• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬ್ರಹ್ಮಾಂಡದ ವಿಸ್ಮಯ 'ಕಪ್ಪು ರಂಧ್ರ' ಎಂದರೇನು? ಅದರ ವಿಶೇಷತೆಯೇನು?

|

ಬ್ರಹ್ಮಾಂಡದ ಅತ್ಯಂತ ದೊಡ್ಡ ವಿಸ್ಮಯ ಎನಿಸಿರುವ 'ಕಪ್ಪು ರಂದ್ರ' (ಬ್ಲ್ಯಾಕ್ ಹೋಲ್) ಮೊದಲ ಚಿತ್ರವನ್ನು ಖಗೋಳಶಾಸ್ತ್ರಜ್ಞರು ಬಿಡುಗಡೆ ಮಾಡಿದ್ದಾರೆ. ಮೊದಲ ಬಾರಿಗೆ ಕಪ್ಪು ಕುಳಿ ಮತ್ತು ಅದರ ನೆರಳಿನ ಚಿತ್ರವನ್ನು ಸೆರೆಹಿಡಿಯಲಾಗಿದೆ. ಇವೆಂಟ್ ಹಾರಿಜಾನ್ ಟೆಲಿಸ್ಕೋಪ್ (ಇಎಚ್‌ಟಿ) ಎಂಬ ಅಂತಾರಾಷ್ಟ್ರೀಯ ರೇಡಿಯೋ ಟೆಲಿಸ್ಕೋಪ್ ಒಂದರ ಐತಿಹಾಸಿಕ ಸಾಧನೆಯಿದು.

ಕಪ್ಪು ರಂದ್ರ ಎನ್ನುವುದು ಅತ್ಯಂತ ಸಾಂದ್ರವಾದ ವಸ್ತು. ಇದರಿಂದ ಯಾವ ಬೆಳಕೂ ತಪ್ಪಿಸಿಕೊಳ್ಳಲಾರದು. ಇವೆಂಟ್ ಹಾರಿಜಾನ್ ಎಂದು ಕರೆಯಲಾಗುವ ಕಪ್ಪು ರಂಧ್ರದ ಒಳಭಾಗದೊಳಗೆ ಏನೇ ತೋರಿಕೊಂಡರೂ ಅದು ಮತ್ತೆ ಮರಳುವ ಪ್ರಶ್ನೆಯೇ ಇಲ್ಲ. ಅದನ್ನು ಕಪ್ಪು ರಂಧ್ರ ನುಂಗಿಬಿಡುತ್ತದೆ. ಪುನಃ ಕಾಣಿಸಿಕೊಳ್ಳುವುದೇ ಇಲ್ಲ. ಏಕೆಂದರೆ ಊಹಿಸಲೂ ಅಸಾಧ್ಯವಾದಷ್ಟು ಪ್ರಬಲ ಗುರುತ್ವ ಶಕ್ತಿ ಹೊಂದಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಕಪ್ಪು ರಂಧ್ರ ಕಣ್ಣಿಗೆ ಕಾಣಿಸುವುದಿಲ್ಲ. ಆದರೆ ಅದರ ಸುತ್ತಲಿನ ವೃತ್ತಾಕಾರದ ಹೊರವಲಯದ ಬಿಂಬವು ಪ್ರಖರವಾಗಿ ಪ್ರಜ್ವಲಿಸುತ್ತದೆ. ಪ್ರಖರ ಹಿನ್ನೆಲೆಗೆ ವಿರುದ್ಧವಾಗಿ ಈ ಬಿಂಬದಂತೆ ಕಪ್ಪು ರಂಧ್ರವು ನೆರಳು ಚೆಲ್ಲುತ್ತಿರುವಂತೆ ಗೋಚರಿಸುತ್ತದೆ.

ಮೊದಲ ಬಾರಿಗೆ ಕಪ್ಪು ಕುಳಿಯ ಚಿತ್ರ ಬಿಡುಗಡೆ, ಐನ್ ಸ್ಟೀನ್ ಲೆಕ್ಕಾಚಾರ ನಿಜ!

ಸಣ್ಣ ಪ್ರಮಾಣದ ಕಪ್ಪು ರಂಧ್ರಗಳಾದರೆ ಪತನವಾಗುವ ನಕ್ಷತ್ರದಿಂದ ಬರುತ್ತದೆ. ಆದರೆ ದೊಡ್ಡ ಪ್ರಮಾಣದ ಕಪ್ಪು ರಂಧ್ರದ ಮೂಲ ನಿಗೂಢವಾಗಿದೆ. ಬೆಳಕು ಹೀರಿಕೊಳ್ಳುವ ಈ ದೈತ್ಯದ ಬಗ್ಗೆ ಶತಮಾನದ ಹಿಂದೆಯೇ ಐನ್ ಸ್ಟೀನ್ ತಿಳಿಸಿದ್ದರು. ದಶಕಗಳ ಕಾಲ ಇದನ್ನು ಅಧ್ಯಯನ ನಡೆಸಿ ಖಾತರಿ ಪಡಿಸಲಾಗಿದೆ. ಈ ಕಪ್ಪು ಕುಳಿ ನೋಡಲು ಉರಿಯುವ ಕಿತ್ತಲೆ, ಹಳದಿ ಹಾಗೂ ಕಪ್ಪು ಉಂಗುರದಂತೆ ಕಂಡುಬರುತ್ತದೆ.

55 ಮಿಲಿಯನ್ ಜ್ಯೋತಿರ್ವರ್ಷ ದೂರ

55 ಮಿಲಿಯನ್ ಜ್ಯೋತಿರ್ವರ್ಷ ದೂರ

ಬೃಹತ್ ಗಾತ್ರದ ಕಪ್ಪು ರಂಧ್ರದ ನೆರಳಿನ ಚಿತ್ರ ಬೆರಗು ಮೂಡಿಸುತ್ತಿದೆ. ಈ ಕಪ್ಪು ರಂದ್ರ ಇರುವುದು ಭೂಮಿಯಿಂದ 55 ಮಿಲಿಯನ್ ಜ್ಯೋತಿರ್ವರ್ಷ ದೂರವಿರುವ ಮೆಸ್ಸೀರ್ 87 (ಎಂ 87) ಎಂಬ ಅಂಡಾಕಾರ ಗ್ಯಾಲಕ್ಸಿಯ ಮಧ್ಯಭಾಗದಲ್ಲಿ. ಈ ಕಪ್ಪು ರಂಧ್ರದ ಗಾತ್ರ ಸೂರ್ಯನಿಗಿಂತ 6.5 ಬಿಲಿಯನ್ ಪಟ್ಟು ದೊಡ್ಡದು. ಇಡೀ ಗ್ರಹದ ಗಾತ್ರವನ್ನು ಸೆರೆಹಿಡಿಯುವಂತೆ ಎಂಟು ಭೂ ಆಧಾರಿತ ರೇಡಿಯೋ ಟೆಲಿಸ್ಕೋಪ್‌ಗಳು ಜತೆಯಾಗಿ ಒಂದೇ ಟೆಲಿಸ್ಕೋಪ್‌ನಂತೆ ಕಾರ್ಯನಿರ್ವಹಿಸಿ ಕಪ್ಪುರಂಧ್ರದ ಈ ವಿಶೇಷವಾದ ನೆರಳನ್ನು ಸೆರೆಹಿಡಿದಿವೆ.

ಚಂದಿರನ ಅದ್ಭುತ ಚಿತ್ರ ಸೆರೆಹಿಡಿದ ಇಸ್ರೇಲ್‌ನ ಪ್ರಥಮ ನೌಕೆ

ನಾಸಾದ ಮೆಚ್ಚುಗೆ

'ಇದು ಇಎಚ್‌ಟಿ ತಂಡದ ಅಮೋಘ ಸಾಧನೆ' ಎಂದು ನಾಸಾದ ಖಗೋಳಭೌತ ವಿಭಾಗದ ನಿರ್ದೇಶಕ ಪೌಲ್ ಹರ್ಟ್ಸ್ ಹೇಳಿದ್ದಾರೆ. 'ವರ್ಷಗಳ ಹಿಂದೆ ಕಪ್ಪು ರಂಧ್ರವೊಂದರ ಚಿತ್ರ ಸೆರೆಹಿಡಿಯಲು ಭಾರಿ ಗಾತ್ರದ ಬಾಹ್ಯಾಕಾಶ ದೂರದರ್ಶಕ ನಿರ್ಮಿಸಬೇಕು ಎಂದು ನಾವು ಅಂದುಕೊಂಡಿದ್ದೆವು. ಜಗತ್ತಿನ ವಿವಿಧೆಡೆ ರೇಡಿಯೋ ಟೆಲಿಸ್ಕೋಪ್‌ಗಳನ್ನು ಇರಿಸಿ ಒಂದೇ ಸಾಧನದಂತೆ ಕೆಲಸ ಮಾಡಿಸಿ ಇಎಚ್‌ಟಿ ತಂಡ ಮಹಾನ್ ಹೆಗ್ಗುರುತು ಮೂಡಿಸಿದೆ' ಎಂದು ಪ್ರಶಂಸಿಸಿದ್ದಾರೆ.

ಯಶಸ್ವಿ ಉಪಗ್ರಹ ಉಡಾವಣೆ: ಇಸ್ರೋಗೆ ಅಭಿನಂದನೆಗಳ ಮಹಾಪೂರ

ನಾಸಾದಿಂದಲೂ ಅನೇಕ ಸಾಹಸ

ಬೆಳಕಿನ ವಿಭಿನ್ನ ತರಂಗಾಂತರಗಳನ್ನು ಬಳಸಿ ಕಪ್ಪು ರಂಧ್ರವನ್ನು ಅಧ್ಯಯನ ಮಾಡಲು ನಾಸಾದ ಅನೇಕ ಬಾಹ್ಯಾಕಾಶ ನೌಕೆಗಳು ಸಾಕಷ್ಟು ಶ್ರಮವಹಿಸಿವೆ. ಇಎಚ್‌ಟಿಯಂತೆಯೇ 2017ರ ಏಪ್ರಿಲ್‌ನಲ್ಲಿ ನಾಸಾದ ಚಂದ್ರ ಎಕ್ಸ್‌ರೇ ಅಬ್ಸರ್ವೇಟರಿ, ನ್ಯೂಕ್ಲಿಯರ್ ಸ್ಪೆಕ್ಟ್ರೋಸ್ಕೋಪಿಕ್ ಟೆಲಿಸ್ಕೋಪ್ ಆರ್ರೇ ಮತ್ತು ನೀಲ್ ಗೆಹ್ರೆಲ್ಸ್ ಸ್ವಿಫ್ಟ್ ಅಬ್ಸರ್ವೇಟರಿ ಬಾಹ್ಯಾಕಾಶ ದೂರದರ್ಶಕ ಯೋಜನೆಗಳು ಏಕಕಾಲಕ್ಕೆ ಎಂ87 ಕಪ್ಪು ರಂದ್ರಕ್ಕೆ ವಿಭಿನ್ನ ಬಗೆಯ ಎಕ್‌ ರೇ ಬೆಳಕನ್ನು ರವಾನಿಸಿದ್ದವು.

ಇಎಚ್‌ಟಿ ಅಧ್ಯಯನದ ಸಂದರ್ಭದಲ್ಲಿ ನಾಸಾದ ಫೆರ್ಮಿ ಗಾಮಾ-ರೇ ಬಾಹ್ಯಾಕಾಶ ದೂರದರ್ಶಕ ಕೂಡ ಎಂ87ನ ಗಾಮಾ-ರೇ ಬೆಳಕಿನಲ್ಲಿ ಆಗುವ ಬದಲಾವಣೆಗಳನ್ನು ಗಮನಿಸುತ್ತಿತ್ತು. ಈ ಯೋಜನೆಗಳು ಮತ್ತು ಇತರೆ ದೂರದರ್ಶಕಗಳು ಸೆರೆಹಿಡಿದಿರುವ ಮಾಹಿತಿಗಳು ಕಪ್ಪು ರಂಧ್ರದಲ್ಲಿ ಏನಾಗುತ್ತಿದೆ ಎಂಬುದನ್ನು ಅರಿತುಕೊಳ್ಳುವ ಪ್ರಯತ್ನಕ್ಕೆ ನೆರವಾಗುವ ನಿರೀಕ್ಷೆಯಿದೆ.

ಏನಿದು ಕಪ್ಪು ರಂಧ್ರ?

ಗುರುತ್ವ ಬಲದ ಒತ್ತಡದಿಂದಾಗಿ ಗ್ಯಾಲಕ್ಸಿಗಳ ನಡುವೆ ಉಂಟಾದ ರಂದ್ರವನ್ನು ಕಪ್ಪು ರಂಧ್ರ ಎಂದು ಕರೆಯಲಾಗುತ್ತದೆ. ದೊಡ್ಡ ನಕ್ಷತ್ರಗಳ ಸ್ಫೋಟದ ಸಂದರ್ಭಗಳಲ್ಲಿ ಬಾಹ್ಯಾಕಾಶದಲ್ಲಿ ಇಂತಹ ಕಪ್ಪು ರಂಧ್ರಗಳು ಸೃಷ್ಟಿಯಾಗಿರಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಕಪ್ಪುಕುಳಿಯಲ್ಲಿರುವ ಅತ್ಯಂತ ಶಾಖದಿಂದ ಕೂಡಿದ ಅನಿಲ ತನ್ನ ಬಳಿ ಇರುವ ಗ್ಯಾಲಕ್ಸಿಗಳನ್ನು ಸೆಳೆದುಕೊಳ್ಳುತ್ತದೆ. ಈ ಕಪ್ಪು ರಂಧ್ರದ ಗುರುತ್ವಾಕರ್ಷಣೆಯ ಶಕ್ತಿಯಿಂದ ಬೆಳಕು ಕೂಡ ಪಾರಾಗಲು ಸಾಧ್ಯವಿಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A picture of a black hole was released first time by the scientists. What is a balck hole and what are the characteristics of that objects? Here is the details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more