ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏನಿದು ರಾಷ್ಟ್ರೀಯ ನೇಮಕಾತಿ ಸಂಸ್ಥೆ? ಉದ್ಯೋಗಾಕಾಂಕ್ಷಿಗಳಿಗೆ ಇದರಿಂದ ಲಾಭವೇನು? ಇಲ್ಲಿದೆ ವಿವರ

|
Google Oneindia Kannada News

ನವದೆಹಲಿ, ಆಗಸ್ಟ್ 19: ಸರ್ಕಾರ ಮತ್ತು ರಾಜ್ಯಗಳ ಒಡೆತನದ ಬ್ಯಾಂಕ್‌ಗಳಲ್ಲಿನ ಉದ್ಯೋಗಗಳಿಗೆ ಸಾಮಾನ್ಯ ಅರ್ಹತಾ ಪರೀಕ್ಷೆಗಳನ್ನು ನಡೆಸಲು ರಾಷ್ಟ್ರೀಯ ನೇಮಕಾತಿ ಸಂಸ್ಥೆ (ಎನ್‌ಆರ್‌ಎ) ಸ್ಥಾಪಿಸುವ ಸಂಬಂಧ ನೀಡಲಾಗಿದ್ದ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರ ಬುಧವಾರ ಅನುಮೋದನೆ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಈ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.

ಸ್ಥಳೀಯ ಜನರಿಗೇ ಸರ್ಕಾರಿ ಉದ್ಯೋಗ ಮೀಸಲು: ಮಧ್ಯಪ್ರದೇಶದ ಮಾದರಿ ನಿರ್ಧಾರಸ್ಥಳೀಯ ಜನರಿಗೇ ಸರ್ಕಾರಿ ಉದ್ಯೋಗ ಮೀಸಲು: ಮಧ್ಯಪ್ರದೇಶದ ಮಾದರಿ ನಿರ್ಧಾರ

ಈ ಸಾಮಾನ್ಯ ಅರ್ಹತಾ ಪರೀಕ್ಷೆಯು ದೇಶದ ಯುವಜನರು ಸುಲಭವಾಗಿ ಉದ್ಯೋಗಗಳನ್ನು ಹುಡುಕಲು ನೆರವಾಗಲಿದೆ ಎಂದು ಜಾವಡೇಕರ್ ಹೇಳಿದ್ದಾರೆ. ವಿವಿಧ ಸರ್ಕಾರಿ ಹುದ್ದೆಗಳಿಗೆ ಆಕಾಂಕ್ಷಿಗಳು ಹಲವು ಪರೀಕ್ಷೆಗಳನ್ನು ಬರೆಯಲು ಮತ್ತು ಅವುಗಳಿಗೆ ಪ್ರತ್ಯೇಕವಾಗಿ ನಿರ್ದಿಷ್ಟ ಶುಲ್ಕ ಪಾವತಿ ಮಾಡುವಂತಹ ಕಷ್ಟಗಳನ್ನು ಎನ್‌ಆರ್‌ಎ ತೆಗೆದು ಹಾಕಲಿದೆ. ಹಲವು ಸರ್ಕಾರಿ ಉದ್ಯೋಗಗಳಿಗೆ ಒಂದು ಸಾಮಾನ್ಯ ಪರೀಕ್ಷೆ ನಡೆಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ. ಮುಂದೆ ಓದಿ...

ಮೂರು ಸಂಸ್ಥೆಗಳ ನೇಮಕಾತಿ ಪರೀಕ್ಷೆ

ಮೂರು ಸಂಸ್ಥೆಗಳ ನೇಮಕಾತಿ ಪರೀಕ್ಷೆ

ಕೇಂದ್ರ ಸರ್ಕಾರದಲ್ಲಿ 20ಕ್ಕೂ ಹೆಚ್ಚು ನೇಮಕಾತಿ ಸಂಸ್ಥೆಗಳಿವೆ. ಅವುಗಳಲ್ಲಿ ನಾವು ರೇಲ್ವೇಸ್, ಬ್ಯಾಂಕ್‌ಗಳು ಮತ್ತು ಎಸ್‌ಎಸ್‌ಸಿ ಪರೀಕ್ಷೆಗಳನ್ನು ರಾಷ್ಟ್ರೀಯ ನೇಮಕಾತಿ ಸಂಸ್ಥೆಯಡಿ ತರುತ್ತಿದ್ದೇವೆ. ಉಳಿದ ಸಂಸ್ಥೆಗಳನ್ನೂ ಹಂತ ಹಂತವಾಗಿ ಇದರ ಅಡಿಗೆ ತರಲಿದ್ದೇವೆ. ರೈಲ್ವೆ, ಬ್ಯಾಂಕ್ ಮತ್ತು ಎಸ್‌ಎಸ್‌ಸಿಯ ಗ್ರೂಪ್ ಬಿ ಮತ್ತು ಗ್ರೂಪ್ ಸಿ ವಿಭಾಗಗಳಿಗೆ ಪ್ರತಿ ವರ್ಷ 1.25 ಲಕ್ಷ ಉದ್ಯೋಗ ಖಾಲಿ ಇರುತ್ತವೆ. ಅವುಗಳಿಗೆ 2.5-3 ಕೋಟಿ ಜನರು ಅರ್ಜಿ ಸಲ್ಲಿಸುತ್ತಾರೆ. ಈ ಮೂರೂ ಸಂಸ್ಥೆಗಳಿಗೆ ಆನ್‌ಲೈನ್‌ನಲ್ಲಿ ಟೈರ್-1 ಪರೀಕ್ಷೆಯನ್ನು ಎನ್‌ಆರ್‌ಎ ನಡೆಸಲಿದೆ ಎಂದು ಸಿಬ್ಬಂದಿ ತರಬೇತಿ ಇಲಾಖೆ ಕಾರ್ಯದರ್ಶಿ ಸಿ. ಚಂದ್ರಮೌಳಿ ವಿವರಿಸಿದ್ದಾರೆ.

12 ಭಾಷೆಗಳಲ್ಲಿ ಪರೀಕ್ಷೆ

12 ಭಾಷೆಗಳಲ್ಲಿ ಪರೀಕ್ಷೆ

ಸಂಸ್ಥೆಯು 12 ಭಾಷೆಗಳಲ್ಲಿ ಪರೀಕ್ಷೆಗಳನ್ನು ನಡೆಸುತ್ತದೆ. ಅವುಗಳನ್ನು ಮತ್ತಷ್ಟು ಪ್ರಾದೇಶಿಕ ಭಾಷೆಗಳಿಗೆ ವಿಸ್ತರಿಸಲಾಗುವುದು. ಇದರಲ್ಲಿ ಪಡೆಯುವ ಅಂಕಗಳು ಮೂರು ವರ್ಷಗಳ ವಾಯ್ದೆ ಹೊಂದಿರುತ್ತವೆ. ಅಭ್ಯರ್ಥಿಗಳು ತಮ್ಮ ಅಂಕವನ್ನು ಉತ್ತಮಗೊಳಿಸಲು ಪುನಃ ಪರೀಕ್ಷೆ ಬರೆಯಲು ಅವಕಾಶವಿದೆ. ಇದಕ್ಕೆ ಒಂದೇ ನೋಂದಣಿ, ಒಂದೇ ಬಾರಿ ಶುಲ್ಕ ಮತ್ತು ಒಂದೇ ರೀತಿಯ ಪಠ್ಯ ಇರಲಿದ್ದು, ಅಭ್ಯರ್ಥಿಗಳಿಗೆ ಹೆಚ್ಚಿನ ಪ್ರಯೋಜನವಾಗಲಿದೆ.

Fake: ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದಲ್ಲಿ ಹೀಗೊಂದು ವಿಭಾಗ ಅಸ್ತಿತ್ವದಲ್ಲಿಯೇ ಇಲ್ಲ!Fake: ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದಲ್ಲಿ ಹೀಗೊಂದು ವಿಭಾಗ ಅಸ್ತಿತ್ವದಲ್ಲಿಯೇ ಇಲ್ಲ!

ಮುಖ್ಯ ಅಂಶಗಳು

ಮುಖ್ಯ ಅಂಶಗಳು

* ಎನ್‌ಆರ್‌ಎ ಸೊಸೈಟೀಸ್ ಆಕ್ಟ್ ಅಡಿ ಸ್ವಾಯತ್ತ ಸಂಸ್ಥೆಯಾಗಿರಲಿದೆ.

* ಎನ್‌ಆರ್‌ಎ ಟೈರ್-1 ಪರೀಕ್ಷೆ, ಸಾಮಾನ್ಯ ಅರ್ಹತಾ ಪರೀಕ್ಷೆ (ಸಿಇಟಿ) ನಡೆಸುತ್ತದೆ.

* ಸಿಇಟಿಯು ಆನ್‌ಲೈನ್ ಪರೀಕ್ಷೆಯಾಗಿರಲಿದೆ.

* ಪ್ರತಿ ಜಿಲ್ಲೆಯೂ ಕನಿಷ್ಠ ಒಂದು ಪರೀಕ್ಷಾ ಕೇಂದ್ರ ಹೊಂದಿರಲಿದೆ.

ಏನಿದು ಎನ್‌ಆರ್‌ಎ?

ಏನಿದು ಎನ್‌ಆರ್‌ಎ?

ರಾಷ್ಟ್ರೀಯ ನೇಮಕಾತಿ ಸಂಸ್ಥೆಯು (ಎನ್‌ಆರ್‌ಎ) ಒಂದು ಬಹು ಸಾಂಸ್ಥಿಕ ಘಟಕವಾಗಿದೆ. ಇದು ಗ್ರೂಪ್ ಬಿ ಮತ್ತು ಸಿ (ತಾಂತ್ರಿಕವಲ್ಲದ) ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು/ ಸಿದ್ಧಪಡಿಸಲು ಸಾಮಾನ್ಯ ಅರ್ಹತಾ ಪರೀಕ್ಷೆ ನಡೆಸುತ್ತದೆ.

ಪ್ರಸ್ತುತ ಇದು ರೈಲ್ವೆ, ಹಣಕಾಸು ಸಚಿವಾಲಯ/ಹಣಕಾಸು ಸೇವೆಗಳ ಇಲಾಖೆಗಳು, ಎಸ್‌ಎಸ್‌ಸಿ, ಆರ್‌ಆರ್‌ಬಿ ಮತ್ತು ಐಬಿಪಿಎಸ್‌ಗಳನ್ನು ಪ್ರತಿನಿಧಿಸುತ್ತದೆ. ಕೇಂದ್ರ ಸರ್ಕಾರದ ನೇಮಕಾತಿ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ಮತ್ತು ತಾಂತ್ರಿಕತೆಯನ್ನು ಅಳವಡಿಸುವ ವಿಶೇಷ ಸಂಸ್ಥೆಯಾಗಿರಲಿದೆ.

ಪರೀಕ್ಷಾ ಕೇಂದ್ರಗಳು

ಪರೀಕ್ಷಾ ಕೇಂದ್ರಗಳು

ಪರೀಕ್ಷೆ ಬರೆಯುವ ಅಭ್ಯರ್ಥಿಗಳು ದೂರದ ಊರುಗಳಿಂದ ಪ್ರಯಾಣಿಸಬೇಕಿರುವುದರಿಂದ ದೇಶದ ಪ್ರತಿ ಜಿಲ್ಲೆಯಲ್ಲಿ ಒಂದಾದರೂ ಪರೀಕ್ಷಾ ಕೇಂದ್ರ ಸ್ಥಾಪಿಸುವ ಮೂಲಕ ಅನುಕೂಲ ಮಾಡಿಕೊಡಲಿದೆ. ಇದು ಗ್ರಾಮೀಣ ಭಾಗದ ಅಭ್ಯರ್ಥಿಗಳ ವೆಚ್ಚ, ಸಮಯ, ಸುರಕ್ಷತೆ ಮತ್ತು ಪ್ರಯತ್ನಗಳ ಉಳಿತಾಯಕ್ಕೆ ನೆರವಾಗಲಿದೆ. ಹಾಗೆಯೇ ಕೇಂದ್ರ ಸರ್ಕಾರಿ ನೌಕರಿಗಳಿಗೆ ಸೇರಿಕೊಳ್ಳಲು ಗ್ರಾಮೀಣ ಭಾಗದ ಜನರಿಗೆ ಹೆಚ್ಚು ಪ್ರೇರಣೆ ಹಾಗೂ ಅವಕಾಶ ಒದಗಿಸಲಿದೆ.

ಬಡ ಅಭ್ಯರ್ಥಿಗಳು ನಿರಾಳ

ಬಡ ಅಭ್ಯರ್ಥಿಗಳು ನಿರಾಳ

ವಿವಿಧ ಸಂಸ್ಥೆಗಳಲ್ಲಿ ನೇಮಕಾತಿ ನಡೆಯುವಾಗ ಅಭ್ಯರ್ಥಿಗಳು ಪ್ರತಿ ಬಾರಿ ಪ್ರತ್ಯೇಕವಾಗಿ ಪರೀಕ್ಷೆಗಳನ್ನು ಬರೆಯಬೇಕಾಗುತ್ತದೆ. ಪ್ರತಿ ಪರೀಕ್ಷೆಗೂ ಪ್ರತ್ಯೇಕ ವೆಚ್ಚ ಭರಿಸುವುದಲ್ಲದೆ, ಅವರ ಪ್ರಯಾಣ, ವಸತಿ, ಊಟ ಮುಂತಾದವುಗಳಿಗೆ ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ಇದರಿಂದ ಬಡ ಅಭ್ಯರ್ಥಿಗಳು ಮತ್ತಷ್ಟು ಕಷ್ಟಪಡಬೇಕಾಗಿದೆ. ಎಲ್ಲ ಸಂಸ್ಥೆಗಳಿಗೂ ಒಂದೇ ಪರೀಕ್ಷೆಯು ದೊಡ್ಡ ಪ್ರಮಾಣದಲ್ಲಿ ಅಭ್ಯರ್ಥಿಗಳ ಆರ್ಥಿಕ ಹೊರೆಯನ್ನು ಕಡಿಮೆ ಮಾಡುತ್ತದೆ. ದೂರದ ಪರೀಕ್ಷಾ ಕೇಂದ್ರಗಳಿಗೆ ಹೋಗಬೇಕಾದ ಮಹಿಳಾ ಅಭ್ಯರ್ಥಿಗಳಿಗೂ ಇದರಿಂದ ಸಹಾಯವಾಗಲಿದೆ.

ಮೂರು ವರ್ಷಗಳ ವಾಯ್ದೆ

ಮೂರು ವರ್ಷಗಳ ವಾಯ್ದೆ

ಒಮ್ಮೆ ಸಿಇಟಿಯಲ್ಲಿ ಪಡೆದ ಅಂಕಗಳು, ಫಲಿತಾಂಶ ಘೋಷಣೆಯಾದ ದಿನಾಂಕದಿಂದ ಮೂರು ವರ್ಷಗಳವರೆಗೆ ವಾಯ್ದೆ ಹೊಂದಿರುತ್ತವೆ. ಗರಿಷ್ಠ ವಯೋಮಿತಿಯವರೆಗೂ ಪರೀಕ್ಷೆಗಳನ್ನು ಬರೆಯಲು ಅವಕಾಶವಿದ್ದು, ಪರೀಕ್ಷೆ ಬರೆಯುವ ಪ್ರಯತ್ನಕ್ಕೆ ಮಿತಿ ಹೇರಿಲ್ಲ. ಈ ಪರೀಕ್ಷೆಗಳಲ್ಲಿ ಅವರು ಪಡೆದ ಅಧಿಕ ಅಂಕಗಳನ್ನು ಪರಿಗಣಿಸಲಾಗುತ್ತದೆ. ಗರಿಷ್ಠ ವಯೋಮಿತಿಯನ್ನು ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಇತರೆ ವರ್ಗಗಳಿಗೆ ಸರ್ಕಾರದ ನೀತಿಗಳ ಅಡಿಯಲ್ಲಿ ಸಡಿಲಿಸಬಹುದಾಗಿದೆ.

ಏಕರೂಪದ, ಗುಣಮಟ್ಟದ ಪಠ್ಯಕ್ರಮ

ಏಕರೂಪದ, ಗುಣಮಟ್ಟದ ಪಠ್ಯಕ್ರಮ

ಪದವಿ, 12ನೇ ತರಗತಿ ಮತ್ತು 10ನೇ ತರಗತಿಗಳ ತಾಂತ್ರಿಕೇತರ ಹುದ್ದೆಗಳ ಪರೀಕ್ಷೆಗಳಿಗೆ ಮೂರು ಹಂತದ ಪ್ರತ್ಯೇಕ ಸಿಇಟಿಗಳನ್ನು ನಡೆಸುತ್ತದೆ. ಸಿಇಟಿಯಲ್ಲಿ ಪಡೆದ ಅಂಕಗಳ ಆಧಾರದಲ್ಲಿ ಟೈರ್ 2, 3 ಮುಂತಾದ ವಿಶೇಷ ಹಂತಗಳಿಗೆ ಪ್ರತ್ಯೇಕ ಪರೀಕ್ಷೆಗಳನ್ನು ನಡೆಸಿ ಅಂತಿಮ ನೇಮಕಾತಿ ಆಯ್ಕೆ ಮಾಡಲಾಗುತ್ತದೆ. ಈ ಪರೀಕ್ಷೆಗಳಿಗೆ ಇರುವ ಪಠ್ಯಕ್ರಮ ಸಾಮಾನ್ಯವಾಗಿರಲಿದ್ದು, ಗುಣಮಟ್ಟಕ್ಕೆ ಆದ್ಯತೆ ನೀಡಲಾಗುತ್ತದೆ. ಇದರಿಂದ ಪ್ರತಿ ಪರೀಕ್ಷೆಗಳಿಗೂ ಪ್ರತ್ಯೇಕ ಪಠ್ಯಕ್ರಮದಡಿ ತಯಾರಾಗುವ ಶ್ರಮ ಅಭ್ಯರ್ಥಿಗಳಿಗೆ ಇರುವುದಿಲ್ಲ.

ಪರೀಕ್ಷೆ ಸಮಯ ಮತ್ತು ಕೇಂದ್ರಗಳ ಆಯ್ಕೆ

ಪರೀಕ್ಷೆ ಸಮಯ ಮತ್ತು ಕೇಂದ್ರಗಳ ಆಯ್ಕೆ

ಅಭ್ಯರ್ಥಿಗಳು ಒಂದು ಸಾಮಾನ್ಯ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಸಿಕೊಂಡು, ಕೇಂದ್ರಗಳ ಆಯ್ಕೆ ಮಾಡುವ ಅವಕಾಶವಿರುತ್ತದೆ. ಲಭ್ಯತೆಯ ಆಧಾರದಲ್ಲಿ ಅವರಿಗೆ ಪರೀಕ್ಷಾ ಕೇಂದ್ರಗಳನ್ನು ಹಂಚಿಕೆ ಮಾಡಲಾಗುತ್ತದೆ. ಅಭ್ಯರ್ಥಿಗಳು ಆಯ್ಕೆ ಮಾಡಿಕೊಂಡ ಕೇಂದ್ರದಲ್ಲಿಯೇ ಅವರ ಸಮಯದ ಆಯ್ಕೆಗೆ ಅನುಗುಣವಾಗಿ ಪರೀಕ್ಷೆ ತೆಗೆದುಕೊಳ್ಳುವಂತೆ ಅವಕಾಶ ನೀಡುವುದು ಮುಖ್ಯ ಗುರಿಯಾಗಿದೆ.

ಎನ್‌ಆರ್‌ಎ ಸ್ಥಾಪನೆಯಾಗಿದ್ದೇಕೆ?

ಎನ್‌ಆರ್‌ಎ ಸ್ಥಾಪನೆಯಾಗಿದ್ದೇಕೆ?

ಸಾಮಾನ್ಯ ಅರ್ಹತಾ ಪರೀಕ್ಷೆಯು ನೇಮಕಾತಿ ಕಾರ್ಯದ ಹಲವು ಘಟ್ಟಗಳನ್ನು ತೆಗೆದು ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ. ಕೆಲವು ಇಲಾಖೆಗಳು ಎರಡನೆಯ ಹಂತದ ಪರೀಕ್ಷೆಗಳನ್ನು ನಡೆಸಲು ಬಯಸದೆ ಸಿಇಟಿ ಅಂಕಗಳು, ದೈಹಿಕ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಗಳ ಆಧಾರದಲ್ಲಿ ನೇಮಕಾತಿಗೆ ಮುಂದಾಗುತ್ತವೆ. ಹೀಗಾಗಿ ನೇಮಕಾತಿ ಪ್ರಕ್ರಿಯೆಯನ್ನು ಎನ್‌ಆರ್‌ಎ ಸುಗಮಗೊಳಿಸುತ್ತದೆ ಹಾಗೂ ಅಭ್ಯರ್ಥಿಗಳು ಹಣ, ಸಮಯ ಮತ್ತು ಶ್ರಮದ ಉಳಿತಾಯ ಮಾಡಲು ನೆರವಾಗುತ್ತದೆ.

English summary
What is National Recruitment Agency in Kannada? One Common Eligibility Test (CET) for all govt jobs. Explainer of NRA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X