ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚರ್ಚೆ: ಸಿಎಎ, ಎನ್ಆರ್ ಸಿ ಪರ-ವಿರೋಧ ಏನು? ಎತ್ತ? ಏಕೆ?

By ಎಂ.ಡಿ
|
Google Oneindia Kannada News

ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೋಂದಣಿಯನ್ನು ಜಾರಿಗೊಳಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಕೇಂದ್ರ ಸರ್ಕಾರವು ಎಚ್ಚರಿಕೆ ನೀಡಿದ್ದಾರೆ. ಒಂದು ಕಡೆಯಲ್ಲಿ ಸಿಎಎ ಹಾಗೂ ಎನ್ಆರ್ ಸಿ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದೆ. ಇನ್ನೊಂದೆಡೆ ಬೆಂಗಳೂರಿನಲ್ಲೇ ಸಿಎಎ ಹಾಗೂ ಎನ್ಆರ್ ಸಿ ಪರವಾಗಿ ಪ್ರತಿಭಟನೆ ನಡೆಸಲಾಗುತ್ತಿದೆ.

ಪೌರತ್ವ ಕಾಯ್ದೆ (ಸಿಎಎ) ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್‌ಆರ್‌ಸಿ) ಬಗ್ಗೆ ದೇಶದಾದ್ಯಂತ ಚರ್ಚೆಗಳು ಎದ್ದಿವೆ. ಸಿಎಎ ಮತ್ತು ಎನ್‌ಆರ್‌ಸಿ ಇಂದ ಹಲವರು ಆತಂಕಗೊಂಡಿದ್ದು, ಭಾರತದಲ್ಲಿರುವ ಎಲ್ಲರೂ 'ನಾವು ಭಾರತೀಯರೇ' ಎಂಬುದಕ್ಕೆ ಸರ್ಕಾರಕ್ಕೆ ಸಾಕ್ಷಿ ಸಲ್ಲಿಕೆ ಮಾಡಬೇಕಾಗಿ ಬಂದಿದೆ. ಈ ನಿಟ್ಟಿನಲ್ಲಿ ಸಿಎಎ, ಎನ್ ಆರ್ ಸಿ ಬಗ್ಗೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಇಲ್ಲಿದೆ...

15 ಆಗಸ್ಟ್ 1947 ಮಧ್ಯರಾತ್ರಿ ರಂದು ಭಾರತ ಬ್ರಿಟೀಷರ ಆಳ್ವಿಕೆಯಿಂದ ಸ್ವಾತಂತ್ರ ಪಡೆಯಿತು. ಅಖಂಡ ಭಾರತವು ಎರಡು ಭಾಗವಾಯಿತು. ಒಂದು ಪ್ರಾಂತ್ಯ ಧಾರ್ಮಿಕ ನೆಲೆಗಟ್ಟಿನ ಮೇಲೆ ಮುಸ್ಲಿಂ ದೇಶವಾಗಿ ಸ್ಥಾಪಿತವಾಯಿತು, ಇನ್ನೊಂದು ಬೇರೆ ಬೇರೆ ಭಾಷೆ, ಆಹಾರ, ನಡೆ ನುಡಿ, ಜಾತಿ, ವರ್ಗ, ಬಣ್ಣ, ಹವಾಮಾನ, ನಂಬಿಕೆ ಎಲ್ಲವನ್ನೊಳಗೊಂಡ ಜಾತ್ಯಾತೀತ "ಭಾರತ" ದೇಶವಾಗಿ.

NRC: ಭಾರತೀಯ ಪೌರರೆಂದು ಸಾಬೀತುಪಡಿಸಲು ಕೊಡಬೇಕಾದ ದಾಖಲೆಗಳ ಪಟ್ಟಿNRC: ಭಾರತೀಯ ಪೌರರೆಂದು ಸಾಬೀತುಪಡಿಸಲು ಕೊಡಬೇಕಾದ ದಾಖಲೆಗಳ ಪಟ್ಟಿ

ಇಂಥ ವೈವಿಧ್ಯತೆಯುಳ್ಳ ದೇಶಕ್ಕೆ ಎಲ್ಲರನ್ನೂ ಒಳಗೊಳ್ಳುವ ಸಮಾನ ಹಕ್ಕಿನ ಸಂವಿಧಾನ ರಚಿತವಾಯಿತು, ಭಾಷಾವಾರು ರಾಜ್ಯಗಳನ್ನೊಳಗೊಂಡ ಭಾರತ ದೇಶ ಗಣರಾಜ್ಯವಾಗಿ ಹೊರಹೊಮ್ಮಿತು.

ಈಗ್ಗೆ ಕೆಲ ದಿನಗಳ ಹಿಂದೆ ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟು ಕಾಯ್ದೆಯಾಗಿ ಕಾರ್ಯರೂಪಕ್ಕೆ ಬರುತ್ತಿರುವ ಸಿ. ಎ. ಎ - 2019 ನಮ್ಮ ಸಂವಿಧಾನದ ಆರ್ಟಿಕಲ್ 14 ನ್ನು ತಿರಸ್ಕರಿಸುವಂಥ ಕಾಯಿದೆಯಾಗುತ್ತದೆ. ನಮ್ಮ ಜಾತ್ಯತೀತ ಸಂವಿಧಾನದ ಬುಡವನ್ನೇ ಅಲುಗಾಡಿಸುವತ್ತ ಮೊದಲ ಹೆಜ್ಜೆಯಾಗಿ ಕಾಣಿಸುತ್ತಿದೆ.

ಸಿ. ಎ. ಎ ಎಂದರೇನು ಅದು ಏನು ಹೇಳುತ್ತದೆ?

ಸಿ. ಎ. ಎ ಎಂದರೇನು ಅದು ಏನು ಹೇಳುತ್ತದೆ?

ಸಿ. ಎ. ಎ - ಸಿಟಿಜೆನ್ ಶಿಪ್ ಅಮೆಂಡಮೆಂಟ್ ಆಕ್ಟ್ ಅಂದರೆ ಪೌರತ್ವ ಮಸೂದೆ ಕಾಯಿದೆ. 2019 ರಲ್ಲಿ ತಿದ್ದುಪಡಿಯಾದ ಅಂಶಗಳು ಈಗ ಬಹು ಮುಖ್ಯವಾಗಿ ಚರ್ಚೆಗೊಳಪಟ್ಟಿರುವುದು.

ಪಾಕಿಸ್ತಾನ, ಅಪಘಾನಿಸ್ತಾನ ಮತ್ತು ಬಾಂಗ್ಲಾದೇಶಗಳ ಪೌರತ್ವ ಹೊಂದಿರುವ ಅಲ್ಪಸಂಖ್ಯಾತ ಸಮುದಾಯಗಳಾದ ಹಿಂದೂ, ಸಿಖ್, ಬೌದ್ಧ,ಜೈನ, ಪಾರ್ಸಿ ಮತ್ತು ಕ್ರಿಶ್ಚಿಯನ್ ಅವರ ಧರ್ಮದ ಆಧಾರದ ಮೇಲೆ ಕಿರುಕುಳಕ್ಕೊಳಗಾಗಿರುವವರನ್ನು ನಮ್ಮ ದೇಶದ "ಸಿ. ಎ. ಎ - 2019" ಕಾನೂನಿನ ಪ್ರಕಾರ ಭಾರತ ಪೌರತ್ವ ನೀಡಿ (ಅಷ್ಟೊಂದು ಸಿಂಪಲ್ಲಾಗಿಲ್ಲ ಅದು ಕೂಡ) ಅವರನ್ನು ನಮ್ಮ ದೇಶದ ಪ್ರಜೆಗಳಾಗಿ ಎಲ್ಲ ರೀತಿಯ ಮೂಲಭೂತ ಹಕ್ಕುಗಳನ್ನು ಒದಗಿಸಲಾಗುವುದು.

ಅದರಲ್ಲೇನ್ ತಪ್ಪಿದೆ, ಅದಕ್ಕೆ ಇಷ್ಟೊಂದು ಬೊಬ್ಬೆ ಯಾಕೆ?

ಅದರಲ್ಲೇನ್ ತಪ್ಪಿದೆ, ಅದಕ್ಕೆ ಇಷ್ಟೊಂದು ಬೊಬ್ಬೆ ಯಾಕೆ?

ಏಕೆಂದರೆ ಮಾನವ ಹಕ್ಕುಗಳ ಸಂಘಟನೆ ಹೇಳುವುದೇನೆಂದರೆ ಪರ್ಸಿಕ್ಯೂಟೆಡ್ ಅಂದರೆ ಕಿರುಕುಳಕ್ಕೊಳಪಟ್ಟಿರುವವರು ಎಂದು ಬರೀ ಧರ್ಮದ ಆಧಾರದ ಮೇಲೆ ಗುರುತಿಸುವುದಲ್ಲ, ಅದು ವರ್ಣಾಧಾರಿತ ಇರಬಹುದು, ಲಿಂಗ, ಭಾಷೆ, ರಾಜಕೀಯ ಇನ್ಯಾವುದೇ ಕಾರಣಗಳಿಂದ ಒಂದು ದೇಶದಲ್ಲಿ ಕಷ್ಟಕ್ಕೆ ಒಳಗಾದವರನ್ನು ಇನ್ನೊಂದು ದೇಶ ಮಾನವತೆಯ ಆಧಾರದ ಮೇಲೆ ಆಶ್ರಯ ಕಲ್ಪಿಸುವ, ಪೌರತ್ವ ನೀಡುವ ಸಹಾಯ ಹಸ್ತ ನೀಡಬಹುದು.

ಇಂಟರ್‌ನೆಟ್ ಸ್ಥಗಿತಗೊಳಿಸುವುದರಲ್ಲಿ ಭಾರತವೇ ''ವಿಶ್ವಗುರು''ಇಂಟರ್‌ನೆಟ್ ಸ್ಥಗಿತಗೊಳಿಸುವುದರಲ್ಲಿ ಭಾರತವೇ ''ವಿಶ್ವಗುರು''

 ಮುಸ್ಲಿಂ ಸಮುದಾಯದವರನ್ನು ಒಳಪಡಿಸಿಲ್ಲ?

ಮುಸ್ಲಿಂ ಸಮುದಾಯದವರನ್ನು ಒಳಪಡಿಸಿಲ್ಲ?

ಓಹ್ ಮುಸ್ಲಿಂ ಸಮುದಾಯದವರನ್ನು ಒಳಪಡಿಸಿಲ್ಲ ಎಂದು ವಿರೋಧವೇ?

ಬರೀ ಸಿ. ಎ. ಎ. ಜಾರಿಗೆಗೊಳಿಸಿದರೆ ನಮ್ಮ ವಿರೋಧ ಖಂಡಿತ ಇಲ್ಲ. ಈ ಕಾಯಿದೆ ನೇಪಾಳ, ಭೂತಾನ, ಶ್ರೀಲಂಕಾ, ಬರ್ಮಾಗಳಲ್ಲಿ ನೆಲೆಸಿರುವ ಎಲ್ಲ ಶೋಷಿತರಿಗೂ (ಅಲ್ಪಸಂಖ್ಯಾತರೇ ಆಗಬೇಕೆಂದೇನಿಲ್ಲ) ವಿಸ್ತರಿಸಲಿ ಎಂದು ಬಯಸುತ್ತೇವೆ. ನಾವು ಹೃತ್ಪೂರ್ವಕವಾಗಿ ಅವರನ್ನೆಲ್ಲ ನೆಲೆ ನೀಡುವತ್ತ ಕೈ ಜೋಡಿಸುತ್ತೇವೆ.

"ಸಿ. ಎ. ಎ" ವನ್ನು "ಎನ್. ಆರ್ .ಸಿ" ಯೊಂದಿಗೆ ಸೇರಿಸಿದರೆ ನಮ್ಮ ಸಂಪೂರ್ಣ ವಿರೋಧವಿದೆ. ಏಕೆಂದರೆ ಆಗ ಅದು ನಮ್ಮ ದೇಶದ ಸಂವಿಧಾನದ ಮೂಲ ಹಕ್ಕುಗಳಾದ ಸರ್ವರೂ ಸಮಾನರು ಮತ್ತು ಇದು ಜಾತ್ಯತೀತ ದೇಶ ಅನ್ನುವದನ್ನು ಕಸಿದು, ಹೊರಗಿನಿಂದ ಬಂದವರನ್ನು ಪೌರತ್ವ ನೀಡುವ ಆದರೆ ತಮ್ಮದೇ ದೇಶದ ಒಂದು ಸಮುದಾಯದವರನ್ನು ಅಸಿಂಧುತ್ವಗೊಳಿಸುವ ಕಾನೂನಾಗುತ್ತದೆ. ಅದೂ ಸರ್ಕಾರ ನಿರ್ಧರಿಸುವ ಕೆಲವೇ ದಾಖಲೆಗಳ ಪ್ರಕಾರ!

ನ್ಯಾಷನಲ್ ರೆಜಿಸ್ಟರ್ ಆಫ್ ಸಿಟಿಜೆನ್ಸ್

ನ್ಯಾಷನಲ್ ರೆಜಿಸ್ಟರ್ ಆಫ್ ಸಿಟಿಜೆನ್ಸ್

ಎನ್,ಆರ್,ಸಿ ಅಂದರೇನು? ನ್ಯಾಷನಲ್ ರೆಜಿಸ್ಟರ್ ಆಫ್ ಸಿಟಿಜೆನ್ಸ್. -ದೇಶದ ಗೃಹಮಂತ್ರಿಗಳು ಸಂಸತ್ತಿನಲ್ಲಿ , ಪ್ರಧಾನಿಯವರು ಭಾಷಣಗಳಲ್ಲಿ ಮತ್ತು ಕೇಂದ್ರದ ಮಂತ್ರಿಗಳು ಪದೇ ಪದೇ ಹೇಳಿರುವಂತೆ ಇದೊಂದು ರಾಷ್ತ್ರೀಯ ಪೌರತ್ವ ನೊಂದಣಿ/ದಾಖಲೆ. ಅಂದರೆ ಎಲ್ಲ ದೇಶವಾಸಿಗಳೂ ನಾವು ಮೂಲತಃ ಭಾರತೀಯರು ಎಂದು ಸರ್ಕಾರ ರಚಿಸುವ ಅನುಸೂಚಿ ಮಾರ್ಗದರ್ಶಿ ಅನ್ವಯ ಮತ್ತು ಕೇಳಲ್ಪಡುವ ದಾಖಲೆಗಳೊಂದಿಗೆ 130 ಕೋಟಿ ಜನರು ಸಾಬೀತು ಪಡಿಸಬೇಕು. ನೊಂದಣಿಯಲ್ಲಿ ಹೆಸರು ಬರದವರನ್ನು ಬಂಧನ ಕೇಂದ್ರಗಳಲ್ಲಿ ಇಟ್ಟು ಸಿ.ಎ.ಎ ಪರಿಚ್ಚೇದಲ್ಲಿ ಬರುವ ದೇಶಗಳಿಂದ ಕಿರುಕೊಳಪಟ್ಟು ಇಲ್ಲಿಗೆ ವಲಸೆ ಬಂದಿದ್ದರೆಂದು ಸಾಬೀತು ಮಾಡಿದರೆ ಅವರನ್ನು ಪೌರತ್ವ ನೀಡಿ ನಮ್ಮ ದೇಶದಲ್ಲಿ ಉಳಿಸಿಕೊಳ್ಳುವುದು. ಒಂದು ವರ್ಗದ ಜನರು ಮತ್ತು ಉಳಿದ ಸಾಬೀತಾಗದವರನ್ನು ಬಂಧನ ಕೇಂದ್ರಗಳಲ್ಲಿ ಸಾಕಿಕೊಂಡು ಅವರನ್ನು ಅವರ ಮೂಲ ದೇಶಕ್ಕೆ ಕಳುಹಿಸಲಾಗುತ್ತದೆ.

ನುಸುಳುಕೋರರು ದೇಶದ ಭದ್ರತೆಗೆ ಮಾರಕ

ನುಸುಳುಕೋರರು ದೇಶದ ಭದ್ರತೆಗೆ ಮಾರಕ

ನುಸುಳುಕೋರರು ದೇಶದ ಭದ್ರತೆಗೆ ಮಾರಕ ಅವರನ್ನು ದೇಶದಿಂದ ಹೊರಗಟ್ಟುವಲ್ಲಿ ಇವೆರಡು ಪೂರಕವಾಗುತ್ತವೆ. ಇದು ಒಳ್ಳೆಯದೇ ಅಲ್ಲವೇ?

ಖಂಡಿತ, ಅಂಥ ನುಸುಳುಕೋರನನ್ನು ಗುರುತಿಸಿ ಮೊದಲು ಅವರ ದೇಶಕ್ಕೆ ಕಳುಹಿಸಲಿ. ಆದರೆ ನೀವೇ ಮತ್ತೊಮ್ಮೆ ಪರಾಮರ್ಶಿಸಿ ನೋಡಿ ಇದೊಂದು ದ್ವಂದ - ದ್ವಿಮುಖ ನೀತಿ ಅನಿಸುವುದಿಲ್ಲವೇ? ಆ ಮೂರು ರಾಷ್ಟ್ರಗಳಿಂದ ನಮ್ಮ ಸರ್ಕಾರವೇ ಕರೆಸಿ ದೇಶದೊಳಗೆ ಇಟ್ಟುಕೊಳ್ಳುವುದು. ಯಾವುದೇ ಬ್ಯಾಕ್ ಗ್ರೌಂಡ್ ಚೆಕ್ ಮಾಡದೇ , ಆಗ ಭದ್ರತೆ ಪ್ರಶ್ನೆ ಬರುವುದಿಲ್ಲವೇ? ಹೊರಗಿನಿಂದ ಬಂದು ಇಲ್ಲಿ ಇದಾಗಲೇ ನೆಲೆಕಟ್ಟಿ ಕೊಂಡಿರುವವರನ್ನು ದೇಶದ ಭದ್ರತೆಗೆ ಮಾರಕ ಎಂದು ಓಡಿಸುವುದು ಇಲ್ಲಾ ಬಂಧನ ಕೇಂದ್ರದಲ್ಲಿಟ್ಟು ಸಾಕುವುದು. ಹೀಗೆ ಬಂಧನಕ್ಕೊಳಪಟ್ಟವರು ದೇಶಕ್ಕೆ ಇನ್ನೂ ಮಾರಕವಾಗುವರಲ್ಲವೇ? ಇನ್ನೊಂದು ಕಾಮಿಡಿ ಏನೆಂದರೆ ನುಸುಳುಕೋರರು ಬಂದು ಯಾಕೆ ತಮ್ಮನ್ನು ತಾವೇ ರಿಸ್ಕಿಗೆ ಒಳಪಡಿಸಿಕೊಳ್ಳುತ್ತಾರೆಯೇ? ಸರಕಾರ ಅವರನ್ನು ಹೇಗೋ ಗುರುತಿಸುತ್ತದೆ ಎಂದಾದರೆ ಮತ್ತೆ ಯಾಕೆ ಇವೆರಡು ಕಾನೂನು ದಾಖಲೆ ಎಲ್ಲ!
ನೀವು ಏಕೆ ಹೆದರುತ್ತಿದೀರಿ

ನೀವು ಏಕೆ ಹೆದರುತ್ತಿದೀರಿ

ನೀವು ಏಕೆ ಹೆದರುತ್ತಿದೀರಿ, ನಿಮ್ಮ ಪೌರತ್ವ ಸಿದ್ಧಪಡಿಸಲು ನಿಮ್ಮ ಬಳಿ ಸಾಕಷ್ಟು ಪುರಾವೆಗಳಿವೆಯಲ್ಲ?

ನನ್ನಂಥವರಿಗೆ ಕಷ್ಟವಿಲ್ಲ ಬಿಡಿ. ಆದರೆ ಸರಕಾರ ಪಾಸಪೋರ್ಟ್, ಆಧಾರ್, ವೋಟರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್ ತಾವೇ ಮಾನ್ಯ ನೀಡಿರುವ ಕಾರ್ಡಗಳೆಲ್ಲ ಪೌರತ್ವ ಸಿದ್ಧಪಡಿಸುವುದಿಲ್ಲ ಎಂದು ಹೇಳುತ್ತಿದೆ. ಜನನ ಪ್ರಮಾಣ ಪತ್ರ ಎಷ್ಟು ಜನರ ಬಳಿ ಇದೆ? ಪ್ರವಾಹ ಬಂದು ಕೊಚ್ಚಿ ಹೋಗಿರುವ, ಊರು ಬಿಟ್ಟು ಕೆಲಸ ಮಾಡಿ ಹೊಟ್ಟೆ ಹೊರೆದುಕೊಳ್ಳುತ್ತಿರುವ, ಕಾಡುಗಳಲ್ಲಿರುವ ಆದಿವಾಸಿಗಳು, ಅನಕ್ಷರಸ್ಥರು, ಹಿಂದುಳಿದವರು, ಮದುವೆ ಆಗಿ ಗಂಡನ ರಾಶಿಗೆ ತಕ್ಕಂತೆ ಹೆಸರು ಬದಲಿಸಿಕೊಂಡ ಹೆಣ್ಣುಮಕ್ಕಳು, ಇವೆಲ್ಲ ಬಿಟ್ಟಾಕಿ ಇಂಗ್ಲಿಷ್ ಕೀಬೋರ್ಡ್ ಕುಟ್ಟುವಾಗ ಕನ್ನಡದಲ್ಲಿ ಅಪಭ್ರಂಶಗೊಳಪಟ್ಟ ಹೆಸರುಗಳು ಹೇಗೆ ಸ್ವಾಮಿ ಇವರೆಲ್ಲ ಒಂದೇ ವ್ಯಕ್ತಿ ಅಂತ ಸಾಬೀತು ಮಾಡೋದು?

ಆಗ ದುಡಿದು ಹೊಟ್ಟೆ ತುಂಬಿಕೊಳ್ಳುವವರು ಕೆಲಸ ಬಿಟ್ಟು ಸರಕಾರಿ ಆಫೀಸುಗಳಿಗೆ, ಜಿಲ್ಲೆಯ ಕೋರ್ಟು ಕಚೇರಿ ಗಳಿಗೆ ಅಲೆಯುತ್ತ ಇದ್ದ ಬಿದ್ದ ದುಡ್ಡನ್ನೆಲ್ಲ ಸುರಿದು ತಮ್ಮ ಪ್ರಮಾಣ ಪತ್ರಗಳನ್ನು ಸರಿಪಡಿಸುತ್ತ ಹೆಣಗಾಡುವುದು. ಅಸ್ಸಾಂನಲ್ಲಿ ಏನ್.ಆರ್.ಸಿ ಯಿಂದ ಹೊರಗುಳಿದ 19 ಲಕ್ಷ ಜನರಲ್ಲಿ ಯಾವುದೇ ಜಾತಿಯವರನ್ನು ಒಮ್ಮೆ ಮಾತಾಡಿಸಿ ನೋಡಿ ಗೊತ್ತಾಗುತ್ತೆ.

ಮನೆಯ ಒಬ್ಬನೇ ಸದಸ್ಯನ ಪೌರತ್ವ

ಮನೆಯ ಒಬ್ಬನೇ ಸದಸ್ಯನ ಪೌರತ್ವ

ಇಷ್ಟೆಲ್ಲಾ ಮಾಡಿಯೂ ಯಾರದೇ ಮನೆಯ ಒಬ್ಬನೇ ಸದಸ್ಯನ ಪೌರತ್ವ ಸಾಬೀತಾಗದೆ ಅವನನ್ನು/ಅವಳನ್ನು ಬಂಧನ ಕೇಂದ್ರದಲ್ಲಿ ಇಟ್ಟರೆ, ಆ ಮನೆಯವರ ಪರಿಸ್ಥಿತಿ ಏನಾಗಬಹುದು ಸ್ವಲ್ಪ ಯೋಚಿಸಿ.

ಅವನೊಬ್ಬ ಮನೆಗೆ ದುಡಿದು ಹಾಕುವ ಗಂಡಸಾಗಿದ್ದರೆ, ಇನ್ನು ಆ ಸಂಸಾರ ನಡೆಸುವ ಜವಾಬ್ದಾರಿ ಸರಕಾರ ತೆಗೆದುಕೊಳ್ಳುವುದೋ?

ಅವಳು ಒಬ್ಬ ಮನೆಗೆ ಅಡುಗೆ ಮಾಡಿ ಹಾಕುತ್ತಿದ್ದ ತಾಯಿಯಾಗಿದ್ದರೆ, ಇನ್ನು ಆ ಚಿಕ್ಕ ಮಕ್ಕಳನ್ನು ಸಾಕುವವರ್ಯಾರು?

ಅವರು ವೃದ್ಧರಾಗಿದ್ದರೆ ಅವರ ಆರೋಗ್ಯ ನೋಡಿಕೊಳ್ಳುವವರ್ಯಾರು?

ಅಪ್ರಾಪ್ತ ಮಕ್ಕಳಾಗಿದ್ದರೆ ಅವರನ್ನು ಸುರಕ್ಷತೆಯಿಂದ ಕಾಪಾಡುವರ್ಯಾರು?
ತಯಾರಿ ಮಾಡಿಕೊಂಡೆ ಅನುಷ್ಠಾನ

ತಯಾರಿ ಮಾಡಿಕೊಂಡೆ ಅನುಷ್ಠಾನ

ಸಾಕು ಸಾಕು ಭವಿಷ್ಯವೇ ನೋಡಿ ಮಾತಾಡೋ ತರಹ ಮಾತಾಡ್ತಾ ಇದೀರಾ. ಎಲ್ಲವನ್ನೂ ತಯಾರಿ ಮಾಡಿಕೊಂಡೆ ಯಾವುದೇ ಕಾರ್ಯಕ್ರಮ ಮಾಡೋಣ ಅಂದ್ರೆ ಹೇಗೆ, ಇವತ್ತು ನಮ್ಮ ದೇಶವನ್ನು ಮುನ್ನಡೆಸುವತ್ತ ಕೈ ಜೋಡಿಸಬೇಕು ಮೊದಲು.

ತುಂಬಾ ಒಳ್ಳೆಯ ಮಾತು ಹೇಳಿದ್ರಿ ಸರ್. ಭವಿಷ್ಯದ ಮಾತು ಈಗ್ಯಾಕೆ. ಇವತ್ತು ಈ ಕಾಯ್ದೆ ಅನುಷ್ಠಾನಗೊಂಡರೆ ಆಗಬಹುದಾದ ಖರ್ಚು ವೆಚ್ಚವನ್ನೆ ತೆಗೆದುಕೊಳ್ಳೋಣ. ಬರೀ 3 ಲಕ್ಷ ಜನಸಂಖ್ಯೆವುಳ್ಳ ಒಂದು ಜಿಲ್ಲೆಯಷ್ಟು ವಿಸ್ತಾರವುಳ್ಳ ಅಸ್ಸಾಮ್ ರಾಜ್ಯಕ್ಕೆ ಸುಮಾರು 1400 ಕೋಟಿ ಖರ್ಚು, 5 ವರ್ಷಕ್ಕೂ ಹೆಚ್ಚು ಕಾಲಾವಕಾಶ ತೆಗೆದುಕೊಂಡಿದೆ.

ದೇಶದಲ್ಲೆಡೆ ಜಾರಿಗೊಳಿಸುವ ಖರ್ಚು ವೆಚ್ಚ

ದೇಶದಲ್ಲೆಡೆ ಜಾರಿಗೊಳಿಸುವ ಖರ್ಚು ವೆಚ್ಚ

ಇನ್ನು ನೀವೇ ಲೆಕ್ಕ ಹಾಕಿ ಇದನ್ನು ದೇಶದಲ್ಲೆಡೆ ಜಾರಿಗೊಳಿಸಿದರೆ -
29 ರಾಜ್ಯಗಳಿಗೆ = 29*1250 = 36,250 ಕೋಟಿ
ಅಸ್ಸಾಮ್ ಗುಡ್ಡಗಾಡು ಪ್ರದೇಶ ಅದಕ್ಕೆ ವೆಚ್ಚ ಹೆಚ್ಚು, ನಮ್ಮ ಲೆಕ್ಕಾಚಾರ ಸರಿಯಲ್ಲ ಅನಿಸಿದರೆ, ಜನಸಂಖ್ಯೆ ಆಧಾರಿತವಾಗಿ ನೋಡೋಣ -
3 ಕೋಟಿ ಏನ್. ಆರ್, ಸಿ ಕಾರ್ಯ ಕೈಗೊಳ್ಳಲು 1250 ಕೋಟಿ ಖರ್ಚಾದರೆ 130 ಕೋಟಿ ಜನಸಂಖ್ಯೆಗೆ 54,166 ಕೋಟಿ ವೆಚ್ಚ ತಗಲುವುದು.
ಆಮೇಲೆ ಪ್ರತಿ ರಾಜ್ಯಕ್ಕೆ 2 ಬಂಧಿತ ಕೇಂದ್ರ ಅಂದುಕೊಂಡರೂ ಕಟ್ಟಲು ತಗಲುವ ಬಾಬತ್ತು 29*2*3 = 174 ಕೋಟಿ
ಪ್ರತಿ ಕೇಂದ್ರದ ಬಂಧಿತ ಅಪೌರತ್ವ ಜನರನ್ನು ಸಾಕುವ, ಆರೋಗ್ಯ ನೋಡಿಕೊಳ್ಳುವ, ಮೇಲುಸ್ತುವಾರಿ ಒಟ್ಟಾರೆ ಖರ್ಚು = 29*2*12 =696 ಕೋಟಿ/ವಾರ್ಷಿಕ

ಬಂಧಿತರನ್ನು ಯಾವ ದೇಶಕ್ಕೆ

ಬಂಧಿತರನ್ನು ಯಾವ ದೇಶಕ್ಕೆ

ಇಷ್ಟೆಲ್ಲಾ ಆದ ಮೇಲೆ ಆ ಬಂಧಿತರನ್ನು ಯಾವ ದೇಶಕ್ಕೆ ಕಳುಹಿಸುವುದು? ಇದೆಲ್ಲಕ್ಕಿಂತ ಗಂಭೀರ ವಿಚಾರ ಏನಂದ್ರೆ, ನಮ್ಮ ಮುಂದಿನ ತಲೆಮಾರು ನೆಮ್ಮದಿಯಾಗಿ ಸಹಬಾಳ್ವೆಯಾಗಿ ಜೀವನ ನಡೆಸುತ್ತಿರಬೇಕೋ ಇಲ್ಲಾ ಆ ಮಧ್ಯ ಪ್ರಾಚ್ಯದ ದೇಶಗಳಂತೆ ಆಂತರಿಕ ದಂಗೆಗಳೊಂದಿಗೆ ಭಯದ ನೆರಳಲ್ಲಿ ಜೀವಿಸಬೇಕೋ ನೀವೇ ನಿರ್ಧರಿಸಿ.

ಒಂದೇ ಒಂದು ಸಲ ರಾಜಕೀಯ ಪಕ್ಷಗಳೊಡನೆ ನಮ್ಮ ವಿಚಾರಧಾರೆಯನ್ನು ಸೇರಿಸದೆ , ಅಮೂಲಾಗ್ರವಾಗಿ, ಭಾರತೀಯರಾಗಿ ಯೋಚಿಸಿದರೆ ಇದೆಂಥ ಮೂರ್ಖ ನಿರ್ಧಾರ ಅನ್ನೋದು ಎಂಥವನಿಗೂ ತಿಳಿಯುತ್ತೆ.

ಇದೇ ಹಣವನ್ನು, ಮಾನವ ಸಂಪನ್ಮೂಲವನ್ನು ಶಿಕ್ಷಣ , ಆರೋಗ್ಯ, ನಾಗರಿಕ ಮೂಲ ಸೌಕರ್ಯ, ವಿಜ್ಞಾನ, ಬಡತನ ನಿರ್ಮೂಲನ, ಬಳಲುತ್ತಿರುವ ಎಕಾನಾಮಿಗೆ ಪುಷ್ಠಿ ನೀಡುವತ್ತ, ಯುವ ಸಮುದಾಯಕ್ಕೆ ಉದ್ಯೋಗ ಇಂತಹ ದೇಶದ ಬೆಳವಣಿಗೆ ಪೂರಕವಾದ ಕಾರ್ಯಗಳಿಗೆ ಮುಂದಿನ ಹತ್ತು ವರುಷ ವ್ಯಯಿಸಿದರೆ ನಮ್ಮ ಭಾರತ ದೇಶ ಪ್ರಪಂಚದ ಮುಂಚೂಣಿಯಲ್ಲಿ ಬರುವುದರಲ್ಲಿ ತಡೆಯುವರ್ಯಾರು.


ಜೈ ಹಿಂದ, ಜೈ ಭಾರತ

English summary
What is CAA? What is NRC? Citizenship Amendment Act and National Population Register (NPR) explained with FAQs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X