ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏನಿದು ಅಂಗಾಂಗ ದಾನ? ಯಾರು ದಾನ ಮಾಡಬಹುದು?

|
Google Oneindia Kannada News

ಒಬ್ಬ ವ್ಯಕ್ತಿ ತನ್ನಷ್ಟಕ್ಕೆ ತಾನೆ ಉಸಿರಾಟ ನಿಲ್ಲಿಸಿ, ಮೃತ ಎಂದು ಘೋಷಿಸಿದ ಬಳಿಕ ಅಂಗಾಂಗ ದಾನಕ್ಕೆ ಮುಂದಾಗಬಹುದು. ಒಬ್ಬ ವ್ಯಕ್ತಿ ಕನಿಷ್ಠ ಎಂಟು ಮಂದಿಯ ಜೀವ ಉಳಿಸಬಹುದು. ಬದುಕಿದ್ದಾಗ ರಕ್ತ, ವೀರ್ಯ, ಚರ್ಮ, ಮೂಳೆಮಜ್ಜೆ ದಾನ ಹೀಗೆ ಜೀವಕೋಶ, ದ್ರವ್ಯ ದಾನ ಸಾಧ್ಯತೆಯಿದೆ.

Recommended Video

ಅಂಗಾಂಗ ದಾನದ ಬಗ್ಗೆ ಸಂಕ್ಷಿಪ್ತ ಮಾಹಿತಿ! | Oneindia Kannada

ಮೃತ ವ್ಯಕ್ತಿ ಅಥವಾ ಮೆದುಳು ನಿಷ್ಕ್ರಿಯ (brain stem death)ವಾದ ವ್ಯಕ್ತಿಯ ಅಂಗಾಂಗಗಳನ್ನು ದಾನ ಮಾಡಬಹುದು. ದೇಹದಾನ ಮತ್ತು ನೇತ್ರದಾನ ಜೊತೆಗೆ ಅಂಗಾಂಗ ದಾನದ ಬಗ್ಗೆ ಕೂಡಾ ಜಾಗೃತಿ ಹೆಚ್ಚಾಗಬೇಕು ಎಂದು ವೈದ್ಯರು ಹೇಳಿದ್ದಾರೆ.

ಅಂಗಾಂಗ ದಾನ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿಅಂಗಾಂಗ ದಾನ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ನೇತ್ರದಾನ, ದೇಹದಾನಕ್ಕೆ ಬದುಕಿದ್ದಾಗಲೇ ನೋಂದಾಯಿಸಿಕೊಳ್ಳಬಹುದು. ಇದೇ ರೀತಿ ಅಂಗಾಂಗ ದಾನಕ್ಕೂ ಮುಂಚಿತವಾಗಿ ನೋಂದಣಿ ಮಾಡಿಕೊಳ್ಳಬಹುದು. ಮಕ್ಕಳು, ವೃದ್ಧರು ಯಾರೂ ಬೇಕಾದರೂ ಅಂಗಾಂಗ ದಾನ ಮಾಡಬಹುದು. ಬ್ರೈನ್ ಡೆಡ್ ಆದ ಸಂದರ್ಭದಲ್ಲಿ ಕುಟುಂಬಸ್ಥರ ಅನುಮತಿ ಪಡೆದ ಬಳಿಕ ಆಸ್ಪತ್ರೆಯವರು ಪ್ರಕ್ರಿಯೆ ಮುಂದುವರೆಸಬಹುದು.

ದೇಶದಲ್ಲೇ ಅತಿ ಹೆಚ್ಚು ದೇಹದಾನಿಗಳನ್ನು ಹೊಂದಿರುವ ಮೈಸೂರು ಜೆಎಸ್ ಎಸ್ ಕಾಲೇಜಿನ ಕಿರುಪರಿಚಯದೇಶದಲ್ಲೇ ಅತಿ ಹೆಚ್ಚು ದೇಹದಾನಿಗಳನ್ನು ಹೊಂದಿರುವ ಮೈಸೂರು ಜೆಎಸ್ ಎಸ್ ಕಾಲೇಜಿನ ಕಿರುಪರಿಚಯ

ಏನಿದು ಅಂಗಾಂಗ ದಾನ? ಯಾರು ಅಂಗಾಂಗ ದಾನ ಯಾರು ಮಾಡಬಹುದು? ಬ್ರೈನ್ ಡೆಡ್ ಎಂದರೇನು? ಯಾವೆಲ್ಲ ಅಂಗಗಳನ್ನು ದಾನ ಮಾಡಬಹುದು? ಮುಂದೆ ಓದಿ...

 ಅಂಗಾಂಗ ದಾನ

ಅಂಗಾಂಗ ದಾನ

ಒಂದು ನಿರ್ದಿಷ್ಟ ಕಾರ್ಯನಿರ್ವಹಣೆ ಮಾಡುವ ದೇಹದ ಭಾಗವನ್ನು ಅಂಗ ಎನ್ನಬಹುದು. ಉದಾಹರಣೆಗೆ ಹೃದಯ, ಶ್ವಾಸಕೋಶ, ಕಿಡ್ನಿ, ಯಕೃತ್.. ಮುಂತಾದವು. ಕೊನೆಯ ಹಂತದಲ್ಲಿರುವ ವ್ಯಕ್ತಿಯೊಬ್ಬನಿಂದ ಅಂಗ ಕಸಿ ಅಗತ್ಯವಿರುವ ವ್ಯಕ್ತಿಯೊಬ್ಬನಿಗೆ ಅಂಗವನ್ನು ಉಡುಗೊರೆಯಾಗಿ ನೀಡಬಹುದು.

ಯಾವೆಲ್ಲ ಅಂಗಗಳನ್ನು ದಾನ ಮಾಡಬಹುದು?
- ಮೂತ್ರಪಿಂಡ(ಕಿಡ್ನಿ), ಯಕೃತ್(ಲಿವರ್), ರಕ್ತನಾಳ, ಗರ್ಭಕೋಶ, ಸಣ್ಣ ಕರುಳು, ಮೇದೋಜೀರಕ ಗ್ರಂಥಿ, ಹೃದಯ, ಅಂಡಾಣು.. ಇತ್ಯಾದಿ

ಅಂಗಾಂಶ ದಾನ ಎಂದರೇನು?
ದೇಹದ ಒಂದು ನಿರ್ದಿಷ್ಟ ಕಾರ್ಯ ನಿರ್ವಹಿಸುವ ಕೋಶಗಳ ಗುಂಪು. ಉದಾ: ಮೂಳೆ, ಚರ್ಮ, ಕಣ್ಣಿನ ಕಾರ್ನಿಯಾ, ಹೃದಯ ಕವಾಟ, ರಕ್ತನಾಳ, ನರ, ಸ್ನಾಯುರಜ್ಜು ..ಇತ್ಯಾದಿಗಳನ್ನು ಕೂಡಾ ದಾನ ಮಾಡಬಹುದು.

 ಬ್ರೈನ್ ಡೆಡ್ ಎಂದರೇನು?

ಬ್ರೈನ್ ಡೆಡ್ ಎಂದರೇನು?

ಬ್ರೈನ್ ಫೆಲ್ಯೂರ್ ಹಾಗೂ ಬ್ರೈನ್ ಡೆಡ್ ಎರಡು ಬೇರೆ. ನಟ ಸಂಚಾರಿ ವಿಜಯ್ ಸದ್ಯ ಬ್ರೈನ್ ಫೆಲ್ಯೂರ್ ಸ್ಥಿತಿಯಲ್ಲಿದ್ದಾರೆ. ಅಂದರೆ ಮೆದುಳು ನಿಷ್ಕ್ರಿಯಗೊಂಡಿದೆ. ಮೆದುಳಿನಿಂದ ಇತರೆ ಅಂಗಗಳಿಗೆ ಆಮ್ಲಜನಕ ಪೂರೈಕೆ ನಿಂತಿರುತ್ತದೆ ಹೀಗಾಗಿ, ಇತರೆ ಅಂಗಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುವುದಿಲ್ಲ. ವಿಜಯ್ ಪರಿಸ್ಥಿತಿಯೂ ಹೀಗೆ ಇದೆ. ಹೃದಯ, ಪಲ್ಸ್ ರೇಟ್, ಕಿಡ್ನಿ, ಪಿತ್ತಜನಕಾಂಗ ಎಲ್ಲವೂ ಕಾರ್ಯ ನಿರ್ವಹಿಸುತ್ತಿದೆ. ಆದರೆ, ಲೈಫ್ ಸಪೋರ್ಟಿಂಗ್ ಸಾಧನದ ನೆರವಿನಿಂದ ಉಸಿರಾಟವಾಡುತ್ತಿದ್ದಾರೆ, ಕೃತಕ ಉಸಿರಾಟ ತೆಗೆದರೆ ಬ್ರೈನ್ ಡೆಡ್ ಆಗಲಿದ್ದು, ಬದುಕಿದ್ದು ಸಹ ಸತ್ತಂತೆ ಕೋಮಾವಸ್ಥೆಯಲ್ಲಿರಬಹುದು.

 ಬ್ರೈನ್ ಡೆಡ್ ಆದಾಗ ಅಂಗಾಂಗ ದಾನ ಹೇಗೆ?

ಬ್ರೈನ್ ಡೆಡ್ ಆದಾಗ ಅಂಗಾಂಗ ದಾನ ಹೇಗೆ?

ಒಬ್ಬ ವ್ಯಕ್ತಿಯ ಮೆದುಳು ನಿಷ್ಕ್ರಿಯಗೊಂಡರೆ ಅಥವಾ ಕ್ಲಿನಿಕಲಿ ಡೆಡ್ ಎಂದರೆ ಘೋಷಿಸಿದರೆ, ಅಂಥ ವ್ಯಕ್ತಿಯ ಅನೇಕ ಅಂಗಾಂಗಗಳನ್ನು ದಾನ ಮಾಡಬಹುದು. ಇದಕ್ಕೆ 5-6 ಗಂಟೆಗಳ ಅವಧಿ ಇರುತ್ತದೆ. ತಡವಾದರೆ, ಅಂಗಾಂಗಗಳು ಪ್ರಯೋಜನಕ್ಕೆ ಬರುವುದಿಲ್ಲ. ಅಂಗಾಂಗ ದಾನಕ್ಕೆ ಬಂಧು ಮಿತ್ರರ ಸಮ್ಮತಿ ಅಗತ್ಯ. ವೆಂಟಿಲೇಟರ್ ತೆಗೆಯುವುದಕ್ಕೂ ಅನುಮತಿ ಪತ್ರಕ್ಕೆ ಸಹಿ ಹಾಕಬೇಕಾಗುತ್ತದೆ. ಇದಾದ ಬಳಿಕವಷ್ಟೇ ಮುಂದಿನ ಪ್ರಕ್ರಿಯೆ ನಡೆಸಲಾಗುತ್ತದೆ.

 ಯಾರು ದಾನ ಮಾಡಬಹುದು? ಏನು ದಾನ ಮಾಡಬಹುದು?

ಯಾರು ದಾನ ಮಾಡಬಹುದು? ಏನು ದಾನ ಮಾಡಬಹುದು?

ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಪೂರ್ವಾನುಮತಿ ಪತ್ರ ಇದ್ದರೆ ಅಥವಾ ಪ್ರಸ್ತುತ ಪರಿಸ್ಥಿತಿಯಲ್ಲಿ ಕುಟುಂಬಸ್ಥರ ಸಮ್ಮತಿ ದೊರತ ಬಳಿಕ ಅಂಗಾಂಗ ದಾನ ಪ್ರಕ್ರಿಯೆ ಆರಂಭಿಸಬಹುದು. ಮಕ್ಕಳ ಸಹಿತ ವೃದ್ಧರ ತನಕ ಆರೋಗ್ಯವಂಥ ಅಂಗಾಂಗಗಳನ್ನು ಕಸಿ ಮಾಡುವ ಮೂಲಕ ಮತ್ತೊಬ್ಬರಿಗೆ ನೀಡಬಹುದು.

ಅಂಗಾಂಗ ದಾನಕ್ಕೆ ಸಮ್ಮತಿ ಹೇಗೆ?
ಒಬ್ಬ ವ್ಯಕ್ತಿ ಬದುಕಿದ್ದಾಗಲೇ ತನ್ನ ಮರಣ ನಂತರ ಅಂಗಾಂಗ ದಾನ ಮಾಡಲು ಬಯಸಿ ಆರ್ಗನ್ ಡೋನರ್ ಕಾರ್ಡ್ ಪಡೆಯಬಹುದು. ಈ ಬಗ್ಗೆ ತನ್ನ ಬಂಧುಮಿತ್ರರಿಗೆ ತಿಳಿಸಬೇಕಾಗುತ್ತದೆ. ಈ ಬಗ್ಗೆ ಕುಟುಂಬಸ್ಥರ ಒಪ್ಪಿಗೆ ಇದ್ದರೆ ಮಾತ್ರ ಆಸ್ಪತ್ರೆಯವರು ಮುಂದಿನ ಕಾರ್ಯ ನೆರವೇರಿಸುತ್ತಾರೆ.

ಮಾನವ ಅಂಗಾಂಗಗಳ ಕಸಿ ಕಾಯ್ದೆ

ಮಾನವ ಅಂಗಾಂಗಗಳ ಕಸಿ ಕಾಯ್ದೆ

ಮಾನವ ಅಂಗಾಂಗಗಳ ಕಸಿ ಕಾಯ್ದೆ -1994ರ ಅಡಿಯಲ್ಲಿ 'ಮೆದುಳು ಸಾವನ್ನು ' ಸಾವು ಎಂದು ಸ್ವೀಕರಿಸಲಾಗಿದೆ. ಮೆದುಳಿನ ಕಾಂಡದ ಎಲ್ಲಾ ಕಾರ್ಯಗಳನ್ನು ಶಾಶ್ವತವಾಗಿ ಮತ್ತು ಮಾರ್ಪಡಿಸಲಾಗದ ಹಂತದ ಸ್ಥಿತಿ ವಿಭಾಗ 3 ರ ಉಪ ಪರಿಚ್ಛೇದ (6) ಅಡಿಯಲ್ಲಿ ಪ್ರಮಾಣೀಕರಿಸಿದೆ ಎಂಡು ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಗಾಂಗ ದಾನ ನಿರ್ವಹಣೆ ನಡೆಸುವ ಜೀವನ ಸಾರ್ಥಕತೆ ವಿಭಾಗದ ಅಧಿಕಾರಿ ತಿಳಿಸಿದ್ದಾರೆ. ಅಂಗಾಂಗ ದಾನ ಮಾಡಲು ಇಚ್ಛಿಸಿದಾಗ ಜೀವನ ಸಾರ್ಥಕತೆ ವಿಭಾಗಕ್ಕೆ ತಿಳಿಸಬೇಕು, ಅಲ್ಲಿನ ನುರಿತ ತಜ್ಞರು ಪರಿಶೀಲಿಸಿ ಅನುಮತಿ ನೀಡಿದ ಬಳಿಕ ಸಂಬಂಧಪಟ್ಟ ಆಸ್ಪತ್ರೆ ವೈದ್ಯರು ಮುಂದಿನ ಪ್ರಕ್ರಿಯೆ(ಅಂಗಾಂಗ ಬೇರ್ಪಡಿಸಿ, ಕಸಿಗೆ ಲಭ್ಯವಾಗಿಸುವುದು)ಗೆ ಚಾಲನೆ ನೀಡಬಹುದು. ದಾನ ಪಡೆಯುವವರ ಆದ್ಯತಾ ಪಟ್ಟಿ ಮೇರೆಗೆ ಅಂಗಾಂಗಗಳು ಲಭ್ಯವಾಗಲಿದೆ.

ಹೆಚ್ಚಿನ ಮಾಹಿತಿಯನ್ನು ಅಧಿಕೃತ ವೆಬ್ ತಾಣದಲ್ಲಿ ಪಡೆದುಕೊಳ್ಳಬಹುದು.. ಅಂಗಾಂಗ ದಾನದ ಬಗ್ಗೆ ಇರುವ ಪ್ರಶ್ನೆಗಳಿಗೂ ಉತ್ತರ ಇಲ್ಲಿ ಸಿಗುತ್ತದೆ (https://www.jeevasarthakathe.karnataka.gov.in/Website/Faqs3.html)

English summary
What is Organ donation? What organs and when can brain dead donors can donate organs? Know more in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X