• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Popular Front of India: ಹೇಗೆ ರೂಪುಗೊಂಡಿತು, ಎಷ್ಟು ರಾಜ್ಯಗಳಲ್ಲಿ ಹರಡಿತು, ಉದ್ದೇಶವೇನು?

|
Google Oneindia Kannada News

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಗುರುವಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕಚೇರಿಗಳ ಮೇಲೆ ದಾಳಿ ನಡೆಸಿವೆ. 13 ರಾಜ್ಯಗಳಲ್ಲಿ ನಡೆದ ಈ ದಾಳಿಗಳಲ್ಲಿ ಪಿಎಫ್‌ಐ ಅಧ್ಯಕ್ಷರು ಸೇರಿದಂತೆ ನೂರಕ್ಕೂ ಹೆಚ್ಚು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸದಸ್ಯೆರನ್ನು ಬಂಧಿಸಲಾಗಿದೆ.

ಎನ್‌ಐಎ ಮತ್ತು ಇಡಿಯು 13 ರಾಜ್ಯಗಳಲ್ಲಿ ಪಿಎಫ್‌ಐ ಸಂಘಟನೆ ಮೇಲೆ ದಾಳಿ ನಡೆಸಿವೆ. ಇವುಗಳಲ್ಲಿ ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಬಿಹಾರ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ರಾಜಸ್ಥಾನ, ದೆಹಲಿ, ಅಸ್ಸಾಂ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ಸೇರಿವೆ. ಮಲಪ್ಪುರಂ ಜಿಲ್ಲೆಯ ಮಂಜೇರಿಯಲ್ಲಿರುವ ಪಿಎಫ್‌ಐನ ದೆಹಲಿ ಮುಖ್ಯಸ್ಥ ಪರ್ವೇಜ್ ಅಹ್ಮದ್ ಜೊತೆಗೆ ಪಿಎಫ್‌ಐ ರಾಷ್ಟ್ರೀಯ ಅಧ್ಯಕ್ಷ ಒಎಂಎ ಸಲಾಂ ಅವರ ಮನೆ ಮೇಲೆ ಎನ್‌ಐಎ ಮತ್ತು ಇಡಿ ದಾಳಿ ನಡೆಸಿದೆ. ಸದ್ಯ ಈಗ ಈ ಇಬ್ಬರನ್ನೂ ಬಂಧಿಸಲಾಗಿದೆ. ಎನ್‌ಐಎ ದಾಳಿಯನ್ನು ವಿರೋಧಿಸಿ ಪಿಎಫ್‌ಐ ಮತ್ತು ಎಸ್‌ಡಿಪಿಐ ಕಾರ್ಯಕರ್ತರು ವಿವಿಧೆಡೆ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಅವರನ್ನು ಕೂಡ ವಶಕ್ಕೆ ತೆಗೆದುಕೊಳ್ಳಲಾಗಿದೆ.

ಪಿಎಫ್ ಐ ವಿರುದ್ಧ ತನಿಖಾ ಸಂಸ್ಥೆ ಹಾಗೂ ಪೊಲೀಸರ ಕ್ರಮಕ್ಕೆ ಸಂಬಂಧಿಸಿದ ಸುದ್ದಿಗಳೇ ಮಾಧ್ಯಮಗಳಲ್ಲಿ ಪ್ರಧಾನವಾಗಿವೆ. ಭಯೋತ್ಪಾದಕ ಚಟುವಟಿಕೆಗಳು ಮತ್ತು ರಾಜಕೀಯ ಕೊಲೆಗಳಲ್ಲಿ ಭಾಗಿಯಾಗಿರುವ ಆರೋಪವೂ ಇದೆ. ಭಯೋತ್ಪಾದಕರಿಗೆ ನಿಧಿ ಒದಗಿಸಿದ ಆರೋಪದ ಮೇಲೆ ಸಂಘಟನೆಯ ವಿರುದ್ಧ ಇಂತಹ ದೊಡ್ಡ ಪ್ರಮಾಣದ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ. ಯುವ ಜನರಿಗೆ ತರಬೇತಿ ವ್ಯವಸ್ಥೆ ಹೆಸರಿನಲ್ಲಿ ಮಂಜೂರಾದ ಸಂಸ್ಥೆಗಳಿಗೆ ಸೇರಲು ಜನರನ್ನು ಮೋಸಗೊಳಿಸುವುದು ಹೀಗೆ ಅನೇಕ ಸರಣಿ ಅರೋಪಗಳನ್ನು ಪಿಎಫ್‌ಐ ಮೇಲಿದೆ. ಇನ್ನು ದೇಶದಲ್ಲಿ ಈ ಸಂಘಟನೆಯು ಹೇಗೆ ರೂಪಗೊಂಡಿದೆ ಎಂದು ತಿಳಿದುಕೊಳ್ಳವುದು ಕೂಡ ಪ್ರಮುಖವಾಗಿದೆ ಏಕೆಂದರೆ, ಈ ಸಂಘಟನೆಯ ಮೇಲೆ ಉಗ್ರ ಆರೋಪಗಳು ಕೇಳಿ ಬರುತ್ತಿವೆ.

PFI ಎಂದರೇನು ಮತ್ತು ಇದರ ಇತಿಹಾಸವೇನು ಗೊತ್ತಾ?

PFI ಎಂದರೇನು ಮತ್ತು ಇದರ ಇತಿಹಾಸವೇನು ಗೊತ್ತಾ?

2006ರಲ್ಲಿ ಭಾರತದ ದಕ್ಷಿಣ ರಾಜ್ಯವಾದ ಕೇರಳದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಅಡಿಪಾಯವನ್ನು ಹಾಕಲಾಯಿತು. ಇದು ನ್ಯಾಷನಲ್ ಡೆವಲಪ್‌ಮೆಂಟ್ ಫ್ರಂಟ್ (ಎನ್‌ಡಿಎಫ್) ಆಗಿ ಜನಿಸಿತು. ನಂತರ ಮಾನಿತ ನೀತಿ ಪಸರಾಯಿ, ಕರ್ನಾಟಕ ಫೋರಂ ಫಾರ್ ಡಿಗ್ನಿಟಿ, ರಾಷ್ಟ್ರೀಯ ವಿಕಾಸ ಮೋರ್ಚಾ ಮತ್ತು ಇತರ ಹಲವು ಮುಸ್ಲಿಂ ಸಂಘಟನೆಗಳು ಅದರಲ್ಲಿ ವಿಲೀನಗೊಂಡವು. ಅದರ ನಂತರ ಇದನ್ನು ಪಿಎಫ್‌ಐ(PFI) ಅಂದರೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಎಂದು ಕರೆಯಲಾಯಿತು.

ಬಾಬರಿ ಮಸೀದಿ ಧ್ವಂಸದ ನಂತರ, ದಕ್ಷಿಣ ಭಾರತದ ಅನೇಕ ರಾಜ್ಯಗಳಲ್ಲಿ ಮುಸ್ಲಿಂ ಸಂಘಟನೆಗಳು ಹುಟ್ಟಿಕೊಂಡವು. ಈ ಹಲವು ಸಂಘಟನೆಗಳನ್ನು ವಿಲೀನಗೊಳಿಸಿ ಪಿಎಫ್‌ಐ ರಚನೆಯಾಯಿತು. ಈ ಸಂಸ್ಥೆಯು ಪ್ರಾರಂಭದಿಂದಲೂ ಸ್ಕ್ಯಾನರ್ ಅಡಿಯಲ್ಲಿದೆ. ದೇಶದ ಹಲವು ರಾಜ್ಯಗಳಲ್ಲಿ ಇದನ್ನು ನಿಷೇಧಿಸಲಾಗಿದೆ. ಈ ಸಂಘಟನೆಯು ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದೆ ಎಂಬ ಆರೋಪವೂ ಇದೆ. ಇಂತಹ ಹಲವು ಪ್ರಕರಣಗಳಲ್ಲಿ ಅದರ ಹಲವು ಕಾರ್ಯಕರ್ತರು ಮತ್ತು ಮುಖಂಡರನ್ನು ಬಂಧಿಸಲಾಗಿದೆ.

ಸಂಸ್ಥೆಯ ವಿರುದ್ಧ ಗಂಭೀರ ಆರೋಪಗಳೇನು?

ಸಂಸ್ಥೆಯ ವಿರುದ್ಧ ಗಂಭೀರ ಆರೋಪಗಳೇನು?

ಪಿಎಫ್‌ಐ ವಿರುದ್ಧ ತನಿಖಾ ಸಂಸ್ಥೆ ಮತ್ತು ಪೊಲೀಸರ ಕ್ರಮಕ್ಕೆ ಸಂಬಂಧಿಸಿದ ಸುದ್ದಿಗಳು ಪ್ರತಿದಿನ ಮಾಧ್ಯಮಗಳಲ್ಲಿ ಉಳಿದಿವೆ. ಬಿಹಾರದ ಬೇಗುಸರಾಯ್‌ನಲ್ಲಿ ನಡೆದ ಗುಂಡಿನ ದಾಳಿಗೂ ಈ ಸಂಘಟನೆಯ ಹೆಸರು ತಳುಕು ಹಾಕಿಕೊಂಡಿತ್ತು. ಕರ್ನಾಟಕದಲ್ಲಿ ನಡೆದ ಬಿಜೆಪಿ ಕಾರ್ಯಕರ್ತನ ಹತ್ಯೆ ಪ್ರಕರಣದ ಸರಮಾಲೆಗಳೂ ಪಿಎಫ್‌ಐಗೆ ಸಂಬಂಧಿಸಿವೆ. ಈ ಸಂಘಟನೆಯು ಜಾರ್ಖಂಡ್‌ನ 'ಗ್ರೂಮಿಂಗ್ ಗ್ಯಾಂಗ್' ಗೂ ಸಂಪರ್ಕ ಹೊಂದಿದೆ. ಉದಯಪುರದಲ್ಲಿ ಕನ್ಹಯ್ಯಾಲಾಲ್ ಹತ್ಯೆ ಪ್ರಕರಣದಲ್ಲಿ ಅದರ ಸದಸ್ಯರು ಭಾಗಿಯಾಗಿದ್ದಾರೆ ಎಂಬ ಆರೋಪವಿತ್ತು.

ದೆಹಲಿ ಗಲಭೆ, ಕಾನ್ಪುರ ಹಿಂಸಾಚಾರದಲ್ಲೂ ಇದರ ಹೆಸರು

ದೆಹಲಿ ಗಲಭೆ, ಕಾನ್ಪುರ ಹಿಂಸಾಚಾರದಲ್ಲೂ ಇದರ ಹೆಸರು

ದೆಹಲಿ ಗಲಭೆ ಮತ್ತು ಕಾನ್ಪುರ ಹಿಂಸಾಚಾರದಲ್ಲೂ ಇದರ ಹೆಸರು ಕಾಣಿಸಿಕೊಂಡಿದೆ. ಪಿಎಫ್‌ಐ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದೆ ಎಂಬ ಆರೋಪವೂ ಕೇಳಿಬಂದಿತ್ತು. ದೇಶದ ಇತರ ಹಲವು ಭಯೋತ್ಪಾದಕ ಚಟುವಟಿಕೆಗಳಲ್ಲಿ ಪಿಎಫ್‌ಐ ಹೆಸರು ಕೂಡ ಮುನ್ನೆಲೆಗೆ ಬಂದಿದೆ. ಇದನ್ನು ಹಲವು ರಾಜ್ಯಗಳಲ್ಲಿ ನಿಷೇಧಿಸಲಾಗಿದೆ. ಹೀಗಿರುವಾಗ ಈ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಏನಿದು ಕಾನೂನು ಬಾಹಿರ ಚಟುವಟಿಕೆಗಳ ಸರಮಾಲೆ ಎಂಬ ಪ್ರಶ್ನೆ ಏಳುತ್ತದೆ.

ಪಿಎಫ್‌ಐ ನಿಜವಾದ ಉದ್ದೇಶ ಹೇಳಿಕೊಂಡಿರುವುದು ಏನು?

ಪಿಎಫ್‌ಐ ನಿಜವಾದ ಉದ್ದೇಶ ಹೇಳಿಕೊಂಡಿರುವುದು ಏನು?

ಈ ಪಿಎಫ್‌ಐ ಸಂಘಟನೆಯು ತನ್ನನ್ನು ಹೊಸ ಸಾಮಾಜಿಕ ಚಳುವಳಿಯ ನಾಯಕ ಎಂದು ವಿವರಿಸುತ್ತದೆ. ನ್ಯಾಯ, ಸ್ವಾತಂತ್ರ್ಯ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಜನರಿಗೆ ಅಧಿಕಾರ ನೀಡಲು ಬದ್ಧವಾಗಿದೆ. ಸಂಸ್ಥೆಯು ರಾಷ್ಟ್ರೀಯ ಮಹಿಳಾ ಮೋರ್ಚಾ (NWF) ಮತ್ತು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (CFI) ಸೇರಿದಂತೆ ಹಲವು ಶಾಖೆಗಳನ್ನು ಹೊಂದಿದೆ. ದೇಶದ ಒಟ್ಟು 23 ರಾಜ್ಯಗಳಲ್ಲಿ ತನ್ನ ಶಾಖೆಗಳನ್ನು ಹೊಂದಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಆದರೆ ಈ ಸಂಸ್ಥೆಗೆ ಸಾಲು-ಸಾಲು ಅನೇಕ ಅರೋಪಗಳು ಇವೆ ಎನ್ನವುವುದಕ್ಕೆ ತಾಜಾ ಉದಾಹರಣೆ ಎಂದರೆ ಕರ್ನಾಟಕದಲ್ಲಿ ಯುವಕರನ್ನು ದಾರಿ ತಪ್ಪಿಸುವುದು ಜೊತೆ ಹಿಜಾಬ್‌ ವಿಚಾರದಲ್ಲೂ ಯುವ ಮುಸ್ಲಿಂಮರಿಗೆ ದಾರಿ ತಪ್ಪಿಸಿದೆ.

ಆದರೆ ಅದರ ಸಿದ್ಧಾಂತದ ಹೊರತಾಗಿ, ಸಂಘಟನೆಯ ವಿರುದ್ಧ ಅನೇಕ ಗಂಭೀರ ಆರೋಪಗಳನ್ನು ಸಹ ಮಾಡಲಾಗಿದೆ. ದೇಶವನ್ನು ಮುಸ್ಲಿಂ ರಾಷ್ಟ್ರವನ್ನಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಈ ಸಂಘಟನೆಯು ದೇಶಕ್ಕೆ ಹಾನಿಕಾರಕವಾದ ಕೆಲವು ಅಪಾಯಕಾರಿ ಅಜೆಂಡಾವನ್ನು ಹೊಂದಿದೆ ಎಂಬ ಆರೋಪವೂ ಇದೆ. ಪಿಎಫ್‌ಐ ಮುಖಂಡರು ತಮ್ಮ ಮೇಲಿನ ಆರೋಪಗಳನ್ನು ನಿರಂತರವಾಗಿ ನಿರಾಕರಿಸುತ್ತಿದ್ದಾರೆ, ಇದು ರಾಜಕೀಯ ಪ್ರೇರಿತ ಎಂದು ಹೇಳಿದ್ದಾರೆ. ಪಿಎಫ್ ಐನ ಅಖಿಲ ಭಾರತ ಅಧ್ಯಕ್ಷ ಕೇರಳ ಮೂಲದ ಇ.ಅಬೂಬಕರ್ ಎಂಬುದು ಗೊತ್ತಾಗಿದೆ. ಇದರ ಪ್ರಧಾನ ಕಛೇರಿಯು ಮೊದಲು ಕೋಝಿಕ್ಕೋಡ್‌ನಲ್ಲಿತ್ತು ಆದರೆ ನಂತರ ಅದನ್ನು ದೆಹಲಿಗೆ ಸ್ಥಳಾಂತರಿಸಲಾಯಿತು.

English summary
What is the Popular Front of India; Why are raids being conducted at their offices across country Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X