ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಕ್ಕಳ ಕೈಲಿ ಯಾವಾಗಲೂ ಮೊಬೈಲ್: ಒಳ್ಳೆಯದೋ, ಕೆಟ್ಟದೋ.. ತಜ್ಞರ ಅಭಿಪ್ರಾಯ ಇಲ್ಲಿದೆ

|
Google Oneindia Kannada News

ಮಕ್ಕಳಿಗೆ ಉತ್ತಮ ಭವಿಷ್ಯ ಕಟ್ಟಿಕೊಡುವಲ್ಲಿ ಪೋಷಕರ ಪಾತ್ರ ಬಹಳ ಮುಖ್ಯವಾಗಿದೆ. ಮಕ್ಕಳನ್ನು ಹೇಗೆ ಬೆಳಸಬೇಕು? ಯಾವ ಮಾರ್ಗದರ್ಶನದಲ್ಲಿ ನಡೆಸಬೇಕು ಎನ್ನುವುದು ಪೋಷಕರಿಗೆ ಒಂದು ದೊಡ್ಡ ಸವಾಲಿನ ಕೆಲಸ. ಆದರೆ ಇಂದಿನ ಆಧುನಿಕ ಯುಗದಲ್ಲಿ ಮಕ್ಕಳಿಗೆ ಹೇಗೆ ಶಿಕ್ಷಣ ಕೊಡಿಸಬೇಕು? ಯಾವ ರೀತಿ ಶಿಕ್ಷಣ ನೀಡಬೇಕು ಎನ್ನುವುದು ದೊಡ್ಡ ತಲೆ ನೋವಾಗಿದೆ.

ಯಾಕೆಂದರೆ ಈಗಿನ ಮಕ್ಕಳು ಲ್ಯಾಪ್‌ಟಾಪ್, ಟ್ಯಾಬ್, ಮೊಬೈಲ್‌ಗಳಿಗೆ ಹೆಚ್ಚಾಗಿ ಹೊಂದಿಕೊಂಡುಬಿಟ್ಟಿದ್ದಾರೆ. ಶಾಲೆಯ ಕಲಿಕೆಗಿಂತ ಹೆಚ್ಚಾಗಿ ವಿದ್ಯುನ್ಮಾನ ಸಾಧನಗಳತ್ತ ಆಕರ್ಷಿತರಾಗುತ್ತಿದ್ದಾರೆ. ಊಟ ಮಾಡಲು ಮೊಬೈಲ್, ಆಟ ಆಡಲು ಟ್ಯಾಬ್, ಹೊಸ ವಿಚಾರಗಳನ್ನು ತಿಳಿಯಲು ಸಿಸ್ಟಮ್ ಹೀಗೆ ಹೆಚ್ಚು ಸಮಯವನ್ನು ವಿದ್ಯುನ್ಮಾನ ಸಾಧನಗಳಲ್ಲಿ ಕಳೆಯುತ್ತಿದ್ದಾರೆ. ಹೀಗೆ ಮಕ್ಕಳು ಆಧುನಿಕ ಉಪಕರಣಗಳಿಗೆ ಒಗ್ಗೂಡಿಕೊಂಡಿದ್ದಾರೆ. ಹೀಗಾಗಿ ಪೋಷಕರು ಮಕ್ಕಳಿಗೆ ಮೊಬೈಲ್, ಲ್ಯಾಪ್‌ಟಾಪ್, ಟ್ಯಾಪ್‌ ಉಪಕರಣಗಳನ್ನು ನೀಡಬೇಕಾ? ಬೇಡ್ವಾ? ಕೊಟ್ಟರೆ ಎಷ್ಟು ಸಮಯ ಕೊಡಬೇಕು ಎನ್ನುವ ಗೊಂದಲದಲ್ಲಿದ್ದಾರೆ. ಇದರಿಂದ ಅವರ ಆರೋಗ್ಯದ ಮೇಲಾಗುವ ಪರಿಣಾಮಗಳೇನು? ಎನ್ನುವ ಗೊಂದಲದಲ್ಲಿದ್ದಾರೆ.

ಅಪರಿಚಿತರೊಂದಿಗೆ ವಿಡಿಯೋ ಕಾಲ್ ಮಾಡಬಹುದಾದ Omegle ಸುರಕ್ಷಿತವೇ?ಅಪರಿಚಿತರೊಂದಿಗೆ ವಿಡಿಯೋ ಕಾಲ್ ಮಾಡಬಹುದಾದ Omegle ಸುರಕ್ಷಿತವೇ?

ಮೊಬೈಲ್, ಸಿಸ್ಟಮ್, ಟ್ಯಾಬ್ ಹಾಗೂ ಟಿವಿ ಇವುಗಳನ್ನು ವೀಕ್ಷಿಸಲು ತೆಗೆದುಕೊಳ್ಳುವ ಸಮಯವನ್ನು ಸ್ಕ್ರೀನಿಂಗ್ ಟೈಮ್ ಅಥವಾ ಪರದೆಯ ಸಮಯ ಎಂದು ಕರೆಯಲಾಗುತ್ತದೆ. ಈ ಸ್ಕ್ರೀನಿಂಗ್ ಟೈಮ್ ಮಕ್ಕಳಿಗೆ ಕಡಿಮೆ ಮಾಡಲು ಅಥವಾ ಇದರಿಂದ ದೂರವಿಡಲು ಬಹುತೇಕ ಪೋಷಕರು ಯೋಚಿಸುತ್ತಾರೆ. ಇದರಿಂದ ಮಕ್ಕಳು ಶಾಲೆಯ ಕಲಿಕೆ ಮೇಲೆ ಗಮನ ಹರಿಸುತ್ತಾರೆನ್ನುವುದು ಅಧಿಕ ಪೋಷಕರ ವಿಚಾರ. ಆದರೆ ಈ ಆಧುನಿಕ ಯುಗದಲ್ಲಿ ಮಕ್ಕಳನ್ನು ವಿದ್ಯುನ್ಮಾನ ಸಾಧನಗಳಿಂದ ದೂರವಿಡುವುದು ಅವರನ್ನು ಆಧುನಿಕ ಸಾಧನಗಳಿಂದ ದೂರವಿಟ್ಟಂತಾಗುತ್ತದೆ.

What is Screening Time? : Learn the benefits and consequences of screening time

ಹೀಗಾಗಿ ಅನೇಕ ಪೋಷಕರು ಮಕ್ಕಳ ಸ್ಕ್ರೀನಿಂಗ್ ಟೈಮ್ ಬಗ್ಗೆ ಚಿಂತಿತರಾಗಿರುವುದು ಇದೆ. 12-15 ವಯಸ್ಸಿನ 41% ಪೋಷಕರು ತಮ್ಮ ಮಗುವಿನ ಸ್ಕ್ರೀನಿಂಗ್ ಟೈಮ್ ನಿಯಂತ್ರಿಸಲು ಕಷ್ಟಪಡುತ್ತಿದ್ದಾರೆ. ಆದರೆ ಬಹುತೇಕ ಪೋಕರು ತಮ್ಮ ಮಕ್ಕಳು ಆನ್‌ಲೈನ್‌ ಮೂಲಕ ಹೆಚ್ಚು ವಿಚಾರಗಳನ್ನು ತಿಳಿಯಲಿ, ಆಧುನಿಕ ತಂತ್ರಜ್ಞಾನಕ್ಕೆ ಹೊಂದಿಕೊಳ್ಳಲಿ ಎಂದು ಆಶಿಸುತ್ತಾರಾದರೂ ಅವರ ಸ್ಕ್ರೀನಿಂಗ್ ಟೈಮ್‌ ಬಗ್ಗೆ ಯೋಚಿಸುತ್ತಾರೆ. ಹಾಗಾದ್ರೆ ಇದಕ್ಕೆ ಪರಿಹಾರ ಏನು? ತಜ್ಞರು ಈ ಬಗ್ಗೆ ಏನು ಹೇಳುತ್ತಾರೆ? ಯಾವ ವಯಸ್ಸಿನ ಮಕ್ಕಳು ಎಷ್ಟು ಸಮಯ ಆನ್‌ಲೈನ್‌ನಲ್ಲಿ ಕಳೆಯಬಹುದು? ಇಂತೆಲ್ಲಾ ವಿಚಾರಗಳನ್ನು ತಿಳಿಯೋಣ.

UNICEF ವರದಿಯ ಪ್ರಕಾರ ವಿಶ್ವಾದ್ಯಂತ ಆನ್‌ಲೈನ್‌ನಲ್ಲಿ ಮೂರು ಇಂಟರ್ನೆಟ್ ಬಳಕೆದಾರರಲ್ಲಿ ಒಬ್ಬರು 18 ವರ್ಷದೊಳಗಿನವರಾಗಿದ್ದಾರೆ. ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಸಂಶೋಧನೆಯ ಪ್ರಕಾರ, 2 ರಿಂದ 5 ವಯಸ್ಸಿನ ಮಕ್ಕಳ ಬಹುತೇಕ ಪೋಷಕರು ತಮ್ಮ ಮಕ್ಕಳ ಸ್ಕ್ರೀನಿಂಗ್ ಟೈಮ್ ಮಿತಿಗಳು ಚಿಕ್ಕ ಮಗುವಿನ ಬೆಳವಣಿಗೆಯ ಸಾಮರ್ಥ್ಯದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿರುವುದಿಲ್ಲ.

What is Screening Time? : Learn the benefits and consequences of screening time

ಒಂದು ಹೆಜ್ಜೆ ಹಿಂದಕ್ಕೆ ತೆಗೆದುಕೊಂಡು ಒಟ್ಟಾರೆಯಾಗಿ ಸಂಶೋಧನೆಯನ್ನು ನೋಡಿದರೆ, ಮಕ್ಕಳ ಯೋಗಕ್ಷೇಮದ ಮೇಲೆ ಪರದೆಯ ಸಮಯದ ಪ್ರಭಾವವು ಇನ್ನೂ ಚರ್ಚೆಯಲ್ಲಿದೆ. ಆದಾಗ್ಯೂ ಈಗ ಹೆಚ್ಚು ತಜ್ಞರು ಹೇಳುವುದೇ ಬೇರೆ. ಅವರು ಪೋಷಕರಿಗೆ ಮಕ್ಕಳು ಆನ್‌ಲೈನ್‌ನಲ್ಲಿ ಏನು ಮಾಡುತ್ತಿದ್ದಾರೆ ಮತ್ತು ಎಷ್ಟು ಸಮಯದವರೆಗೆ ಆನ್‌ಲೈನ್‌ನಲ್ಲಿ ಕಳೆಯುತ್ತಾರೆ ಎಂಬುದರ ಕುರಿತು ನಾವು ಹೆಚ್ಚು ಗಮನಹರಿಸಬೇಕು ಎಂದು ಸಲಹೆ ನೀಡುತ್ತಾರೆ. ಇತ್ತೀಚಿನ ವಿದ್ಯಾಮಾನಗಳನ್ನು ತಿಳಿಯಲು ಆಧುನಿಕ ಉಪಕರಣಗಳ ಬಳಕೆ ಬಹುಮುಖ್ಯವಾದರೂ ತಜ್ಞರ ಪ್ರಕಾರ ಪೋಷಕರು ಮಕ್ಕಳು ಆನ್‌ಲೈನ್‌ನಲ್ಲಿ ಮಾಡುತ್ತಿರುವ ಚಟುವಟಿಕೆಗಳನ್ನು ಕೇಂದ್ರೀಕರಿಸುವುದು ಅತ್ಯಗತ್ಯವಾಗಿದೆ.

ಸ್ಕ್ರೀನಿಂಗ್ ಟೈಮ್ ಪ್ರಯೋಜನಗಳು

*ಆನ್‌ಲೈನ್ ಆಟಗಳು, ಚಟುವಟಿಕೆಗಳು ಮಕ್ಕಳ ಕೆಲಸ ಮತ್ತು ಸೃಜನಶೀಲತೆಯನ್ನು ಹೆಚ್ಚಿಸಬಹುದು.

*ಅಂತರ್ಜಾಲವು ಮಕ್ಕಳಿಗೆ ಅವರ ಜ್ಞಾನವನ್ನು ಹೆಚ್ಚಿಸುವುದು ಮಾತ್ರವಲ್ಲದೆ ಮಾಹಿತಿಯ ಸಂಪತ್ತಿಗೆ ಪ್ರವೇಶಿಸಲು ಅವಕಾಶ ನೀಡುತ್ತದೆ.

What is Screening Time? : Learn the benefits and consequences of screening time

*ಸಂವಹನ, ಬುದ್ಧಿವಂತಿಕೆ ಮತ್ತು ಕೈ-ಕಣ್ಣಿನ ಸಮನ್ವಯ ಎರಡನ್ನೂ ಸುಧಾರಿಸುತ್ತದೆ.

*ಸಾಮಾಜಿಕ ಸಂಪರ್ಕಗಳಿಗೆ ಭೌತಿಕ ಅಡೆತಡೆಗಳನ್ನು ತೆಗೆದುಹಾಕುತ್ತದೆ. ಸ್ನೇಹಿತರನ್ನು ಮಾಡಿಕೊಳ್ಳಲು ಕಷ್ಟಪಡುವ ಅಗತ್ಯತೆ ಇಲ್ಲ. ವಿಶೇಷ ಅಗತ್ಯಗಳನ್ನು ಹೊಂದಿರುವ ಮಕ್ಕಳಿಗೆ ಇದು ಸಹಾಯಕವಾಗಿದೆ.

*ಕಂಪ್ಯೂಟರ್‌ಗಳನ್ನು ಹೊಂದಿರುವ ಮನೆಗಳಲ್ಲಿನ ಮಕ್ಕಳು ಶೈಕ್ಷಣಿಕವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ.

*ತಂತ್ರಜ್ಞಾನದಿಂದ ಪ್ರಯೋಜನ ಪಡೆದರೆ ಮಕ್ಕಳ ಫಲಿತಾಂಶಗಳು ಉತ್ತಮವಾಗಿರುತ್ತವೆ.

What is Screening Time? : Learn the benefits and consequences of screening time

ಮಕ್ಕಳ ಮೇಲೆ ಸ್ಕ್ರೀನಿಂಗ್ ಟೈಮ್ ಪರಿಣಾಮಗಳೇನು?

*ಅಂತರ್ಜಾಲದಲ್ಲಿ ಮಕ್ಕಳು ಹೆಚ್ಚು ಸಮಯ ಕಳೆಯುವುದರಿಂದ ಅವರ ಮೆದುಳಿನ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ. ಜೊತೆಗೆ ಇದರಿಂದ ನಿದ್ರೆ ಮಾಡಲು ಕಷ್ಟವಾಗುತ್ತದೆ.

*ನಡವಳಿಕೆಯ ಮೇಲೆ ಪರಿಣಾಮ: ನಾವು ಅಭ್ಯಾಸದ ಜೀವಿಗಳು. ಆದ್ದರಿಂದ ಸ್ಮಾರ್ಟ್‌ಫೋನ್ ಅನ್ನು ದಿನಕ್ಕೆ ಎಷ್ಟು ಬಾರಿಯಾದರೂ ನೋಡಬಹುದು. ಆದರೆ ಇದರಿಂದ ನಡುವಳಿಕೆ ಯಥಾ ಸ್ಥಿತಿಯಾಗಬಹುದು. ಪ್ರತಿಕ್ರಿಯೆ ಇಲ್ಲದೆ, ಒಂದೇ ಕಡೆಗೆ ಗಮನ, ಮಂಕಾಗುವುದು, ಜನರೊಂದಿಗೆ ಬೆರೆಯದೇ ಇರುವುದು ಇಂತೆಲ್ಲವೂ ಆಗುವ ಸಾಧ್ಯತೆ ಇದೆ.

*ಮೆದುಳಿನ ಬೆಳವಣಿಗೆಯ ಮೇಲೆ ಪರಿಣಾಮ: ಪರದೆಯ ಆಧಾರಿತ ಮನರಂಜನೆಯು ನರಮಂಡಲದ ಪ್ರಚೋದನೆಯನ್ನು ಹೆಚ್ಚಿಸುತ್ತದೆ, ಇದು ಆತಂಕವನ್ನು ವರ್ಧಿಸುತ್ತದೆ. ಇದರಿಂದ ಮೆದುಳಿನ ಮೇಲೆ ಪರಿಣಾಮ ಉಂಟಾಗಬಹುದು.

English summary
Nowadays kids are more adapted to laptops, tabs, mobiles, Learn screen time benefits and effects for kids.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X