗೂ ಉತ್ತರವಿದೆ. CRISPR ಎನ್ನುವುದು ಒಂದು ಅನುವಂಶಿಕ ಮೂಲಧಾತುವಿನ ಪತ್ತೆ ಹಾಗೂ ಅನುವಂಶೀಯ ದೋಷಗಳನ್ನು ಗುರುತಿಸಿ ರೋಗವು ಹರಡದಂತೆ ನಿಯಂತ್ರಿಸುವ ನಿಟ್ಟಿನಲ್ಲಿ ಚಿಕಿತ್ಸೆ ನೀಡುವ ತಂತ್ರಜ್ಞಾನವಾಗಿದೆ. ಅನುವಂಶಿಕ ಧಾತುವಿನಲ್ಲಿ ಇರುವ ಡಿಎನ್‌ಎಯ ನಿರ್ದಿಷ್ಟ ಅನುಕ್ರಮಗಳನ್ನು ಪತ್ತೆ ಮಾಡಲಾಗುತ್ತದೆ. ಅಲ್ಲದೇ ಡಿಎನ್‌ಎ ಅನುಕ್ರಮಗಳನ್ನು ಸುಲಭವಾಗಿ ಬದಲಾಯಿಸಲು ಮತ್ತು ಅನುವಂಶಿಕ ಧಾತುವಿನ ಕಾರ್ಯವನ್ನು ಮಾರ್ಪಡಿಸುವುದಕ್ಕೆ ಸಂಶೋಧಕರಿಗೆ ಅನುವು ಮಾಡಿಕೊಡುತ್ತದೆ. ಇದರ ಜೊತೆಗೆ ಮುಂದಿನ ದಿನಗಳಲ್ಲಿ ಅನೇಕ ರೋಗಕಾರಕಗಳ ಪತ್ತೆಗೆ ತಂತ್ರಜ್ಞಾನ ಸಂರಚಿಸಬಹುದಾಗಿದೆ.

CRISPR ತಂತ್ರಜ್ಞಾನ ಬಳಸಿಕೊಳ್ಳಲು ಅನುಮೋದನೆ

CRISPR ತಂತ್ರಜ್ಞಾನ ಬಳಸಿಕೊಳ್ಳಲು ಅನುಮೋದನೆ

ಕೊರೊನಾವೈರಸ್ ಸೋಂಕಿನಿಂದ ತತ್ತರಿಸಿದ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ CRISPR ಆಧಾರಿತ ತಂತ್ರಜ್ಞಾನ ಬಳಸಿಕೊಂಡು ಕೊರೊನಾವೈರಸ್ ಸೋಂಕು ತಪಾಸಣೆ ನಡೆಸುವುದಕ್ಕೆ ತುರ್ತು ಅನುಮೋದನೆ ನೀಡಲಾಗಿತ್ತು. ಕಳೆದ ಮೇ ತಿಂಗಳಿನಲ್ಲೇ ಹಾರ್ವರ್ಡ್ ವಿಶ್ವವಿದ್ಯಾಲಯ ಮತ್ತು ಮಾಸ್ ಚುಸೆಟ್ಸ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ CRISPR ತಂತ್ರಜ್ಞಾನ ಬಳಸಿಕೊಂಡು ಕೊವಿಡ್-19 ಸೋಂಕಿತರ ತಪಾಸಣೆ ನಡೆಸುವುದಕ್ಕೆ ಶುರು ಮಾಡಲಾಗಿತ್ತು.

ಫೆಲುಡಾ ಕೊರೊನಾವೈರಸ್ ಪರೀಕ್ಷೆ ಕೆಲಸ ಮಾಡುವುದೇಗೆ?

ಫೆಲುಡಾ ಕೊರೊನಾವೈರಸ್ ಪರೀಕ್ಷೆ ಕೆಲಸ ಮಾಡುವುದೇಗೆ?

ಫೆಲುಡಾ ತಪಾಸಣಾ ಮಾದರಿಯು ಅಪರಾಧಗಳನ್ನು ಕ್ಷಣಮಾತ್ರದಲ್ಲೇ ಬಗೆಹರಿಸುವ ಸಾಮರ್ಥ್ಯವನ್ನು ಹೊಂದಿದೆ. ಅದೇ ರೀತಿ ಕೊರೊನಾವೈರಸ್ ಸೋಂಕು ಇರುವುದನ್ನು ಕ್ಷಣಮಾತ್ರದಲ್ಲೇ ಪತ್ತೆ ಮಾಡುವುದಕ್ಕೆ ಸಹಕಾರಿಯಾಗಲಿದೆ ಎಂದು ಸಂಶೋಧಕರು ಹೇಳುತ್ತಿದ್ದಾರೆ. ಫೆಲುಡಾ ತಪಾಸಣೆಯು ಬಹುಪಾಲು 'ಗರ್ಭಧಾರಣೆ' ಪರೀಕ್ಷೆಯ ಮಾದರಿಯನ್ನೇ ಹೋಲುತ್ತದೆ. ಕೊರೊನಾವೈರಸ್ ಸೋಂಕು ತಪಾಸಣೆ ವೇಳೆ ಬಣ್ಣ ಬದಲಾಗಿದ್ದಲ್ಲಿ ಸೋಂಕು ತಗುಲಿದೆಯೇ ಇಲ್ಲವೇ ಎನ್ನುವುದು ಖಾತ್ರಿಯಾಗುತ್ತದೆ.

ಕೊವಿಡ್-19 ಸೋಂಕು ದೃಢಪಡುವುದು ಹೇಗೆ?

ಕೊವಿಡ್-19 ಸೋಂಕು ದೃಢಪಡುವುದು ಹೇಗೆ?

ಕೊರೊನಾವೈರಸ್ ಸೋಂಕಿತನ ಆನುವಂಶಿಕ ವಸ್ತುವಿನಲ್ಲಿನ SARS-CoV2 ಅನುಕ್ರಮದೊಂದಿಗೆ ಸಂವಹನ ನಡೆಸಲು ಕ್ಯಾಸ್ 9 ಪ್ರೋಟೀನ್ ಅನ್ನು ಬಾರ್‌ಕೋಡ್ ಮಾಡಲಾಗಿದೆ. ನಂತರದಲ್ಲಿ ಸೋಂಕಿತನಿಂದ ಸಂಗ್ರಹಿಸಿದ ಅನುವಂಶಿಕ ವಸ್ತುವನ್ನು ಕಾಗದದ ಹಾಳೆಯ ಮೇಲೆ ಪರೀಕ್ಷೆಗೊಳಪಡಿಸಿದಾಗ ಕ್ಯಾಸ್9 ಮತ್ತು SARS-CoV2 ಎರಡು ಭಾಗಗಳಾಗಿ ಒಡೆದು ಹೋಗುತ್ತದೆ. ಇದರಿಂದ ಕೊರೊನಾವೈರಸ್ ಸೋಂಕು ತಗುಲಿದೆ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ಡಾ. ಡೆಬೋಜೋತಿ ಚಕ್ರವರ್ತಿಯ ತಿಳಿಸಿದ್ದಾರೆ.

Recommended Video

Congress ನಾ ಮಹತ್ವದ ಹುದ್ದೆ ಈ ನಾಯಕರ ಪಾಲು!!! | Oneindia Kannada
'ಫೆಲುಡಾ' ತಪಾಸಣೆಯು ದುಬಾರಿಯೂ ಅಲ್ಲ

'ಫೆಲುಡಾ' ತಪಾಸಣೆಯು ದುಬಾರಿಯೂ ಅಲ್ಲ

ಕೊರೊನಾವರೈಸ್ ಸೋಂಕು ದೃಢಪಡಿಸಿಕೊಳ್ಳಲು ಮಾಡಿಸಿಕೊಳ್ಳುವ ಫಲುಡಾ ತಪಾಸಣೆಗೆ ಹೆಚ್ಚು ಹಣವೂ ಖರ್ಚಾಗುವುದಿಲ್ಲ. ಇತರೆ ವೈದ್ಯಕೀಯ ತಪಾಸಣೆಗಳಿಗೆ ಹೋಲಿಸಿ ನೋಡಿದ್ದಲ್ಲಿ ಫಲುಡಾ ಪರೀಕ್ಷೆಯು ತೀರಾ ಕಡಿಮೆಯಾಗಿರುತ್ತದೆ. RT-PCR ಪರೀಕ್ಷೆಗೆ ಕನಿಷ್ಠ 1600 - 2000 ರೂಪಾಯಿ ಆಗಲಿದ್ದು, ಫಲಡಾ ತಪಾಸಣೆಗೆ ಕೇವಲ 500 ರಿಂದ 600 ರೂಪಾಯಿ ವೆಚ್ಚದಲ್ಲಿ ಕೇವಲ 20 ರಿಂದ 30 ನಿಮಿಷದಲ್ಲೇ ಸೋಂಕಿನ ವರದಿ ನೀಡಲಾಗುತ್ತದೆ. ರಾಪಿಡ್ ಆಂಟಿಜೆನ್ ಟೆಸ್ಟ್ ನಡೆಸುವುದಕ್ಕೆ ಕನಿಷ್ಠ 30 ನಿಮಿಷಗಳು ಬೇಕಾಗಲಿದ್ದು, 450 ರೂಪಾಯಿ ವೆಚ್ಚವಾಗುತ್ತದೆ. TruNat ವೈದ್ಯಕೀಯ ತಪಾಸಣೆ ನಡೆಸುವುದಕ್ಕೆ 1300 ರೂಪಾಯಿ ಖರ್ಚಾಗಲಿದ್ದು, ಒಂದು ಗಂಟೆಗಳಲ್ಲಿ ವರದಿ ಬರಲಿದೆ.

English summary
What Is The New Covid-19 Feluda Test? How Dies It Work And What Is The Cost And How Does It Compare With Other Tests. Explained In Kannada. Read On.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X