ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಬಿಎಚ್' ಭಾರತ್ ಸರಣಿ ಎಂದರೇನು? ಪ್ರಯೋಜನವೇನು?, ಅರ್ಜಿ ಸಲ್ಲಿಸುವುದು ಹೇಗೆ?

|
Google Oneindia Kannada News

ವಾಹನಗಳನ್ನು ಯಾವುದೇ ರೀತಿ ತೊಂದರೆ ಇಲ್ಲದೆ ವರ್ಗಾವಣೆಯನ್ನು ಸುಲಭಗೊಳಿಸಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಹೊಸ ವಾಹನಗಳಿಗೆ ಹೊಸ ನೋಂದಣಿ ಪದ್ಧತಿಯನ್ನು ಪರಿಚಯಿಸಿದೆ.

ಅಂದರೆ 'ಭಾರತ್ ಸರಣಿ' (ಬಿಎಚ್-ಸರಣಿ). ವಾಹನದ ಮಾಲೀಕರು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸ್ಥಳಾಂತರಗೊಂಡಾಗ ಈ ನೋಂದಣಿ ಗುರುತು ಹೊಂದಿರುವ ವಾಹನಕ್ಕೆ ಹೊಸ ನೋಂದಣಿ ಗುರುತು ನೀಡುವ ಅಗತ್ಯವಿಲ್ಲ.

ರಕ್ಷಣಾ ಸಿಬ್ಬಂದಿಗೆ ಈ ಸೌಲಭ್ಯವು ಸ್ವಯಂಪ್ರೇರಿತ ಆಧಾರದ ಮೇಲೆ ಲಭ್ಯವಿರುತ್ತದೆ ಎಂದು ಸಚಿವಾಲಯ ಹೇಳಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ನೌಕರರು, ಮತ್ತು ಕೇಂದ್ರ ಮತ್ತು State PSUಗಳು ಸಹ ಈ ಸೇವೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಇವುಗಳ ಜೊತೆಗೆ, ಖಾಸಗಿ ವಲಯದ ಕಂಪನಿಗಳು, 4 ಅಥವಾ ಹೆಚ್ಚಿನ ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ತಮ್ಮ ಕಚೇರಿಗಳನ್ನು ಹೊಂದಿವೆ.

What Is New BH Bharat Series for Vehicles? Know Benefits And How To Apply In Kannada

ಇದೀಗ ಕೇಂದ್ರ ಸರ್ಕಾರ ಪರಿಚಯಿಸಿರುವ ಭಾರತ್​ ಸರಣಿ ನೋಂದಣಿ ಪದ್ಧತಿಯಲ್ಲಿ, ವಾಹನ ಮಾಲೀಕರು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಅಥವಾ ಕೇಂದ್ರಾಡಳಿತ ಪ್ರದೇಶಕ್ಕೆ ಹೋದಾಗ ಅಲ್ಲಿ ಮರು ನೋಂದಣಿ ಅಗತ್ಯವಿರುವುದಿಲ್ಲ.

ಸದ್ಯ ಭಾರತ್​ ಸರಣಿ (BH-Series) ನೋಂದಣಿ ಸೌಲಭ್ಯ ಸ್ವಯಂಪ್ರೇರಿತವಾಗಿದ್ದು, ಕಡ್ಡಾಯ ಮಾಡಿಲ್ಲ. ಸೆಪ್ಟೆಂಬರ್​ 15ರಿಂದ ಇದು ಪ್ರಾರಂಭವಾಗಲಿದೆ ಎನ್ನಲಾಗಿದೆ. ಇದೀಗ, ರಕ್ಷಣಾ ಸಿಬ್ಬಂದಿ, ಕೇಂದ್ರ ಸರ್ಕಾರಿ, ರಾಜ್ಯ ಸರ್ಕಾರಿ, ಕೇಂದ್ರ ಮತ್ತು ರಾಜ್ಯ ಸಾರ್ವಜನಿಕ ವಲಯಗಳಲ್ಲಿ ಕೆಲಸ ಮಾಡುವವರು ಮತ್ತು ನಾಲ್ಕು ಅಥವಾ ಅದಕ್ಕಿಂತಲೂ ಹೆಚ್ಚು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಶಾಖೆಗಳನ್ನು ಹೊಂದಿರುವ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಸ್ವಯಂ ಪ್ರೇರಿತಾಗಿ ಈ ಬಿಎಚ್​ ಸರಣಿ ನೋಂದಣಿ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಬಹುದು.

ಕೇಂದ್ರ ಮೋಟಾರು ವಾಹನಗಳ(12ನೇ ತಿದ್ದುಪಡಿ) ನಿಯಮವು ಸೆ.15ರಿಂದ ಜಾರಿಗೆ ಬರಲಿದೆ. ಬಿಎಚ್-ಸರಣಿಯ ವಾಹನಗಳಿಗೆ ನೋಂದಣಿಯನ್ನು ಆನ್‌ಲೈನ್ ಮೂಲಕ ಮಾಡಲಾಗುತ್ತದೆ.

ಸದ್ಯ ಇರುವ ನಿಯಮದ ಪ್ರಕಾರ ಯಾವುದೇ ವಾಹನ ಮಾಲೀಕರು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸ್ಥಳಾಂತರಗೊಂಡಾಗ ಆ ರಾಜ್ಯದಲ್ಲಿ 12 ತಿಂಗಳೊಳಗಾಗಿ ಮರು ನೋಂದಣಿ ಮಾಡಿಸಿಕೊಳ್ಳಬೇಕು.

'ಬಿಎಚ್' ಭಾರತ್ ಸರಣಿಗೆ ಅರ್ಜಿ ಸಲ್ಲಿಸುವುದು ಹೇಗೆ..?

ವಾಹನವನ್ನು ಮರು ನೋಂದಾಯಿಸಲು ಪ್ರಯಾಣಿಕ ವಾಹನದ ಬಳಕೆದಾರರು ಈ ಕೆಳಗಿನ ಕ್ರಮಗಳನ್ನು ಅನುಸರಿಸಬೇಕು.

*ಮತ್ತೊಂದು ರಾಜ್ಯದಲ್ಲಿ ಹೊಸ ನೋಂದಣಿ ಸಂಖ್ಯೆ ಪಡೆದುಕೊಳ್ಳಲು ಪ್ರಸ್ತುತ ನೀವು ಇರುವ ರಾಜ್ಯದಿಂದ 'ನೋ ಆಬ್ಜೆಕ್ಷನ್ ಸರ್ಟಿಫಿಕೇಟ್' ಪಡೆದುಕೊಳ್ಳಬೇಕು.

*NOC ಪಡೆದ ನಂತರ ಹೊಸ ರಾಜ್ಯದಲ್ಲಿ ಪ್ರೊರೇಟ್(prorate) ಆಧಾರದ ಮೇಲೆ ರಸ್ತೆ ತೆರಿಗೆಯನ್ನು ಪಾವತಿಸಿದ ನಂತರ ನಿಮಗೆ ಹೊಸ ನೋಂದಣಿ ಸಂಖ್ಯೆಯನ್ನು ನೀಡಲಾಗುತ್ತದೆ

* ಆನಂತರ ನೀವು ಪರ ರಾಜ್ಯಗಳ ಆಧಾರದ ಮೇಲೆ ಮೂಲ ರಾಜ್ಯದಲ್ಲಿ ರಸ್ತೆ ತೆರಿಗೆ ಮರುಪಾವತಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.

ಹಾಗೆಯೇ ಬೇರೆ ರಾಜ್ಯಗಳ ಆಧಾರದ ಮೇಲೆ ಮಾತ್ರ ರಾಜ್ಯದಿಂದ ಮರುಪಾವತಿ ಪಡೆಯಲು ಈ ನಿಬಂಧನೆಯು ಬಹಳ ತೊಡಕಿನ ಪ್ರಕ್ರಿಯೆಯಾಗಿರುತ್ತದೆ. ನಿಯಮಗಳು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಬದಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು.

ವಾಹನಗಳಿಗೆ 'ಬಿಎಚ್' ಭಾರತ್ ಸರಣಿಯ ಪ್ರಯೋಜನಗಳೇನು?

ಮೋಟಾರು ವಾಹನ ತೆರಿಗೆ(Motor Vehicles Tax)ಯನ್ನು 2 ವರ್ಷ ಅಥವಾ 4, 6, 8 ವರ್ಷಗಳವರೆಗೆ ವಿಧಿಸಲಾಗುತ್ತದೆ. ಈ ಯೋಜನೆಯು ಹೊಸ ರಾಜ್ಯ/ಕೇಂದ್ರಾಡಳಿತ ಪ್ರದೇಶಕ್ಕೆ ಸ್ಥಳಾಂತರಗೊಂಡ ನಂತರ ಭಾರತದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಾದ್ಯಂತ ವೈಯಕ್ತಿಕ ವಾಹನಗಳ ಉಚಿತ ಸಂಚಾರವನ್ನು ಸುಲಭಗೊಳಿಸುತ್ತದೆ. 14ನೇ ವರ್ಷ ಪೂರ್ಣಗೊಂಡ ನಂತರ ಮೋಟಾರು ವಾಹನ ತೆರಿಗೆಯನ್ನು ವಾರ್ಷಿಕವಾಗಿ ವಿಧಿಸಲಾಗುತ್ತದೆ. ಅದು ಆ ವಾಹನಕ್ಕೆ ಈ ಹಿಂದೆ ವಿಧಿಸಿದ ಮೊತ್ತದ ಅರ್ಧದಷ್ಟು ಆಗಿರುತ್ತದೆ.

ನೋಂದಣಿ ಗುರುತು :

YH BH #### XX

YY - ಮೊದಲ ನೋಂದಣಿಯ ವರ್ಷ

BH- ಭಾರತ್ ಸರಣಿಗಾಗಿ ಕೋಡ್

####- 0000 ರಿಂದ 9999 (randomized)

XX- Alphabets (AA to ZZ)

ತೆರಿಗೆ ಪದ್ಧತಿ ವಿವರ:
ಬಿಎಚ್​ ಸರಣಿ ಪದ್ಧತಿಯಲ್ಲಿ ನೋಂದಣಿ ಮಾಡಿಕೊಂಡ ವಾಹನ ಮಾಲೀಕರಿಗೆ, ಆಯಾ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶ ಸರ್ಕಾರಗಳು ಆಯಾ ವಾಹನಗಳ ಮೌಲ್ಯಗಳ ಆಧಾರದ ಮೇಲೆ ತೆರಿಗೆ ವಿಧಿಸಲಾಗುತ್ತದೆ. 1

0 ಲಕ್ಷ ರೂ.ಮೌಲ್ಯದವರೆಗಿನ ವಾಹನಗಳಿಗೆ ಶೇ.8, 10-20 ಲಕ್ಷ ರೂ.ವರೆಗಿನ ಮೌಲ್ಯದ ವಾಹನಗಳಿಗೆ ಶೇ.10 ಮತ್ತು 20 ಲಕ್ಷಕ್ಕೂ ಅಧಿಕ ಮೌಲ್ಯದ ವಾಹನಗಳಾದರೆ ಶೇ.12ರಷ್ಟು ವಾಹನ ತೆರಿಗೆ ವಿಧಿಸಲಾಗುತ್ತದೆ. ಇನ್ನು ರಸ್ತೆ ತೆರಿಗೆಯಲ್ಲೂ ನಿಯಮ ಸಡಿಲಿಕೆ ಮಾಡಲಾಗಿದ್ದು, ತೆರಿಗೆ ಪಾವತಿಗೆ ಎರಡು ವರ್ಷ ಸಮಯ ಇರುತ್ತದೆ

English summary
In order to facilitate seamless transfer of vehicles, the Ministry of Road Transport & Highwaysvide notification has introduced a new registration mark for new vehicles i.e. “Bharat series (BH-series)”.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X