ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲರಲ್ಲೂ ಭಯ ಆತಂಕ: ಮಕ್ಕಳ ಆಟ ಪಾಠದ ಮೇಲೆ ಕೊರೊನಾದ ಮಂತ್ರ ಮಾಟ

By ಶ್ರೀಲಕ್ಷ್ಮಿ ರಾಜ್
|
Google Oneindia Kannada News

ಮಕ್ಕಳು, ಗುರುಗಳ ಸಮ್ಮುಖದಲ್ಲಿ, ಸಹಪಾಠಿಗಳ ಸಹವಾಸದಲ್ಲಿ, ಶಾಲೆಯ ಶಿಸ್ತಿನ ಆವರಣದಲ್ಲಿ, ಕಲಿಯುತ್ತಾ, ನಗುತ್ತಾ, ಆಡುತ್ತಾ ಬೆಳೆಯಬೇಕು. ಇದು ಅವರ ಮಾನಸಿಕ, ದೈಹಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆಗೆ ಪೂರಕ ವಾಗಿರುತ್ತದೆ.

ಸಂದರ್ಭಾನುಸಾರವಾಗಿ ಇಂದು ಇದಕ್ಕೆ ತದ್ವಿರುದ್ಧವಾದ ವಾತಾವರಣದಲ್ಲಿ ಕಲಿಯಬೇಕಾದ ಅನಿವಾರ್ಯತೆ ಎದುರಾಗಿದೆ. 'ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ' ಎಂಬುದು ಬಹಳ ಸತ್ಯವಾದ ಮಾತು. ಆದರೆ ಇದಕ್ಕೆ ಒಂದು ಮಿತಿ ಇದೆ.

No ಆನ್ಲೈನ್ ಶಾಲೆ, No ಶುಲ್ಕ ಹೆಚ್ಚಳ, ಸುರೇಶ್ ಕುಮಾರ್No ಆನ್ಲೈನ್ ಶಾಲೆ, No ಶುಲ್ಕ ಹೆಚ್ಚಳ, ಸುರೇಶ್ ಕುಮಾರ್

ಮನೆಯಿಂದ ಕಂಪ್ಯೂಟರ್ ಅಥವಾ ಸ್ಮಾರ್ಟ್ ಫೋನುಗಳಿಂದ ಕಲಿಯುವಾಗ ಕೆಲವು ವಿಷಯಗಳನ್ನು ಗಮನಿಸಬೇಕಾಗುತ್ತದೆ. ಮುಖ್ಯವಾಗಿ, ಅವರ ಕಣ್ಣಿನ ಆರೋಗ್ಯ. ಒಂದೇ ಸಮನೆ ಹಲವು ಗಂಟೆಗಳ ಕಾಲ ಕಂಪ್ಯೂಟರ್ ಅಥವಾ ಸ್ಮಾರ್ಟ್ ಫೋನುಗಳ ಬೆಳಕಿನ ತೆರೆಯನ್ನು ನೋಡುವುದು ಎಷ್ಟು ಸರಿ?

ಪುಟ್ಟ ಮಕ್ಕಳಿಗೆ ಆನ್ ಲೈನ್ ಕ್ಲಾಸ್; ಸುತಾರಾಂ ಒಪ್ಪಲ್ಲ ಎಂದ ಶಿಕ್ಷಣ ಸಚಿವಪುಟ್ಟ ಮಕ್ಕಳಿಗೆ ಆನ್ ಲೈನ್ ಕ್ಲಾಸ್; ಸುತಾರಾಂ ಒಪ್ಪಲ್ಲ ಎಂದ ಶಿಕ್ಷಣ ಸಚಿವ

ಈ ಬೆಳಕಿನ ತೆರೆಯಿಂದ ಹೊರಹೊಮ್ಮುವ ಕಿರಣಗಳಿಂದ ಅವರ ಕಣ್ಣು ಹಾಗೂ ಮೆದುಳಿನ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮವೇನು? ಪಕ್ಕದಲ್ಲಿ ಗೆಳೆಯ ಗೆಳತಿಯರಿಲ್ಲದೆ, ಎದುರಿಗೆ ಅಧ್ಯಾಪಕರಿಲ್ಲದೆ, ತಾವೊಬ್ಬರೇ ಮನೆಯಲ್ಲಿ ಕುಳಿತು ಕಲಿಯುವಾಗ ಮಗುವಿಗೆ ಏಕಾಂಗಿತನ ಕಾಡದೇ?

ಆಚಾರ್ಯಾತ್ ಪಾದಮಾದತ್ತೆ, ಪಾದಂ ಸಹ ಬ್ರಹ್ಮಚಾರಿಭ್ಯಃ

ಆಚಾರ್ಯಾತ್ ಪಾದಮಾದತ್ತೆ, ಪಾದಂ ಸಹ ಬ್ರಹ್ಮಚಾರಿಭ್ಯಃ

ಸುಭಾಷಿತ: "ಆಚಾರ್ಯಾತ್ ಪಾದಮಾದತ್ತೆ, ಪಾದಂ ಸಹ ಬ್ರಹ್ಮಚಾರಿಭ್ಯಃ ಪಾದಂ ಸ್ವಮೇಧಯಾ, ಪಾದಂ ಕಾಲಕ್ರಮೇಣಚ." ಇದರರ್ಥ- ಕಲಿಕೆಯ ಕಾಲುಭಾಗ ಗುರುವಿನಿಂದ, ಕಾಲುಭಾಗ ಸಹಪಾಠಿಯಿಂದ, ಕಾಲುಭಾಗ ಸ್ವಬುದ್ಧಿಯಿಂದ, ಉಳಿದ ಕಾಲುಭಾಗ ಕಾಲಕ್ರಮೇಣ.
ಇದಲ್ಲವೇ ಕಲಿಕೆಯ ಕ್ರಮ?

ಎಲ್ಲಾ ಮಕ್ಕಳ ಬುದ್ಧಿಶಕ್ತಿ, ಗ್ರಹಣ ಶಕ್ತಿ, ಸ್ವಭಾವ ಒಂದೇ ರೀತಿ ಇರುವುದಿಲ್ಲ

ಎಲ್ಲಾ ಮಕ್ಕಳ ಬುದ್ಧಿಶಕ್ತಿ, ಗ್ರಹಣ ಶಕ್ತಿ, ಸ್ವಭಾವ ಒಂದೇ ರೀತಿ ಇರುವುದಿಲ್ಲ

ಎಲ್ಲಾ ಮಕ್ಕಳ ಬುದ್ಧಿಶಕ್ತಿ, ಗ್ರಹಣ ಶಕ್ತಿ, ಸ್ವಭಾವ ಒಂದೇ ರೀತಿ ಇರುವುದಿಲ್ಲ. ಕೆಲವರಿಗೆ ಯಾವುದೇ, ಯಾರದೇ, ನಿಯಂತ್ರಣವಿಲ್ಲದೇ ತಮ್ಮ ಜವಾಬ್ದಾರಿ ಅರಿತು ಕಲಿಯುವ ಶಕ್ತಿ ಇರುತ್ತದೆ. ಆದರೆ ಅಧ್ಯಾಪಕರ ನಿರಂತರ ಕಣ್ಗಾವಲು, ನಿಯಂತ್ರಣ, ಅಥವಾ ಒತ್ತಡಗಳಿಲ್ಲದಿದ್ದರೆ ಕಲಿಯದ, ಪಾಠ - ಪ್ರವಚನಗಳು ಅರ್ಥವಾಗದ ಮಕ್ಕಳೂ ಇರುತ್ತಾರೆ ಅಲ್ಲವೇ? ಅವರ ಗತಿಯೇನು?

ವಿದ್ಯಾರ್ಥಿಗಳ ಗೊಂದಲವೇ ಬೇರೆ

ವಿದ್ಯಾರ್ಥಿಗಳ ಗೊಂದಲವೇ ಬೇರೆ

ತಮಗೆ ದೊರೆತ ಈ ಸೌಲಭ್ಯ (?)ದ ಹಿನ್ನೆಲೆ ಅರಿಯದೇ, ಅವಕಾಶದ ದುರುಪಯೋಗ ಮಾಡಿಕೊಂಡರೆ ಅದಕ್ಕೆ ಹೊಣೆ ಯಾರು? ಇವಿಷ್ಟೂ ಈಗ ಒಂದನೇ ತರಗತಿಯಿಂದ - ಹತ್ತನೇ ತರಗತಿಯವರೆಗೆ ಓದುತ್ತಿರುವ ಮಕ್ಕಳ ಬಗೆಗಿನ ಚಿಂತೆಯಾದರೆ, ಈಗಾಗಲೇ ಹತ್ತನೇ ತರಗತಿ, ಪದವಿಪೂರ್ವ ಹಾಗೂ ಪದವಿ ಪಡೆಯುವ ಹಂತದಲ್ಲಿರುವ ವಿದ್ಯಾರ್ಥಿಗಳ ಗೊಂದಲವೇ ಬೇರೆ ಬಗೆಯದು.

ತಮ್ಮ ಮುಂದಿನ ವಿದ್ಯಾಭ್ಯಾಸದ ಬಗ್ಗೆ

ತಮ್ಮ ಮುಂದಿನ ವಿದ್ಯಾಭ್ಯಾಸದ ಬಗ್ಗೆ

ತಮ್ಮ ಮುಂದಿನ ವಿದ್ಯಾಭ್ಯಾಸದ ಬಗ್ಗೆ, ಅಥವಾ ಉದ್ಯೋಗಗಳ ಬಗ್ಗೆ ಹಲವಾರು ಕನಸುಗಳನ್ನು ಹೊತ್ತು ಮುಂದೆ ಸಾಗಲು ಸಿದ್ಧರಾಗಿ ನಿಂತ ವೇಳೆಯಲ್ಲಿ, ಯಾರೂ ಎಣಿಸದ ಈ ಪರಿಸ್ಥಿತಿ ಎದುರಾಗಿದೆ. ತಾವು ಹೇಗೆ ಮುಂದುವರೆಯಬೇಕು, ಏನು ಮಾಡಬೇಕು ಎಂಬುದರ ಕುರಿತು ಸ್ಪಷ್ಟ ಚಿತ್ರಣವಿಲ್ಲದೆ ಗೊಂದಲಕ್ಕೀಡಾಗಿದ್ದಾರೆ. ಹೊರ ಊರುಗಳಿಗೆ, ರಾಜ್ಯಗಳಿಗೆ, ದೇಶಗಳಿಗೆ ತಮ್ಮ ಮಕ್ಕಳನ್ನು ಕಳಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ.

ಕಣ್ಣಿಗೆ ಕಾಣಿಸದ ವೈರಾಣು

ಕಣ್ಣಿಗೆ ಕಾಣಿಸದ ವೈರಾಣು

ಕಣ್ಣಿಗೆ ಕಾಣಿಸದ ವೈರಾಣುವೊಂದು, ಮನುಕುಲದ ಅಂತ್ಯಕ್ಕೆ ಪಣ ತೊಟ್ಟು ನಿಂತುಬಿಟ್ಟಿದೆಯೇನೋ ಅನಿಸುತ್ತಿದೆ. ಎಲ್ಲರ ಆಸೆ - ಕನಸುಗಳ ಜೊತೆ ಕಣ್ಣಾಮುಚ್ಚಾಲೆ ಆಡುತ್ತಾ ಕಾಡುತ್ತಿದೆ. ಎಲ್ಲರಲ್ಲೂ ಭಯ ಆತಂಕಗಳು ಮನೆ ಮಾಡಿದೆ. ಜನಜೀವನ ಮತ್ತೆ ಮೊದಲಿನಂತೆ ಆಗುವುದೇ? ಮಕ್ಕಳು ಮತ್ತೆ ತಮ್ಮ ಜೊತೆಗಾರರೊಂದಿಗೆ ಕೈ ಕೈ ಹಿಡಿದು ಆಡುವರೇ? ತಮ್ಮ ಆಸೆ - ಕನಸುಗಳು ಫಲಿಸಿ ಯಶಸ್ಸಿನ ಮೆಟ್ಟಿಲೇರುವರೇ?

ಮಕ್ಕಳ ಆಟ ಪಾಠದ ಮೇಲೆ ಕೊರೊನಾದ ಮಂತ್ರ ಮಾಟ

ಮಕ್ಕಳ ಆಟ ಪಾಠದ ಮೇಲೆ ಕೊರೊನಾದ ಮಂತ್ರ ಮಾಟ

ಈ ಸಂದರ್ಭದಲ್ಲಿ ಸರ್ಕಾರ, ತಾಯಿ - ತಂದೆಯರು,ಅಧ್ಯಾಪಕ ವರ್ಗದವರು ಕಂಗೆಡದೇ, ಮಕ್ಕಳನ್ನು ಮುನ್ನಡೆಸಬೇಕಾಗಿದೆ. ಈ ಹೊಸ ಪರಿಸ್ಥಿತಿ ಯಲ್ಲಿ ಯಾವುದೇ ಸಿದ್ಧ ಸೂತ್ರಗಳ ಬಳಕೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಪ್ರಯತ್ನ ಮಾಡುತ್ತಾ , ಸೋಲೋ - ಗೆಲುವೋ ಕಂಡು ಕೊಳ್ಳುತ್ತಾ ಮುಂದೆ ಸಾಗಬೇಕಾದ ಅನಿವಾರ್ಯತೆ ಎದುರಾಗಿದೆ. ನಮ್ಮ ಜೀವನಪ್ರೀತಿ, ಸಹನೆ, ನಂಬಿಕೆಗಳೇ ದಾರಿದೀಪ.

English summary
Coronavirus: How This Is Effected To Students And Education System
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X