ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್‌: ಆದಾಯ ತೆರಿಗೆ ಪಾವತಿದಾರರಿಗೆ ವರ್ಕ್ ಫ್ರಮ್‌ ಹೋಮ್‌ ಭತ್ಯೆ ಸಿಗುತ್ತಾ?

|
Google Oneindia Kannada News

ನವದೆಹಲಿ, ಜನವರಿ 30: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ತಮ್ಮ ನಾಲ್ಕನೇ ಬಜೆಟ್ ಅನ್ನು ಮಂಡಿಸಲಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲಾ ತಯಾರಿಗಳು ನಡೆದಿದೆ. ಈ ವರ್ಷ ಮೊದಲ ಬಾರಿಗೆ ಹಲ್ವಾ ಸಮಾರಂಭವನ್ನು ಕೋವಿಡ್‌ ಹಿನ್ನೆಲೆಯಿಂದಾಗಿ ರದ್ದು ಮಾಡಲಾಗಿದೆ. ಈ ನಡುವೆ ಬಜೆಟ್‌ನ ಮೇಲೆ ಹಲವಾರು ವಲಯಗಳು ತಮ್ಮದೇ ಆದ ನಿರೀಕ್ಷೆಯನ್ನು ಹೊಂದಿದೆ. ಅದರಲ್ಲೂ ಪ್ರಮುಖವಾಗಿ ಆದಾಯ ತೆರಿಗೆ ಪಾವತಿದಾರರು ಬಜೆಟ್‌ಗಾಗಿ ಕಾಯುತ್ತಿದ್ದಾರೆ.

ಈ ಕೊರೊನಾವೈರಸ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ಮಂಡನೆ ಆಗಲಿರುವ ಈ ಬಜೆಟ್‌ ಹೆಚ್ಚು ಮಹತ್ವವನ್ನು ಹೊಂದಿದೆ. ಕೋವಿಡ್‌ ಹಿನ್ನೆಲೆಯಿಂದಾಗಿ ಹೆಚ್ಚಿನ ಆದಾಯ ತೆರಿಗೆ ಪಾವತಿದಾರರು ವರ್ಕ್ ಫ್ರಮ್‌ ಹೋಮ್‌ಗೆ ಜೋತು ಬಿದ್ದಿದ್ದಾರೆ. ಈ ಕಾರಣದಿಂದಾಗಿ ಈ ಬಜೆಟ್‌ನಲ್ಲಿ ವರ್ಕ್ ಫ್ರಮ್‌ ಹೋಮ್‌ ಭತ್ಯೆಯು ಪ್ರಮುಖ ನಿರೀಕ್ಷೆ ಆಗಿದೆ. ಇನ್ನುಳಿದಂತೆ ತೆರಿಗೆ ವಿನಾಯಿತಿಗಳು ಕೂಡಾ ಇದರಲ್ಲಿ ಸೇರ್ಪಡೆ ಆಗಿದೆ.

ಬಜೆಟ್ 2022 ನಿರೀಕ್ಷೆ: ಆದಾಯ ತೆರಿಗೆ ವಿನಾಯಿತಿ ಮಿತಿ ಹೆಚ್ಚಳ ಸಾಧ್ಯತೆಬಜೆಟ್ 2022 ನಿರೀಕ್ಷೆ: ಆದಾಯ ತೆರಿಗೆ ವಿನಾಯಿತಿ ಮಿತಿ ಹೆಚ್ಚಳ ಸಾಧ್ಯತೆ

ಸಾಮಾನ್ಯವಾಗಿ ಪ್ರತಿ ವರ್ಷವೂ ಬಜೆಟ್‌ ಆದಾಯ ತೆರಿಗೆ ಪಾವತಿದಾರರಿಗೆ ಹೆಚ್ಚು ಪ್ರಮುಖವಾದ ಘಟ್ಟವಾಗಿ ಪರಿಗಣಿಸಲಾಗುತ್ತಿದೆ. ಪ್ರತಿ ಬಾರಿಯೂ ಆದಾಯ ತೆರಿಗೆ ಪಾವತಿದಾರರು ಬಜೆಟ್‌ನಿಂದ ಈ ಬಾರಿಯಾದರೂ ನಮಗೆ ಕೊಂಚ ಸಮಾಧಾನಕರ ಸುದ್ಧಿ ದೊರೆಯಬಹುದು ಎಂದು ಕಾಯುತ್ತಿರುತ್ತಾರೆ. ಹಾಗಾದರೆ ಈ ಬಜೆಟ್‌ನಲ್ಲಿ ಆದಾಯ ತೆರಿಗೆ ಪಾವತಿದಾರರು ಏನು ನಿರೀಕ್ಷೆಯನ್ನು ಹೊಂದಿದ್ದಾರೆ ಎಂದು ತಿಳಿಯಲು ಮುಂದೆ ಓದಿ.

 ವರ್ಕ್ ಫ್ರಮ್‌ ಹೋಮ್‌ ಭತ್ಯೆ ನಿರೀಕ್ಷೆ

ವರ್ಕ್ ಫ್ರಮ್‌ ಹೋಮ್‌ ಭತ್ಯೆ ನಿರೀಕ್ಷೆ

ವಿಶ್ವದಲ್ಲಿ ಕೋವಿಡ್‌ ಸಾಂಕ್ರಾಮಿಕವು ಹರಡಿದ ಆರಂಭದಿಂದಲೇ ಹಲವಾರು ಮಂದಿಗೆ ಭಾರತದಲ್ಲಿ ಮಾತ್ರವಲ್ಲದೇ ವಿಶ್ವದಲ್ಲಿ ವರ್ಕ್ ಫ್ರಮ್‌ ಹೋಮ್‌ ಆರಂಭವಾಗಿದೆ. ಕೊರೊನಾ ವೈರಸ್‌ನ ಹೊಸ ಹೊಸ ಅಲೆ, ಹೊಸ ಹೊಸ ರೂಪಾಂತರಗಳ ಆತಂಕದ ನಡುವೆ ಈಗಲೂ ಕೂಡಾ ಹಲವಾರು ಮಂದಿಗೆ ವರ್ಕ್ ಫ್ರಮ್‌ ಹೋಮ್‌ ಇದೆ. ಇನ್ನು ಈ ನಡುವೆ ವರ್ಕ್ ಫ್ರಮ್‌ ಹೋಮ್‌ ಭತ್ಯೆಯ ಕೂಗು ಹೆಚ್ಚಳವಾಗಿದೆ. ಈ ವರ್ಕ್ ಫ್ರಮ್‌ ಹೋಮ್‌ ಸಂದರ್ಭದಲ್ಲಿ ಕಚೇರಿಗೆ ಓಡಾಟ ಮಾಡುವ ಖರ್ಚು ಇಲ್ಲದಿದ್ದರೂ ಕೂಡಾ ಜನರಿಗೆ ಇತರೆ ಖರ್ಚುಗಳು ದುಪ್ಪಟ್ಟುಗೊಂಡಿದೆ. ವರ್ಕ್ ಫ್ರಮ್‌ ಹೋಮ್‌ ಹಿನ್ನೆಲೆ ವಿದ್ಯುತ್, ಇಂಟರ್ನೆಟ್ ಶುಲ್ಕಗಳು, ಬಾಡಿಗೆ, ಪ್ರಿಂಟರ್, ಪೀಠೋಪಕರಣಗಳು ಮೊದಲಾದವುಗಳಿಗಾಗಿ ಖರ್ಚು ಮಾಡಬೇಕಾಗಿ ಬಂದಿದೆ. ಈ ನಿಟ್ಟಿನಲ್ಲಿ ವರ್ಕ್ ಫ್ರಮ್‌ ಹೋಮ್‌ ಮಾಡುವರಿಗೆ ಭತ್ಯೆಯನ್ನು ಸರ್ಕಾರ ನೀಡಲಿದೆಯೇ ಎಂಬ ನಿರೀಕ್ಷೆಯಲ್ಲಿ ಆದಾಯ ತೆರಿಗೆ ಪಾವತಿದಾರರು ಇದ್ದಾರೆ.

 ಆದಾಯ ತೆರಿಗೆ ವಿನಾಯಿತಿ ಮಿತಿ ಹೆಚ್ಚಳದ ನಿರೀಕ್ಷೆ

ಆದಾಯ ತೆರಿಗೆ ವಿನಾಯಿತಿ ಮಿತಿ ಹೆಚ್ಚಳದ ನಿರೀಕ್ಷೆ

ಕೇಂದ್ರ ಸರ್ಕಾರದ 2022ರ ಬಜೆಟ್‌ ಬಗ್ಗೆ ಜನತೆಯಲ್ಲಿ ಸಾಕಷ್ಟು ಕುತೂಹಲಗಳಿವೆ. ಈ ಬಾರಿ ಆದಾಯ ತೆರಿಗೆ ವಿನಾಯಿತಿ ಮಿತ್ತಿ ಹೆಚ್ಚಳ ಮಾಡುವ ನಿರೀಕ್ಷೆಯನ್ನು ಆದಾಯ ತೆರಿಗೆ ಪಾವತಿದಾರರು ಹೊಂದಿದ್ದಾರೆ. ಪ್ರಸ್ತುತ ತೆರಿಗೆ ವಿನಾಯಿತಿ ಮಿತಿ 2.5 ಲಕ್ಷ ರೂ.ಗಳಾಗಿದ್ದು, ಕಳೆದ 8 ವರ್ಷಗಳಿಂದ ಏರಿಕೆ ಮಾಡಿರಲಿಲ್ಲ. 8 ವರ್ಷಗಳ ಹಿಂದೆ ತೆರಿಗೆ ವಿನಾಯಿತಿ ಮಿತಿಯನ್ನು 2 ಲಕ್ಷದಿಂದ 2.5 ಲಕ್ಷಕ್ಕೆ ಹೆಚ್ಚಿಸಲಾಗಿತ್ತು. ಆದರೆ ಆದಾಯ ತೆರಿಗೆದಾರರು ಈ ಮಿತಿಯನ್ನು 3 ಲಕ್ಷಕ್ಕೆ ಸರ್ಕಾರ ಹೆಚ್ಚಳ ಮಾಡಬಹುದು ಎಂಬ ನಿರೀಕ್ಷೆಯನ್ನು ಆದಾಯ ತೆರಿಗೆ ಪಾವತಿದಾರರು ಹೊಂದಿದ್ದಾರೆ. ಇನ್ನು ಈ ಕ್ರಮದಿಂದಾಗಿ ಹಣದುಬ್ಬರ ನಿಯಂತ್ರಣ ಸಾಧ್ಯ ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.

ಬಜೆಟ್ 2022: ಟಿಡಿಎಸ್ ಕಡಿತ ಮಿತಿ, ಐಟಿ ಸ್ಲ್ಯಾಬ್‌ ವ್ಯತ್ಯಯ ಸಾಧ್ಯವೇ?ಬಜೆಟ್ 2022: ಟಿಡಿಎಸ್ ಕಡಿತ ಮಿತಿ, ಐಟಿ ಸ್ಲ್ಯಾಬ್‌ ವ್ಯತ್ಯಯ ಸಾಧ್ಯವೇ?

 ತೆರಿಗೆ ಮುಕ್ತ ಕೋವಿಡ್ ಬಾಂಡ್

ತೆರಿಗೆ ಮುಕ್ತ ಕೋವಿಡ್ ಬಾಂಡ್

ಇನ್ನು ಸರ್ಕಾರವು 'ಕೋವಿಡ್ ಬಾಂಡ್‌ಗಳನ್ನು' ಮಾರಾಟ ಮಾಡುವ ಕ್ರಮವನ್ನು ಕ್ರಮಕೈಗೊಳ್ಳಿದೆ ಎಂಬ ನಿರೀಕ್ಷೆಯನ್ನು ಆದಾಯ ತೆರಿಗೆ ಪಾವತಿದಾರರು ಹೊಂದಿದ್ದಾರೆ. ಅಗತ್ಯವಿರುವ ನಿಧಿಯನ್ನು ಸಂಗ್ರಹ ಮಾಡುವ ನಿಟ್ಟಿನಲ್ಲಿ ಸರ್ಕಾರವು 'ಕೋವಿಡ್ ಬಾಂಡ್‌ಗಳನ್ನು' ಮಾರಾಟ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಬೇಕು ಎಂಬುವುದು ಆದಾಯ ತೆರಿಗೆದಾರರ ನಿರೀಕ್ಷೆ. ಇನ್ನು ಈ ಬಾಂಡ್‌ಗಳು ಆದಾಯ ತೆರಿಗೆ ವಿನಾಯಿತಿಯನ್ನು ಹೊಂದಿರಬೇಕು ಅಥವಾ ತೆರಿಗೆ ಮುಕ್ತ ಕೋವಿಡ್ ಬಾಂಡ್ ಆಗಿರಬೇಕು ಎಂಬ ಮನವಿ ಕೂಡಾ ಇದೆ.

 ಕ್ರಿಪ್ಟೋಕರೆನ್ಸಿ ನಿಯಮದ ಬಗ್ಗೆ ಸರಿಯಾದ ಸ್ಪಷ್ಟದ ನಿರೀಕ್ಷೆ

ಕ್ರಿಪ್ಟೋಕರೆನ್ಸಿ ನಿಯಮದ ಬಗ್ಗೆ ಸರಿಯಾದ ಸ್ಪಷ್ಟದ ನಿರೀಕ್ಷೆ

ಎಲ್ಲಾ ಖಾಸಗಿ ಕ್ರಿಪ್ಟೋಕರೆನ್ಸಿಗಳ ಮೇಲೆ ನಿಷೇಧವನ್ನು ಹೇರುವ ಅಥವಾ ನಿಯಂತ್ರಣ ಮಾಡುವ ಕ್ರಿಪ್ಟೋಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿಯ ನಿಯಂತ್ರಣ ಮಸೂದೆ, 2021ಕಳೆದ ಚಳಿಗಾಲದ ಅಧಿವೇಶನದಲ್ಲಿ ಭಾರಿ ಚರ್ಚೆಗೆ ಒಳಗಾಗಿದೆ. ಈ ಬಾರಿಗೆ ಬಜೆಟ್ 2022ರಲ್ಲೂ ಕ್ರಿಪ್ಟೋಕರೆನ್ಸಿ ಬಗ್ಗೆ ಉಲ್ಲೇಖ ಹಾಗೂ ತೆರಿಗೆ ಹಾಕುವ ಬಗ್ಗೆ ಪ್ರಸ್ತಾವನೆ ಸಾಧ್ಯತೆಯಿದೆ. ಈ ನಡುವೆ ಈ ಮಸೂದೆ ಸರಿಯಾದ ಸ್ಪಷ್ಟತೆಯನ್ನು ಸರ್ಕಾರವು ಈಗಲೇ ನೀಡಬೇಕು ಎಂಬುವುದು ಆದಾಯ ತೆರಿಗೆ ಪಾವತಿದಾರರ ಬೇಡಿಕೆ ಆಗಿದೆ. ವರದಿಯ ಪ್ರಕಾರ, ಭಾರತದಲ್ಲಿ 20 ಮಿಲಿಯನ್‌ಗಿಂತಲೂ ಹೆಚ್ಚು ಮಂದಿ ಕ್ರಿಪ್ಟೋ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದಾರೆ. ಭಾರತೀಯರು ವಿವಿಧ ಡಿಜಿಟಲ್ ಟೋಕನ್‌ಗಳಲ್ಲಿ 10 ಶತಕೋಟಿ ಡಾಲರ್‌ಗೂ ಅಧಿಕ ಹೂಡಿಕೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಈ ಮಸೂದೆ ಬಗ್ಗೆ ತೆರಿಗೆ ಪಾವತಿದಾರರು ಸ್ಪಷ್ಟತೆಯನ್ನು ನಿರೀಕ್ಷೆ ಮಾಡುತ್ತಿದ್ದಾರೆ.

 ಅನುಕೂಲಕರ ಆದಾಯ ತೆರಿಗೆ ದರದ ನಿರೀಕ್ಷೆ

ಅನುಕೂಲಕರ ಆದಾಯ ತೆರಿಗೆ ದರದ ನಿರೀಕ್ಷೆ

ಪ್ರಸ್ತುತ 10 ಆದಾಯ ತೆರಿಗೆ ದರಗಳು ದೇಶದಲ್ಲಿ ಇದೆ. ಸೆಸ್‌ಗಳನ್ನು ಒಳಗೊಂಡ ಶೇ.5.2, ಶೇ.10.4, ಶೇ.15.6, ಶೇ.20.8, ಶೇ.26, ಶೇ.31.2, ಶೇ.34.32, ಶೇ.35.88, ಶೇ.39 ಮತ್ತು ಶೇ.42.74 ಆದಾಯ ತೆರಿಗೆ ದರಗಳು ಇದೆ. ಈ ವರ್ಷದ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಈ ದರಗಳನ್ನು ಸರಳೀಕರಿಸಬಹುದು ಎಂಬುವುದು ಆದಾಯ ತೆರಿಗೆ ಪಾವತಿದಾರರ ನಿರೀಕ್ಷೆ ಆಗಿದೆ. (ಒನ್‌ಇಂಡಿಯಾ ಸುದ್ದಿ)

Recommended Video

IPLನಲ್ಲಿ ಈ ಬಾರಿ ಮಾರಾಟವಾಗದೆ ಉಳಿಯಬಹುದಾದ ಆಟಗಾರರು | Oneindia Kannada

English summary
What Income Tax Payers Want From Budget 2022, Explained In Kannada. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X