ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾವೈರಸ್ 3ನೇ ಅಲೆ ಆತಂಕ ಹೆಚ್ಚಿಸಿದ ಆರ್ 1 ರೂಪಾಂತರ!?

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 27: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ರೂಪಾಂತರ ಅಲೆಗಳ ಹಾವಳಿ ಕಡಿಮೆಯಾಗುವ ಲಕ್ಷಣಗಳೇ ಕಾಣುತ್ತಿಲ್ಲ. ಮೊದಲ ಎರಡು ಅಲೆಗಳಿಂದ ತತ್ತರಿಸಿದ ಭಾರತದಲ್ಲಿ ಮೂರನೇ ಅಲೆಯ ಭೀತಿ ಶುರುವಾಗಿದೆ. ಕಳೆದ ವರ್ಷವೇ ಜಪಾನಿನಲ್ಲಿ ಗೋಚರಿಸಿದ ರೂಪಾಂತರ ವೈರಸ್ ಇಂದು ಜಗತ್ತಿನ ಬೇರೆ ಬೇರೆ ರಾಷ್ಟ್ರಗಳಿಗೂ ವ್ಯಾಪಿಸಿದ್ದು, ಅದಕ್ಕೆ ಭಾರತ ಸಹ ಹೊರತಾಗಿಲ್ಲ.

ಭಾರತದಲ್ಲಿ ಕೊರೊನಾವೈರಸ್ ಮೂರನೇ ಅಲೆಗೆ ಆರ್ 1 ರೂಪಾಂತರ ವೈರಸ್ ಕಾರಣವಾಗುವ ಭೀತಿ ಎದುರಾಗಿದೆ. ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ಜಗತ್ತಿನ 35 ರಾಷ್ಟ್ರಗಳಲ್ಲಿ ಆರ್ 1 ರೂಪಾಂತರದ 10,000ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.

ಮೊದಲು ಓದಿ: ಭಾರತದಲ್ಲಿ ಕೊರೊನಾವೈರಸ್ 2ನೇ ಅಲೆ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳಿಮೊದಲು ಓದಿ: ಭಾರತದಲ್ಲಿ ಕೊರೊನಾವೈರಸ್ 2ನೇ ಅಲೆ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳಿ

ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಯಿಂದ ರೋಗ ಮತ್ತು ಮರಣ ಸಾಪ್ತಾಹಿಕ ವರದಿಯು, ಆರ್ .1 ರೂಪಾಂತರಗಳು ಏಪ್ರಿಲ್ 2021 ರಿಂದ ಯುನೈಟೆಡ್ ಸ್ಟೇಟ್ಸ್ ನಲ್ಲಿ ಪತ್ತೆಯಾಗಿವೆ ಎಂದು ಹೇಳಿದೆ. ಈ ರೂಪಾಂತರ ವೈರಸ್ ಅನ್ನು ಮೊದಲ ಬಾರಿಗೆ ಕೆಂಟುಕಿ ನರ್ಸಿಂಗ್ ಹೋಂನಲ್ಲಿ ಪತ್ತೆ ಮಾಡಲಾಗಿದ್ದು, ಅಲ್ಲಿನ ಅನೇಕ ರೋಗಿಗಳಿಗೆ ಸಂಪೂರ್ಣ ಲಸಿಕೆ ಹಾಕಲಾಗಿದೆ. ಸದ್ಯ ಭಾರತದಲ್ಲಿ ಮೂರನೇ ಅಲೆಯ ಭೀತಿ ಹುಟ್ಟು ಹಾಕಿರುವ ಆರ್ 1 ರೂಪಾಂತರ ವೈರಸ್, ಈ ರೂಪಾಂತರದ ಲಕ್ಷಣಗಳೇನು?, ಆರ್ 1 ರೂಪಾಂತರ ವೈರಸ್ ನಿಂದ ಯಾರಿಗೆ ಹೆಚ್ಚು ಅಪಾಯಕಾರಿ ಎಂಬುದರ ಕುರಿತು ಒಂದು ವಿಸ್ತೃತ ವರದಿ ಇಲ್ಲಿದೆ ಓದಿ.

ಆರ್ 1 ರೂಪಾಂತರ ವೈರಸ್ ಯಾರಲ್ಲಿ ಹೆಚ್ಚು?

ಆರ್ 1 ರೂಪಾಂತರ ವೈರಸ್ ಯಾರಲ್ಲಿ ಹೆಚ್ಚು?

ಕೊರೊನಾವೈರಸ್ ಸೋಂಕಿನ ಆರ್ 1 ರೂಪಾಂತರ ವೈರಸ್ ಸೋಂಕು ಯಾರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಎಂಬುದಕ್ಕೆ ಉತ್ತರ ಸಿಕ್ಕಿದೆ. ಸಿಡಿಸಿ ವರದಿ ಪ್ರಕಾರ, ಕೊವಿಡ್-19 ಲಸಿಕೆ ಪಡೆದ ನರ್ಸಿಂಗ್ ಹೋಮ್ ಸಿಬ್ಬಂದಿಗೆ ಹೋಲಿಸಿದರೆ ಲಸಿಕೆಯನ್ನು ಹಾಕಿಸಿಕೊಳ್ಳದ ಶೇ.87ರಷ್ಟು ಜನರಿಗೆ ಆರ್ 1 ರೂಪಾಂತರ ವೈರಸ್ ಅಂಟಿಕೊಳ್ಳುವ ಅಪಾಯ ಹೆಚ್ಚಾಗಿರುತ್ತದೆ. ಆದಾಗ್ಯೂ, ಈಗಿನಂತೆ ಆರ್ 1 ರೂಪಾಂತರ ವೈರಸ್ ಅನ್ನು ಕಾಳಜಿ ಅಥವಾ ಆಸಕ್ತಿಯ ರೂಪಾಂತರವಾಗಿ ಪಟ್ಟಿ ಮಾಡಲಾಗಿಲ್ಲ.

ಕೊವಿಡ್-19 ಸೋಂಕಿನ ಲಕ್ಷಣಗಳು ಯಾವುವು?

ಕೊವಿಡ್-19 ಸೋಂಕಿನ ಲಕ್ಷಣಗಳು ಯಾವುವು?

ಸಾಮಾನ್ಯವಾಗಿ ಕೊರೊನಾವೈರಸ್ ಸೋಂಕಿನ ರೂಪಾಂತರಗಳು ಬದಲಾದಂತೆ ಸೋಂಕಿನ ಲಕ್ಷಣಗಳಲ್ಲಿ ಕೆಲವು ಬದಲಾವಣೆಗಳನ್ನು ಕಾಣುತ್ತೇವೆ. ಆದರೆ ಆರ್ 1 ರೂಪಾಂತರ ವೈರಸ್ ಸೋಂಕಿತರಲ್ಲಿ ಸಾಮಾನ್ಯ ಸೋಂಕಿನ ಲಕ್ಷಣಗಳೇ ಕಾಣಿಸಿಕೊಳ್ಳುತ್ತವೆ. ಹಾಗಿದ್ದರೆ ಸಾಮಾನ್ಯವಾಗಿ ಯಾವ ಲಕ್ಷಣಗಳು ಕೊರೊನಾವೈರಸ್ ಸೋಂಕಿನ ಅಪಾಯವನ್ನು ದೃಢಪಡಿಸುತ್ತವೆ ಎಂಬುದನ್ನು ಒಮ್ಮೆ ನೋಡಿ.

*ಜ್ವರ

*ಕೆಮ್ಮು

*ಉಸಿರಾಟ ತೊಂದರೆ

*ಶೀತ

*ಶೀತದ ಪುನರಾವರ್ತನೆ

*ಮೂಳೆಗಳಲ್ಲಿ ನೋವು

*ತಲೆನೋವು

*ಗಂಟಲು ಕೆರೆತ

*ರುಚಿ ಮತ್ತು ವಾಸನೆ ಗುರುತಿಸಲು ಆಗುವುದಿಲ್ಲ

*ಅತಿಸಾರ

*ವಾಂತಿ

ಡೆಲ್ಟಾ ವೈರಸ್ ಎಂಬ ಅಪಾಯಕಾರಿ ಕೊವಿಡ್-19 ರೂಪಾಂತರ

ಡೆಲ್ಟಾ ವೈರಸ್ ಎಂಬ ಅಪಾಯಕಾರಿ ಕೊವಿಡ್-19 ರೂಪಾಂತರ

ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಗೆ ಮುಖ್ಯ ಕಾರಣ ಎನಿಸಿದ ಡೆಲ್ಟಾ ವೈರಸ್ ಹಿಂದಿನ ರೂಪಾಂತರಗಳಿಗಿಂತ ಎರಡು ಪಟ್ಟು ಅಪಾಯಕಾರಿ ಎಂದು ಸಿಡಿಸಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಲಸಿಕೆ ಪಡೆದುಕೊಳ್ಳದ ಜನರಲ್ಲಿ ಡೆಲ್ಟಾ ವೈರಸ್ ಈ ಹಿಂದಿನ ರೂಪಾಂತರಗಳಿಗಿಂತ ಹೆಚ್ಚು ಅಪಾಯವನ್ನು ಉಂಟು ಮಾಡುತ್ತಿತ್ತು. ಅದರಂತೆ ಇತ್ತೀಚಿನ ವರದಿ ಬಂದಾಗ ಲಸಿಕೆ ಪಡೆಯದ 11 ಪಟ್ಟು ಮಂದಿ ಆಸ್ಪತ್ರೆಗೆ ದಾಖಲಾಗಿದ್ದರೆ, ಲಸಿಕೆ ಪಡೆಯದೇ ಡೆಲ್ಟಾ ರೂಪಾಂತರ ವೈರಸ್ ನಿಂದಾಗಿ ಸಾವಿನ್ನಪ್ಪಿದವರ ಸಂಖ್ಯೆಯು 10 ಪಟ್ಟು ಹೆಚ್ಚಾಗಿತ್ತು.

ದೇಶದಲ್ಲಿ ಕೊವಿಡ್-19 ಮತ್ತು ಸಾವಿನ ಸಂಖ್ಯೆ ಎಷ್ಟಿದೆ?

ದೇಶದಲ್ಲಿ ಕೊವಿಡ್-19 ಮತ್ತು ಸಾವಿನ ಸಂಖ್ಯೆ ಎಷ್ಟಿದೆ?

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 26041 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಒಂದೇ ದಿನ 29,621 ಮಂದಿ ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದರೆ, ಇದೇ ಅವಧಿಯಲ್ಲಿ 276 ಮಂದಿ ಮಹಾಮಾರಿಯಿಂದ ಪ್ರಾಣ ಬಿಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಸೋಮವಾರದ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಕೊರೊನಾವೈರಸ್ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 3,36,78,786ಕ್ಕೆ ಏರಿಕೆಯಾಗಿದೆ. ಇದರ ಹೊರತಾಗಿ ದೇಶದಲ್ಲಿ 3,29,31,972 ಮಂದಿ ಸೋಂಕಿತರು ಗುಣಮುಖರಾಗಿದ್ದು, 4,47,194 ಮಂದಿ ಕೊರೊನಾವೈರಸ್ ಮಹಾಮಾರಿಯಿಂದ ಪ್ರಾಣ ಬಿಟ್ಟಿದ್ದಾರೆ. 2,99,620 ಸಕ್ರಿಯ ಪ್ರಕರಣಗಳಿವೆ ಎಂದು ಗೊತ್ತಾಗಿದೆ.

English summary
What Is the R.1 COVID Variant? Origin, Symptoms and Everything about new covid variant in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X