• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಿಂದೆಂದೂ ಬಳಸದ ಆರ್ ಬಿಐ ಕಾಯ್ದೆಯ ಸೆಕ್ಷನ್ 7 ಈಗಿನ ಸರಕಾರಕ್ಕೆ ಏಕೆ?

|

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಕೇಂದ್ರ ಸರಕಾರದ ಮಧ್ಯೆ ನಡೆಯುತ್ತಿರುವ ಕದನದಲ್ಲಿ ಆರ್ ಬಿಐ ಕಾಯ್ದೆಯ ಸೆಕ್ಷನ್ 7ರ ಬಗ್ಗೆ ಹೆಚ್ಚು ಗಮನ ಕೇಂದ್ರೀಕೃತವಾಗಿದೆ. ಆರ್ ಬಿಐ ಕಾಯ್ದೆಯಲ್ಲಿರುವ ಈ ಸೆಕ್ಷನ್ ಕೇಂದ್ರ ಬ್ಯಾಂಕ್ ಗೆ ನಿರ್ದೇಶನ ಮಾಡುವ ಅಧಿಕಾರವನ್ನು ಸರಕಾರಕ್ಕೆ ನೀಡುತ್ತದೆ.

1991ರ ಆರ್ಥಿಕ ಸಮಸ್ಯೆ ಕಾಲದಲ್ಲಿ, 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ವೇಳೆಯಲ್ಲೂ ಅಂದರೆ ಈ ಹಿಂದೆಂದೂ ಬಳಕೆ ಆಗದ ಸೆಕ್ಷನ್ 7 ಈಗ ಸರಕಾರ ಬಳಸಲು ಮುಂದಾಗಿದೆ. ಅದರಡಿ ದೊರೆಯುವ ಅಧಿಕಾರ ಚಲಾಯಿಸುತ್ತಿದೆ. ಇತ್ತೀಚಿನ ವಾರಗಳಲ್ಲಿ ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಗೆ ಕೇಂದ್ರ ಸರಕಾರ ಹಲವು ಪತ್ರಗಳನ್ನು ಕಳುಹಿಸಿದೆ.

ವಿವಾದ ತಾರಕಕ್ಕೇರುವ ಮೊದಲೇ ಊರ್ಜಿತ್ ರಾಜೀನಾಮೆ ನೀಡ್ತಾರಾ?

ಬ್ಯಾಂಕಿಂಗೇತರ ಕಂಪನಿಗಳಿಗೆ ನಗದು, ದುರ್ಬಲ ಬ್ಯಾಂಕ್ ಗಳಿಗೆ ಬಂಡವಾಳದ ಅಗತ್ಯ ಹಾಗೂ ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ಯಮ (ಎಂಎಸ್ ಎಂಇ) ಗಳಿಗೆ ಸಾಲ ಹೀಗೆ ನಾನಾ ವಿಷಯಗಳಿಗೆ ಸಂಬಂಧಿಸಿದಂತೆ ಬರೆದ ಪತ್ರಗಳವು. ಈ ರೀತಿ ಕೇಂದ್ರ ಸರಕಾರ ಪತ್ರಗಳನ್ನು ಬರೆದು, ನಿರ್ದೇಶನ ಮಾಡಲು ಶುರುವಾದ ನಂತರ ಆರ್ ಬಿಐನ ಡೆಪ್ಯೂಟಿ ಗವರ್ನರ್ ವಿರಳ್ ಆಚಾರ್ಯ ನೀಡಿದ ಹೇಳಿಕೆ ಭಾರೀ ಚರ್ಚೆಗೆ ಕಾರಣ ಆಯಿತು.

ಸದ್ಯಕ್ಕಂತೂ ಆರ್ ಬಿಐ ಕಾಯ್ದೆಯ ಸೆಕ್ಷನ್ 7ರ ಬಗ್ಗೆ ಎಲ್ಲೆಡೆ ಮಾತುಕತೆ. ಅದರ ಬಗ್ಗೆ ತಿಳಿದುಕೊಳ್ಳೋಣ.

ಸೆಕ್ಷನ್ 7 ಅಂದರೇನು?

ಸೆಕ್ಷನ್ 7 ಅಂದರೇನು?

ಆರ್ ಬಿಐ ಒಂದು ಸಂಸ್ಥೆಯಾಗಿ ಸರಕಾರದಿಂದ ಸ್ವತಂತ್ರವಾದದ್ದು. ಅದರ ನಿರ್ಧಾರಗಳನ್ನು ತಾನೇ ತೆಗೆದುಕೊಳ್ಳಬೇಕು. ಆದರೆ ಕೆಲ ಸನ್ನಿವೇಶಗಳಲ್ಲಿ ಅದು ಸರಕಾರದ ಮಾತನ್ನು ಕೇಳಿಸಿಕೊಳ್ಳಬೇಕು. ಆರ್ ಬಿಐ ಕಾಯ್ದೆಯ ಸೆಕ್ಷನ್ 7ರಲ್ಲಿ ಕೆಲವು ವಿಚಾರ ತಿಳಿಸಲಾಗಿದೆ. ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಕಾಲದಿಂದ ಕಾಲಕ್ಕೆ ಸರಕಾರವು ಇಂಥ ಸೂಚನೆ ನೀಡಬಹುದು. ಅದು ಕೂಡ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಜತೆಗೆ ಚರ್ಚೆ ನಡೆಸಿದ ನಂತರ. ಇಂಥ ನಿರ್ದೇಶನಗಳು, ಸಾಮಾನ್ಯ ಮೇಲುಸ್ತುವಾರಿ ಹಾಗೂ ಬ್ಯಾಂಕ್ ಸಂಬಂಧಿಸಿದ ವ್ಯವಹಾರ ಹಾಗೂ ವಿಚಾರಗಖನ್ನು ಕೇಂದ್ರ ನಿರ್ದೇಶಕರ ಮಂಡಳಿಗೆ ವಹಿಸಬಹುದು. ಆ ಮಂಡಳಿಯ ನಿರ್ದೇಶಕರು ತಮ್ಮ ಎಲ್ಲ ಅಧಿಕಾರ ಬಳಸಬಹುದು. ಆ ನಂತರ ಬ್ಯಾಂಕ್ ಕಾರ್ಯಗಳನ್ನು ನಿರ್ವಹಿಸಬಹುದು.

ನಿಯಮಾವಳಿ ಆರ್ ಬಿಐನಿಂದ ಪಾಲಿಸಬೇಕು

ನಿಯಮಾವಳಿ ಆರ್ ಬಿಐನಿಂದ ಪಾಲಿಸಬೇಕು

ಕೇಂದ್ರ ಮಂಡಳಿಯು ರೂಪಿಸುವ ನಿಯಮಾವಳಿಗಳನ್ನು ಪಾಲಿಸಲು ಗವರ್ನರ್ ಅಥವಾ ಅವರ ಅನುಪಸ್ಥಿತಿಯಲ್ಲಿ ಡೆಪ್ಯೂಟಿ ಗವರ್ನರ್ ರನ್ನು ನಾಮನಿರ್ದೇಶನ ಮಾಡಬಹುದು. ಬ್ಯಾಂಕ್ ನಿಂದ ಆಗಬೇಕಾದ ವ್ಯವಹಾರದ ಸಾಮಾನ್ಯ ಮೇಲುಸ್ತುವಾರಿ ಹಾಗೂ ನಿರ್ದೇಶನವನ್ನು ಅನ್ವಯಿಸುವ ಅಧಿಕಾರ ಅವರಿಗೆ ಇರುತ್ತದೆ. ಸಾರ್ವಜನಿಕ ಹಿತದೃಷ್ಟಿಯಿಂದ ಕೇಂದ್ರ ಬ್ಯಾಂಕ್ ಗೆ ನಿರ್ದೇಶನಗಳನ್ನು ನೀಡುವ ಅಧಿಕಾರ ಈ ಸೆಕ್ಷನ್ ಅಡಿಯಲ್ಲಿ ಸರಕಾರಕ್ಕೆ ಇದೆ. ಇಲ್ಲದಿದ್ದಲ್ಲಿ ಸರಕಾರದಿಂದ ಯಾವುದೇ ಆದೇಶವನ್ನು ರಿಸರ್ವ್ ಬ್ಯಾಂಕ್ ತೆಗೆದುಕೊಳ್ಳುವುದಿಲ್ಲ.

ಆರ್ಥಿಕತೆ ಬಗ್ಗೆ ಜೇಟ್ಲಿ ಅಧ್ಯಕ್ಷತೆಯ ಮಹತ್ವದ ಸಭೆಯಲ್ಲಿ ಕೇಳಿದ್ದೇನು?

ಸರಕಾರ ಹಾಗೂ ಆರ್ ಬಿಐ ಮಧ್ಯೆ ಭಿನ್ನಾಭಿಪ್ರಾಯ

ಸರಕಾರ ಹಾಗೂ ಆರ್ ಬಿಐ ಮಧ್ಯೆ ಭಿನ್ನಾಭಿಪ್ರಾಯ

ಕಳೆದ ಕೆಲವು ಸಮಯದಿಂದ ಕೆಲವು ವಿಚಾರದಲ್ಲಿ ಸರಕಾರ ಹಾಗೂ ಆರ್ ಬಿಐ ಮಧ್ಯೆ ಭಿನ್ನವಾದ ಅಭಿಪ್ರಾಯ ವ್ಯಕ್ತವಾಗುತ್ತಲೇ ಇದೆ. ಪ್ರಾಂಪ್ಟ್ ಕರೆಕ್ಟಿವ್ ಆಕ್ಷನ್ (ಪಿಸಿಎ) ಅಡಿಯಲ್ಲಿ ಬ್ಯಾಂಕ್ ಗಳು ಸಾಲ ನೀಡುವ ಬಗೆ ಸುಲಭ ಮಾಡಿದರೆ ಎಂಎಸ್ ಎಂಇಗಳ ಆರ್ಥಿಕ ಒತ್ತಡ ಕಡಿಮೆ ಮಾಡಬಹುದು ಅಂದುಕೊಂಡಿತ್ತು. ಹೀಗೆ ಮಾಡಿದರೆ ನಾವು ಹಿಂದಕ್ಕೆ ಹೋದಂತೆ ಆಗುತ್ತದೆ. ಬ್ಯಾಂಕ್ ಸ್ವಚ್ಛ ಮಾಡುವ ನಮ್ಮ ಪ್ರಯತ್ನಕ್ಕೆ ಹಿನ್ನಡೆ ಆಗುತ್ತದೆ ಎಂಬ ವಾದ ಮುಂದಿಟ್ಟಿತು ಆರ್ ಬಿಐ.

ಯಾವಾಗ ಐಎಲ್ ಅಂಡ್ ಎಫ್ ಎಸ್ ಸೆಪ್ಟೆಂಬರ್ ತಿಂಗಳಲ್ಲಿ ಸಾಲ ಮರುಪಾವತಿ ಮಾಡಲಾಗದ ಸ್ಥಿತಿ ತಲುಪಿತೋ ಆಗ ನಾನ್ ಬ್ಯಾಂಕಿಂಗ್ ಫೈನಾನ್ಸ್ ಕಂಪನಿಗಳು ಹೆಚ್ಚು ನಗದು ಬೇಕು ಎಂಬ ಕಾರಣಕ್ಕೆ ಕೇಂದ್ರ ಸರಕಾರದ ಬಳಿ ಲಾಬಿ ಆರಂಭಿಸಿದವು. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಆಗದ ಕಾರಣಕ್ಕೆ ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದ ಆರ್ ಬಿಐ, ಒತ್ತಡಕ್ಕೆ ಮಣಿಯಲಿಲ್ಲ. ಇನ್ನು ಎನ್ ಪಿಎ (ನಾನ್ ಪರ್ ಫಾರ್ಮಿಂಗ್ ಅಸೆಟ್ಸ್) ವರ್ಗೀಕರಣವೂ ಸೇರಿದಂತೆ ಹಲವು ವಿಷಯಗಳಲ್ಲಿ ಕೇಂದ್ರ ಸರಕಾರ ಹಾಗೂ ಆರ್ ಬಿಐ ಮಧ್ಯೆ ದೊಡ್ಡ ಮಟ್ಟದ ಭಿನ್ನಾಭಿಪ್ರಾಯ ತಲೆ ಎತ್ತಿತು.

ಆರ್ಬಿಐ - ಸರಕಾರದ ನಡುವೆ ಭುಗಿಲೆದ್ದ ಬಿಕ್ಕಟ್ಟು : ಮುಂದೆ ಏನಾಗಲಿದೆ?

ಸೆಕ್ಷನ್ 7 ಈಗ ವಿಪರೀತದ ತೀರ್ಮಾನ ಅಂತೇಕೆ ಅನಿಸುತ್ತಿದೆ?

ಸೆಕ್ಷನ್ 7 ಈಗ ವಿಪರೀತದ ತೀರ್ಮಾನ ಅಂತೇಕೆ ಅನಿಸುತ್ತಿದೆ?

ಈ ಸೆಕ್ಷನ್ ಅನ್ನು ಈ ವರೆಗೆ ಬಳಕೆ ಮಾಡಿಲ್ಲ. 1991ರ ಆರ್ಥಿಕ ಸಮಸ್ಯೆ ಕಾಲದಲ್ಲಿ, 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ವೇಳೆಯಲ್ಲೂ ಸರಕಾರ ಬಳಸಿಲ್ಲ. ಸೆಕ್ಷನ್ 7 ಹೇಗೆ ಬಳಕೆ ಆಗಬೇಕು ಎಂಬುದೇ ದೊಡ್ಡ ಪ್ರಶ್ನೆ. ಸರಕಾರದ ಉದ್ದೇಶ ಹಾಗೂ ಆರ್ ಬಿಐನ ಸ್ವಾಯತ್ತತೆ ಬಗ್ಗೆಯೇ ಪ್ರಶ್ನೆ ಮೂಡುತ್ತಿದೆ. ಕಳೆದ ವಾರ ಆರ್ ಬಿಐ ಡೆಪ್ಯೂಟಿ ಗವರ್ನರ್ ವಿರಳ್ ಆಚಾರ್ಯ ಮಾಡಿದ ಭಾಷಣ ಚರ್ಚೆ ಆಗಿದ್ದು ಅದೇ ಹಿನ್ನೆಲೆಯಲ್ಲಿ. ಕೇಂದ್ರ ಬ್ಯಾಂಕ್ ನ ಸ್ವಾಯತ್ತತೆ ಬಗ್ಗೆ ಅವರು ಗಮನ ಸೆಳೆದಿದ್ದರು. ಅದು ಸರಕಾರದ ಪಾಲಿಗೆ ಎಚ್ಚರಿಕೆಯಂತೆ ಕೇಳಿತ್ತು. ಆರ್ ಬಿಐ ಮೇಲಿರುವ ನಿಮ್ಮ ಕೈ ತೆಗೆಯಿರಿ ಎಂಬ ಧ್ವನಿ ಅದರಲ್ಲಿತ್ತು. ದೇಶದಲ್ಲಿ ಆರ್ಥಿಕ ಸ್ಥಿರತೆ ಕಾಯ್ದುಕೊಳ್ಳುವ ಹಿನ್ನೆಲೆಯಲ್ಲಿ ಆರ್ ಬಿಐನ ಸ್ವಾಯತ್ತತೆ ಹೇಗೆ ಕೆಲಸ ಮಾಡಿದೆ ಎಂದು ತುಂಬ ವಿಸ್ತೃತವಾಗಿ ಅವರು ವಿವರಿಸಿದ್ದರು. ಆ ಕಾರಣಕ್ಕೆ ಈಗ ಸೆಕ್ಷನ್ 7 ಅಧಿಕಾರದ ಬಳಕೆಯು ಸರಕಾರದ ವಿಪರೀತದ ನಿರ್ಧಾರ ಎಂದು ವಿವಿಧ ವಲಯಗಳಿಂದ ಕೇಳಿಬರುತ್ತಿದೆ.

'ಹಸ್ತಕ್ಷೇಪ ಮಾಡಿದರೆ ದೇಶದ ಆರ್ಥಿಕತೆಗೆ ಬೆಂಕಿ ಬಿದ್ದೀತು ಹುಷಾರ್'!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Section 7 of the RBI Act has come into spotlight amid the war between the Central government and the Reserve Bank of India (RBI). The provision in the RBI Act empowers the government to issue directions to the RBI.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more