• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಿ-20 ಎಂದರೇನು? ಅಲ್ಲೇನು ಚರ್ಚಿಸುತ್ತಾರೆ? ತಿಳಿದಿರಬೇಕಾದ ಸಂಗತಿಗಳು

|

ನವದೆಹಲಿ, ಜೂನ್ 28: ಜಪಾನ್‌ನ ಒಸಾಕಾದಲ್ಲಿ ಜಿ20 ಶೃಂಗಸಭೆ ನಡೆಯುತ್ತಿದೆ. ಜಗತ್ತಿನ 19 ಪ್ರಮುಖ ದೇಶಗಳು ಮತ್ತು ಐರೋಪ್ಯ ಒಕ್ಕೂಟ ಇದರಲ್ಲಿ ಭಾಗವಹಿಸಿವೆ. ಜಿ-20 ಎಂದರೇನು? 20 ದೇಶಗಳ ಸಮೂಹ (ಗ್ರೂಪ್). ಇದನ್ನು ಜಿ-20 ಎಂದು ಸಂಕ್ಷಿಪ್ತವಾಗಿ ಕರೆಯಲಾಗುತ್ತದೆ. ಆದರೆ, ಈ ಶೃಂಗಸಭೆಯನ್ನು ಯಾವ ಕಾರಣಕ್ಕಾಗಿ ನಡೆಸಲಾಗುತ್ತದೆ? ಅದು ಏಕೆ ಮಹತ್ವದ್ದು? ಎಂಬ ಕುತೂಹಲಗಳಿಗೆ ಇಲ್ಲಿದೆ ಉತ್ತರ.

ಅತ್ಯಂತ ದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯುಳ್ಳ ದೇಶಗಳ ಮುಖಂಡರು ನಡೆಸುವ ಶೃಂಗಸಭೆ ಜಿ-20. ಇದರ ಸದಸ್ಯ ದೇಶಗಳು ಜಗತ್ತಿನ ಜಿಡಿಪಿಯ ಶೇ 85ರಷ್ಟು ಮತ್ತು ಜನಸಂಖ್ಯೆಯ ಮೂರನೇ ಎರಡು ಭಾಗದಷ್ಟನ್ನು ಹೊಂದಿವೆ.

ಭಯೋತ್ಪಾದನೆ ದೊಡ್ಡ ಅಪಾಯ: ಬ್ರಿಕ್ಸ್ ಸಮಿತಿಯಲ್ಲಿ ಮೋದಿ ಕಳವಳ

ಈ ಗುಂಪಿಗೆ ತನ್ನದೇ ಆದ ಕಾಯಂ ನೆಲೆ ಎಂದೇನೂ ಇಲ್ಲ. ಹೀಗಾಗಿ ಪ್ರತಿ ಡಿಸೆಂಬರ್‌ನಲ್ಲಿ ಜಿ-20ಯಲ್ಲಿನ ಒಂದು ದೇಶ ಅದರ ಆತಿಥ್ಯ ವಹಿಸುತ್ತದೆ. ಇದು ಪ್ರತಿ ವರ್ಷ ಬದಲಾಗುತ್ತಿರುತ್ತದೆ. ಈ ದೇಶವು ಮುಂದಿನ ಶೃಂಗಸಭೆಯನ್ನು ಆಯೋಜಿಸುವ ಮತ್ತು ಮುಂದಿನ ವರ್ಷ ಸಣ್ಣ ಸಣ್ಣ ಸಭೆಗಳನ್ನು ನಡೆಸುವ ಹೊಣೆಗಾರಿಕೆ ನಿರ್ವಹಿಸುತ್ತದೆ.

ಜಿ-20ಯಲ್ಲಿ ಸದಸ್ಯ ದೇಶಗಳಲ್ಲದೆ ಇತರೆ ಸದಸ್ಯೇತರ ದೇಶಗಳನ್ನೂ ಅತಿಥಿಗಳನ್ನಾಗಿ ಆಹ್ವಾನಿಸುವ ಆಯ್ಕೆಯ ಸ್ವಾತಂತ್ರ್ಯ ಅವರಿಗೆ ಇರುತ್ತದೆ. ಸ್ಪೇನ್‌ಅನ್ನು ಯಾವಾಗಲೂ ಈಸಭೆಗೆ ಆಹ್ವಾನಿಸಲಾಗುತ್ತದೆ.

ಪೂರ್ವ ಏಷ್ಯಾದಲ್ಲಿನ ಆರ್ಥಿಕ ಬಿಕ್ಕಟ್ಟು ಜಗತ್ತಿನ ಅನೇಕ ದೇಶಗಳ ಮೇಲೆ ಪರಿಣಾಮ ಬೀರಿದ ಬಳಿಕ ಮೊದಲ ಜಿ-20 ಸಭೆ 1999ರಲ್ಲಿ ಬರ್ಲಿನ್‌ನಲ್ಲಿ ನಡೆದಿತ್ತು.

130 ಕೋಟಿ ಜನರು ಶಕ್ತಿಶಾಲಿ ಸರ್ಕಾರ ರಚಿಸಿದ್ದಾರೆ: ಜಪಾನ್‌ನಲ್ಲಿ ಮೋದಿ

ಚೀನಾ, ಬ್ರೆಜಿಲ್ ಮತ್ತು ಸೌದಿ ಅರೇಬಿಯಾದಂತಹ ಅತ್ಯಂತ ವೇಗದ ಆರ್ಥಿಕ ಅಭಿವೃದ್ಧಿ ದೇಶಗಳು ಸೇರಿದಂತೆ ಜಗತ್ತಿನ ಅತ್ಯಂತ ಶ್ರೀಮಂತ ಆರ್ಥಿಕತೆಗಳನ್ನು ಒಳಗೊಂಡ ಜಿ8 ಗುಂಪು ಸಹ ಇದೆ. ಪ್ರಸ್ತುತ ರಷ್ಯಾವನ್ನು ಜಿ8 ಹೊರಗಿಟ್ಟಿರುವುದರಿಂದ ಅದನ್ನು ಜಿ7 ಎಂದು ಕರೆಯಲಾಗುತ್ತದೆ.

ಜಿ-20 ದೇಶಗಳು ಯಾವುವು?

ಜಿ-20 ದೇಶಗಳು ಯಾವುವು?

ಭಾರತ, ಚೀನಾ, ಜಪಾನ್, ದಕ್ಷಿಣ ಕೊರಿಯಾ, ಇಂಡೋನೇಷ್ಯಾ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಸೌದಿ ಅರೇಬಿಯಾ, ಟರ್ಕಿ, ರಷ್ಯಾ, ಇಟಲಿ, ಜರ್ಮನಿ, ಫ್ರಾನ್ಸ್, ಯುಕೆ, ಕೆನಡಾ, ಅಮೆರಿಕ, ಮೆಕ್ಸಿಕೋ, ಬ್ರೆಜಿಲ್, ಅರ್ಜೆಂಟೀನಾ ಮತ್ತು ಯುರೋಪಿಯನ್ ಒಕ್ಕೂಟ.

ಜಿ-20ಯಲ್ಲಿ ಆರಂಭದಲ್ಲಿ ದೇಶಗಳ ಹಣಕಾಸು ಸಚಿವರು ಮತ್ತು ಕೇಂದ್ರ ಬ್ಯಾಂಕ್ ಗವರ್ನರ್‌ಗಳು ಭಾಗವಹಿಸುತ್ತಿದ್ದರು. 2008ರಲ್ಲಿ ಜಾಗತಿಕ ಆರ್ಥಿಕ ಬಿಕ್ಕಟ್ಟು ಉಂಟಾದ ಬಳಿಕ ಈ ಪದ್ಧತಿ ಬದಲಾಯಿತು. ಬ್ಯಾಂಕ್‌ಗಳು ನೆಲಕಚ್ಚಿದವು, ನಿರುದ್ಯೋಗ ಸಮಸ್ಯೆ ಉಲ್ಬಣವಾಯಿತು ಮತ್ತು ಸಂಬಳಗಳಿಲ್ಲದೆ ಪರದಾಡುವಂತಾಯಿತು. ಆಗ ಈ ಒಕ್ಕೂಟವು ದೇಶಗಳ ಅಧ್ಯಕ್ಷರು ಮತ್ತು ಪ್ರಧಾನಿಗಳ ತುರ್ತು ಸಮಿತಿಯಾಗಿ ಬದಲಾಯಿತು. ಅದೇ ವರ್ಷ ಮೊದಲ ಬಾರಿ ದೇಶಗಳ ಮುಖಂಡರು ಸಭೆ ನಡೆಸಿದರು.

ಚರ್ಚೆಯಾಗುವ ವಿಷಯಗಳೇನು?

ಚರ್ಚೆಯಾಗುವ ವಿಷಯಗಳೇನು?

ಪ್ರಸ್ತುತದಲ್ಲಿನ ಅತ್ಯಂತ ಪ್ರಮುಖವಾದ ಆರ್ಥಿಕ ಮತ್ತು ಹಣಕಾಸು ವಿಚಾರಗಳ ಬಗ್ಗೆ ಚರ್ಚಿಸಲು ಜಾಗತಿಕ ಮುಖಂಡರು ಇಲ್ಲಿ ಸೇರುತ್ತಾರೆ. ತಮ್ಮ ಯೋಜನೆಗಳು ಸೂಕ್ತವಾಗಿ ಎಲ್ಲರಿಗೂ ಮನವರಿಕೆಯಾಗಿವೆಯೇ ಎಂದು ಸದಸ್ಯರು ಬಳಿಕ ಖಚಿತಪಡಿಸಿಕೊಳ್ಳಲು ಮುಂದಾಗುತ್ತಾರೆ.

ವಾಣಿಜ್ಯ, ಹವಾಮಾನ ಬದಲಾವಣೆ ಮತ್ತು ಇರಾನ್‌ ಜತೆಗಿನ ಸಂಬಂಧದಲ್ಲಿನ ಬಿಕ್ಕಟ್ಟು ಪ್ರಸಕ್ತ ವರ್ಷದ ಶೃಂಗಸಭೆಯ ಪ್ರಮುಖ ವಿಚಾರಗಳಾಗಿವೆ. ಶೃಂಗಸಭೆಯಾಚೆಗೂ ದೇಶಗಳ ಮುಖಂಡರು ಮಹತ್ವದ ಮಾತುಕತೆಗಳನ್ನು ನಡೆಸುತ್ತಾರೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜತೆ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ. ಬ್ರಿಟನ್‌ನ ನಿರ್ಗಮಿತ ಪ್ರಧಾನಿ ಥೆರೆಸಾ ಮೇ ಅವರು ರಷ್ಯಾ ಮುಖಂಡರೊಂದಿಗೆ ಸಭೆ ನಡೆಸಲಿದ್ದಾರೆ.

ಶೃಂಗಸಭೆಯಲ್ಲಿ ಜಾಗತಿಕ ಆರ್ಥಿಕತೆ ಯಾವಾಗಲೂ ಮಾತುಕತೆಯ ಮುಖ್ಯ ವಿಚಾರವಾಗಿರುತ್ತದೆ. 2009ರ ಲಂಡನ್ ಶೃಂಗಸಭೆಯಲ್ಲಿ ಜಗತ್ತಿನ ಅತಿ ಹೀನಾಯ ಆರ್ಥಿಕ ಬಿಕ್ಕಟ್ಟನ್ನು ಸರಿಪಡಿಸಲು ಜಾಗತಿಕ ಆರ್ಥಿಕತೆಗೆ 5 ಟ್ರಿಲಿಯನ್ ಡಾಲರ್ ಸಹಾಯ ಮಾಡಲು ವಿಶ್ವ ನಾಯಕರು ಬದ್ಧತೆ ಪ್ರದರ್ಶಿಸಿದ್ದರು.

ಎಂದೂ ಇಲ್ಲದಷ್ಟು ಆಪ್ತ ಸ್ನೇಹಿತರಾಗಿದ್ದೇವೆ: ಮೋದಿ ಟ್ರಂಪ್ ಮಾತುಕತೆ

ಇಲ್ಲಿ 'ಫ್ಯಾಮಿಲಿ ಫೋಟೊ' ಇರುವುದೇಕೆ?

ಇಲ್ಲಿ 'ಫ್ಯಾಮಿಲಿ ಫೋಟೊ' ಇರುವುದೇಕೆ?

ಎಲ್ಲಿ ಸಭೆ ಸೇರುವ ಎಲ್ಲ ದೇಶಗಳ ಮುಖಂಡರು ಆಗಾಗ ಗ್ರೂಪ್ ಫೋಟೊಗಳಿಗೆ ಪೋಸ್ ನೀಡುತ್ತಾರೆ. ಇವುಗಳನ್ನು ನಾಯಕರುಗಳು ತಾವು ಸಹಿ ಹಾಕಿದ ಒಪ್ಪಂದಗಳ ಬಗ್ಗೆ ಪ್ರಚಾರ ಮಾಡಲು ಬಳಸುತ್ತಾರೆ. ಆದರೆ ಇಲ್ಲಿ ವಿವಾದಗಳೇ ಪ್ರಮುಖವಾಗಿ ಸುದ್ದಿಯಾಗುತ್ತವೆ.

ಕಳೆದ ವರ್ಷ ಕೆಲವು ಜಾಗತಿಕ ನಾಯಕರು ಸೌದಿಯ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರ ಕೈಕುಲುಕಲು ಮುಂದಾಗಿದ್ದರು. ಆದರೆ, ಅವರು ಫೋಟೊಗಾಗಿ ಎಲ್ಲರಿಂದ ದೂರವೇ ನಿಂತು ಉಳಿದ ನಾಯಕರನ್ನು ನಿರ್ಲಕ್ಷಿಸಿದ್ದರು. ಇದು ದೊಡ್ಡ ಸುದ್ದಿಯಾಗಿತ್ತು. ಇಸ್ತಾಂಬುಲ್‌ನ ಸೌದಿ ರಾಯಭಾರ ಕಚೇರಿಯಲ್ಲಿ ಪತ್ರಕರ್ತ ಜಮಾಲ್ ಖಶ್ನೋಗಿಯ ಹತ್ಯೆ ನಡೆದ ವಿವಾದದ ಬಳಿಕ ಅವರು ಮೊದಲ ಬಾರಿಗೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾಗವಹಿಸಿದ್ದರು.

ಜಿ-20 ಯಶಸ್ವಿಯೇ?

ಜಿ-20 ಯಶಸ್ವಿಯೇ?

ಗುಂಪಿನ ಸಣ್ಣ ಗಾತ್ರವು ಹೆಚ್ಚು ಯಶಸ್ವಿಯಾಗುತ್ತದೆ. ಕಡಿಮೆ ಸಂಖ್ಯೆಯ ನಾಯಕರನ್ನು ಆಹ್ವಾನಿಸಿದರೆ ಬೇಗನೆ ಚರ್ಚೆ ನಡೆದು ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಈ ಕಾರಣದಿಂದ ಜಿ-20 ಫಲಪ್ರದವಾಗಿದೆ ಎನ್ನಲಾಗುತ್ತದೆ. ಆದರೆ, ಮಹತ್ವದ ವಿಚಾರಗಳನ್ನು ಚರ್ಚಿಸುವಾಗ ಹೆಚ್ಚಿನ ಸಂಖ್ಯೆಯ ದೇಶಗಳನ್ನು ಹೊರಗಿಡುವುದು ನ್ಯಾಯೋಚಿತವಲ್ಲ ಎಂಬ ಅಭಿಪ್ರಾಯವಿದೆ. ಸುಮಾರು 170 ದೇಶಗಳು ಈ ಸಭೆಯಲ್ಲಿ ಭಾಗವಹಿಸುವುದಿಲ್ಲ.

ಈ ಸಭೆಯಲ್ಲಿ ಯಾವುದೇ ಔಪಚಾರಿಕ ತೀರ್ಮಾನಗಳನ್ನು ತೆಗೆದುಕೊಳ್ಳುವುದಿಲ್ಲ. ಇಲ್ಲಿ ನಡೆಯುವ ಒಪ್ಪಂದಗಳು ಕಾನೂನಾತ್ಮಕ ರಕ್ಷೆ ಹೊಂದಿರುವುದಿಲ್ಲ. ಶೃಂಗಸಭೆ ನಡೆಯುವ ಸಂದರ್ಭದಲ್ಲಿ ಪ್ರತಿಭಟನೆಗಳು ಸಹ ಎದುರಾಗುವುದು ಸಹಜ.

2009ರಲ್ಲಿ ಲಂಡನ್‌ನಲ್ಲಿ ನಡೆದ ಜಿ-20 ಪ್ರತಿಭಟನೆ ವೇಳೆ ಮನೆಗೆ ತೆರಳುತ್ತಿದ್ದ ಇಯಾನ್ ತೋಮ್ಲಿನ್ಸನ್ ಎಂಬ ಪತ್ರಿಕಾ ಮಾರಾಟಗಾರ ಪ್ರತಿಭಟನೆಯೊಳಗೆ ಸಿಲುಕಿ ಮೃತಪಟ್ಟಿದ್ದರು. ಕಳೆದ ವರ್ಷ ಆರ್ಥಿಕ ನೀತಿಗಳ ವಿರುದ್ಧ ಪ್ರತಿಭಟನೆ ನಡೆದಿತ್ತು.

'ಇದು ಸ್ವೀಕಾರಾರ್ಹವಲ್ಲ,' ಎಂದು ಮೋದಿ ಜೊತೆ ಮಾತುಕತೆಗೆ ನಿಂತ ಟ್ರಂಪ್

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
G20 nations summit is being held in Japan this year. What is G20 Summit? Which are the countries are the members of this group? What they discuss in the meetings? Read to know few interesting things about G20.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more