ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಅಸ್ತ್ರವಾಗುತ್ತಾ 'ಐಸೋಟೊಪ್'?

|
Google Oneindia Kannada News

ನವದೆಹಲಿ, ಮೇ.17: ನೊವೆಲ್ ಕೊರೊನಾ ವೈರಸ್ ವಿರುದ್ಧ ಸಮರ್ಥವಾಗಿ ಹೋರಾಡಬೇಕಿದೆ. ಮಹಾಮಾರಿ ಜೊತೆಗೆ ಬದುಕುವುದನ್ನು ಕಲಿಯಬೇಕು ಎಂಬ ಸಂದೇಶವನ್ನು ಸಾರಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿದ್ದಾರೆ.

ಕೇಂದ್ರ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಕೇಂದ್ರ ಸರ್ಕಾರ ಘೋಷಿಸಿದ 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ನಲ್ಲಿ ಯಾವ ವಲಯಕ್ಕೆಷ್ಟು ಹಣ ಮೀಸಲು ಇರಿಸಲಾಗಿದೆ. ಯಾವುದಕ್ಕೆಲ್ಲ ಕೇಂದ್ರ ಸರ್ಕಾರದಿಂದ ನೆರವು ದಕ್ಕಲಿದೆ ಎಂಬುದನ್ನು ಸ್ಪಷ್ಟವಾಗಿ ದೇಶದ ಎದುರು ಮಂಡಿಸಿದ್ದಾರೆ.

ಮನುಷ್ಯನನ್ನು ಕೊರೊನಾ ವೈರಸ್ ಸಾವಿನ ದವಡೆಗೆ ದೂಡುವುದು ಹೇಗೆ? ಇಲ್ಲಿದೆ ಇಂಚಿಂಚೂ ಮಾಹಿತಿಮನುಷ್ಯನನ್ನು ಕೊರೊನಾ ವೈರಸ್ ಸಾವಿನ ದವಡೆಗೆ ದೂಡುವುದು ಹೇಗೆ? ಇಲ್ಲಿದೆ ಇಂಚಿಂಚೂ ಮಾಹಿತಿ

ಕೊರೊನಾ ವೈರಸ್ ವಿರುದ್ಧ ಹೋರಾಡುವುದಕ್ಕಾಗಿ ಪಿಪಿಪಿ ಮಾದರಿ(ಪಬ್ಲಿಕ್ ಪ್ರೈವೇಟ್ ಪಾರ್ಟನರ್ ಶಿಪ್)ಯಲ್ಲಿ ಮೆಡಿಕಲ್ ಐಸೋಟೊಪ್ ಗಳ ಉತ್ಪಾದಿಸಲು ಕೇಂದ್ರ ಸರ್ಕಾರವು ಮುಂದಾಗಿದೆ. ಈ ಮೆಡಿಕಲ್ ಐಸೋಟೋಪ್ ಗಳನ್ನು ಕೈಗೆಟಕುವ ದರದಲ್ಲಿ ಉತ್ಪಾದಿಸಲು ತೀರ್ಮಾನಿಸಲಾಗಿದೆ. ಕೊವಿಡ್-19 ಹರಡುವಿಕೆ ಸಂದರ್ಭದಲ್ಲಿ ಈ ಐಸೋಟೋಪ್ ಉತ್ಪಾದನೆ ಅಗತ್ಯವೇನು, ಮೆಡಿಕಲ್ ಐಸೋಟೋಪ್ ಎಂದರೇನು. ಈ ಐಸೋಟೋಪ್ ಗಳನ್ನು ಹೇಗೆ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂಬ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ.

ಐಸೋಪೊಪ್(ಸಮಸ್ಥಾನಿ) ಎಂಬುದರ ಅರ್ಥವೇನು?

ಐಸೋಪೊಪ್(ಸಮಸ್ಥಾನಿ) ಎಂಬುದರ ಅರ್ಥವೇನು?

ಮೊದಲಿಗೆ ಐಸೋಟೊಪ್ ಎಂದರೇನು ಎಂಬುದನ್ನು ತಿಳಿದುಕೊಳ್ಳುವುದಾದರೆ ಅದು ಒಂದು ಮೂಲಧಾತುವಿನ ಭಿನ್ನ ಪರಮಾಣು ತೂಕವಾಗಿರುತ್ತದೆ. ನ್ಯೂಟ್ರಾನ್ ಮತ್ತು ಪ್ರೊಟಾನ್ ಗಳ ಸಮ್ಮಿಶ್ರಣದಿಂದ ಒಂದು ಐಸೋಟೊಪ್ ಉತ್ಪತ್ತಿಯಾಗುತ್ತದೆ. ಈ ಐಸೋಟೊಪ್ ಗಳಲ್ಲಿ ಮೂರು ವಿಧಗಳಿರುತ್ತವೆ. ಪ್ರತಿಯೊಂದು ಐಸೋಟೊಪ್ ಗಳಲ್ಲಿ ಪ್ರೊಟಾನ್ ಸಂಖ್ಯೆಯು ಸಮ ಪ್ರಮಾಣದಲ್ಲಿದ್ದು, ನ್ಯೂಟ್ರಾನ್ ಸಂಖ್ಯೆಯು ಭಿನ್ನವಾಗಿರುತ್ತದೆ.

ಐಸೋಟೊಪ್ ನಲ್ಲಿ ಮೂರು ವಿಧಗಳಿವೆ

ಐಸೋಟೊಪ್ ನಲ್ಲಿ ಮೂರು ವಿಧಗಳಿವೆ

ಐಸೋಟೊಪ್ ನಲ್ಲಿ ಮೂರು ವಿಧಗಳಿದ್ದು, ಒಂದೊಂದು ವಿಧದಲ್ಲೂ ನ್ಯೂಟ್ರಾನ್ ಮತ್ತು ಪ್ರೊಟಾನ್ ಗಳ ಸಂಖ್ಯೆಯು ಭಿನ್ನವಾಗಿರುತ್ತದೆ. ಮೊದಲಿಗೆ ನ್ಯೂಕ್ಲಿಐನಲ್ಲಿ ಒಂದು ಪ್ರೊಟಾನ್ ಮಾತ್ರವಿದ್ದು, ನ್ಯೂಟ್ರಾನ್ ಇರುವುದಿಲ್ಲ. ಎರಡನೇ ವಿಧವೇ ಡಿಟಿರಿಯಮ್ (Deuterium)ನ ಕೇಂದ್ರದಲ್ಲಿ ಒಂದು ಪ್ರೊಟಾನ್ ಹಾಗೂ ಒಂದು ನ್ಯೂಟ್ರಾನ್ ಇದ್ದು ಪರಮಾಣು ತೂಕ -2 ಆಗಿರುತ್ತದೆ. 3ನೇ ಹಾಗೂ ಭಾರವಾದ ಐಸೋಟೊಪ್ ಟ್ರೈಟಿಯಮ್ (Tritium)ನ ಕೇಂದ್ರದಲ್ಲಿ ಒಂದು ಪ್ರೊಟಾನ್ ಹಾಗೂ ಎರಡು ನ್ಯೂಟ್ರಾನ್‌ಗಳಿದ್ದು ಇದರ ಪರಮಾಣು ತೂಕ-3 ಆಗಿರುತ್ತದೆ. ನ್ಯೂಟ್ರಾನ್ ಗಳ ಸಂಖ್ಯೆಯಲ್ಲಿ ವ್ಯತ್ಯಾಸವಿದ್ದರೆ ಅದು ಪರಮಾಣುಗಳ ಗುಣಲಕ್ಷಣಗಳನ್ನು ಕೂಡ ಭಿನ್ನವಾಗಿ ನಿರೂಪಿಸುತ್ತದೆ. ಐಸೋಟೋಪ್ ಗಳನ್ನು ಸೂಚಿಸುವಾಗ ಧಾತುವಿನ ಹೆಸರಿನ ಮುಂದೆ -ಬರೆದು ನಂತರ ಅದರ ಪರಮಾಣು ರಾಶಿ ಸಂಖ್ಯೆಯನ್ನು ಬರೆಯಲಾಗುತ್ತದೆ.

ಮಡಿಕಲ್ ಐಸೋಟೊಪ್ ಎಂಬುದರ ಅರ್ಥವೇನು?

ಮಡಿಕಲ್ ಐಸೋಟೊಪ್ ಎಂಬುದರ ಅರ್ಥವೇನು?

ಕೊರೊನಾ ವೈರಸ್ ಹರಡುವಿಕೆ ಬೆನ್ನಲ್ಲೇ ಮೆಡಿಕಲ್ ಐಸೋಟೊಪ್ ಉತ್ಪಾದನೆಗೆ ಕೇಂದ್ರ ಸರ್ಕಾರವು ಹೆಚ್ಚಿನ ಒತ್ತು ನೀಡುತ್ತಿದೆ. ಅಸಲಿಗೆ ಮೆಡಿಕಲ್ ಐಸೋಟೊಪ್ ಎಂದರೇನು ಎಂದು ತಿಳಿದುಕೊಳ್ಳುವುದಾದರೆ, ಈ ಐಸೋಟೊಪ್ ಗಳನ್ನು ವೈದ್ಯಕೀಯ ರಂಗದಲ್ಲಿ ಹೆಚ್ಚಾಗಿ ಬಳಸಿಕೊಳ್ಳಲಾಗುತ್ತದೆ. ವೈದ್ಯಕೀಯ ಲೋಕದಲ್ಲಿ ಬಳಸುವ ಐಸೋಟೊಪ್ ರೋಗದ ಪತ್ತೆಗೆ ಹೆಚ್ಚು ಉಪಯುಕ್ತವಾಗಿರುತ್ತದೆ.

ಮೆಡಿಕಲ್ ಐಸೋಟೊಪ್ ಗಳನ್ನು ಹೇಗೆ ಬಳಸಲಾಗುತ್ತದೆ?

ಮೆಡಿಕಲ್ ಐಸೋಟೊಪ್ ಗಳನ್ನು ಹೇಗೆ ಬಳಸಲಾಗುತ್ತದೆ?

ವೈದ್ಯಕೀಯ ವಲಯದಲ್ಲಿ ಇದೀಗ ಮೆಡಿಕಲ್ ಐಸೋಟೊಪ್ ಗಳ ಹೆಚ್ಚಿನ ಉತ್ಪಾದನೆ ಅಗತ್ಯ ಎದುರಾಗಿದೆ. ಮೊದಲಿಗೆ ಈ ಮೆಡಿಕಲ್ ಐಸೋಟೊಪ್ ಗಳನ್ನು ದೀರ್ಘಕಾಲಿಕ ರೋಗ ಹಾಗೂ ಕ್ಯಾನ್ಸರ್ ರೋಗದ ಪತ್ತೆಗೆ ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳಲಾಗುತ್ತಿತ್ತು. ಕ್ಯಾನ್ಸರ್ ರೋಗಿಯ ದೇಹದಲ್ಲಿ ರೋಗಾಣುಗಳ ಸಂಖ್ಯೆ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿರುತ್ತದೆ. ಈ ರೋಗಾಣುವನ್ನು ಗುರುತಿಸಿ ಅದನ್ನು ನಾಶಪಡಿಸುವ ಸಾಮರ್ಥ್ಯದ ಐಸೋಟೊಪ್ ಗಳನ್ನು ಉತ್ಪಾದನೆ ಮಾಡಲಾಗುತ್ತಿತ್ತು. ಈ ಹಿನ್ನೆಲೆ ಐಸೋಟೊಪ್ ಗಳ ಉತ್ಪಾದನೆಗೆ ಯಾವ ಪರಮಾಣು ಮೊತ್ತದ ಐಸೋಟೊಪ್ ಗಳನ್ನು ಉತ್ಪಾದಿಸಬೇಕು ಎಂಬುದರ ಬಗ್ಗೆ ವೈದ್ಯಕೀಯ ರಂಗದಲ್ಲಿ ಚರ್ಚೆಗಳು ನಡೆಯುತ್ತಿವೆ.

ಐಸೋಟೊಪ್ ಬಳಕೆಯಿಂದ ಕೊರೊನಾ ವೈರಸ್ ಪತ್ತೆ?

ಐಸೋಟೊಪ್ ಬಳಕೆಯಿಂದ ಕೊರೊನಾ ವೈರಸ್ ಪತ್ತೆ?

ನೊವೆಲ್ ಕೊರೊನಾ ವೈರಸ್ ಸೋಂಕು ಪತ್ತೆಗೆ ವಿಶೇಷ ಲ್ಯಾಬ್ ಗಳನ್ನು ತೆರೆಯಲಾಗಿದೆ. ವ್ಯಕ್ತಿಯ ದೇಹದ ಶಾಖವನ್ನು ಆಧರಿಸಿ ಕೊರೊನಾ ಸೋಂಕಿತ ಪ್ರಾಥಮಿಕ ಲಕ್ಷಣಗಳನ್ನು ಕಂಡು ಹಿಡಿಯಲಾಗುತ್ತದೆ. ಇದೀಗ ಕೊರೊನಾ ವೈರಸ್ ಸೋಂಕು ಪತ್ತೆ ಹಾಗೂ ವೈರಸ್ ಗಳ ನಾಶಪಡಿಸುವ ನಿಟ್ಟಿನಲ್ಲಿ ಐಸೋಟೊಪ್ ಗಳನ್ನು ಉತ್ಪಾದಿಸಲು ಸಾಧ್ಯವೆ. ಯಾವ ಪರಮಾಣು ತೂಕದ ಐಸೋಟೊಪ್ ಗಳು ಕೊರೊನಾ ವೈರಸ್ ವಿರುದ್ಧ ಹೋರಾಟಬಲ್ಲವು. ಐಸೋಟೊಪ್ ಮುಖೇನ ಕೊರೊನಾ ವೈರಸ್ ನಾಶಪಡಿಸಲು ಆಗುತ್ತದೆಯೇ. ಇಷ್ಟೆಲ್ಲ ಅಂಶಗಳ ಮೇಲೆ ವೈದ್ಯಕೀಯ ಸಂಶೋಧನೆಗಳು ನಡೆಯುತ್ತಿವೆ.

English summary
What Is Isotope And Uses Of Medical Isotope.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X