ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಷಾರ್: ನೀವು ಸೇವಿಸುವ ನೀರು, ಹಣ್ಣು, ಆಹಾರದಿಂದಲೇ ಹರಡುವುದು ಶಿಗೆಲ್ಲಾ ಸೋಂಕು!

|
Google Oneindia Kannada News

ತಿರುವನಂತಪುರಂ, ಮೇ 6: ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ಕೊಂಚ ತಗ್ಗಿತು ಎನ್ನುವಷ್ಟರಲ್ಲೇ ಕೇರಳದಲ್ಲಿ ಮತ್ತೊಂದು ವೈರಸ್ ಪತ್ತೆಯಾಗಿದೆ. ವಿಷಾಹಾರ ಸೇವನೆಯಿಂದಾಗಿ ಆಸ್ಪತ್ರೆಗೆ ದಾಖಲಾದ 40 ಜನರಲ್ಲಿ ಶಿಗೆಲ್ಲಾ ವೈರಸ್ ಪತ್ತೆಯಾಗಿದೆ. 16 ವರ್ಷದ ವ್ಯಕ್ತಿ ಸಾವಿಗೂ ಇದೇ ವೈರಸ್ ಕಾರಣ ಎಂದು ಹೇಳಲಾಗುತ್ತಿದೆ.

ಕಳೆದ ವಾರ ಕಾಸರಗೋಡಿನ ಚೆರುವತ್ತೂರಿನಲ್ಲಿ ಚಿಕನ್ ಶಾವರ್ಮಾ ಸೇವಿಸಿದ ನಂತರ ಆಸ್ಪತ್ರೆಗೆ ದಾಖಲಾಗಿದ್ದ ಜನರ ರಕ್ತ ಮತ್ತು ಮಲದಲ್ಲಿ ಶಿಗೆಲ್ಲಾ ಬ್ಯಾಕ್ಟೀರಿಯಾದ ಪತ್ತೆ ಆಗಿರುವುದು ದೃಢಪಟ್ಟಿದೆ. ವೈದ್ಯರ ಪ್ರಕಾರ ಶಿಗೆಲ್ಲಾ ಸೋಂಕು ಸಾಮಾನ್ಯ ವಿಷಾಹಾರಕ್ಕಿಂತ ಹೆಚ್ಚು ಗಂಭೀರ ಆರೋಗ್ಯ ಸಮಸ್ಯೆಯನ್ನು ಸೃಷ್ಟಿಸುತ್ತದೆ.

ಕೇರಳ: 6 ಮಂದಿಗೆ ಶಿಗೆಲ್ಲಾ ಸೋಂಕು, ಒಂದು ಬಲಿಕೇರಳ: 6 ಮಂದಿಗೆ ಶಿಗೆಲ್ಲಾ ಸೋಂಕು, ಒಂದು ಬಲಿ

ಅತಿಸಾರ ಮತ್ತು ಹೊಟ್ಟೆ ನೋವು, ಜ್ವರ, ವಾಂತಿಯು ಈ ಸೋಂಕಿನ ಪ್ರಾಥಮಿಕ ಲಕ್ಷಣವಾಗಿದೆ. ಇದು ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಅಥವಾ ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವವರಿಗೆ ಹೆಚ್ಚು ಮಾರಕವಾಗಬಹುದು ಎಂದು ವೈದ್ಯಕೀಯ ಸಂಶೋಧನೆಗಳು ಹೇಳುತ್ತವೆ.

ಹಾಗಿದ್ದರೆ ಈ ಶಿಗೆಲ್ಲಾ ಬ್ಯಾಕ್ಟೀರಿಯಾದ ಮಾಹಿತಿ. ಶಿಗೆಲ್ಲಾ ಬ್ಯಾಕ್ಟೀರಿಯಾ ಹರಡುವಿಕೆ ಹೇಗೆ?, ಶಿಗೆಲ್ಲಾ ರೋಗಕ್ಕೆ ಮದ್ದು ಇಲ್ಲವೇ ಎಂಬುದರ ಕುರಿತು ಒಂದು ವಿವರಣಾತ್ಮಕ ವರದಿ ಇಲ್ಲಿದೆ ನೋಡಿ.

ಏನಿದು ಶಿಗೆಲ್ಲಾ ವೈರಸ್?

ಏನಿದು ಶಿಗೆಲ್ಲಾ ವೈರಸ್?

ಪ್ರಪಂಚದಾದ್ಯಂತ ಶಿಗೆಲ್ಲಾ ರೋಗಾಣು ಅತಿಸಾರದ ಪ್ರಮುಖ ಬ್ಯಾಕ್ಟೀರಿಯಾದ ಕಾರಣಗಳಲ್ಲಿ ಒಂದಾಗಿದೆ. ಇದು ಎಂಟ್ರೊಬ್ಯಾಕ್ಟರ್ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ ಕರುಳಿನ ಸೋಂಕು. ಆದಾಗ್ಯೂ, ಎಂಟ್ರೊಬ್ಯಾಕ್ಟರ್ ಕುಟುಂಬದಲ್ಲಿನ ಎಲ್ಲಾ ಬ್ಯಾಕ್ಟೀರಿಯಾಗಳು ಮಾನವರಲ್ಲಿ ರೋಗಗಳನ್ನು ಉಂಟು ಮಾಡುವುದಿಲ್ಲ. ಶಿಗೆಲ್ಲಾವು ಮುಖ್ಯವಾಗಿ ಕರುಳಿನ ಮೇಲೆ ಪರಿಣಾಮ ಬೀರುತ್ತದೆ. ಅತಿಸಾರ, ಹೊಟ್ಟೆ ನೋವು ಮತ್ತು ಜ್ವರಕ್ಕೆ ಈ ವೈರಸ್ ಕಾರಣವಾಗಿರುತ್ತದೆ. ಇದು ಆಹಾರ ಮತ್ತು ನೀರಿನಿಂದ ಹರಡುವ ಸೋಂಕಾಗಿರುತ್ತದೆ. ತೊಳೆಯದ ಹಣ್ಣುಗಳು ಅಥವಾ ತರಕಾರಿಗಳು ಸೇರಿದಂತೆ ಕಲುಷಿತ ಆಹಾರವನ್ನು ಸೇವಿಸಿದಾಗ ಈ ಶಿಗೆಲ್ಲಾ ಸೋಂಕು ಅಂಟಿಕೊಳ್ಳುವ ಅಪಾಯ ಹೆಚ್ಚಾಗಿರುತ್ತದೆ.

ಕಡಿಮೆ ಸಂಖ್ಯೆಯ ಬ್ಯಾಕ್ಟೀರಿಯಾಗಳಿಂದಲೇ ಜನರನ್ನು ಅನಾರೋಗ್ಯಕ್ಕೆ ತುತ್ತು ಮಾಡುವುದರಿಂದ ಈ ಸೋಂಕು ಸುಲಭವಾಗಿ ಹರಡುತ್ತದೆ ಎಂದು ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಹೇಳಿದೆ. ರೋಗಿಯ ಮಲವಿಸರ್ಜನೆಯೊಂದಿಗೆ ನೇರ ಅಥವಾ ಪರೋಕ್ಷ ಸಂಪರ್ಕದಿಂದ ರೋಗವು ಸುಲಭವಾಗಿ ಹರಡುತ್ತದೆ. ನೀವು ಈಜಿದರೆ ಅಥವಾ ಕಲುಷಿತ ನೀರಿನಲ್ಲಿ ಸ್ನಾನ ಮಾಡಿದರೆ ನೀವು ಸೋಂಕಿಗೆ ಒಳಗಾಗುವ ಅಪಾಯವಿರುತ್ತದೆ.

ಸಾಮಾನ್ಯವಾಗಿ ಶಿಗೆಲ್ಲಾ ರೋಗ ಹರಡುವುದು ಹೇಗೆ?

ಸಾಮಾನ್ಯವಾಗಿ ಶಿಗೆಲ್ಲಾ ರೋಗ ಹರಡುವುದು ಹೇಗೆ?

ಗರ್ಭಾವಸ್ಥೆಯ ಸಂದರ್ಭದಲ್ಲಿ ಈ ಸೋಂಕು ಸುಲಭವಾಗಿ ಹರಡುತ್ತದೆ. ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಮತ್ತು ದುರ್ಬಲಗೊಂಡ ರೋಗನಿರೋಧಕ ಶಕ್ತಿ ಹೊಂದಿರುವವರಲ್ಲಿ ಶಿಗೆಲ್ಲಾ ರೋಗಾಣು ಹೆಚ್ಚಾಗಿ ಹರಡುತ್ತದೆ. ಸಿಡಿಸಿ ಪ್ರಕಾರ, ನಾಲ್ಕು ವಿಧದ ಶಿಗೆಲ್ಲಾ ಬ್ಯಾಕ್ಟೀರಿಯಾಗಳು ಮನುಷ್ಯರ ಮೇಲೆ ಪರಿಣಾಮ ಬೀರುತ್ತವೆ. ಅವುಗಳೆಂದರೆ ಶಿಗೆಲ್ಲ ಸೊನ್ನಿಯೆ, ಶಿಗೆಲ್ಲ ಫ್ಲೆಕ್ಸ್ನೆರಿ, ಶಿಗೆಲ್ಲ ಬಾಯ್ಡಿ ಮತ್ತು ಶಿಗೆಲ್ಲ ಡಿಸೆಂಟೆರಿಯಾ. ನಾಲ್ಕನೆಯ ಶಿಗೆಲ್ಲ ಡಿಸೆಂಟೆರಿಯಾ ವಿಧವು ಅತ್ಯಂತ ತೀವ್ರವಾದ ರೋಗವನ್ನು ಉಂಟು ಮಾಡುತ್ತದೆ.

"ನಮ್ಮ ಆಸ್ಪತ್ರೆಯಲ್ಲಿನ ಅತಿಸಾರದ 100 ಪ್ರಕರಣಗಳಲ್ಲಿ ಒಂದು ಶಿಗೆಲ್ಲೋಸಿಸ್ ಆಗಿರಬಹುದು" ಎಂದು ನವದೆಹಲಿಯ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯ ಆಂತರಿಕ ಔಷಧದ ಹಿರಿಯ ಸಲಹೆಗಾರ ಡಾ ಸುರಂಜಿತ್ ಚಟರ್ಜಿ ಹೇಳಿದ್ದಾರೆ.

ಶಿಗೆಲ್ಲಾ ಬಗ್ಗೆ ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?

ಶಿಗೆಲ್ಲಾ ಬಗ್ಗೆ ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?

ತೀವ್ರ ಅತಿಸಾರದಿಂದ ಬಳಲುತ್ತಿರುವ ವ್ಯಕ್ತಿಯು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಅಂದರೆ ಒಂದು ದಿನದಲ್ಲಿ 20 ಅಥವಾ ಅದಕ್ಕಿಂತ ಹೆಚ್ಚು ಬಾರಿ ಹೊಟ್ಟೆನೋವು ಕಾಣಿಸಿಕೊಂಡರೆ, ಅದೇ ದಿನ ವೈದ್ಯರನ್ನು ಭೇಟಿ ಮಾಡಬೇಕು. ಸೌಮ್ಯವಾದ ಅತಿಸಾರ ಹೊಂದಿರುವ ರೋಗಿಯು ವೈದ್ಯರ ಬಳಿಗೆ ಹೋಗುವ ಮೊದಲು ಮೂರರಿಂದ ನಾಲ್ಕು ದಿನಗಳವರೆಗೆ ಕಾಯಬಹುದು.

ನೀವು ಅಥವಾ ನಿಮ್ಮ ಮಗುವಿಗೆ ರಕ್ತಸಿಕ್ತ ಅತಿಸಾರ ಅಥವಾ ಅತಿಸಾರದಿಂದ ತೂಕ ಕಳೆದುಕೊಳ್ಳುವುದು ಮತ್ತು ನಿರ್ಜಲೀಕರಣವನ್ನು ಉಂಟುಮಾಡುವಷ್ಟು ತೀವ್ರವಾಗಿದ್ದರೆ, ನೀವು ನಿಮ್ಮ ವೈದ್ಯರನ್ನು ಸಂಪರ್ಕಿಸಬೇಕು. ಶಿಗೆಲ್ಲಾ ಸೋಂಕಿತ ವ್ಯಕ್ತಿಯು 101 ಡಿಗ್ರಿ ಎಫ್ (38 ಡಿಗ್ರಿ ಸೆಲ್ಸಿಯಸ್) ಅಥವಾ ಅದಕ್ಕಿಂತ ಹೆಚ್ಚಿನ ಜ್ವರವನ್ನು ಹೊಂದಿದ್ದರೆ ತಕ್ಷಣ ಆಸ್ಪತ್ರೆಗೆ ಹೋಗಬೇಕು.

ಶಿಗೆಲ್ಲಾ ಸೋಂಕಿನ ಕುರಿತು ಏನೆಲ್ಲಾ ಮುನ್ನೆಚ್ಚರಿಕೆ ವಹಿಸಬೇಕು?

ಶಿಗೆಲ್ಲಾ ಸೋಂಕಿನ ಕುರಿತು ಏನೆಲ್ಲಾ ಮುನ್ನೆಚ್ಚರಿಕೆ ವಹಿಸಬೇಕು?

ಯಾವುದೇ ಆಹಾರ ಮತ್ತು ನೀರಿನಿಂದ ಶಿಗೆಲ್ಲಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು. ಊಟದ ಮೊದಲು ಮತ್ತು ನಂತರ ನಿಮ್ಮ ಕೈಗಳನ್ನು ಚೆನ್ನಾಗಿ ತೊಳೆಯಬೇಕು. ನೀವು ಕುಡಿಯುವ ನೀರು ಶುದ್ಧವಾಗಿದೆಯೇ ಹಣ್ಣು ಮತ್ತು ತರಕಾರಿಗಳು ತಾಜಾವಾಗಿವೆ ಎಂದು ಖಚಿತಪಡಿಸಿಕೊಳ್ಳಬೇಕು. ಹಾಲು, ಕೋಳಿ ಮತ್ತು ಮೀನುಗಳಂತಹ ಉತ್ಪನ್ನಗಳನ್ನು ಸರಿಯಾದ ತಾಪಮಾನದಲ್ಲಿ ಇಡಬೇಕು.ಚೆನ್ನಾಗಿ ಬೇಯಿಸಿ ಸೇವನೆ ಮಾಡಬೇಕು.

ರೋಗಿಯು ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೊಂದಿರದ ಹೊರತು ಸೋಂಕು ಸಾಮಾನ್ಯವಾಗಿ ಕೊಲ್ಲುವುದಿಲ್ಲ. ಬ್ಯಾಕ್ಟೀರಿಯಾಗಳು ಔಷಧಿಗಳಿಗೆ ನಿರೋಧಕವಾಗಿದ್ದರೆ ಅದು ಮಾರಕವಾಗಬಹುದು. "ಇದು ಬಹಳ ಚಿಕಿತ್ಸೆ ನೀಡಬಹುದಾದ ಸ್ಥಿತಿಯಾಗಿದೆ; ರೋಗಿಯು ಸಮಯಕ್ಕೆ ಸರಿಯಾಗಿ ಆಸ್ಪತ್ರೆಯನ್ನು ತಲುಪಿದರೆ IV ಆಂಟಿಬಯೋಟಿಕ್‌ಗಳನ್ನು ಬಳಸಿಕೊಂಡು ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದು" ಎಂದು ಡಾ ಚಟರ್ಜಿ ಉಲ್ಲೇಖಿಸಿದ್ದಾರೆ.

English summary
What is Shigella bacteria that killed Kerala girl after eating shawarma. Details in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X