ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಕದನದ ನಡುವೆ 2ನೇ ವಿಶ್ವಯುದ್ಧದ ಲಸಿಕೆ ಟ್ರೆಂಡ್

|
Google Oneindia Kannada News

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಚ್ ಸಿ ಕ್ಯೂ ಲಸಿಕೆ ಹಿಂದೆ ಯಾಕೆ ಬಿದ್ದಿದ್ದಾರೆ ಎಂಬ ಚರ್ಚೆ ವೆಬ್ ತಾಣಗಳಿಂದಾಚೆಗೂ ನಡೆದಿದೆ. ಮುಂದುವರೆದ ರಾಷ್ಟ್ರ ಅಮೆರಿಕ ಏಕೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಭಾರತದ ನೆರವು ಕೋರುತ್ತಿದೆ ಎಂಬ ಪ್ರಶ್ನೆಗಳು ಅನೇಕರ ಕುತೂಹಲ ಕೆರಳಿಸಿವೆ. ಉತ್ತರ ಸ್ಪಷ್ಟವಾಗಿದೆ. ನಾವು ಇಲ್ಲಿಂದ ಬ್ರೈನ್ ಡ್ರೈನ್ ಮಾಡಿ ಹೊರಗುತ್ತಿಗೆಯನ್ನು ಐಟಿ-ಬಿಟಿ ಕ್ಷೇತ್ರದ ಆಧಾರ ವಾಗಿಸಿದಂತೆ, ಅಮೆರಿಕ ಕೂಡಾ ಸಂಶೋಧನೆ, ಉನ್ನತ ವೈದ್ಯಕೀಯ ಅಧ್ಯಯನಕ್ಕೆ ಕೌಶಲ್ಯವುಳ್ಳ ಭಾರತೀಯರನ್ನು ಬಳಸಿಕೊಳ್ಳುತ್ತಿದೆ. ಮಿಕ್ಕಂತೆ ಮಲೇರಿಯಾ ಡ್ರಗ್ ವಿಷಯಕ್ಕೆ ಬಂದರೆ, ವಿಶ್ವದಲ್ಲಿ ಅತಿ ಹೆಚ್ಚು ಈ HCQ ಡ್ರಗ್ ಉತ್ಪಾದನೆ ಮಾಡುವ ಭಾರತದ ಮೇಲೆ ಮಿಕ್ಕ ದೇಶಗಳು ಅವಲಂಬಿಸಬೇಕಾಗುತ್ತದೆ.

Recommended Video

ಇಂತಹ ಒಬ್ರೋ ಇಬ್ರಿಂದ ಎಲ್ಲರಿಗೂ ಕೆಟ್ಟ ಹೆಸರು | Muslim | selling Mask | Seased

ಮಲೇರಿಯಾ ರೋಗಿಗಳಿಗೆ ಪ್ಲೇಕ್ವೆನಿಲ್ ಹೆಸರಿನಲ್ಲಿ ನೀಡಲಾಗುವ ಹೈಡ್ರೋಕ್ಸಿಕ್ಲೋರೊಕ್ವೆನ್(HCQ) ಎಂಬ Anti-Malaria ಔಷಧದ ಬಗ್ಗೆ ಟ್ರಂಪ್ ಅವರು ಮಾರ್ಚ್ ತಿಂಗಳಲ್ಲಿ ತಮ್ಮ ಟ್ವೀಟ್ ನಲ್ಲಿ ಉಲ್ಲೇಖಿಸಿದ್ದರು. HCQ ಹಾಗೂ ಅಜಿಥ್ರೋಮೈಸಿನ್ ಬಳಕೆಯಿಂದ ವೈದ್ಯಕೀಯ ಲೋಕದಲ್ಲಿ ಭಾರಿ ಬದಲಾವಣೆ ಸಾಧ್ಯ ಎಂದಿದ್ದರು. ಆದರೆ, ಇದಾದ ಬಳಿಕ ಭಾರತ ಈ ಡ್ರಗ್ ರಫ್ತು ಮಾಡುವುದನ್ನು ಬಂದ್ ಮಾಡಿತ್ತು.\

ವೈರಸ್ ಸೋಂಕಿತರನ್ನು ಭೇಟಿ ಮಾಡಿದರೂ ಟ್ರಂಪ್ ನೆಗಟಿವ್ !ವೈರಸ್ ಸೋಂಕಿತರನ್ನು ಭೇಟಿ ಮಾಡಿದರೂ ಟ್ರಂಪ್ ನೆಗಟಿವ್ !

ಕೊರೊನಾ ವಿಚಾರಕ್ಕೆ ಸಂಬಂಧಿಸಿದಂತೆ ಭಾರತದ ತೆಗೆದುಕೊಳ್ಳುತ್ತಿರುವ ಕ್ರಮ ಶ್ಲಾಘಿಸಿದ ಟ್ರಂಪ್ ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕಾಗಿ Hydroxychloroquine (HCQ) ಔಷಧವನ್ನು ರಫ್ತು ಮಾಡುವಂತೆ ಆಗ್ರಹಪೂರ್ವಕ ಮನವಿ ಮಾಡಿದ್ದರು. ಭಾರತ ಕೂಡಾ ಇದಕ್ಕೆ ಒಪ್ಪಿದೆ. ಹಂತ ಹಂತವಾಗಿ ರಫ್ತು ಮಾಡಲು ಸಿದ್ಧವಾಗುತ್ತಿದೆ. 2ನೇ ವಿಶ್ವಯುದ್ಧದ ಸಮಯದಲ್ಲಿ ಮಲೇರಿಯಾ ಮಾರಿಯಿಂದ ಬಚಾವ್ ಮಾಡಲು ಕಂಡು ಹಿಡಿದ ಈ ಔಷಧ ಈಗ ಕೊರೊನಾಗೂ ಬಳಸಬಹುದು ಎಂಬ ವರದಿಗಳಿವೆ.

ಪ್ಲೇಕ್ವೆನಿಲ್ ಬ್ರ್ಯಾಂಡ್ ಹೆಸರಿನ ಔಷಧ

ಪ್ಲೇಕ್ವೆನಿಲ್ ಬ್ರ್ಯಾಂಡ್ ಹೆಸರಿನ ಔಷಧ

ಪ್ಲೇಕ್ವೆನಿಲ್ ಬ್ರ್ಯಾಂಡ್ ಹೆಸರಿನಲ್ಲಿ ನೀಡಲಾಗುವ ಹೈಡ್ರೋಕ್ಸಿಕ್ಲೋರೊಕ್ವೆನ್(HCQ) ಮಲೇರಿಯಾ ಅಲ್ಲದೆ ರುಮಾಟಾಯಿಡ್ ಆರ್ಥೈಟಿಸ್ ಗೂ ಬಳಸಲಾಗುತ್ತದೆ. ಹೃದಯ, ಶ್ವಾಸಕೋಶ, ಜ್ವರ, ಮೈಕೈ ನೋವು, ಸ್ನಾಯು ಸೆಳೆತ ಎಲ್ಲಕ್ಕೂ ಈ ಔಷಧಿ ಬಳಸಬಹುದು ಎಂದು ಜಾನ್ಸ್ ಹಾಪ್ಕಿನ್ ವಿಶ್ವ ವಿದ್ಯಾಲಯ ವರದಿ ನೀಡಿದೆ.

ಕೊರೊನಾಗೆ ಬಳಸಲು ಸಾಧ್ಯವೇ?

ಕೊರೊನಾಗೆ ಬಳಸಲು ಸಾಧ್ಯವೇ?

ಸಾಮಾನ್ಯವಾಗಿ ಹೈಡ್ರೋಕ್ಸಿಕ್ಲೋರೊಕ್ವೆನ್ ಜೊತೆಗೆ Anti biotic ಅಜಿಥ್ರೋಮೈಸಿನ್ ಸೇರಿಸಿ ಸರಿ ಪ್ರಮಾಣದಲ್ಲಿ ನೀಡುತ್ತಾ ಬಂದರೆ ಆರಂಭಿಕ ಹಂತದ ಕೊವಿಡ್ 19 ಸಾರ್ಸ್ CoV 2 ಇತ್ಯಾದಿ ಹೊಗಲಾಡಿಸಬಹುದು ಎಂದು ಸಂಶೋಧಕರು ಹೇಳಿದ್ದಾರೆ. ಆದರೆ, ಕೋವಿಡ್19ಗೆ ಈ ಎರಡು ಲಸಿಕೆಯ ಜೋಡಿಗೆ ರಾಮಬಾಣ ಎಂಬುದು ಇನ್ನೂ ದೃಢಪಟ್ಟಿಲ್ಲ.

ಎಚ್ ಸಿ ಕ್ಯೂ ರಫ್ತು ತಾತ್ಕಾಲಿಕವಾಗಿ ಬಂದ್ ಆಗಿತ್ತು.

ಎಚ್ ಸಿ ಕ್ಯೂ ರಫ್ತು ತಾತ್ಕಾಲಿಕವಾಗಿ ಬಂದ್ ಆಗಿತ್ತು.

ಮಾರ್ಚ್ 25 ರಂದು ಭಾರತದ ವಿದೇಶಾಂಗ ವ್ಯಾಪಾರ ನಿರ್ದೇಶನಾಲಯವು ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತು ಮಾಡುವುದನ್ನು ನಿಷೇಧಿಸಿದೆ. ಆದರೆ ಮಾನವೀಯ ಆಧಾರದ ಮೇಲೆ, ಪ್ರಕರಣಗಳ ಆದ್ಯತೆ ನೋಡಿಕೊಂಡು ಸಾಗಣೆಗೆ ಅನುಮತಿಸಬಹುದು ಎಂದು ಹೇಳಿದೆ. ಕೊವಿಡ್ ಹರಡುತ್ತಿರುವ ಈ ಸಂದರ್ಭದಲ್ಲಿ ಭಾರತಕ್ಕೆ ಔಷಧ ಪ್ರಮಾಣದಲ್ಲಿ ಕೊರತೆಯಾಗಬಾರದು ಎಂಬ ಕಾರಣಕ್ಕೆ ಭಾರತ ಸರ್ಕಾರ ಈ ಆದೇಶ ಹೊರಡಿಸಿತ್ತು. ಆದರೆ, ಈಗ ರಫ್ತು ಮಾಡಲು ಭಾರತ ಸಿದ್ಧವಾಗಿದೆ.

ಎಚ್ ಸಿ ಕ್ಯೂ ಬಳಕೆ ಎಷ್ಟು ಸುರಕ್ಷಿತ?

ಎಚ್ ಸಿ ಕ್ಯೂ ಬಳಕೆ ಎಷ್ಟು ಸುರಕ್ಷಿತ?

ಭಾರತದಲ್ಲಿ ಸದ್ಯಕ್ಕೆ ವೈದ್ಯಕೀಯ ಸಿಬ್ಬಂದಿಗಳಿಗೆ ಕೊರೊನಾ ಸೋಂಕು ತಗುಲಿದರೆ ಅಥವಾ ಶಂಕೆ ವ್ಯಕ್ತವಾದರೆ ಎಚ್ ಸಿಕ್ಯೂ ಅಗತ್ಯ ಬಿದ್ದಾಗ ನೀಡುವಂತೆ ಐಸಿಎಂಆರ್ ನಿರ್ದೇಶಕ ಬಲರಾಮ ಭಾರ್ಗವ ಸೂಚಿಸಿದ್ದಾರೆ. ತುರ್ತು ಪರಿಸ್ಥಿತಿಯಲ್ಲಿ ಇದನ್ನು ಬಳಸಬಹುದು ಎಂದು ಔಷಧ ನಿಯಂತ್ರಣ ಮಂಡಳಿ(ಡಿಜಿಸಿಐ) ಕೂಡಾ ಹೇಳಿದೆ. ಇದರ ಸೈಡ್ ಎಫೆಕ್ಟ್ ಗಳಲ್ಲಿ ಹೃದಯಕ್ಕೆ ಹಾನಿ, ಹೃದಯ ಬಡಿತದಲ್ಲಿ ಏರುಪೇರು, ವಾಂತಿ, ಭೇದಿ, ತಲೆ ಸುತ್ತಿವಿಕೆ ಮುಂತಾದ ಪರಿಣಾಮಗಳಿವೆ.

ಕೊವಿಡ್ 19 ರೋಗಿಗೆ ಎಚ್ ಸಿಕ್ಯೂ ನೀಡಬಹುದೆ?

ಕೊವಿಡ್ 19 ರೋಗಿಗೆ ಎಚ್ ಸಿಕ್ಯೂ ನೀಡಬಹುದೆ?

ಫ್ರಾನ್ಸ್ ನ 40 ಕೊವಿಡ್19 ರೋಗಿಗಳಿಗೆ ಹ್ರೈಡ್ರೋಕ್ಸಿಕ್ಲೋರೊಕ್ವೇನ್ ನೀಡಲಾಗಿತ್ತು. ಈ ಪೈಕಿ ಅರ್ಧದಷ್ಟು ಮಂದಿಗೆ ಶ್ವಾಸಕೋಶದ ಸೋಂಕು ಮೂರರಿಂದ 6 ದಿನಗಳಲ್ಲಿ ಸರಿ ಹೋಗಿದೆ. Sars- CoV2 ವೈರಸ್ ಸೋಂಕಿನ ಪ್ರಭಾವವನ್ನು ತಗ್ಗಿಸುವಲ್ಲಿ ಮಲೇರಿಯಾ ಡ್ರಗ್ ಯಶಸ್ವಿಯಾಗಿದೆ. ಆದರೆ, ಯುರೋಪಿಯನ್ ಮೆಡಿಸನ್ ಏಜೆನ್ಸಿ, ಕೊರೊನಾರೋಗಿಗಳಿಗೆ ಎಚ್ ಸಿಕ್ಯೂ ನೀಡುವುದನ್ನು ವಿರೋಧಿಸಿದ್ದು, ಕ್ಲಿನಿಕಲ್ ಟ್ರಯಲ್ ಅಥವಾ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಬಳಸುವಂತೆ ಸೂಚಿಸಿದೆ.

ಅಮೆರಿಕದ ಬೇಡಿಕೆ ಪೂರೈಸಲು ಭಾರತಕ್ಕೆ ಸಾಧ್ಯವೇ?

ಅಮೆರಿಕದ ಬೇಡಿಕೆ ಪೂರೈಸಲು ಭಾರತಕ್ಕೆ ಸಾಧ್ಯವೇ?

ಇಂಡಿಯನ್ ಡ್ರಗ್ ಉತ್ಪಾದನಾ ಸಂಸ್ಥೆಯ ಮುಖ್ಯಸ್ಥ ಅಶೋಕ್ ಕುಮಾರ್ ಮದನ್ ಅವರು ಬಿಬಿಸಿ ಜೊತೆ ಮಾತನಾಡಿ, ಭಾರತಕ್ಕೆ ಈ ಸಾಮರ್ಥ್ಯವಿದ್ದು, ದೇಶದಲ್ಲಿ ಬಳಕೆ ಮಾಡಬಹುದು ಹಾಗೂ ವಿದೇಶಕ್ಕೂ ಸಾಕಷ್ಟು ಪ್ರಮಾಣದಲ್ಲಿ ರಫ್ತು ಮಾಡಬಹುದು ಎಂದಿದ್ದಾರೆ. ಎಚ್ ಸಿಕ್ಯೂ ಉತ್ಪಾದನೆಗೆ ಬೇಕಾದ ಕಚ್ಚಾವಸ್ತು(ಎಪಿಐ)ವನ್ನು ಚೀನಾ ಒದಗಿಸುತ್ತಿಲ್ಲ ಎಂಬ ಸುದ್ದಿಯನ್ನು ಅಲ್ಲಗೆಳೆದ ಮದನ್, ಭಾರತದ ಡ್ರಗ್ಸ್ ಉದ್ಯಮಕ್ಕೆ ಬೇಕಾದ ಶೇ 70ರಷ್ಟು Active pharamaceutical ingredient(API) ಚೀನಾದಿಂದಲೇ ಆಮದಾಗುತ್ತಿದೆ ಎಂದಿದ್ದಾರೆ.

English summary
What is Anti-malaria drug hydroxychloroquine? US President Donald Trump on Tuesday hinted at retaliation if India does not export the drug that is believed to be helpful in treating the Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X