ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೌರತ್ವ ಕಾಯ್ದೆ ಪ್ರಸ್ತಾಪಿಸಿರುವ 'ಧಾರ್ಮಿಕ ಕಿರುಕುಳ' ಎಂದರೇನು?

|
Google Oneindia Kannada News

'ಧಾರ್ಮಿಕ ಕಿರುಕುಳ'- ಪೌರತ್ವ ತಿದ್ದುಪಡಿ ಮಸೂದೆಯ ಕುರಿತಾದ ಚರ್ಚೆ ಆರಂಭವಾದಾಗಿನಿಂದಲೂ ಈ ಪದ ವ್ಯಾಪಕವಾಗಿ ಬಳಕೆಯಾಗುತ್ತಿದೆ. ವಿವಾದಾತ್ಮಕ ಪೌರತ್ವ ತಿದ್ದುಪಡಿ ಮಸೂದೆಯು ಕಾಯ್ದೆಯಾಗಿ ಬದಲಾಗಿದೆ. ಭಾರತದ ನೆರೆಯ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳಿಂದ ಧಾರ್ಮಿಕ ಕಿರುಕುಳದ ಕಾರಣದಿಂದ ಭಾರತಕ್ಕೆ ವಲಸೆ ಬಂದ ನಿರಾಶ್ರಿತರಿಗೆ ಈ ಕಾಯ್ದೆಯಡಿ ಭಾರತೀಯ ಪೌರತ್ವ ನೀಡಲಾಗುತ್ತದೆ. ಈ ಕಾಯ್ದೆಯಂತೆಯೇ 'ಧಾರ್ಮಿಕ ಕಿರುಕುಳ' ಕೂಡ ಚರ್ಚಾರ್ಹ.

ಹಿಂದಿನ ಕಾಲದಿಂದಲೂ ಪ್ರತಿ ದೇಶಗಳಲ್ಲಿಯೂ ಧರ್ಮದ ಹೆಸರಿನಲ್ಲಿ ಅಲ್ಪಸಂಖ್ಯಾತ ಸಮುದಾಯದ ಮೇಲೆ ಕಿರುಕುಳ, ಹಲ್ಲೆ, ದೌರ್ಜನ್ಯಗಳು ನಡೆಯುತ್ತಿವೆ. ದೇಶವೊಂದರಲ್ಲಿ ರಾಜಕೀಯ, ಆರ್ಥಿಕ ಅಥವಾ ಸಾಮಾಜಿಕ ಕಾರಣಗಳಿಂದ ಒಂದು ಧರ್ಮದ ಜನರ ಮೇಲೆ ದೌರ್ಜನ್ಯ ಎಸಗುವುದು, ಕಿರುಕುಳ ನೀಡುವುದು, ಕೀಳಾಗಿ ನಡೆಸಿಕೊಳ್ಳುವುದು, ದೈಹಿಕ ಮತ್ತು ಮಾನಸಿಕ ಹಲ್ಲೆ, ಧರ್ಮದ ಹೆಸರಿನಲ್ಲಿ ನಿಂದನೆ ಮುಂತಾದವುಗಳನ್ನು ಧಾರ್ಮಿಕ ಕಿರುಕುಳ (ರಿಲೀಜಿಯಸ್ ಪರ್ಸಿಕ್ಯೂಷನ್) ಎಂದು ಕರೆಯಲಾಗುತ್ತದೆ.

ಸಿಎಎ ವಿರುದ್ಧ ಪ್ರತಿಭಟನೆ ಮಧ್ಯೆಯೇ ಪಾಕ್ ಮಹಿಳೆಗೆ ಭಾರತದ ಪೌರತ್ವಸಿಎಎ ವಿರುದ್ಧ ಪ್ರತಿಭಟನೆ ಮಧ್ಯೆಯೇ ಪಾಕ್ ಮಹಿಳೆಗೆ ಭಾರತದ ಪೌರತ್ವ

ಈ ರೀತಿ ಕಿರುಕುಳಕ್ಕೆ ಒಳಗಾಗದ ಯಾವುದೇ ಧರ್ಮವಿಲ್ಲ. ಪ್ರತಿ ದೇಶದಲ್ಲಿಯೂ ಒಂದಲ್ಲ ಒಂದು ಧರ್ಮದ ಮೇಲೆ ನೇರ ಅಥವಾ ಪರೋಕ್ಷ ಕಿರುಕುಳ ನಡೆಯುವುದು ವರದಿಯಾಗುತ್ತದೆ. ಚಿಂತನೆಯ ಸ್ವಾತಂತ್ರ್ಯ, ಪ್ರಜ್ಞೆ, ಆಚರಣೆಯ ಹಕ್ಕು ಮುಂತಾದವುಗಳ ಉಲ್ಲಂಘನೆ ನಡೆಯುತ್ತಿರುತ್ತವೆ. ಜೀವನ ಹಕ್ಕು, ಸಮಗ್ರತೆ ಅಥವಾ ಸ್ವಾತಂತ್ರ್ಯದ ಮೇಲಿನ ಬೆದರಿಕೆ, ದೌರ್ಜನ್ಯಗಳನ್ನು ಧಾರ್ಮಿಕ ಕಿರುಕುಳ ಎನ್ನಬಹುದು. ಧಾರ್ಮಿಕ ಕಿರುಕುಳ, ಅಕ್ರಮ ವಲಸೆ ಮತ್ತು ನಿರಾಶ್ರಿತರ ಸಂಖ್ಯೆಯ ಹೆಚ್ಚಳಕ್ಕೆ ದಾರಿಮಾಡಿಕೊಡುತ್ತದೆ.

ಹೆಚ್ಚುತ್ತಲೇ ಇದೆ ಧಾರ್ಮಿಕ ಕಿರುಕುಳ

ಹೆಚ್ಚುತ್ತಲೇ ಇದೆ ಧಾರ್ಮಿಕ ಕಿರುಕುಳ

ಧಾರ್ಮಿಕ ಕಿರುಕುಳವು ಹಿಂಸಾಚಾರ, ಯುದ್ಧ, ಅವಕಾಶಗಳನ್ನು ವಂಚಿಸುವುದು, ಹಕ್ಕುಗಳನ್ನು ಕಿತ್ತುಕೊಳ್ಳುವುದು, ಬಲವಂತದ ಮತಾಂತರ, ನಂಬಿಕೆಗೆ ಧಕ್ಕೆ ತರುವುದು, ಆಚರಣೆಗೆ ಅಡ್ಡಿಪಡಿಸುವುದು ಮುಂತಾದವುಗಳ ರೂಪದಲ್ಲಿ ಕಂಡುಬರುತ್ತವೆ. ಸಮುದಾಯಗಳ ನಡುವೆ ಧರ್ಮದ ಕಾರಣದಿಂದ ನಡೆಯುವ ಸಂಘರ್ಷಗಳು ಯುದ್ಧ ಮತ್ತು ಹತ್ಯಾಕಾಂಡಗಳಿಗೆ ಕಾರಣವಾಗಿವೆ.

ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗದ (ಯುಎಸ್‌ಸಿಐಆರ್ಎಫ್) ಪ್ರಕಾರ ಜಗತ್ತಿನಲ್ಲಿನ ಧಾರ್ಮಿಕ ಕಿರುಕುಳದ ಪ್ರಮಾಣ ಮತ್ತಷ್ಟು ಹೆಚ್ಚುತ್ತಲೇ ಇದೆ.

ಹೆಚ್ಚು ಕಿರುಕುಳ ವರದಿಯಾಗುವ ದೇಶಗಳು

ಹೆಚ್ಚು ಕಿರುಕುಳ ವರದಿಯಾಗುವ ದೇಶಗಳು

ಬರ್ಮಾ, ಕೇಂದ್ರ ಆಫ್ರಿಕನ್ ಗಣರಾಜ್ಯ, ಚೀನಾ, ಎರಿಟ್ರಿಯಾ, ಇರಾನ್, ನೈಜೀರಿಯಾ, ಉತ್ತರ ಕೊರಿಯಾ, ಪಾಕಿಸ್ತಾನ, ರಷ್ಯಾ, ಸೌದಿ ಅರೇಬಿಯಾ, ಸುಡಾನ್, ಸಿರಿಯಾ, ತಜಕಿಸ್ತಾನ, ಉಜ್ಬೇಕಿಸ್ತಾನ ಮತ್ತು ವಿಯೆಟ್ನಾಂಗಳಲ್ಲಿ ಅತಿ ಹೆಚ್ಚಿನ ಆಕ್ರಮಣಕಾರಿ ಮತ್ತು ಹಿಂಸಾತ್ಮಕ ರೂಪದ ಕಿರುಕುಳಗಳು ಅಧಿಕ ಮಟ್ಟದಲ್ಲಿದೆ.

ಎನ್‌ಆರ್‌ಸಿಗೆ ಅರ್ಹರಲ್ಲದವರೆಲ್ಲರೂ ದೇಶದಿಂದ ಹೊರಕ್ಕೆ: ಅಮಿತ್ ಶಾಎನ್‌ಆರ್‌ಸಿಗೆ ಅರ್ಹರಲ್ಲದವರೆಲ್ಲರೂ ದೇಶದಿಂದ ಹೊರಕ್ಕೆ: ಅಮಿತ್ ಶಾ

ಇದರ ನಂತರದ ಎರಡನೆಯ ಪಟ್ಟಿಯಲ್ಲಿ ಭಾರತ, ಅಫ್ಘಾನಿಸ್ತಾನ, ಅಜೆರ್ಬೈಜಾನ್, ಬಹರೇನ್, ಕ್ಯೂಬಾ, ಈಜಿಪ್ಟ್, ಇಂಡೋನೇಷ್ಯಾ, ಇರಾಕ್, ಕಜಕಿಸ್ತಾನ, ಲಾವೊಸ್, ಮಲೇಷ್ಯಾ ಹಾಗೂ ಅಮೆರಿಕದ ನ್ಯಾಟೋ ಮೈತ್ರಿ ಟರ್ಕಿ ಇವೆ.

ಯಾರ ವಿರುದ್ಧ ಕಿರುಕುಳ ಹೆಚ್ಚು?

ಯಾರ ವಿರುದ್ಧ ಕಿರುಕುಳ ಹೆಚ್ಚು?

ಜಗತ್ತಿನಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರೈಸ್ತರು ಮತ್ತು ಮುಸ್ಲಿಮರಿದ್ದಾರೆ. ಹಾಗೆಯೇ ಹೆಚ್ಚಿನ ಪ್ರಮಾಣದಲ್ಲಿ ಧಾರ್ಮಿಕ ಕಿರುಕುಳಕ್ಕೂ ಈ ಧರ್ಮೀಯರೇ ಒಳಗಾಗುತ್ತಿದ್ದಾರೆ ಎನ್ನುತ್ತವೆ ವರದಿಗಳು. 2007ರಲ್ಲಿ 40 ದೇಶಗಳಲ್ಲಿ ಅಧಿಕ ಅಥವಾ ಅತ್ಯಧಿಕ ಧಾರ್ಮಿಕ ಕಿರುಕುಳ ನಡೆಯುತ್ತಿದ್ದರೆ, 2019ರಲ್ಲಿ ಈ ದೇಶಗಳ ಸಂಖ್ಯೆ 52ಕ್ಕೆ ಏರಿದೆ.

ಭಾರತದಲ್ಲಿ ಕ್ರೈಸ್ತರು ಮತ್ತು ಮುಸ್ಲಿಮರ ವಿರುದ್ಧ ಧಾರ್ಮಿಕ ಕಿರುಕುಳ ಪ್ರಕರಣಗಳು ಹೆಚ್ಚಿವೆ ಎನ್ನುತ್ತವೆ ಅಂಕಿಅಂಶಗಳು. ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಹಿಂದೂಗಳ ಮೇಲೆ ಕಿರುಕುಳ ಹೆಚ್ಚಿದೆ ಎಂಬ ಆರೋಪವಿದ್ದರೂ ಅದರ ಅಧಿಕೃತ ಅಂಕಿಅಂಶ ಲಭ್ಯವಿಲ್ಲ.

ಭಾರತದಲ್ಲಿ ವಲಸಿಗರು-ನಿರಾಶ್ರಿತರು

ಭಾರತದಲ್ಲಿ ವಲಸಿಗರು-ನಿರಾಶ್ರಿತರು

ವಿಶ್ವಸಂಸ್ಥೆ ಅಂದಾಜಿಸಿರುವ ಪ್ರಕಾರ 2019ರ ವೇಳೆಗೆ 51 ಲಕ್ಷಕ್ಕೂ ಅಧಿಕ ಅಂತಾರಾಷ್ಟ್ರೀಯ ವಲಸಿಗರು ಭಾರತದಲ್ಲಿದ್ದಾರೆ. 1951ರ ಒಪ್ಪಂದದ ಅಡಿ ಎರಡು ಲಕ್ಷಕ್ಕೂ ಹೆಚ್ಚು ಜನರನ್ನು ನಿರಾಶ್ರಿತರೆಂದು ಗುರುತಿಸಲಾಗಿದೆ. ಹೆಚ್ಚಿನ ಪ್ರಮಾಣದ ವಲಸಿಗರು ಬಾಂಗ್ಲಾದೇಶದಿಂದ ಬಂದಿದ್ದರೆ, ಹೆಚ್ಚಿನ ನಿರಾಶ್ರಿತರು ಬಂದಿರುವುದು ಚೀನಾ ಆಕ್ರಮಣಕ್ಕೆ ಒಳಗಾದ ಟಿಬೆಟ್‌ನಿಂದ.

ಹಿಂಸೆ ದುರದೃಷ್ಟಕರ, ಪೌರತ್ವ ಕಾಯ್ದೆ ಭಾರತೀಯರ ಮೇಲೆ ಪರಿಣಾಮ ಇಲ್ಲ: ಮೋದಿಹಿಂಸೆ ದುರದೃಷ್ಟಕರ, ಪೌರತ್ವ ಕಾಯ್ದೆ ಭಾರತೀಯರ ಮೇಲೆ ಪರಿಣಾಮ ಇಲ್ಲ: ಮೋದಿ

ಭಾರತದಲ್ಲಿ 2019ರ ವೇಳೆಗೆ 31,03,664 ಬಾಂಗ್ಲಾದೇಶಿ ವಲಸಿಗರಿದ್ದರೆ, 10,82,917 ಪಾಕಿಸ್ತಾನಿ ವಲಸಿಗರಿದ್ದಾರೆ. ನೇಪಾಳದಿಂದ 5,33,646 ವಲಸಿಗರು ಇದ್ದಾರೆ. ಶ್ರೀಲಂಕಾದಿಂದ 1,52,536 ವಲಸಿಗರು ಮತ್ತು 60,802 ಮಂದಿ ನಿರಾಶ್ರಿತರಿದ್ದಾರೆ. ಚೀನಾದಿಂದ 1,08,286 ವಲಸಿಗರು ಹಾಗೂ 1,08,008 ನಿರಾಶ್ರಿತರು ಭಾರತಕ್ಕೆ ಬಂದಿದ್ದಾರೆ. ಮ್ಯಾನ್ಮಾರ್‌ನಿಂದ 49,720 ವಲಸಿಗರು ಮತ್ತು 20,877 ನಿರಾಶ್ರಿತರು ಬಂದಿದ್ದಾರೆ. 13,501 ವಲಸಿಗರು ಮತ್ತು 14,848 ನಿರಾಶ್ರಿತರು ಅಫ್ಘಾನಿಸ್ತಾನದವರಾಗಿದ್ದಾರೆ. ಭೂತಾನ್‌ನ 6,532 ವಲಸಿಗರು ಭಾರತದಲ್ಲಿದ್ದಾರೆ.

ಎಸ್‌ಎಚ್‌ಐ ಮತ್ತು ಜಿಆರ್ಐ ಸೂಚ್ಯಂಕದ ಮಟ್ಟ

ಎಸ್‌ಎಚ್‌ಐ ಮತ್ತು ಜಿಆರ್ಐ ಸೂಚ್ಯಂಕದ ಮಟ್ಟ

ಪ್ಯೂ ಸಂಶೋಧನಾ ಕೇಂದ್ರವು ಸರ್ಕಾರಿ ನಿಯಂತ್ರಣ ಸೂಚ್ಯಂಕ (ಜಿಆರ್‌ಐ) ಮತ್ತು ಸಾಮಾಜಿಕ ಹಗೆತನ ಸೂಚ್ಯಂಕ (ಎಸ್‌ಎಚ್‌ಐ) ಅನ್ನು ಪ್ರತಿ ವರ್ಷ ಬಿಡುಗಡೆ ಮಾಡುತ್ತದೆ. ಜಿಆರ್‌ಐ- ಸರ್ಕಾರದ ಕಾನೂನು, ನೀತಿಗಳು, ನಂಬಿಕೆ ಮತ್ತು ಆಚರಣೆಗಳನ್ನು ನಿಯಂತ್ರಿಸಲು ಅಧಿಕಾರಿಗಳು ತೆಗೆದುಕೊಳ್ಳುವ ಕ್ರಮಗಳ ಕುರಿತಾಗಿದೆ. ಎಸ್‌ಎಚ್‌ಐ- ಸಮಾಜದಲ್ಲಿನ ಖಾಸಗಿ ವ್ಯಕ್ತಿಗಳು, ಸಂಘಟನೆಗಳು ಅಥವಾ ಗುಂಪುಗಳು ನಡೆಸುವ ಧಾರ್ಮಿಕ ದ್ವೇಷದ ಮಾಹಿತಿಯಾಗಿದೆ. ಹತ್ತು ಅಂಕಗಳಿಗೆ ಅದನ್ನು ಅಳೆಯಲಾಗುತ್ತದೆ. ಹೆಚ್ಚು ಅಂಕ ಪಡೆದ ದೇಶಗಳಲ್ಲಿ ಹೆಚ್ಚು ಧಾರ್ಮಿಕ ಕಿರುಕುಳ ನಡೆಯುತ್ತಿದೆ ಎಂದರ್ಥ.

ಭಾರತದಲ್ಲಿ ಜಿಆರ್‌ಐ 2007ರಲ್ಲಿ 4.8 ಇದ್ದರೆ 2016ರಲ್ಲಿ 5.1ಕ್ಕೆ ಹೆಚ್ಚಿದೆ. ಎಸ್‌ಎಚ್‌ಐ 2007ರಲ್ಲಿ 8.8ರಷ್ಟಿತ್ತು. ಅದು 2016ರ 9.7ಕ್ಕೆ ಹೆಚ್ಚಿದೆ. ಏಷ್ಯಾದ ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿಯೇ ಹೆಚ್ಚು ಸಾಮಾಜಿಕ ಧಾರ್ಮಿಕ ಕಿರುಕುಳ ಪ್ರಕರಣಗಳು ನಡೆಯುತ್ತಿವೆ.

ಅತಿ ಕಡಿಮೆ ಧಾರ್ಮಿಕ ಕಿರುಕುಳದ ಪ್ರಮಾಣ

ಅತಿ ಕಡಿಮೆ ಧಾರ್ಮಿಕ ಕಿರುಕುಳದ ಪ್ರಮಾಣ

ಅತಿ ಕಡಿಮೆ ಧಾರ್ಮಿಕ ಕಿರುಕುಳದ ಪ್ರಮಾಣ ಇರುವುದು ಭೂತಾನ್‌ನಲ್ಲಿ. ಇಲ್ಲಿ ಜಿಆರ್‌ಐ 2016ರಲ್ಲಿ 4.6ರಷ್ಟಿತ್ತು. ಎಚ್‌ಎಚ್‌ಐ 0.4ರಷ್ಟಿತ್ತು. ಚೀನಾದಲ್ಲಿ ಸಾಮಾಜಿಕ ಕಿರುಕುಳಕ್ಕಿಂತ ಸರ್ಕಾರದ ಮೂಲಕ ನಡೆಯುವ ಕಿರುಕುಳದ ಪ್ರಮಾಣವೇ ಅಧಿಕ. ಜಿಆರ್‌ಐ 8.8ರಷ್ಟು ಇದ್ದರೆ, ಎಸ್‌ಎಚ್‌ಐ 1.3ರಷ್ಟಿದೆ. ಪಾಕಿಸ್ತಾನದಲ್ಲಿ ಜಿಆರ್‌ಐ 6.5ರಷ್ಟಿದೆ. ಎಸ್‌ಎಚ್‌ಐ 6.9ರಷ್ಟು ವರದಿಯಾಗಿದೆ.

ಪ್ರತಿ ದೇಶಗಳಲ್ಲಿ ಧಾರ್ಮಿಕ ಕಿರುಕುಳ ಮತ್ತು ಸ್ವಾತಂತ್ರ್ಯದ ಪ್ರಮಾಣ ಎಷ್ಟಿದೆ ಎಂಬುದನ್ನು ಸರ್ಕಾರಗಳಾಗಲೀ, ವಿಶ್ವಸಂಸ್ಥೆಯ ಯಾವುದೇ ಅಂಗವಾಗಲೀ ಅಧ್ಯಯನ ಮಾಡುವುದಿಲ್ಲ. ಅನೇಕ ಖಾಸಗಿ ಸಂಸ್ಥೆಗಳು ವರದಿಗಳನ್ನು ನಡೆಸುತ್ತವೆ. ಆದರೆ ಇವುಗಳ ಮೂಲ ಮತ್ತು ವಿಶ್ವಾಸಾರ್ಹತೆ ಬಗ್ಗೆ ಅನುಮಾನಗಳಿವೆ.

English summary
Citizenship Amendment Act will provide Indian citizenship to the religious persecuted communities of three nations. What is religious persecution? Things you should know.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X