ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ಎಂದರೇನು? ಸೋಂಕಿತರ ಲಕ್ಷಣ ಮತ್ತು ಸಾವಿನ ಸುದ್ದಿ!

|
Google Oneindia Kannada News

ನವದೆಹಲಿ, ಮಾರ್ಚ್.21: ಕೊರೊನಾ ವೈರಸ್ ಎಂದಾಕ್ಷಣ ಜನರಲ್ಲಿ ಆಘಾತ ಆಗುವಂತಾ ಪರಿಸ್ಥಿತಿ ಜಾಗತಿಕ ಮಟ್ಟದಲ್ಲಿ ಸೃಷ್ಟಿಯಾಗಿದೆ. ಜನರಲ್ಲಿ ಕೊರೊನಾ ಸೋಂಕಿತ ಲಕ್ಷಣ ಮತ್ತು ಅದರಿಂದ ಸುರಕ್ಷತೆ ಕಾಯ್ತುಕೊಳ್ಳಲು ಅನುಸರಿಸಬೇಕಾದ ನಿಯಮಗಳ ಅರಿವು ಇಲ್ಲದಿರುವುದು ಅಷ್ಟೆಕ್ಕೆಲ್ಲ ಕಾರಣ.

ಕೊರೊನಾ ವೈರಸ್ ಮಾರಕ ಸೋಂಕು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಸೋಂಕು ತಗಲಿದ ವ್ಯಕ್ತಿಗಳೆಲ್ಲ ಮೃತಪಡುತ್ತಾರೆ ಎಂದೂ ಹೇಳಲಾಗದು. ಏಕೆಂದರೆ ಸೋಂಕಿತರ ಆರೋಗ್ಯದಲ್ಲೂ ಚೇತರಿಕೆ ಕಂಡು ಬಂದಿರುವ ಸಾಕಷ್ಟು ಪ್ರಕರಣಗಳು ಪತ್ತೆಯಾಗಿವೆ.

ಕೊರೊನಾ ಅಪಾಯ: ಲಕ್ಷದ ಗಡಿ ದಾಟುತ್ತದೆಯಾ ಸಾವಿನ ಸಂಖ್ಯೆ?ಕೊರೊನಾ ಅಪಾಯ: ಲಕ್ಷದ ಗಡಿ ದಾಟುತ್ತದೆಯಾ ಸಾವಿನ ಸಂಖ್ಯೆ?

ಮಾರಕ ಕೊರೊನಾ ವೈರಸ್ ಸೋಂಕಿತರಲ್ಲಿ ಮೊದಲಿಗೆ ಯಾವ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಪುರುಷರು ಮತ್ತು ಮಹಿಳೆಯರ ಪೈಕಿ ಯಾರು ಅತಿಹೆಚ್ಚು ಮಂದಿ ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. ಕೊರೊನಾ ವೈರಸ್ ಕುರಿತು ಒಂದು ವಿಶೇಷ ವರದಿ ಇಲ್ಲಿದೆ.

ಮಾರಕ ಕೊವಿಡ್-19 ಎಂದರೇನು?

ಮಾರಕ ಕೊವಿಡ್-19 ಎಂದರೇನು?

ನೊವೆಲ್ ಕೊರೊನಾ ವೈರಸ್ ಎನ್ನುವುದು ಒಂದು ವೈರಸ್ ಗಳಿಗೆ ಸೇರಿದ ಸಮೂಹವಾಗಿದೆ. ಈ ವೈರಸ್ ನಲ್ಲಿ ಮಿಡಲ್ ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್ (MERS-CoV) ಮತ್ತು ಸೆವೆರ್ ಅಕ್ಯೂಟ್ ರೆಸ್ಪಿರೇಟರಿ ಸಿಂಡ್ರೋಮ್ (SARS-CoV) ಜಾತಿಗೆ ಸೇರಿದ ವೈರಸ್ ಆಗಿದೆ. ಈ ರೀತಿಯ ವೈರಸ್ ಮೇಲ್ಮೈ ಪದರದಲ್ಲಿ ಕಿರೀಟದಂತಾ ವಿನ್ಯಾಸವಿರುವ ಹಿನ್ನೆಲೆಯಲ್ಲಿ ನೊವೆಲ್ ಕೊರೊನಾ ವೈರಸ್ ಎಂದು ಹೆಸರಿಸಲಾಗಿದ್ದು, ಹೊಸ ಜಾತಿಗೆ ಸೇರಿದ ಈ ವೈರಸ್ ಹಿಂದೆಂದೂ ಕಾಣಿಸಿಕೊಂಡಿರಲಿಲ್ಲ ಎಂದು ಹೇಳಲಾಗುತ್ತದೆ.

ಪ್ರಾಣಿಗಳಿಂದ ಮನುಷ್ಯ ಜೀವಿಗೆ ಕೊರೊನಾ ವೈರಸ್

ಪ್ರಾಣಿಗಳಿಂದ ಮನುಷ್ಯ ಜೀವಿಗೆ ಕೊರೊನಾ ವೈರಸ್

ಕೊರೊನಾ ವೈರಸ್ ಒಂದು ಜ್ಯೂನಾಟಿಕ್ ವೈರಸ್ ಆಗಿದೆ. ಅಂದರೆ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವಂತಾ ಮಾರಕ ಸೋಂಕು ಎಂದು ತಿಳಿದು ಬಂದಿದೆ. ಆದರೆ ಯಾವ ಪ್ರಾಣಿಗಳಿಂದ ಹರಡಿದೆ ಎಂಬುದು ಇದುವರೆಗೂ ಸ್ಪಷ್ಟವಾಗಿಲ್ಲ. ಸಾರ್ಸ್ ಕೊರೊನಾ ವೈರಸ್ ರೋಗವು ಬೆಕ್ಕಿನಿಂದ ಮನುಷ್ಯರಿಗೆ ಹರಡುತ್ತವೆ. ಮೆರ್ಸ್ ಕೊರೊನಾ ವೈರಸ್ ಒಂಟೆಗಳಿಂದ ಮನುಷ್ಯರಿಗೆ ಹರಡುತ್ತದೆ. ಇನ್ನು, ನೊವೆಲ್ ಕೊರೊನಾ ವೈರಸ್ ಇದುವರೆಗೂ ಪ್ರಾಣಿಗಳಿಗಷ್ಟೇ ಹರಡುವ ಸೋಂಕು ಎಂದು ತಿಳಿಯಲಾಗಿತ್ತು. ಇದೀಗ ನೊವೆಲ್ ಕೊರೊನಾ ವೈರಸ್ ಪ್ರಾಣಿಯಿಂದ ಮನುಷ್ಯರಿಗೂ ಹರಡಿದ್ದು ಆತಂಕವನ್ನು ಸೃಷ್ಟಿಸಿದೆ.

ಕೊವಿಡ್-19 ಸೋಂಕಿತರ ಲಕ್ಷಣಗಳು ಏನು ಗೊತ್ತಾ?

ಕೊವಿಡ್-19 ಸೋಂಕಿತರ ಲಕ್ಷಣಗಳು ಏನು ಗೊತ್ತಾ?

ನೊವೆಲ್ ಕೊರೊನಾ ವೈರಸ್ ಸೋಂಕಿತರಿಗೆ ಪ್ರಾಥಮಿಕ ಹಂತದಲ್ಲಿ ಉಸಿರಾಟ ತೊಂದರೆ ಸೇರಿದಂತೆ ಶೀತ, ಜ್ವರ, ಕಫ, ಕೆಮ್ಮು, ಶ್ವಾಸಕೋಶದಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇನ್ನು, ಎರಡನೇ ಹಂತದಲ್ಲಿ ಇದರ ಜೊತೆಗೆ ನಿಮೋನಿಯಾ, ತೀವ್ರ ಉಸಿರಾಟ ತೊಂದರೆ ಹಾಗೂ ಕಿಡ್ನಿ ವೈಫಲ್ಯದ ಸಾಧ್ಯತೆಗಳಿದ್ದು, ಅಂತಿವಮವಾಗಿ ಸೋಂಕಿತರು ಪ್ರಾಣ ಬಿಡುವ ಅಪಾಯವಿರುತ್ತದೆ.

ಎಂಥವರು ಮಾಸ್ಕ್ ಗಳನ್ನು ಧರಿಸಿದರೆ ಒಳಿತು?

ಎಂಥವರು ಮಾಸ್ಕ್ ಗಳನ್ನು ಧರಿಸಿದರೆ ಒಳಿತು?

ಕೊರೊನಾ ವೈರಸ್ ಕಾಣಿಸಿಕೊಂಡಿದ್ದೇ ಕಾಣಿಸಿಕೊಂಡಿದ್ದು. ಎಲ್ಲರೂ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಓಡಾಡುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ತಜ್ಞವೈದ್ಯರ ಪ್ರಕಾರ ಉಸಿರಾಟ ಸಮಸ್ಯೆ ಮತ್ತು ಸೋಂಕಿತ ಲಕ್ಷಣಗಳು ಕಾಣಿಸಿಕೊಂಡಿರುವ ಜನರು ಮಾತ್ರ ಮಾಸ್ಕ್ ಧರಿಸಿದರೆ ಸಾಕು. ಇದರ ಜೊತೆಗೆ ಜನಸಂದಣಿ ಮಧ್ಯೆ ಕಾರ್ಯ ನಿರ್ವಹಿಸುವ ಜನರು ಮಾಸ್ಕ್ ಧರಿಸಿದರೆ ಒಳಿತು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಕೊವಿಡ್-19 ಹರಡದಿರಲು ಏನು ಮಾಡಬೇಕು?

ಕೊವಿಡ್-19 ಹರಡದಿರಲು ಏನು ಮಾಡಬೇಕು?

ನೊವೆಲ್ ಕೊರೊನಾ ವೈರಸ್ ಕಾಣಿಸಿಕೊಳ್ಳುವುದಕ್ಕೂ ಮೊದಲು ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡರೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ಸಲಹೆ ನೀಡುತ್ತಾರೆ. ಹಾಗಾದ್ರೆ, ವೈದ್ಯರ ಸಲಹೆ ಏನು ಎಂಬುದನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ಕೊರೊನಾ ಹರಡದಂತೆ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು:

- ಮುಖ ಹಾಗೂ ಮೂಗನ್ನು ಟಿಶ್ಯೂ ಅಥವಾ ಕರ್ಚಿಫ್ ನಿಂದ ಮುಚ್ಚಿಕೊಳ್ಳಬೇಕು

- ದಿನದಲ್ಲಿ ಆಗಾಗ ಕೈಗಳನ್ನು ಶುದ್ಧವಾಗಿ ತೊಳೆದುಕೊಳ್ಳುವುದು

- ಜನಸಂದಣಿ ಇರುವ ಪ್ರದೇಶಗಳಿಂದ ಆದಷ್ಟು ಅಂತರ ಕಾಯ್ದುಕೊಳ್ಳಬೇಕು

- ಆರೋಗ್ಯದಲ್ಲಿ ಏರುಪೇರಾದರೆ ಆದಷ್ಟು ಮನೆಯಲ್ಲೇ ಉಳಿಯುವುದು

- ಹೆಚ್ಚಾಗಿ ನೀರು ಕುಡಿಯುವುದು ಮತ್ತು ನ್ಯೂಟ್ರಿಶಿಯನ್ ಯುಕ್ತ ಆಹಾರ ಸೇವಿಸುವುದು

- ಸೋಂಕಿತ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು

ನೊವೆಲ್ ಕೊರೊನಾ ವೈರಸ್ ತಡೆಗಟ್ಟುವ ಕ್ರಮಗಳು

ನೊವೆಲ್ ಕೊರೊನಾ ವೈರಸ್ ತಡೆಗಟ್ಟುವ ಕ್ರಮಗಳು

ನೊವೆಲ್ ಕೊರೊನಾ ವೈರಸ್ ಸೋಂಕು ಹರಡದಂತೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ತಜ್ಞವೈದ್ಯರು ಸಲಹೆ ನೀಡುತ್ತಾರೆ.

ಕೊರೊನಾ ನಿಯಂತ್ರಣಕ್ಕೆ ಅನುಸರಿಸಬೇಕಾದ ಕ್ರಮಗಳು:

- ಕೆಮ್ಮುವಾಗ ಮತ್ತು ಸೀನುವಾಗ ಕೈಗಳನ್ನು ಅಡ್ಡ ಹಿಡಿಯುವುದು

- ಪದೇ ಪದೇ ಕೈಗಳಿಂದ ಮುಖ, ಕಣ್ಣು, ಮೂಗು ಮಟ್ಟಿಕೊಳ್ಳಬಾರದು

- ಮುತ್ತಿಡುವುದು, ಅಪ್ಪಿಕೊಳ್ಳುವುದು, ಹಸ್ತಲಾಘವ ಮಾಡುವುದು ಅಪಾಯ

- ಸಾರ್ವಜನಿಕ ಪ್ರದೇಶಗಳಲ್ಲಿ ಉಗುಳುವುದರಿಂದ ಸೋಂಕು ಹರಡುವ ಸಾಧ್ಯತೆ

- ವೈದ್ಯರನ್ನು ಸಂಪರ್ಕಿಸದೇ ಔಷಧಿಗಳನ್ನು ತೆಗೆದುಕೊಳ್ಳುವುದು ಸೂಕ್ತವಲ್ಲ

- ಬಳಸಿರುವ ಕರವಸ್ತ್ರ ಮತ್ತು ಟಿಶ್ಯೂ ಪೇಪರ್ ಗಳನ್ನು ಸಾರ್ವಜನಿಕವಾಗಿ ಎಸೆಯಬಾರದು

English summary
Complete Coverage About Deadly Novel Coronavirus And Death Cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X