ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏನಿದು ಮಿಷನ್ ಶಕ್ತಿ- Anti- ಉಪಗ್ರಹ ಕ್ಷಿಪಣಿ ಅಸ್ತ್ರ?

|
Google Oneindia Kannada News

ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಾಹ್ನ ಮಾಡಿರುವ ಮಹತ್ವದ ಘೋಷಣೆಯಲ್ಲಿ ಕೇಳಿ ಬಂದ ಪ್ರಮುಖವಾಗಿ ಕೇಳಿ ಬಂದ ಪದಗಳು Low Earth Orbit (LEO) ಹಾಗೂ ಇನ್ನೊಂದು ಮಿಷನ್ ಶಕ್ತಿ.

ಮಿಷನ್ ಶಕ್ತಿ -ಇದು ಉಪಗ್ರಹ ಪ್ರತಿರೋಧಿ ಅಸ್ತ್ರ(Anti saatellite weapons) ವನ್ನು ಸ್ವದೇಶವಾಗಿ ನಿರ್ಮಿಸಿ, ಪರೀಕ್ಷಿಸಿ, ಪ್ರಯೋಗಿಸಲು ಆರಂಭವಾದ ಯೋಜನೆ.

ಮೋದಿ ಹೇಳಿದ 'ಲೋ ಅರ್ಥ್ ಆರ್ಬಿಟ್ ಸ್ಯಾಟಲೈಟ್' ತಂತ್ರಜ್ಞಾನ: ಏನಿದು ಎಲ್‌ಇಒ?ಮೋದಿ ಹೇಳಿದ 'ಲೋ ಅರ್ಥ್ ಆರ್ಬಿಟ್ ಸ್ಯಾಟಲೈಟ್' ತಂತ್ರಜ್ಞಾನ: ಏನಿದು ಎಲ್‌ಇಒ?

ಯುಪಿಎ ಸರ್ಕಾರದ ಕಾಲದಾಲ್ಲಿ ಈ ಯೋಜನೆ ಬಗ್ಗೆ ಪ್ರಸ್ತಾವನೆ ಬಂದಿದ್ದರೂ ಕಾರ್ಯಗತವಾಗಿರಲಿಲ್ಲ. ಸುಮಾರು 9 ವರ್ಷಗಳಿಂದ ಈ ಯೋಜನೆ ಬಗ್ಗೆ ಡಿಆರ್ ಡಿಒ ಹಾಗೂ ಇಸ್ರೋ ಇನ್ನಿತರ ಬಾಹ್ಯಾಕಾಶ ಸಂಬಂಧಿಸಿದ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ನಿರಂತರವಾಗಿ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ತೊಡಗಿದ್ದವು.

ನಮ್ಮ ವಿಜ್ಞಾನಿಗಳ ಪರಿಶ್ರಮ, ಮೋದಿ ಸರ್ಕಾರದ ದೃಢ ನಿರ್ಧಾರದಿಂದ ಈಗ ಬಾಹ್ಯಾಕಾಶದಲ್ಲಿ ಹೊಸ ವಿಕ್ರಮ ಸಾಧಿಸಲಾಗಿದೆ.

ಯುಎಸ್, ಚೀನಾ ಹಾಗೂ ರಷ್ಯಾ ನಂತರ ಬಾಹ್ಯಾಕಾಶ ಲೋಕದ ಸೂಪರ್ ಲೀಗ್ ನಲ್ಲಿ ಈ ತಂತ್ರಜ್ಞಾನವನ್ನು ಹೊಂದಿರುವ ದೇಶವಾಗಿ ಭಾರತ ಹೊರ ಹೊಮ್ಮಿದೆ.

ಮೋದಿ ಭಾಷಣ LIVE: ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲುಮೋದಿ ಭಾಷಣ LIVE: ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು

ಎಸ್ಯಾಟ್ ತಂತ್ರಜ್ಞಾನ ಪರೀಕ್ಷೆ

ಎಸ್ಯಾಟ್ ತಂತ್ರಜ್ಞಾನ ಪರೀಕ್ಷೆ

A-SAT ಮೂಲಕ ಕೆಳ ಹಂತದ ಕಕ್ಷೆ(LEO)ಯಲ್ಲಿರುವ ಉಪಗ್ರಹವನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಭಾರತ ಇದೀಗ ಹೊಂದಿದೆ. ನಮ್ಮ ವಿಜ್ಞಾನಿಗಳು ಈ ಪರೀಕ್ಷೆಯನ್ನು 3 ನಿಮಿಷದಲ್ಲಿ ಕಾರ್ಯಗತಗೊಳಿಸಿದ್ದಾರೆ.

1958ರಲ್ಲಿ ಅಮೆರಿಕ ಮೊಟ್ಟಮೊದಲ ಬಾರಿಗೆ ಎಸ್ಯಾಟ್ ತಂತ್ರಜ್ಞಾನ ಪರೀಕ್ಷೆ ಮಾಡಿತ್ತು. ಯುಎಸ್ಎಸ್ ಆರ್ 1964ರಲ್ಲಿ ಹಾಗೂ ಚೀನಾ 2007ರಲ್ಲಿ ಪರೀಕ್ಷೆ ಯಶಸ್ವಿಯಾಗಿ ಮಾಡಿತ್ತು. ರಷ್ಯಾ ತನ್ನ ಪಿಎಲ್ -19 ನುಡೋಲ್ ಕ್ಷಿಪಣಿ ಬಳಸಿತ್ತು.

ಭಾರತ ಸೂಪರ್ ಪವರ್ ಆಗುವತ್ತ

ಭಾರತ ಸೂಪರ್ ಪವರ್ ಆಗುವತ್ತ

2010ರಲ್ಲಿ ಈ ಯೋಜನೆ ಬಗ್ಗೆ ಡಿಆರ್ ಡಿಒ ಸುಳಿವು ನೀಡಿತ್ತು. ಶತ್ರು ರಾಷ್ಟ್ರಗಳ ಉಪಗ್ರಹವನ್ನು ಬಾಹ್ಯಾಕಾಶದಲ್ಲಿ ಹೊಡೆದುರುಳಿಸಬಹುದಾದ ಅಸ್ತ್ರವನ್ನು ವಿನ್ಯಾಸಗೊಳಿಸಿ, ತಯಾರಿಸಿ, ಬಳಸುವ ಅಗತ್ಯವಿದೆ ಎಂದು ತಿಳಿಸಲಾಗಿತ್ತು. ಈಗ ಇದು ಕಾರ್ಯಗತವಾಗಿದೆ.

ಭಾರತ ಉಪಗ್ರಹಗಳು

ಭಾರತ ಉಪಗ್ರಹಗಳು

ಕೃಷಿ, ನೈಸರ್ಗಿಕ ವಿಕೋಪ, ಸಂವಹನ, ಹವಾಮಾನ, ದೂರ ಸಂವೇದಿ, ರಕ್ಷಣೆ ಸೇರಿದಂತೆ ವಿವಿಧ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಭಾರತ ಉಪಗ್ರಹಗಳನ್ನು ಹೊಂದಿದೆ.ನಮ್ಮ ವಿಜ್ಞಾನಿಗಳ ಪರಿಶ್ರಮ, ಮೋದಿ ಸರ್ಕಾರದ ದೃಢ ನಿರ್ಧಾರದಿಂದ ಈಗ ಬಾಹ್ಯಾಕಾಶದಲ್ಲಿ ಹೊಸ ವಿಕ್ರಮ ಸಾಧಿಸಲಾಗಿದೆ.

ಎ ಸ್ಯಾಟ್ ಕ್ಷಿಪಣಿ ಪ್ರಯೋಗ ಯಶಸ್ವಿ

ಎ ಸ್ಯಾಟ್ ಕ್ಷಿಪಣಿ ಪ್ರಯೋಗ ಯಶಸ್ವಿ

ಈಗ ಎ ಸ್ಯಾಟ್ ಕ್ಷಿಪಣಿ ಪ್ರಯೋಗ ಯಶಸ್ವಿಯಾದ ಬಳಿಕ, ಅಂತಾರಾಷ್ಟ್ರೀಯ ಸಮುದಾಯದಲ್ಲಿ ಭಾರತದ ಸಾಮರ್ಥ್ಯದ ಬೆಲೆ ಎಲ್ಲರಿಗೂ ಅರಿವಾಗಲಿದೆ.ಆದರೆ, ಭಾರತ ಭದ್ರತಾ ಹಿತದೃಷ್ಟಿಯಿಂದ ಮಾತ್ರ ಇಂಥ ಪ್ರಯೋಗವನ್ನು ಕೈಗೊಂಡಿದೆ. ಬಾಹ್ಯಾಕಾಶದಲ್ಲಿ ನ ಸಮರ (ಆಡು ಭಾಷೆಯಲ್ಲಿ ಹೇಳುವುದಾದರೆ ಸ್ಟಾರ್ ವಾರ್)ಕ್ಕೆ ಆಸ್ಪದ ನೀಡದಿರುವುದು ಭಾರತದ ಆದ್ಯತೆ. ಈ ಪರೀಕ್ಷೆಯಿಂದ ಭಾರತ ಯಾವುದೇ ಅಂತಾರಾಷ್ಟ್ರೀಯ ಕಾನೂನು ಅಥವಾ ನಿಬಂಧನೆಯನ್ನು ಮುರಿದಿಲ್ಲ.

English summary
The team of scientists were able to accomplish this feat within a span of 3 minutes and PM Modi in his address claimed it to be a 'proud moment' for Indians. Mission Shakti has ensured that it secures a place in the space power league.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X