ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏನಿದು 'ಬ್ಲೂಮೂನ್'?: ಇಂದು ಕಾಣಿಸುವ ಅಪರೂಪದ ಸಂಗತಿ ಬಗ್ಗೆ ನಿಮಗೆ ಗೊತ್ತಿರಬೇಕಾದ ಸಂಗತಿಗಳು

|
Google Oneindia Kannada News

ನವದೆಹಲಿ, ಅಕ್ಟೋಬರ್ 31: ಅಪರೂಪಕ್ಕೆ ನಡೆಯುವ ಬಾಹ್ಯಾಕಾಶದ ವಿಸ್ಮಯವನ್ನು ಎದುರುಗೊಳ್ಳುವ ಗಳಿಗೆ ಮತ್ತೆ ಬಂದಿದೆ. ಇಂದು ರಾತ್ರಿ (ಅ.31) ಆಗಸದಲ್ಲಿ ಮೋಡ ಕವಿಯದೆ ಇದ್ದರೆ ಅಪರೂಪದ ಸಂಗತಿಯನ್ನು ಕಣ್ತುಂಬಿಕೊಳ್ಳುವ ಅಪೂರ್ವ ಅವಕಾಶ ನಿಮ್ಮದಾಗಲಿದೆ. ಪೂರ್ಣ ಚಂದಿರನನ್ನು ನೋಡಲು ಬಯಸುವವರಿಗೆ ಇಂದು ಮತ್ತೊಮ್ಮೆ ಆ ಅನುಭವ ಸಿಗಲಿದೆ. ಒಂದೇ ತಿಂಗಳಲ್ಲಿ ಇಬ್ಬರು ಚಂದಿರನನ್ನು ನೋಡುವ ಅಪರೂಪದ ಅವಕಾಶ. ನಿಜ. ಇಂದು 'ನೀಲಿ ಚಂದ್ರ' (ಬ್ಲೂಮೂನ್) ದರ್ಶನವಾಗಲಿದೆ.

ಹುಣ್ಣಿಮೆಯ ಪೂರ್ಣಚಂದ್ರನನ್ನು ಬಿಳುಪಿಗೆ ಹೋಲಿಸುತ್ತಾರೆ. ಆದರೆ ಸೂಪರ್ ಪಿಂಕ್ ಚಂದ್ರ, ಸ್ಟ್ರಾಬೆರಿ ಚಂದ್ರ ಹೀಗೆ ಬಣ್ಣ ಬಣ್ಣಗಳಲ್ಲಿ ಕಾಣಿಸಿಕೊಂಡಿರುವ ಚಂದ್ರ ಈಗ ನೀಲಿ ವರ್ಣದಲ್ಲಿ ಗೋಚರಿಸಲಿದ್ದಾನೆ ಎಂದುಕೊಳ್ಳುವ ಅಗತ್ಯವಿಲ್ಲ. ಸಾಮಾನ್ಯವಾಗಿ ವರ್ಷದಲ್ಲಿ 12 ಬಾರಿ ಕಾಣಿಸಿಕೊಳ್ಳುವ 'ವೆನಿಲಾ ಪೂರ್ಣಚಂದ್ರ'ನ ಹೆಚ್ಚುವರಿ ಆಗಮನವೇ ಬ್ಲೂ ಮೂನ್.

ಅಕ್ಟೋಬರ್ 31ರಂದು ಬ್ಲೂ ಮೂನ್ ದರ್ಶನ ಮಿಸ್ ಮಾಡ್ಕೊಳ್ಬೇಡಿ! ಅಕ್ಟೋಬರ್ 31ರಂದು ಬ್ಲೂ ಮೂನ್ ದರ್ಶನ ಮಿಸ್ ಮಾಡ್ಕೊಳ್ಬೇಡಿ!

ವರ್ಷದಲ್ಲಿ 12 ಬಾರಿ ಹುಣ್ಣಿಮೆ ಉಂಟಾಗುತ್ತದೆ. ಅಂದರೆ ಪ್ರತಿ ತಿಂಗಳಲ್ಲಿ ಒಮ್ಮೆ ಪೂರ್ಣಚಂದ್ರನ ದರ್ಶನವಾಗುತ್ತದೆ. ಪ್ರತಿ ಹುಣ್ಣಿಮೆಯ ಕ್ಷಣಕ್ಕೂ ವಿವಿಧ ಸಂಸ್ಕೃತಿಗಳಲ್ಲಿ ಜನರು ವಿಭಿನ್ನ ಹೆಸರುಗಳನ್ನು ಇರಿಸಿದ್ದಾರೆ. ಹೀಗೆ ಹುಣ್ಣಿಮೆಯ ಚಂದ್ರನಿಗೆ ಅನೇಕ ಬಗೆಯ ಹೆಸರುಗಳಿವೆ. ಮುಂದೆ ಓದಿ.

ತಿಂಗಳ ಎರಡನೇ ಪೂರ್ಣಚಂದ್ರ

ತಿಂಗಳ ಎರಡನೇ ಪೂರ್ಣಚಂದ್ರ

'ಬ್ಲೂಮೂನ್' ಎಂದು ಅವಧಿಯೊಂದರ ಮೂರನೇ ಪೂರ್ಣಚಂದ್ರನನ್ನು ಕರೆಯಲಾಗುತ್ತದೆ. ಆದರೆ ನಾಸಾ ವಿವರಣೆ ಪ್ರಕಾರ ಈ ಸಾಂಪ್ರದಾಯಿಕ ವ್ಯಾಖ್ಯಾನವನ್ನು ತಪ್ಪಾಗಿ ಅರ್ಥೈಸಲಾಗಿದೆ. ಒಂದು ತಿಂಗಳಲ್ಲಿ ಎರಡನೆಯ ಬಾರಿ ಪೂರ್ಣಚಂದ್ರ ಕಾಣಿಸಿಕೊಳ್ಳುವುದೇ ಬ್ಲೂ ಮೂನ್. ಹೀಗಾಗಿ ಎರಡೂ ಅರ್ಥಗಳಲ್ಲಿ ಈ ಬಾರಿ ನಾವು ಅವಧಿಗೆ ಅನುಗುಣವಾದ ಬ್ಲೂಮೂನ್ ಹಾಗೂ ತಿಂಗಳ ಬ್ಲೂಮೂನ್ ಎರಡನ್ನೂ ಎದುರುಗೊಳ್ಳುತ್ತಿದ್ದೇವೆ. ಅಕ್ಟೋಬರ್ 31ರಂದು ಈ ತಿಂಗಳ ಬ್ಲೂಮೂನ್ ಕಾಣಿಸಿಕೊಳ್ಳುತ್ತಿದೆ. ಮೊದಲ ಪೂರ್ಣಚಂದ್ರ ಅಕ್ಟೋಬರ್ 1-2ರಂದು ಕಾಣಿಸಿಕೊಂಡಿತ್ತು.

ಬ್ಲೂಮೂನ್ ಎಂದು ಕರೆಯುವುದೇಕೆ?

ಬ್ಲೂಮೂನ್ ಎಂದು ಕರೆಯುವುದೇಕೆ?

1983ರಲ್ಲಿ ಇಂಡೋನೇಷ್ಯಾದಲ್ಲಿ ಕ್ರಕೋಟಾ ಎಂಬ ಅಗ್ನಿಪರ್ವತ ಸ್ಫೋಟಗೊಂಡಿತ್ತು. ಅದರ ದಟ್ಟನೆಯ ಹೊಗೆ ಮೋಡಗಳು ಆಕಾಶಕ್ಕೆ ಚಿಮ್ಮಿತ್ತು. ಆ ಮೋಡದಲ್ಲಿದ್ದ ಕಣಗಳು ರಾತ್ರಿ ವೇಳೆ ಕೆಂಪು ಬೆಳಕನ್ನು ತೊಲಗಿಸಿ ಚಂದ್ರ ನೀಲಿ ಬಣ್ಣದಲ್ಲಿ ಕಾಣುವಂತೆ ಮಾಡಿತ್ತು. ಅತಿ ಅಪರೂಪದ ವಿದ್ಯಮಾನವಿದು. ಆಗಿನ ಚಂದ್ರ ಹೀಗೆ ಹೆಚ್ಚುವರಿ ಅವಧಿಯಲ್ಲಿ ಸಂಪೂರ್ಣವಾಗಿ ಕಾಣಿಸಿಕೊಂಡಿದ್ದ ಕಾರಣದಿಂದ ನೀಲಿ ಚಂದ್ರ ಎಂಬ ಉಪಮೆಯನ್ನು ಪಡೆದುಕೊಂಡ.

ಹೆಚ್ಚುವರಿ ಪೂರ್ಣಚಂದ್ರ

ಹೆಚ್ಚುವರಿ ಪೂರ್ಣಚಂದ್ರ

ನಾವು ಸಾಮಾನ್ಯವಾಗಿ ವರ್ಷದಲ್ಲಿ 12 ಪೂರ್ಣಚಂದ್ರನನ್ನು ನೋಡುತ್ತೇವೆ. ಅಂದರೆ ಪ್ರತಿ ನಾಲ್ಕು ಅವಧಿಗಳಿಗೆ ಮೂರರಂತೆ ಹುಣ್ಣಿಮೆ ಗೋಚರಿಸುತ್ತದೆ. ಆದರೆ ಪ್ರತಿ ಪೂರ್ಣ ಚಂದ್ರವನ್ನು 29.5 ದಿನಗಳಿಗೆ ಒಂದರಂತೆ ಪ್ರತ್ಯೇಕಿಸಲಾಗುತ್ತದೆ. ಅದರ ಅರ್ಥ ಚಂದ್ರ 12 ಸಂಪೂರ್ಣ ಹಂತಗಳನ್ನು ಪೂರ್ಣಗೊಳಿಸಲು 354 ದಿನಗಳನ್ನು ತೆಗೆದುಕೊಳ್ಳುತ್ತದೆ. ವರ್ಷದ ಉಳಿದ ದಿನಗಳನ್ನು ಸೇರಿಸಿದಾಗ ಪ್ರತಿ ಎರಡೂವರೆ ವರ್ಷಕ್ಕೆ ಒಮ್ಮೆ ಒಂದು ಕ್ಯಾಲೆಂಡರ್ ವರ್ಷದಲ್ಲಿ 13 ಪೂರ್ಣ ಚಂದಿರ ಬರುತ್ತವೆ. ಈ 'ಹೆಚ್ಚುವರಿ' ಚಂದ್ರನ ಹಾಜರಾತಿ ಅಪರೂಪಕ್ಕೆ ಸಂಭವಿಸುವ ಘಟನೆ. ಹೀಗಾಗಿ ಅದಕ್ಕೆ ಬ್ಲೂಮೂನ್ ಎಂಬ ಹೆಸರು ಬಂದಿದೆ.

ಹಾಗಾದರೆ ಚಂದ್ರ ನೀಲಿಯಾಗುತ್ತಾನಾ?

ಹಾಗಾದರೆ ಚಂದ್ರ ನೀಲಿಯಾಗುತ್ತಾನಾ?

ಗುಲಾಬಿ ಚಂದ್ರ, ಸ್ಟ್ರಾಬೆರಿ ಚಂದ್ರ ಹೀಗೆ ಬಣ್ಣದ ಚಂದ್ರನನ್ನು ಕಂಡವರು ನೀಲಿ ಚಂದ್ರನನ್ನು ನೋಡಲು ಬಯಸಿದ್ದೀರಾ? ಹಾಗಿದ್ದರೆ ನಿರಾಶೆ ಖಚಿತ. ಏಕೆಂದರೆ ಬ್ಲೂಮೂನ್ ಹೆಸರಿಗೆ ಮಾತ್ರವೇ ನೀಲಿ ಚಂದ್ರ. ನೀವು ನೋಡುವ ಮಾಮೂಲಿ ಹುಣ್ಣಿಮೆಗೂ ಇದಕ್ಕೂ ಯಾವ ವ್ಯತ್ಯಾಸವೂ ಇಲ್ಲ. ಆದರೆ, ಕೆಲವು ನಿರ್ದಿಷ್ಟ ವಾತಾವರಣ ಸನ್ನಿವೇಶಗಳಿಂದ ಬೆಳಕಿನ ವಕ್ರೀಭವನಗೊಂಡು ನೀಲಿ ಬಣ್ಣದಲ್ಲಿ ಚಂದ್ರ ಗೋಚರಿಸುವ ಸಾಧ್ಯತೆಗಳೂ ಇರುತ್ತದೆ. ಅದು ಹಾಗೆ ಸಂಭವಿಸಬೇಕಷ್ಟೇ.

ಹಾಗಾದರೆ ಕಾದು ನೋಡುವ ಕಾತರದ ಅಗತ್ಯವಿಲ್ಲವೇ?

ಹಾಗಾದರೆ ಕಾದು ನೋಡುವ ಕಾತರದ ಅಗತ್ಯವಿಲ್ಲವೇ?

ಪೂರ್ಣ ಚಂದಿರನನ್ನು ನೋಡುವುದು ಎಷ್ಟೋ ಜನರಿಗೆ ಮನಸಿಗೆ ಮುದ ನೀಡುವ ಸಂಗತಿ. ಕತ್ತಲಿನ ನಡುವೆ ಬೆಳಕು ಯಾವಾಗಲೂ ಹಿತಕರ ಅನುಭೂತಿ ನೀಡುತ್ತದೆ. ಹೀಗಾಗಿ 'ನೀಲಿ' ಬಣ್ಣದ ಕಲ್ಪನೆಯನ್ನು ಬದಿಗಿಟ್ಟು ಪೂರ್ಣ ಚಂದ್ರನ ಸೊಬಗನ್ನು ಕಣ್ತುಂಬಿಕೊಳ್ಳಬಹುದು. ರಾತ್ರಿ 8.15ರ ಬಳಿಕ ಶನಿವಾರ ಪೂರ್ಣ ಬ್ಲೂಮೂನ್ ಗೋಚರವಾಗಲಿದೆ. ಅಂದಹಾಗೆ ಚಂದ್ರನ ಪಕ್ಕದಲ್ಲಿಯೇ ತೀಕ್ಷ್ಣವಾಗಿ ಪ್ರಜ್ವಲಿಸುವ ಕೆಂಪು ಬಣ್ಣದ ನಕ್ಷತ್ರದಂತಹ ವಸ್ತುವನ್ನು ನೋಡಲು ಮರೆಯದಿರಿ. ಅದು ನಕ್ಷತ್ರವಲ್ಲ, ನಮ್ಮ ನೆರೆಹೊರೆಯ ಗೆಳೆಯ ಮಂಗಳ.

ಹುಣ್ಣಿಮೆಯ ಚಂದ್ರನಿಗೆ ಪ್ರತಿ ದೇಶ, ಪ್ರದೇಶ, ಭಾಷೆಗಳಲ್ಲಿ ವಿಭಿನ್ನ ಹೆಸರುಗಳಿವೆ. ತಿಂಗಳ ಚಂದ್ರನಿಗೆ ನಮ್ಮ ಹಿರಿಯರು ಅನೇಕ ರೀತಿ ನಾಮಕರಣಗಳನ್ನು ಮಾಡಿದ್ದಾರೆ. ವಿಜ್ಞಾನಿಗಳೂ ಆಧುನಿಕ ಹೆಸರುಗಳನ್ನು ನೀಡಿ ಖುಷಿ ಪಟ್ಟಿದ್ದಾರೆ. 'ಬ್ಲೂಮೂನ್' ಎನ್ನುವುದು ವಿಶೇಷವಲ್ಲದಿದ್ದರೂ ಜಗತ್ತಿನ ಸೃಷ್ಟಿಯ ಚಟುವಟಿಕೆಯಲ್ಲಿ ವಿಶೇಷವಂತೂ ಹೌದು.

English summary
What is a Blue Moon, the second moon in a month? and everything you need to know in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X