ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪರಿಚಿತರೊಂದಿಗೆ ವಿಡಿಯೋ ಕಾಲ್ ಮಾಡಬಹುದಾದ Omegle ಸುರಕ್ಷಿತವೇ?

|
Google Oneindia Kannada News

ಯುವಜನಾಂಗದ ಪ್ರತಿಭೆಯನ್ನು ಹೆಚ್ಚಿಸಲು ಸಂಪರ್ಕಗಳನ್ನು ಸೃಷ್ಟಿಸಲು ಕೆಲ ವೆಬ್‌ಸೈಟ್‌ಗಳು ಸೇತುವೆಯಂತೆ ಕೆಲಸ ಮಾಡುತ್ತವೆ. ಇತ್ತೀಚೆಗೆ COVID-19 ಸಾಂಕ್ರಾಮಿಕ ರೋಗದಿಂದಾಗಿ ಇಂತಹ ಆನ್‌ಲೈನ್ ಚಾಟ್ ವೆಬ್‌ಸೈಟ್‌ಗಳು ಜನಪ್ರಿಯವಾಗಿವೆ. ಆದರೆ ಈ ಸೈಟ್‌ಗಳು ಅದೆಷ್ಟು ಸುರಕ್ಷಿತ ಎನ್ನುವ ಬಗ್ಗೆ ಪೋಷಕರಲ್ಲಿ ಆತಂಕ ಹೆಚ್ಚಾಗಿದೆ. ಇಂತಹ ಆತಂಕಕಾರಿ ಸೈಟ್‌ಗಳಲ್ಲಿ 'ಒಮೆಗಲೆ' (Omegle)ಕೂಡ ಒಂದು. ಏನಿದು ಒಮೆಗಲೆ ಅನ್ನೋದನ್ನ ನೋಡೋಣ.

ಒಮೆಗಲೆ ಮಾರ್ಚ್ 2009 ರಲ್ಲಿ 18 ವರ್ಷ ವಯಸ್ಸಿನವರಿಂದ ಪ್ರಾರಂಭವಾಯಿತು. ಒಮೆಗಲೆ ಇತ್ತೀಚೆಗೆ COVID-19 ಸಾಂಕ್ರಾಮಿಕ ರೋಗದಿಂದಾಗಿ ಯುವಜನಾಂಗವನ್ನು ಆಕರ್ಷಿಸುತ್ತಿದೆ. ಈ 'ವರ್ಚುವಲ್ ಚಾಟ್ ರೂಮ್' ಬಳಕೆದಾರರಿಗೆ ಪ್ರಪಂಚದ ಎಲ್ಲಿಂದಲಾದರೂ ಪರಸ್ಪರ ಮಾಡರೇಟ್ ಮಾಡದ ಅಥವಾ ಮಾಡರೇಟ್ ಚಾಟ್‌ಗಳನ್ನು ಹೊಂದಲು ಅವಕಾಶ ಸಿಗಲಿದೆ.

ಮಕ್ಕಳ ಕೈಲಿ ಯಾವಾಗಲೂ ಮೊಬೈಲ್: ಒಳ್ಳೆಯದೋ, ಕೆಟ್ಟದೋ.. ತಜ್ಞರ ಅಭಿಪ್ರಾಯ ಇಲ್ಲಿದೆಮಕ್ಕಳ ಕೈಲಿ ಯಾವಾಗಲೂ ಮೊಬೈಲ್: ಒಳ್ಳೆಯದೋ, ಕೆಟ್ಟದೋ.. ತಜ್ಞರ ಅಭಿಪ್ರಾಯ ಇಲ್ಲಿದೆ

Omegle ಎಂದರೇನು?

ಒಮೆಗಲೆ ಅನ್ನೋದು ಅಪರಿಚಿತ ಬಳಕೆದಾರರ ನಡುವೆ ನಡೆಯುವ ವಿಡಿಯೋ ಸಂಭಾಷಣೆಯಾಗಿದೆ. ಇದೊಂದು 'ಯು' ಮತ್ತು 'ಸ್ಟ್ರೇಂಜರ್' ಎಂದು ಗುರುತಿಸುವ ವಿಡಿಯೊ-ಚಾಟಿಂಗ್ ವೆಬ್‌ಸೈಟ್ ಆಗಿದೆ. ಇದರಲ್ಲಿ ಟೆಕ್ಸ್ಟ್ ಮತ್ತು ವಿಡಿಯೊ ಎರಡರ ಮೂಲಕ ಆನ್‌ಲೈನ್‌ನಲ್ಲಿ ಅಪರಿಚಿತರೊಂದಿಗೆ ಚಾಟ್ ಮಾಡಬಹುದು. ಒಮೆಗಲೆ ಬಳಕೆದಾರರು ತಮ್ಮ ಆಸಕ್ತಿಗಳನ್ನು ಹಂಚಿಕೊಳ್ಳಲು ಹಾಗೂ ಒಂದೇ ರೀತಿಯ ಆಸಕ್ತಿಯನ್ನು ಹೊಂದಿರುವ ಬಳಕೆದಾರರನ್ನು ಜೋಡಿ ಮಾಡಲು ಪ್ರಯತ್ನಿಸುತ್ತದೆ. ಇದರಲ್ಲಿ ಮಾತನಾಡಲು ವೈಯಕ್ತಿಕ ವಿವರಗಳನ್ನು ನೀಡಬೇಕಿಲ್ಲ. ಯಾರೊಂದಿಗೆ ಯಾರಾದರೂ ವಿಡಿಯೋ ಮೂಲಕ ಮಾತನಾಡಬಹುದು.

What is Omegle? Key things parents need to know in kannada

ಉದಾ: ಒಂದು ಹುಡುಗ ಒಮೆಗಲೆ ಮೂಲಕ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಾನೆ. ಆತನೊಂದಿಗೆ ಇನ್ನೆಲ್ಲಿಂದಲೋ ಯಾವುದೋ ಹುಡುಗನೋ ಅಥವ ಹುಡುಗಿಯೋ ಮಾತನಾಡಬಹುದು. ಇಷ್ಟವಿದ್ದರೆ ಮಾತು ಮುಂದುವರೆಸಬಹುದು. ವಿಳಾಸ ಅಥವಾ ಫೋನ್ ನಂಬರ್ ಶೇರ್ ಮಾಡಬಹುದು. ಜೊತೆಗೆ ಭೇಟಿಯಾಗಬಹುದು. ಇಲ್ಲದಿದ್ದರೆ ಸಂಪರ್ಕ ಕಡಿತಗೊಳಿಸಬಹುದು. ಬಳಕೆದಾರರು ತಾವು ಯಾರೆಂದು ಹೇಳದ ಹೊರತು ಚಾಟ್‌ಗಳು ಅನಾಮಧೇಯವಾಗಿರುತ್ತವೆ. ಇದು ಉಚಿತ ಸಂಭಾಷಣೆಯಾಗಿದ್ದು ಮತ್ತು ಖಾತೆಗೆ ಸೈನ್ ಅಪ್ ಅಗತ್ಯವಿಲ್ಲ. ಹೀಗಾಗಿ ಇದರ ಬಳಕೆ ಯುವಜನಾಂಗದ ಸುರಕ್ಷತೆಯ ಬಗ್ಗೆ ಯೋಚಿಸುವಂತೆ ಮಾಡಿದೆ.

ಗೂಗಲ್ ಸರ್ಚ್‌ನಲ್ಲಿ 'Chat for Omegle', 'Free Omegle Chat', 'Omeglers' ನಂತಹ ಅನೇಕ ಸಂಬಂಧಿತ ಅಪ್ಲಿಕೇಶನ್‌ಗಳು ಕಂಡುಬರುತ್ತವೆ. ಈ ಎಲ್ಲಾ ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳು ಒಂದೇ ರೀತಿಯ ವೈಶಿಷ್ಟ್ಯಗಳು ಮತ್ತು ಉದ್ದೇಶವನ್ನು ಹೊಂದಿವೆ. ಆದರೆ ಕೆಲವರು ಮಾತ್ರ Omegle ಸಂಯೋಜಿತವಾಗಿದೆ ಎಂದು ಹೇಳಿಕೊಳ್ಳುತ್ತಾರೆ ಮತ್ತು ಇತರರು ಇತರ ಅಪ್ಲಿಕೇಶನ್‌ಗಳು ಸಂಯೋಜಿತವಾಗಿಲ್ಲ ಎಂದು ಹೇಳುತ್ತಾರೆ.

What is Omegle? Key things parents need to know in kannada

Omegle ಯಾರು ಬಳಸುತ್ತಾರೆ?

ಒಮೆಗಲೆ ಅನ್ನು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಅಂದರೆ 13 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಪೋಷಕರ ಅನುಮತಿಯೊಂದಿಗೆ ಹೆಚ್ಚಾಗಿ ಬಳಕೆ ಮಾಡುತ್ತಾರೆ. Omegle ವಿಶೇಷವಾಗಿ US, UK, ಭಾರತ ಮತ್ತು ಮೆಕ್ಸಿಕೋದಲ್ಲಿ ಜನಪ್ರಿಯವಾಗಿದೆ. ಟಿಕ್‌ಟಾಕ್‌ನಿಂದ ಒಮೆಗಲೆಗೆ ಸಾಕಷ್ಟು ಕಿರಿಯ ಪ್ರಭಾವಿಗಳು ಬರುವುದರಿಂದ ಯುವಜನರಲ್ಲಿ ಇದು ಅತ್ಯಂತ ಜನಪ್ರಿಯವಾಗಿದೆ (7 ವರ್ಷ ವಯಸ್ಸಿನವರು). #omegle ಹ್ಯಾಶ್‌ಟ್ಯಾಗ್ ಟಿಕ್‌ಟಾಕ್‌ನಲ್ಲಿ ಸುಮಾರು 5 ಬಿಲಿಯನ್ ವೀಕ್ಷಣೆಗಳನ್ನು ಹೊಂದಿದೆ.

Omegle ಸುರಕ್ಷಿತವೇ?

ಒಮೆಗೋಗೆ ಯಾವುದೇ ದೃಢವಾದ ಮಿತಿಯಿಲ್ಲ. ಯಾವ ನೋಂದಣಿ ಅಥವಾ ವಯಸ್ಸಿನ ಪರಿಶೀಲನೆ ಇಲ್ಲ. ಯಾರು ಯಾರೊಂದಿಗಾದರೂ ಮಾತನಾಡುವುದರಿಂದ ದುರುಪಯೋಗ ಮಾಡಿಕೊಳ್ಳಬಹುದು. ವೈಯಕ್ತಿ ವಿವರಗಳನ್ನು ಪಡೆಯಬಹುದು. ಜೊತೆಗೆ ಅಶ್ಲೀಲತೆಯಿಂದ ಯುವಜನಾಂಗವನ್ನು ದಾರಿ ತಪ್ಪಿಸಬಹುದಾದ ಸಾಧ್ಯತೆಗಳು ಹೆಚ್ಚಾಗಿವೆ. ಹೀಗಾಗಿ Omegle ಅನ್ನು ಬಳಸುವವರಿಗೆ ಜಾಗರೂಕರಾಗಿರಲು ಸೈಟ್ ಕೂಡ ಹೇಳುತ್ತದೆ.

What is Omegle? Key things parents need to know in kannada

ಮಕ್ಕಳು ಮತ್ತು ಯುವಕರು ತಮ್ಮ ಹೆಸರು, ವಯಸ್ಸು ಮತ್ತು ಸ್ಥಳವನ್ನು ಹಂಚಿಕೊಳ್ಳಲು ಅಪರಿಚಿತರು ಇದರಲ್ಲಿ ಕೇಳಬಹುದು. ಆದ್ದರಿಂದ ಅಪರಿಚಿತರೊಂದಿಗೆ ಆನ್‌ಲೈನ್‌ನಲ್ಲಿ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವ ಕುರಿತು ಒಮೆಗಲೆ ಬಳಕೆ ಮಾಡುವ ಮಕ್ಕಳೊಂದಿಗೆ ಪೋಷಕರು ಮಾತನಾಡುವುದು ಸಹ ಮುಖ್ಯವಾಗಿದೆ.

ಇತ್ತೀಚಿನ BBC ತನಿಖೆಯು ಅಶ್ಲೀಲ ವಿಡಿಯೊಗಳು ಮತ್ತು ಲೈವ್ ಸ್ಟ್ರೀಮ್‌ಗಳನ್ನು (7 ಅಥವಾ 8 ವರ್ಷ ವಯಸ್ಸಿನ ಅಪ್ರಾಪ್ತರನ್ನು ಒಳಗೊಂಡಿರುವ) ಈ ಒಮೆಗಲೆ ನಲ್ಲಿ ಬಹಿರಂಗಪಡಿಸಲಾಗಿದೆ ಎಂದು ಹೇಳಿತ್ತು. ಇದು Covid-19 ಸಾಂಕ್ರಾಮಿಕ ಸಮಯದಲ್ಲಿ ಸೈಟ್‌ನಾದ್ಯಂತ ಹರಡಿತ್ತು. ಹೀಗಾಗಿ ಬಿಬಿಸಿ ಸಂಬಂಧಿತ ಅಧಿಕಾರಿಗಳಿಗೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿತ್ತು. BBC ಯ ತನಿಖೆಯ ಪ್ರಕಾರ, ಶಾಲೆಗಳು, ಪೊಲೀಸ್ ಪಡೆಗಳು ಮತ್ತು ಸರ್ಕಾರಗಳು UK, US, ಫ್ರಾನ್ಸ್, ನಾರ್ವೆ, ಕೆನಡಾ ಮತ್ತು ಆಸ್ಟ್ರೇಲಿಯಾದಲ್ಲಿ Omegle ಕುರಿತು ಎಚ್ಚರಿಕೆಗಳನ್ನು ನೀಡಿವೆ. ವರ್ಣಭೇದ ನೀತಿ, ಉಗ್ರಗಾಮಿ ದೃಷ್ಟಿಕೋನಗಳು, ವಂಚನೆಗಳು ಮತ್ತು ಸೈಬರ್‌ಬುಲ್ಲಿಂಗ್‌ಗಳ ವರದಿಗಳ ಜೊತೆಗೆ Omegle ನಲ್ಲಿ ಆನ್‌ಲೈನ್ ಮಕ್ಕಳ ನಿಂದನೆಯ ಬಗ್ಗೆ ತನಿಖೆಗಳು ನಡೆದಿವೆ.

What is Omegle? Key things parents need to know in kannada

ವಿಡಿಯೊ ಚಾಟ್‌ನಲ್ಲಿ ಮಾಡರೇಶನ್ ಕೊರತೆ

ವಿಡಿಯೊ ಚಾಟ್ ವಯಸ್ಕ, ಮಾಡರೇಟ್ ಮತ್ತು ಅನಿಯಂತ್ರಿತ ಆಯ್ಕೆಯನ್ನು ಹೊಂದಿದ್ದು ಅದನ್ನು ಅಪ್ರಾಪ್ತ ವಯಸ್ಸಿನ ಬಳಕೆದಾರರು ಸುಲಭವಾಗಿ ಪ್ರವೇಶಿಸಬಹುದು. ಬಟನ್ ಅನ್ನು ಕ್ಲಿಕ್ ಮಾಡುವುದರಿಂದ, ಬಳಕೆದಾರರು ನೇರವಾಗಿ ಲೈವ್ ವಿಡಿಯೊ ಮತ್ತು ಚಾಟ್‌ಗೆ ನೇರವಾಗಿ ಪ್ರವೇಶಿಸುತ್ತಾರೆ. ಇದು ಯಾವುದೇ ಎಚ್ಚರಿಕೆಯಿಲ್ಲದೆ ಮಕ್ಕಳನ್ನು ಕೆಲವೇ ಸೆಕೆಂಡುಗಳಲ್ಲಿ ಅಪಾಯಗಳಿಗೆ ಸುಲಭವಾಗಿ ಒಡ್ಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ಹೆಚ್ಚುವರಿಯಾಗಿ ವಿಡಿಯೊ ಚಾಟ್ ಬಳಕೆದಾರರ ಒಪ್ಪಿಗೆಯಿಲ್ಲದೆ ತುಣುಕನ್ನು ರೆಕಾರ್ಡ್ ಮಾಡಲು ಮತ್ತು ವಿತರಿಸಲು ಅನುವು ಮಾಡಿಕೊಡುತ್ತದೆ.

ಚಾಟ್ ಆಯ್ಕೆಗಳ ವಿಧಗಳು:

*ವಯಸ್ಕರು -ಇದನ್ನು ಒಂದೇ ಒಂದು ಬಟನ್ ಪ್ರೆಸ್ ಮಾಡುವ ಮೂಲಕ ನೇರವಾಗಿ ಪ್ರವೇಶಿಸಬಹುದು. ನಂತರ ಅವರು ಯಾವ ದೃಶ್ಯವನ್ನು ನೋಡುತ್ತಾರೆ, ಯಾರೊಂದಿಗೆ ಮಾತನಾಡುತ್ತಾರೆ ಎಂಬುದು ಚಾಟ್ ಮಾಡಲು ಕುಳಿತವರಿಗೂ ತಿಳಿದಿರುವುದಿಲ್ಲ. ಬಟನ್ ಫ್ರೆಸ್ ಮಾಡಿದ ತಕ್ಷಣ ಯಾರು ಬೇಕಾದರೂ ಕಾಣಿಸಿಕೊಳ್ಳಬಹುದು, ಯಾರಾದರು ಮಾತನಾಡಬಹುದು, ಯಾರೇ ವಿಡಿಯೋ ತೋರಿಸಬಹುದು.

What is Omegle? Key things parents need to know in kannada

*ಮಾಡರೇಟೆಡ್ ಚಾಟ್ - Omegle ಹಕ್ಕು ನಿರಾಕರಣೆ ಪ್ರಕಾರ, ಚಾಟ್‌ಗಳನ್ನು ಮಾಡರೇಟ್ ಮಾಡಲಾಗುತ್ತದೆ ಮತ್ತು ಅನುಚಿತವಾಗಿ ವರ್ತಿಸುವ ಜನರನ್ನು ನಿಂದಿಸಬಹುದು. ಆದರೆ ಅನುಚಿತವಾಗಿ ವರ್ತನೆಯ ವಿರುದ್ಧ ಅದೆಷ್ಟು ಜನ ಮಾತನಾಡುತ್ತಾರೆ, ಅದೆಷ್ಟು ಅನುಚಿತ ವರ್ತನೆಗಳು ನಡೆದಿವೆಯಾ ಎನ್ನುವ ಬಗ್ಗೆ ಮಾಹಿತಿ ಇಲ್ಲ.

*ಅನಿಯಂತ್ರಿತ ಚಾಟ್ - ಈ ಆಯ್ಕೆಯು ಬಳಕೆದಾರರಿಗೆ 18+ ವಯಸ್ಸು ಆಗಿರಬೇಕು ಎಂದು ಸಲಹೆ ನೀಡುವ ಎಚ್ಚರಿಕೆಯ ಪೆಟ್ಟಿಗೆಯೊಂದಿಗೆ ಬರುತ್ತದೆ. ಆದರೆ ಅಪ್ರಾಪ್ತ ವಯಸ್ಕ ಬಳಕೆದಾರರು ಸುಲಭವಾಗಿ 'ಸರಿ' ಕ್ಲಿಕ್ ಮಾಡಬಹುದು ಮತ್ತು ಅವರು ಸೈಟ್ ಒಳಗೆ ಸುಲಭವಾಗಿ ಪ್ರವೇಶಿಸಲು ಅನುಮತಿಸಲಾಗುತ್ತದೆ. ಈ ವೇಳೆ ಬಳಕೆದಾರರು ಲೈಂಗಿಕವಾಗಿ ಸ್ಪಷ್ಟವಾದಂತಹ ಅಪಾಯಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು.

*ಇದರಲ್ಲಿ ಟೆಕ್ಸ್ಟ್ ಕೂಡ ಮಾಡಲಾಗುತ್ತದೆ. ಈ ಚಾಟ್ 'ಪತ್ತೇದಾರಿ' ಕಾರ್ಯವನ್ನು ಹೊಂದಿರಬಹುದು. ಇಲ್ಲಿ ಬಳಕೆದಾರರು 'ಪತ್ತೇದಾರಿ' ಆಗಿರಬಹುದು ಮತ್ತು ಇಬ್ಬರು ಜನರ ನಡುವಿನ ಟೆಕ್ಸ್ಟ್ ಚಾಟ್‌ನಲ್ಲಿ ಗುಪ್ತವಾಗಿ 3 ನೇ ವ್ಯಕ್ತಿ ಲಾಗ್ ಇನ್ ಆಗಬಹುದು.

*ಇತರ ಇಬ್ಬರು ಬಳಕೆದಾರರನ್ನು ನಿರ್ದಿಷ್ಟ ವಿಷಯ ಚರ್ಚಿಸಲು ಮತ್ತು ಅವರ ಉತ್ತರಗಳನ್ನು ಮೂರನೇ ವ್ಯಕ್ತಿ ಪ್ರಯತ್ನಿಸಬಹುದು. ಇತರ ಇಬ್ಬರು ಬಳಕೆದಾರರ ನಡುವಿನ ಚಾಟ್ ಅನ್ನು ಕೊನೆಗೊಳಿಸದೆಯೇ 'ಪತ್ತೇದಾರಿ' ನಿರ್ಗಮಿಸಬಹುದು.

Omegle ಬಗ್ಗೆ ಯಾವುದೇ ಪೋಷಕರು ನಿಯಂತ್ರಣಗಳನ್ನು ಹೊಂದಿದೆಯೇ?

ಪ್ಲಾಟ್‌ಫಾರ್ಮ್‌ನ ಸುರಕ್ಷಿತ ಬಳಕೆಯನ್ನು ಪ್ರೋತ್ಸಾಹಿಸಲು ಪ್ರಾಂಪ್ಟ್‌ಗಳಿದ್ದರೂ, ಅಪ್ಲಿಕೇಶನ್‌ನಲ್ಲಿ ಯಾವುದೇ ಪೋಷಕರ ನಿಯಂತ್ರಣ ಸೆಟ್ಟಿಂಗ್‌ಗಳಿಲ್ಲ. ಒಮೆಗಲೆ ಪ್ರಕಾರ, ಪೋಷಕರು ತಮ್ಮ ಮಕ್ಕಳ ಸಂಭಾಷಣೆಗಳನ್ನು ಮೇಲ್ವಿಚಾರಣೆ ಮಾಡುತ್ತಾರೆ. ಆದರೆ 'ವಿಡಿಯೊವನ್ನು ಮೇಲ್ವಿಚಾರಣೆ ಮಾಡಲಾಗಿದೆ, ಅದನ್ನು ಸ್ವಚ್ಛವಾಗಿಡಿ' ಎಂದು ಒಮೆಗಲೆ ಹೇಳಿದರೂ, ಈ ವಿಭಾಗಕ್ಕೆ ಭೇಟಿ ನೀಡುವ ಮಕ್ಕಳು ಮತ್ತು ಯುವಕರು ಲೈಂಗಿಕವಾಗಿ ಅಶ್ಲೀಲವಾದ ಚಾಟ್ ಮತ್ತು ಚಟುವಟಿಕೆಯಲ್ಲಿ ತೊಡಗಿರುವ ಹಲವಾರು ಇತರ ಬಳಕೆದಾರರನ್ನು ಎದುರಿಸುವ ಸಾಧ್ಯತೆಯಿದೆ.

ಇದರಲ್ಲಿ ಬಳಕೆದಾರರು ಅನುಚಿತ ವರ್ತನೆಗಳನ್ನು ಹೇಗೆ ವರದಿ ಮಾಡಬಹುದು ಎಂಬುದರ ಕುರಿತು ಯಾವುದೇ ಸೂಚನೆಗಳಿಲ್ಲ. ಒಮೆಗಲೆ ಹಕ್ಕು ನಿರಾಕರಣೆಯು ಬಳಕೆದಾರರಿಗೆ ಸಲಹೆ ನೀಡಬಹುದು. ಹೀಗಾಗಿ ಯಾವುದೇ ಬ್ಲಾಕ್ ಅಥವಾ ಮ್ಯೂಟ್ ಇಲ್ಲದ ವಿಡಿಯೊ/ಪಠ್ಯ ಚಾಟ್‌ಗಳನ್ನು ಮೇಲ್ವಿಚಾರಣೆ ಮಾಡುವ ಅಥವಾ ಫಿಲ್ಟರ್ ಮಾಡುವ ದೃಢವಾದ ವ್ಯವಸ್ಥೆಯೂ ಒಮೆಗಲ್‌ನಲ್ಲಿ ಇಲ್ಲ. ಆದ್ದರಿಂದ ಯುವಜನರ ಫೋನ್ ಮತ್ತು ಹೋಮ್ ಬ್ರಾಡ್‌ಬ್ಯಾಂಡ್‌ನಲ್ಲಿ ಪೋಷಕರ ನಿಯಂತ್ರಣಗಳನ್ನು ಸಕ್ರಿಯಗೊಳಿಸುವುದು ಮುಖ್ಯವಾಗಿದೆ.

English summary
what is Omegle? things parents need to know about omegle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X