ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ಬಂದು ಹೋದವರಲ್ಲಿ 'ಕೊರೊನಾಸೋಮ್ನಿಯಾ' ಅಡ್ಡ ಪರಿಣಾಮ!

|
Google Oneindia Kannada News

ನವದೆಹಲಿ, ಜೂನ್ 15: ಕೊರೊನಾ ವೈರಸ್ ಸೋಂಕಿನಿಂದ ರೋಗಿಗಳಲ್ಲಿ ಹಲವು ರೀತಿಯ ಅಡ್ಡ ಪರಿಣಾಮಗಳು ಗೋಚರಿಸುತ್ತವೆ ಎಂಬುದನ್ನು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಪತ್ತೆ ಮಾಡಿದ್ದಾರೆ. ಸಾಮಾನ್ಯವಾಗಿ ಸೋಂಕಿತರಿಗೆ ಹೃದಯ ಸಂಬಂಧಿತ ಅನಾರೋಗ್ಯ ಹಾಗೂ ಮಾನಸಿಕ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುವುದು ಈ ಮೊದಲೇ ಪತ್ತೆಯಾಗಿದೆ.

ಕೋವಿಡ್-19 ರೋಗಿಗಳಲ್ಲಿ ಈ ಎರಡು ಅಡ್ಡಪರಿಣಾಮಗಳ ಹೊರತಾಗಿ ಹೊಸದಾಗಿ ಮತ್ತೊಂದು ರೀತಿಯ ಅಡ್ಡಪರಿಣಾಮವನ್ನು ತಜ್ಞರು ಪತ್ತೆ ಮಾಡಿದ್ದಾರೆ. ಈ ರೋಗಿಗಳಲ್ಲಿ ನಿದ್ರೆಯ ಅಸ್ವಸ್ಥತೆ ಅಡ್ಡಪರಿಣಾಮ ಕಾಣಿಸಿಕೊಳ್ಳುತ್ತದೆ ಎಂದು ಗೊತ್ತಾಗಿದೆ.

ಹೆಚ್ಚು ಹರಡುವ ಓಮಿಕ್ರಾನ್ ಉಪ-ರೂಪಾಂತರದ 4 ಪ್ರಕರಣಗಳು ಪತ್ತೆ ಹೆಚ್ಚು ಹರಡುವ ಓಮಿಕ್ರಾನ್ ಉಪ-ರೂಪಾಂತರದ 4 ಪ್ರಕರಣಗಳು ಪತ್ತೆ

ವೈದ್ಯರ ಪ್ರಕಾರ ಕೊರೊನಾ ವೈರಸ್ ಸೋಂಕಿತರು ಹಾಗೂ ಸೋಂಕಿನಿಂದ ಇತ್ತೀಚಿಗೆ ಗುಣಮುಖರಾದವರಲ್ಲಿ ನಿದ್ರೆಗೆ ಸಂಬಂಧಿಸಿದ ಸಮಸ್ಯೆ ಪತ್ತೆಯಾಗಿದೆ. ಇದನ್ನು ವೈದ್ಯಕೀಯ ಲೋಕದಲ್ಲಿ ಆರೋಗ್ಯ ತಜ್ಞರು "ಕೊರೊನಾಸೋಮ್ನಿಯಾ" ಎಂದು ಕರೆದಿದ್ದಾರೆ.

ದೇಶದಲ್ಲಿ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಹೆಚ್ಚುತ್ತಿರುವುದರ ಮಧ್ಯೆ ಹೊಸದೊಂದು ಅಡ್ಡಪರಿಣಾಮದ ಸುದ್ದಿ ಗುಲ್ಲಾಗಿದೆ. ಈ ಕೊರೊನಾಸೋಮ್ನಿಯಾ ಎಂದರೇನು?, ರೋಗಿಗಳಲ್ಲಿ ಈ ಕೊರೊನಾಸೋಮ್ನಿಯಾದಿಂದ ಆಗುವ ಪರಿಣಾಮಗಳೇನು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಏನಿದು ಕರೋನಾಸೋಮ್ನಿಯಾ?

ಏನಿದು ಕರೋನಾಸೋಮ್ನಿಯಾ?

ವೈದ್ಯಕೀಯ ಅಧ್ಯಯನಗಳು ಮತ್ತು ವೈದ್ಯರ ವರದಿಗಳ ಪ್ರಕಾರ, ಕೊರೊನಾ ವೈರಸ್ ಸೋಂಕಿತರು ಅಥವಾ ಇತ್ತೀಚೆಗೆ ಕೋವಿಡ್ -19 ನಿಂದ ಚೇತರಿಸಿಕೊಂಡಿರುವ ಜನರು, ಕರೋನಾಸೋಮ್ನಿಯಾ ಅಥವಾ ಕೋವಿಡ್ -19 ನಿದ್ರಾಹೀನತೆಯ ಸಮಸ್ಯೆ ಅನುಭವಿಸುತ್ತಿರುವುದು ವರದಿಯಾಗಿದೆ. ಸೂಕ್ತ ಸಮಯದಲ್ಲಿ ಈ ರೋಗಿಗಳಿಗೆ ಸರಿಯಾಗಿ ನಿದ್ರೆ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ನಿದ್ರಾಹೀನತೆಯ ಸಮಸ್ಯೆಯು ರೋಗಿಗಳನ್ನು ಬೆನ್ನು ಬಿಡದೇ ಕಾಡುತ್ತಿರುವುದು ಇತ್ತೀಚಿನ ವರದಿಗಳಲ್ಲಿ ದೃಢಪಟ್ಟಿದೆ.

ರೋಗಗಳ ಒತ್ತಡದಿಂದ ಆವರಿಸಿಕೊಳ್ಳುವ ನಿದ್ರಾಹೀನತೆ

ರೋಗಗಳ ಒತ್ತಡದಿಂದ ಆವರಿಸಿಕೊಳ್ಳುವ ನಿದ್ರಾಹೀನತೆ

ಕೊರೊನಾ ವೈರಸ್ ಸೋಂಕಿತರಲ್ಲಿ ಅಡ್ಡಪರಿಣಾಮಕ್ಕೆ ನಿಜವಾದ ಕಾರಣಗಳೇನು ಎಂಬುದನ್ನು ನಿಶ್ಚಿತವಾಗಿ ಹೇಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಆದರೆ ಕೋವಿಡ್-19 ಸೋಂಕಿಗೆ ಒಳಗಾದ ಸಂದರ್ಭದಲ್ಲಿ ರೋಗಿಗಳು ಅನುಭವಿಸಿದ ಒತ್ತಡವೇ ನಿದ್ರಾಹೀನತೆಗೆ ಪ್ರಮಖ ಕಾರಣ ಎಂದು ವೈದ್ಯರು ಹೇಳುತ್ತಿದ್ದಾರೆ. ಇದಲ್ಲದೆ, ವ್ಯಕ್ತಿಯ ನಿದ್ರೆಯ ಮಾದರಿಯು ದೇಹದಲ್ಲಿನ ಪ್ರತಿರಕ್ಷಣಾ ವ್ಯವಸ್ಥೆಯೊಂದಿಗೆ ಪರಸ್ಪರ ಸಂಬಂಧವನ್ನು ಹೊಂದಿರುತ್ತದೆ. ಕೋವಿಡ್ -19 ಸೋಂಕಿತನಲ್ಲಿ ಇರುವ ರೋಗನಿರೋಧಕ ಶಕ್ತಿಯನ್ನು ಗಮನಾರ್ಹವಾಗಿ ದುರ್ಬಲಗೊಂಡಿರತ್ತದೆ. ಇದರಿಂದಾಗಿ ರೋಗದ ನಂತರದಲ್ಲಿ ಅವರ ನಿದ್ರೆಯ ವೇಳಾಪಟ್ಟಿಯಲ್ಲಿ ವ್ಯತ್ಯಾಸವಾಗುತ್ತದೆ. ಅಂಥವರು ಕರೋನಾಸೋಮ್ನಿಯಾ ಸಮಸ್ಯೆಯನ್ನು ಅನುಭವಿಸುತ್ತಾರೆ ಎಂದು ವೈದ್ಯರು ಹೇಳಿದ್ದಾರೆ.

ನಿದ್ರಾಹೀನತೆಗೆ ಜೀವನಶೈಲಿಯ ಬದಲಾವಣೆಗೂ ಕಾರಣ

ನಿದ್ರಾಹೀನತೆಗೆ ಜೀವನಶೈಲಿಯ ಬದಲಾವಣೆಗೂ ಕಾರಣ

ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನ ಸಮಯದಲ್ಲಿ ಜೀವನಶೈಲಿಯ ಬದಲಾವಣೆಗಳು ಸಹ ಈ ವಿದ್ಯಮಾನಕ್ಕೆ ಕಾರಣವಾಗಿವೆ. ಕೋವಿಡ್-19 ಸೋಂಕಿಗೆ ಗುರಿಯಾದ ಸಂದರ್ಭದಲ್ಲಿ ವ್ಯಕ್ತಿಗಳಲ್ಲಿನ ನಿದ್ರೆಯ ಅವಧಿಯೂ ಬದಲಾಗಿರುತ್ತದೆ. ಎಂದಿನಂತೆ ನಿದ್ರೆಗೆ ಜಾರದೇ ರೋಗಿಗಳು ಮಾನಸಿಕವಾಗಿ ಗೊಂದಲ ಮತ್ತು ಆತಂಕಕ್ಕೆ ಗುರಿ ಆಗಿರುತ್ತಾರೆ. ಇದರಿಂದ ನಿದ್ರೆಯ ಮಾದರಿಯಲ್ಲಿ ಬದಲಾವಣೆ ಕಂಡು ಬಂದಿರುತ್ತದೆ.

ಕರೋನಸೋಮ್ನಿಯಾವು ಹೇಗೆ ಅಡ್ಡಪರಿಣಾಮವಾಗುತ್ತೆ?

ಕರೋನಸೋಮ್ನಿಯಾವು ಹೇಗೆ ಅಡ್ಡಪರಿಣಾಮವಾಗುತ್ತೆ?

ದೀರ್ಘಕಾಲದವರೆಗೆ ಕೋವಿಡ್ -19 ನಿಂದ ಬಳಲುತ್ತಿರುವ ರೋಗಿಗಳಲ್ಲಿ ಕರೋನಸೋಮ್ನಿಯಾ ಕೂಡಾ ಒಂದು ಅಡ್ಡ ಪರಿಣಾಮವಾಗಬಹುದು ಎಂದು ಹಲವಾರು ಅಧ್ಯಯನಗಳು ಸೂಚಿಸಿವೆ. ಏಕೆಂದರೆ ಇದು ವ್ಯಕ್ತಿಯ ಪ್ರತಿರಕ್ಷಣಾ ವ್ಯವಸ್ಥೆ ಮತ್ತು ಚಯಾಪಚಯ ಕ್ರಿಯೆಯ ಮೇಲೆ ತೀವ್ರವಾಗಿ ಪರಿಣಾಮ ಬೀರುತ್ತದೆ. ದೀರ್ಘಕಾಲದ ಕೋವಿಡ್ ಸೋಂಕು ಕೆಲವೊಮ್ಮೆ, ರೋಗಿಗಳಲ್ಲಿ ತೀವ್ರವಾದ ನಿದ್ರಾಹೀನತೆಯ ಅಡ್ಡ ಪರಿಣಾಮವನ್ನು ಹೊಂದಿರುತ್ತದೆ.

ಇದರ ಜೊತೆಗೆ ಕೋವಿಡ್ -19 ಸೋಂಕು ಬಂದು ಹೋದ ನಂತರದಲ್ಲಿ ಕಾಣಿಸಿಕೊಳ್ಳುವ ಕೆಲವು ಸಾಮಾನ್ಯ ಅಡ್ಡಪರಿಣಾಮಗಳು ಎಂದರೆ, ದೀರ್ಘಕಾಲದವರೆಗೆ ರುಚಿ ಮತ್ತು ವಾಸನೆಯ ಕಳೆದುಕೊಳ್ಳುವುದು, ಗಂಟಲಿನಲ್ಲಿ ಕಿರಿಕಿರಿ, ಶ್ವಾಸಕೋಶದ ಸಾಮರ್ಥ್ಯ ಕುಗ್ಗುವುದು, ಹೃದಯ ಸಂಬಂಧಿ ಸಮಸ್ಯೆಗಳು ಗೋಚರಿಸುತ್ತವೆ.

ದೇಶದಲ್ಲಿ ಕೋವಿಡ್-19 ಸೋಂಕಿತರ ಅಂಕಿ-ಸಂಖ್ಯೆ

ದೇಶದಲ್ಲಿ ಕೋವಿಡ್-19 ಸೋಂಕಿತರ ಅಂಕಿ-ಸಂಖ್ಯೆ

ಕಳೆದ 24 ಗಂಟೆಗಳಲ್ಲಿ 8,822 ಮಂದಿಗೆ ಕೋವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಪಕ್ಕಾ ಆಗಿದೆ. ಕಳೆದೊಂದು ದಿನದಲ್ಲಿ ಕೊರೊನಾವೈರಸ್ ಮಹಾಮಾರಿಯಿಂದ 15 ಮಂದಿ ಪ್ರಾಣ ಬಿಟ್ಟಿದ್ದಾರೆ. ಇದೇ ಅವಧಿಯಲ್ಲಿ 5,718 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಭಾರತದಲ್ಲಿ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 43,245,517ಕ್ಕೆ ಏರಿಕೆಯಾಗಿದೆ. ಇದರ ಮಧ್ಯೆ ಇದುವರೆಗೂ 42,667,088 ಸೋಂಕಿತರು ಗುಣಮುಖರಾಗಿದ್ದಾರೆ. ಅದೇ ರೀತಿ ಮಹಾಮಾರಿ ಕೋವಿಡ್-19 ಸೋಂಕಿಗೆ ದೇಶದಲ್ಲಿ ಇದುವರೆಗೂ 524,792 ಮಂದಿ ಪ್ರಾಣ ಬಿಟ್ಟಿದ್ದಾರೆ. ದೇಶದಲ್ಲಿ ಒಟ್ಟು ಕೊರೊನಾವೈರಸ್ ಸಕ್ರಿಯ ಪ್ರಕರಣಗಳ ಸಂಖ್ಯೆ 53,637 ಆಗಿದೆ.

English summary
What is Covid-19 side effect ‘coronasomnia’? Know symptoms and solutions in kannada. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X