ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Explainer: ವೈದ್ಯಕೀಯ ಗರ್ಭಪಾತ (ತಿದ್ದುಪಡಿ) ಮಸೂದೆ 2020

|
Google Oneindia Kannada News

ವೈದ್ಯಕೀಯ ಗರ್ಭಪಾತ ಕಾಯ್ದೆ 1971ಕ್ಕೆ ತಿದ್ದುಪಡಿ ತರುವ ವೈದ್ಯಕೀಯ ಗರ್ಭಪಾತ (ತಿದ್ದುಪಡಿ) ಮಸೂದೆ 2020ಕ್ಕೆ ಕೇಂದ್ರ ಸಚಿವ ಸಂಪುಟ ಕಳೆದ ವರ್ಷದ ಜನವರಿ 29ರಂದು ಅನುಮೋದನೆ ನೀಡಿದೆ. ಬೇಡದ ಗರ್ಭವನ್ನು ಸುರಕ್ಷಿತವಾಗಿ ಮತ್ತು ಕಾನೂನಾತ್ಮಕವಾಗಿ ತೆಗೆದುಹಾಕಲು ಪ್ರಸ್ತುತ ಇರುವ 20 ವಾರಗಳ ಗರಿಷ್ಠ ಕಾಲಮಿತಿಯನ್ನು 24 ವಾರಗಳಿಗೆ ಹೆಚ್ಚಿಸುವ ಮೂಲಕ ಮಹಿಳೆಯರಿಗೆ ಅನುಕೂಲ ಮಾಡಿಕೊಡಲು ಈ ಮಸೂದೆಯನ್ನು ಸಿದ್ಧಪಡಿಸಲಾಗಿದೆ.

ಈ ಮಸೂದೆಗೆ ಕೇಂದ್ರ ಸಂಪುಟದ ಒಪ್ಪಿಗೆ ಸಿಕ್ಕಿದ್ದು, ಈ ಬಾರಿಯ ಸಂಸತ್‌ ಕಲಾಪದಲ್ಲಿ ಮಂಡನೆಯಾಗಬೇಕಿದ್ದು, ಅನುಮೋದನೆ ದೊರಕಿದ ಬಳಿಕ ಕಾಯ್ದೆಯಾಗಿ ಬದಲಾಗಲಿದೆ.

ಗರ್ಭಪಾತದ ಕಾಲಮಿತಿ ಏರಿಕೆ: ಕೇಂದ್ರ ಸಂಪುಟದ ಮಹತ್ವದ ತೀರ್ಮಾನಗರ್ಭಪಾತದ ಕಾಲಮಿತಿ ಏರಿಕೆ: ಕೇಂದ್ರ ಸಂಪುಟದ ಮಹತ್ವದ ತೀರ್ಮಾನ

ಕಳೆದ ವರ್ಷದ ಜನವರಿಯಲ್ಲಿಯೇ ಈ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತ್ತು. ಆದರೆ ಮಸೂದೆಯು ವೈದ್ಯಕೀಯ ಕ್ಷೇತ್ರದ ಬಹಳ ಮುಖ್ಯ ವಿಚಾರಗಳನ್ನು ಒಳಗೊಂಡಿರುವುದರಿಂದ ಅದನ್ನು ಕಾಯ್ದೆಯಾಗಿ ಪರಿವರ್ತಿಸುವ ಪ್ರಕ್ರಿಯೆ ಆರಂಭಿಸುವುದಕ್ಕೂ ಮುನ್ನ ಪರಾಮರ್ಶೆಗೆ ಒಳಪಡಿಸಲಾಗಿದೆ. ಪ್ರಸ್ತುತ ನಡೆಯುತ್ತಿರುವ ಬಜೆಟ್ ಅಧಿವೇಶನದ ವೇಳೆ ಅನುಮೋದನೆಗೊಳ್ಳಲಿರುವ ಮಸೂದೆಗಳಲ್ಲಿ ವೈದ್ಯಕೀಯ ಗರ್ಭಪಾತ (ತಿದ್ದುಪಡಿ) ಮಸೂದೆ 2020 ಕೂಡ ಸೇರಿದೆ. ಈ ಮಸೂದೆ ಏನು? ಇದರ ಪ್ರಯೋಜನಗಳೇನು? ಅನನುಕೂಲಗಳೇನು? ಮುಂದೆ ಓದಿ.

ತಿದ್ದುಪಡಿಯ ಅಗತ್ಯವೇನು?

ತಿದ್ದುಪಡಿಯ ಅಗತ್ಯವೇನು?

  • 2015ರಲ್ಲಿ ಭಾರತೀಯ ವೈದ್ಯಕೀಯ ನೀತಿ ಪತ್ರಿಕೆಯ ವರದಿ ಪ್ರಕಾರ ದೇಶದಲ್ಲಿನ ಶೇ 10-13ರಷ್ಟು ತಾಯ್ತನದ ಸಾವುಗಳು ಅಸುರಕ್ಷಿತ ಗರ್ಭಪಾತದಿಂದ ಸಂಭವಿಸುತ್ತದೆ. ಹಾಗೆಯೇ ಭಾರತದಲ್ಲಿನ ತಾಯ್ತನದ ವೇಳೆಯ ಸಾವುಗಳಲ್ಲಿ ಮೂರನೇ ಅತಿ ದೊಡ್ಡ ಕಾರಣವೆಂದರೆ ಅಸುರಕ್ಷಿತ ಗರ್ಭಪಾತ.
  • ಪ್ರಸ್ತುತ ಗರ್ಭಾವಸ್ಥೆಯಲ್ಲಿ 20 ವಾರಗಳನ್ನು ಕಳೆದ ಮಹಿಳೆಯರು ಬಹುದೊಡ್ಡ ಕಾನೂನಾತ್ಮಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಏಕೆಂದರೆ ಇದು ಮಹಿಳೆಯರ ಪುನರ್ ಉತ್ಪತ್ತಿ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ ಎನ್ನುತ್ತದೆ ಕಾನೂನು.
  • ಪ್ರಸೂತಿ ತಜ್ಞರು ಹೇಳುವಂತೆ ಅಸುರಕ್ಷಿತ ಗರ್ಭಪಾತ ಸೇವೆ ಒದಗಿಸುವ ಸ್ಥಳಗಳು ತಾಯಂದಿರ ಸಾವುಗಳಿಗೂ ಕಾರಣವಾಗುತ್ತಿವೆ.
  • ಮೂಲ ಕಾನೂನಿನ ಪ್ರಕಾರ, ಅಪ್ರಾಪ್ತ ವಯಸ್ಸಿನವರು ತಮ್ಮ ಗರ್ಭ ತೆರವುಗೊಳಿಸಲು ಬಯಸಿದ್ದರೆ ಅವರ ಪೋಷಕರಿಂದ ಲಿಖಿತ ಸಮ್ಮತಿ ಅಗತ್ಯವಾಗಿದೆ. ಈಗ ಪ್ರಸ್ತಾಪಿಸಿರುವ ತಿದ್ದುಪಡಿಯು ಈ ನಿಯಮವನ್ನು ತೆಗೆದುಹಾಕಿದೆ.
ಮಸೂದೆ ತಿದ್ದುಪಡಿಗೆ ಕಾರಣಗಳು

ಮಸೂದೆ ತಿದ್ದುಪಡಿಗೆ ಕಾರಣಗಳು

ಎಂಟಿಪಿ ಕಾಯ್ದೆ 1971ರ ಸೆಕ್ಷನ್ 3 (2)ರ ಪ್ರಕಾರ ನೋಂದಾಯಿತ ವೈದ್ಯಕೀಯ ಪರಿಣತರು ಮಾತ್ರ ಗರ್ಭಪಾತ ಕ್ರಿಯೆ ನಡೆಸಬೇಕು.

ಒಂದು ವೇಳೆ ಗರ್ಭಧಾರಣೆಯ ಅವಧಿ 12 ವಾರಗಳನ್ನು ಕಳೆದಿದ್ದರೆ ಮತ್ತು 20 ವಾರಗಳಿಗೂ ಮೀರದೆ ಇದ್ದರೆ ಹಾಗೂ ಗರ್ಭಪಾತ ಅಗತ್ಯವಾಗಿದ್ದರೆ ಗರ್ಭಾವಸ್ಥೆಯನ್ನು ಮುಂದುವರಿಸುವುದು ಗರ್ಭಿಣಿಯ ಜೀವಕ್ಕೆಅಪಾಯಕಾರಿ (ಮಾನಸಿಕ ಅಥವಾ ದೈಹಿಕ) ಆಗುವ ಸಾಧ್ಯತೆ ಅಥವಾ ಒಂದು ವೇಳೆ ಮಗು ಜನಿಸಿದರೆ ಅದು ದೈಹಿಕ ಅಥವಾ ಮಾನಸಿಕ ಅಸಹಜತೆಯನ್ನು ಹೊಂದಿ ಗಂಭೀರ ಅಂಗವೈಕಲ್ಯಕ್ಕೆ ಎಡೆಮಾಡಿಕೊಡುವ ಅಪಾಯವಿರುವ ಸಾಧ್ಯತೆ ಇರುವುದರಿಂದ ಕನಿಷ್ಠ ಇಬ್ಬರು ನೋಂದಾಯಿತ ವೈದ್ಯಕೀಯ ತಜ್ಞರ ಅಭಿಪ್ರಾಯಗಳನ್ನು ಪಡೆದುಕೊಳ್ಳಬೇಕು. ಇದು ಗರ್ಭಪಾತದ ಪ್ರಕ್ರಿಯೆಯನ್ನು ವಿಳಂಬಗೊಳಿಸುತ್ತದೆ.

ಲೋಕಸಭೆ: ಗರ್ಭಪಾತ ಗರಿಷ್ಠ ಅವಧಿ ಮಿತಿ ಮಸೂದೆ ಮಂಡನೆ

ಅದರೆ ಎಂಟಿಪಿ ಕಾಯ್ದೆ 1971 ಹಳೆಯದಾಗಿದ್ದು, ಗರ್ಭಾವಸ್ಥೆಯ ಹೆಚ್ಚಿನ ಅವಧಿ ಪೂರ್ಣಗೊಳಿಸಿದ ನಂತರವೂ ಭ್ರೂಣವನ್ನು ತೆಗೆದುಹಾಕಲು ಈಗ ಇರುವ ವೈದ್ಯಕೀಯ ತಂತ್ರಜ್ಞಾನಗಳನ್ನು ಪರಿಗಣಿಸಿಲ್ಲ.

ಪ್ರಸ್ತಾಪಿತ ಮಸೂದೆಯ ಅಂಶಗಳು

ಪ್ರಸ್ತಾಪಿತ ಮಸೂದೆಯ ಅಂಶಗಳು

  • 20 ವಾರಗಳವರೆಗಿನ ಗರ್ಭವನ್ನು ತೆಗೆದುಹಾಕಲು ಒಬ್ಬ ನೋಂದಾಯಿತ ವೈದ್ಯಕೀಯ ತಜ್ಞರ ಅಭಿಪ್ರಾಯ ತೆಗೆದುಕೊಂಡರೆ ಸಾಕು. 20-24 ವಾರಗಳ ಅವಧಿಯ ಗರ್ಭ ತೆಗೆಸಲು ಇಬ್ಬರು ನೋಂದಾಯಿತ ವೈದ್ಯಕೀಯ ಪರಿಣತರ ಅಭಿಪ್ರಾಯ ಬೇಕು.
  • ಗರ್ಭಪಾತದ ಗರಿಷ್ಠ ಅವಧಿಯನ್ನು 20-24 ವಾರಗಳಿಗೆ ವಿಸ್ತರಿಸಿರುವುದರಿಂದ ಅತ್ಯಾಚಾರ ಸಂತ್ರಸ್ತರು, ವೇಶ್ಯಾವಾಟಿಕೆಯ ಸಂತ್ರಸ್ತರು ಮತ್ತು ಅಂಗವಿಕಲ ಮಹಿಳೆಯರು, ಅಪ್ರಾಪ್ತ ವಯಸ್ಸಿನವರು ಮುಂತಾದ ಸಂಕಷ್ಟಕ್ಕೆ ಒಳಗಾದ ವಿಶೇಷ ವರ್ಗದ ಮಹಿಳೆಯರಿಗೆ ಅನುಕೂಲವಾಗಲಿದೆ.
  • ಗರ್ಭಾವಸ್ಥೆಯ ಗರಿಷ್ಠ ಅವಧಿಯ ಮಿತಿಯು ವೈದ್ಯಕೀಯ ಮಂಡಳಿ ಗುರುತಿಸಿದ ಭ್ರೂಣದ ಅಸಹಜ ಬೆಳವಣಿಗೆ ಪ್ರಕರಣಗಳಿಗೆ ಅನ್ವಯವಾಗುವುದಿಲ್ಲ. ವೈದ್ಯಕೀಯ ಮಂಡಳಿಯ ಕಾರ್ಯಚಟುವಟಿಕೆ, ಸಂರಚನೆ ಮುಂತಾದ ವಿವರಗಳನ್ನು ಕಾಯ್ದೆಯಡಿಯ ನಿಯಮಗಳಲ್ಲಿ ವಿವರಿಸಲಾಗಿದೆ.
  • ಗರ್ಭಪಾತಕ್ಕೆ ಒಳಗಾಗುವ ಮಹಿಳೆಯ ಹೆಸರು ಹಾಗೂ ಇತರೆ ಯಾವುದೇ ವಿವರಗಳನ್ನು ಅಗತ್ಯ ಬಿದ್ದ ಸಂದರ್ಭಗಳಲ್ಲಿ ಯಾವುದೇ ಕಾನೂನು ಸಂಸ್ಥೆಯ ಅಧಿಕೃತ ವ್ಯಕ್ತಿಗೆ ನೀಡುವುದರ ಹೊರತಾಗಿ ಬಹಿರಂಗಪಡಿಸುವಂತಿಲ್ಲ.
  • ಮೂಲ ಕಾನೂನಿನ ಪ್ರಕಾರ ಅಪ್ರಾಪ್ತ ವಯಸ್ಸಿನ ಮಹಿಳೆಯು ತನ್ನ ಗರ್ಭ ತೆಗೆದುಹಾಕಲು ಬಯಸಿದ್ದರೆ ಅದಕ್ಕೆ ಪೋಷಕರ ಅನುಮತಿ ಅಗತ್ಯವಾಗಿದೆ. ಈಗ ಪ್ರಸ್ತಾಪಿಸಿರುವ ತಿದ್ದುಪಡಿಯು ಈ ನಿಯಮವನ್ನು ತೆಗೆದುಹಾಕಲಿದೆ.
  • 1971ರ ಕಾಯ್ದೆಯಲ್ಲಿನ ಅತ್ಯಂತ ಕಠಿಣ ನಿಯಮದಿಂದ ಅವಿವಾಹಿಯ ಮಹಿಳೆಯರಿಗೆ ಈ ಮಸೂದೆ ನೆಮ್ಮದಿ ನೀಡಲಿದೆ. ಗರ್ಭಪಾತವನ್ನು ಬಯಸಿರುವ ಒಂಟಿ ಮಹಿಳೆಯು ಬಸಿರು ತಡೆಯುವ ಕ್ರಮದ ವೈಫಲ್ಯವನ್ನು ಕಾರಣವಾಗಿ ನೀಡುವಂತಿಲ್ಲ ಎಂದು ಮೂಲ ಕಾಯ್ದೆ ಹೇಳಿದೆ.
ತಿದ್ದುಪಡಿಯ ಪ್ರಯೋಜನಗಳೇನು?

ತಿದ್ದುಪಡಿಯ ಪ್ರಯೋಜನಗಳೇನು?

  • ಮೂಲ ಕಾನೂನಿನ ನಿಯಮದಂತೆ ಅಪ್ರಾಪ್ತ ವಯಸ್ಸಿನ ಬಾಲಕಿಯು ತನ್ನ ಗರ್ಭ ತೆಗೆದುಹಾಕಲು ಬಯಸಿದಾಗ ಪೋಷಕರು ಲಿಖಿತ ಅನುಮತಿ ಬೇಕಿದೆ. ಇದನ್ನು ತಿದ್ದುಪಡಿ ಮಸೂದೆ ತೆಗೆದುಹಾಕಿದೆ. ಈ ವಿಸ್ತೃತ ನಿಯಮವು 20 ವಾರಗಳ ಬಳಿಕವೂ ಭ್ರೂಣದಲ್ಲಿ ಅಸಹಜತೆ ಕಂಡುಬಂದಾಗ ಗರ್ಭಪಾತ ಮಾಡಲು ಅವಕಾಶ ನೀಡಲಿದೆ.
  • ಈ ಕಾನೂನು ಅತ್ಯಾಚಾರ ಸಂತ್ರಸ್ತರು, ಕಾಯಿಲೆಯಿಂದ ಬಳಲುತ್ತಿರುವ ಅಥವಾ ಕಡಿಮೆ ವಯಸ್ಸಿನ ಮಹಿಳೆಯರು ತಮಗೆ ಬೇಡದ ಗರ್ಭವನ್ನು ಕಾನೂನು ಬದ್ಧವಾಗಿ ತೆಗೆದುಹಾಕಲು ಅವಕಾಶ ನೀಡಲಿದೆ.
ತಿದ್ದುಪಡಿ ಮಸೂದೆಯ ಅಪಾಯಗಳು

ತಿದ್ದುಪಡಿ ಮಸೂದೆಯ ಅಪಾಯಗಳು

  • 20 ವಾರಗಳಿಗಿಂತ ತಡವಾಗಿಯೂ ಗರ್ಭಪಾತಕ್ಕೆ ಅವಕಾಶ ನೀಡುವುದು ಭ್ರೂಣದ ಜೀವದ ಕುರಿತಾದ ಸಂಘರ್ಷಕ್ಕೆ ಕಾರಣವಾಗಲಿದೆ. ಏಕೆಂದರೆ ಈ ಅವಧಿಯಲ್ಲಿ ಭ್ರೂಣವು ಗರ್ಭದ ಆಚೆಗೂ ಬೆಳೆಯುವ ಸಾಮರ್ಥ್ಯವನ್ನು ಪಡೆದುಕೊಳ್ಳುತ್ತದೆ. ಇದು ಒಂದು ಜೀವವನ್ನು ತೆಗೆದುಹಾಕಿದಂತೆ ಆಗಲಿದೆ.
  • ಗಂಡು ಮಗುವಿಗೆ ಆದ್ಯತೆ ನೀಡಲು ಲಿಂಗ ಪರೀಕ್ಷೆ ನಡೆಸುವ ಕೇಂದ್ರಗಳಿಗೆ ಕಾನೂನು ಅಂಕುಶ ಹಾಕಿದೆ. ಅದರ ನಡುವೆಯೂ ಅಕ್ರಮವಾಗಿ ಈ ರೀತಿಯ ಚಟುವಟಿಕೆಗಳು ನಡೆಯುತ್ತಿವೆ. ಈಗ ಗರ್ಭಪಾತದ ಅವಧಿಯ ಕಾನೂನಾತ್ಮಕ ವಿಸ್ತರಣೆಯು ಲಿಂಗ ಪತ್ತೆ ಮಾಡಿ ಗರ್ಭಪಾತಕ್ಕೆ ಮುಂದಾಗುವ ಕೃತ್ಯಗಳಿಗೆ ಮತ್ತಷ್ಟು ಅವಕಾಶ ನೀಡಿದಂತೆ ಆಗುತ್ತದೆ.

English summary
What is the Medical Termination of Pregnancy (Amendment) Bill 2020, to amend Medical Termination of Pregnancy Act, 1971. Here is the details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X