ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏನಿದು ಪನಾಮಾ ಪೇಪರ್ಸ್?, ಇಲ್ಲಿದೆ ಸಂಪೂರ್ಣ ಮಾಹಿತಿ

|
Google Oneindia Kannada News

ಮುಂಬೈ, ಡಿಸೆಂಬರ್‌ 20: ವಿಶ್ವದಲ್ಲೇ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಪನಾಮ ಪೇಪರ್ಸ್ ಹಗರಣಕ್ಕೆ ಸಂಬಂಧಿಸಿ ಖ್ಯಾತ ನಟಿ ಐಶ್ವರ್ಯಾ ರೈ ಗೆ ಇಂದು ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್‌ ನೀಡಿದೆ. ಈ ನಡುವೆ ಹಲವು ವರ್ಷಗಳ ಹಿಂದೆ ಭಾರೀ ಸದ್ದಾಗಿದ್ದ ಈ ಪನಾಮ ಪೇಪರ್ಸ್ ಹಗರಣ ಏನು ಎಂಬ ಪ್ರಶ್ನೆ ಎದ್ದಿದೆ.

2015ರಲ್ಲಿ ಜಗತ್ತಿನ ನಾನಾ ದೇಶಗಳ ಖ್ಯಾತ ವ್ಯಕ್ತಿಗಳ ಭ್ರಷ್ಟಾಚಾರ ಹಾಗೂ ಕರಾಳ ಮುಖಗಳನ್ನು ಅನಾವರಣ ಮಾಡಿದ್ದ 'ಪನಾಮಾ ಪೇಪರ್ಸ್' ಎಂಬ ಹೆಸರಿನ ತನಿಖಾ ವರದಿಯಲ್ಲಿ ಹಲವಾರು ಗಣ್ಯರ ಹೆಸರುಗಳು ಇದೆ. ಈ ಪನಾಮಾ ಪೇಪರ್ಸ್ ಸೋರಿಕೆ ಕಾರಣದಿಂದಾಗಿಯೇ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂದಿತ್ತು. 'ಪನಾಮಾ ಪೇಪರ್ಸ್' ಸೋರಿಕೆ ಬೆನ್ನಲ್ಲೇ ಪಾಕಿಸ್ತಾನ ಸುಪ್ರೀಂ ಕೋರ್ಟ್ ಪಾಕಿಸ್ತಾನದ ಅಧ್ಯಕ್ಷ ನವಾಜ್‌ ಷರೀಫ್‌ರಿಗೆ ತನ್ನ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಲು ಸೂಚನೆ ನೀಡಿತ್ತು.

BREAKING: ಪನಾಮಾ ಪೇಪರ್ಸ್ ಹಗರಣ: ಐಶ್ವರ್ಯಾ ರೈಗೆ ಇಡಿ ಸಮನ್ಸ್‌BREAKING: ಪನಾಮಾ ಪೇಪರ್ಸ್ ಹಗರಣ: ಐಶ್ವರ್ಯಾ ರೈಗೆ ಇಡಿ ಸಮನ್ಸ್‌

ಈ ಪನಾಮಾ ಪೇಪರ್ಸ್ ಪಾಕಿಸ್ತಾನದ ಪ್ರಧಾನಿ ಗದ್ದುಗೆಯನ್ನೇ ಅಲ್ಲಾಡಿಸಿದ್ದು ಮಾತ್ರವಲ್ಲದೇ ಭಾರತದಲ್ಲಿ ಹಲವಾರು ಗಣ್ಯರು ಬಂಧನದ ಭೀತಿಗೆ ಒಳಗಾಗುವಂತೆ ಮಾಡಿತ್ತು. ಪ್ರಮುಖವಾಗಿ ಈ ಭಾರತತದ ಖ್ಯಾತ ನಟ ಅಮಿತಾಬ್ ಬಚ್ಚನ್, ನಟಿ ಐಶ್ವರ್ಯಾ ರೈ ಹೆಸರು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಿಂದಾಗಿ ಹಲವಾರು ವರ್ಷಗಳಿಂದ ಐಶ್ವರ್ಯಾ ರೈ, ಅಮಿತಾಬ್‌ ಬಚ್ಚನ್‌ ವಿಚಾರಣೆಗೆ ಒಳಗಾಗಬೇಕಾಗಿ ಬಂದಿದೆ. ಹಾಗಾದರೆ ಏನು ಈ ಪನಾಮಾ ಪೇಪರ್ಸ್ ಎಂಬ ಬಗ್ಗೆ ತಿಳಿಯಲು ಮುಂದೆ ಓದಿ...

ಏನಿದು ಪನಾಮಾ ಪೇಪರ್ಸ್?

ಏನಿದು ಪನಾಮಾ ಪೇಪರ್ಸ್?

ಪನಾಮ ದೇಶದ ಮೂಲದ ಕಾನೂನು ಸಂಸ್ಥೆ ಮೊಸಾಕ್ ಫೋನ್ಸೆಕಾ ಆಗಿದೆ. ಈ ಸಂಸ್ಥೆಯು ವಿದೇಶಗಳಲ್ಲಿ ಕಂಪೆನಿ ನೋಂದಣಿ ಮಾಡಿಸುವುದಕ್ಕೆ ಸೇವೆ ಒದಗಿಸುತ್ತದೆ. ವಾರ್ಷಿಕ ಶುಲ್ಕ ಪಡೆದು ಆಡಳಿತ ವ್ಯವಸ್ಥೆಯನ್ನು ನೋಡಿಕೊಳ್ಳುತ್ತದೆ. ಹಣಕಾಸು ನಿರ್ವಹಣೆ ಸೇವೆಯನ್ನೂ ಜತೆಗೆ ಒದಗಿಸುತ್ತದೆ. ಈ ಸಂಸ್ಥೆಯು ಜಗತ್ತಿನ ನಾಲ್ಕನೇ ಅತಿ ದೊಡ್ಡ ಸಂಸ್ಥೆ ಆಗಿದೆ. ಈ ಸಂಸ್ಥೆಯು ಹನ್ನೊಂದೂವರೆ ಮಿಲಿಯನ್ ನಷ್ಟು ಅವ್ಯವಹಾರದ ದಾಖಲೆಗಳನ್ನು ಬಹಿರಂಗ ಮಾಡಿದೆ. ಈ ದಾಖಲೆಗಳನ್ನೇ ಪನಾಮ ಪೇಪರ್ಸ್ ಆಗಿದೆ.

ಈ ದಾಖಲೆಗಳು ದೊರಕಿದ್ದು ಹೇಗೆ, ಏನಿದೆ ದಾಖಲೆಯಲ್ಲಿ?

ಈ ದಾಖಲೆಗಳು ದೊರಕಿದ್ದು ಹೇಗೆ, ಏನಿದೆ ದಾಖಲೆಯಲ್ಲಿ?

ಈ ಎಲ್ಲ ದಾಖಲೆಗಳನ್ನು ಅಪರಿಚಿತ ಮೂಲಗಳಿಂದ ಜರ್ಮನ್ ನ ಪತ್ರಿಕೆಯೊಂದು ಪಡೆದಿದೆ. ಆ ನಂತರ ಅಂತರರಾಷ್ಟ್ರೀಯ ಮಟ್ಟದ ತನಿಖಾ ಪತ್ರಕರ್ತರ ಒಕ್ಕೂಟದ ಜತೆಗೆ ಹಂಚಿಕೊಂಡಿತು. ಆ ಒಕ್ಕೂಟವು ಅಂತರರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳ ಜತೆಗೆ ಮಾಹಿತಿಯನ್ನು ಹಂಚಿಕೊಂಡಿದೆ ಎಂದು ವರದಿ ಆಗಿದೆ. ಆ ಬಳಿಕ ಈ ದಾಖಲೆಯು ವಿಶ್ವದಲ್ಲೇ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹಲವಾರು ಮಂದಿಯ ಹಣಕಾಸು ವ್ಯವಹಾರದ ಬಗ್ಗೆ ಮಾಹಿತಿ ಬಹಿರಂಗವಾಗಿದೆ. ಈ ದಾಖಲೆಯಲ್ಲಿ ವಿದೇಶಗಳಲ್ಲಿರುವ ತೆರಿಗೆ ಸ್ವರ್ಗಗಳಲ್ಲಿ ಅಕ್ರಮವಾಗಿ ಹೇಗೆ ಹಣ ಹೂಡಿಕೆ ಮಾಡಿದ್ದಾರೆ, ಯಾರ್ಯಾರು ಮಾಡಿದ್ದಾರೆ ಎಂಬೆಲ್ಲ ಮಾಹಿತಿ ಅದರಲ್ಲಿತ್ತು. ನೂರಾ ನಲವತ್ಮೂರು ರಾಜಕಾರಣಿಗಳು, ಅದರಲ್ಲಿ ಹನ್ನೆರಡು ರಾಷ್ಟ್ರೀಯ ನಾಯಕರ ಹೆಸರು ಒಳಗೊಂಡಿದ್ದವು. ಅವರ ಕುಟುಂಬದವರು, ನಿಕಟವರ್ತಿಗಳು ಜಗತ್ತಿನಾದ್ಯಂತ ಇರುವ ತೆರಿಗೆ ಸ್ವರ್ಗ ಎನಿಸಿದ ದೇಶಗಳನ್ನು ಹೇಗೆ ಬಳಕೆ ಮಾಡಿಕೊಂಡಿದ್ದಾರೆ ಎಂಬ ವಿವರಗಳಿದ್ದವು.

ಯಾರೆಲ್ಲಾ ಹೆಸರುಗಳು ಪನಾಮಾ ದಾಖಲೆಯಲ್ಲಿದೆ?

ಯಾರೆಲ್ಲಾ ಹೆಸರುಗಳು ಪನಾಮಾ ದಾಖಲೆಯಲ್ಲಿದೆ?

ಪನಾಮಾ ಪೇಪರ್ಸ್‌ನಲ್ಲಿ ಮುಖ್ಯವಾಗಿ ಪಾಕ್ ಪ್ರಧಾನಿ ನವಾಜ್ ಷರೀಫ್, ಇರಾಕ್ ನ ಮಾಜಿ ಉಪರಾಷ್ಟ್ರಪತಿ ಅಯಾದ್ ಅಲ್ಲವಿ, ಉಕ್ರೇನ್‌ನ ರಾಷ್ಟ್ರಪತಿ ಪೆಟ್ರೋ ಪೊರೊಶೆಂಕೋ, ಈಜಿಪ್ಟ್ ನ ಮಾಜಿ ರಾಷ್ಟ್ರಪತಿಯ ಮಗ ಅಲಾ ಮುಬಾರಕ್, ಐಸ್ ಲ್ಯಾಂಡ್ ನ ಪ್ರಧಾನಿಯ ಹೆಸರು ಇದ್ದವು ಎಂದು ವರದಿ ಆಗಿದೆ. ಪನಾಮ ಪೇಪರ್ಸ್ ಎಂಬ ರಹಸ್ಯ ಪಟ್ಟಿಯಲ್ಲಿ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಮತ್ತು ಐಶ್ವರ್ಯಾ ಸೇರಿದಂತೆ ಸುಮಾರು 500 ಪ್ರಮುಖ ಭಾರತೀಯರ ಹೆಸರುಗಳು, ರಾಜಕಾರಣಿಗಳು ಮತ್ತು ಉದ್ಯಮಿಗಳ ಹೆಸರುಗಳಿವೆ.

ಪಾಕ್‌ ಪ್ರಧಾನಿ ಗದ್ದುಗೆ ಅಲ್ಲಾಡಿಸಿದ ಪನಾಮಾ!

ಪಾಕ್‌ ಪ್ರಧಾನಿ ಗದ್ದುಗೆ ಅಲ್ಲಾಡಿಸಿದ ಪನಾಮಾ!

2013ರ ಜೂನ್ 5ರಂದು ನವಾಜ್ ಷರೀಫ್ ಅವರು, ಮೂರನೇ ಬಾರಿಗೆ ಪಾಕಿಸ್ತಾನದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಅದಕ್ಕಿಂತಲೂ ಹಿಂದೆ, 1997ರಿಂದ 1999ರವರೆಗೆ, 1990ರಿಂದ 1993ರವರೆಗೆ ಅವರು ಪ್ರಧಾನಿಯಾಗಿದ್ದರು. ಆದರೆ ನವಾಜ್ ಷರೀಫ್ ಪ್ರಧಾನಿ ಗದ್ದುಗೆಯನ್ನು ಈ ಪನಾಮಾ ಪೇಪರ್ಸ್ ಅಲುಗಾಡಿಸಿದೆ. ಈ ತನಿಖಾ ವರದಿಯಲ್ಲಿ ನವಾಜ್ ಷರೀಫ್ ಹಾಗೂ ಅವರ ಕುಟುಂಬ ಸದಸ್ಯರು ಭ್ರಷ್ಟಾಚಾರದಿಂದ ಭಾರೀ ಆಸ್ತಿ ಮಾಡಿರುವ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಇದು ಪಾಕಿಸ್ತಾನ ರಾಜಕೀಯ ವ್ಯವಸ್ಥೆಯಲ್ಲಿ ಭಾರೀ ಕೋಲಾಹಲ ಉಂಟು ಮಾಡಿತ್ತು. ಇದಾದ ಬೆನ್ನಲ್ಲೇ ಪಾಕಿಸ್ತಾನ ಸುಪ್ರೀಂ ಕೋರ್ಟ್ ಸೂಚನೆಯ ಹಿನ್ನೆಲೆಯಲ್ಲಿ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ತನ್ನ ಪ್ರಧಾನಿ ಸ್ಥಾನಕ್ಕೆ ನೀಡಬೇಕಾಯಿತು. (ಒನ್‌ಇಂಡಿಯಾ ಸುದ್ದಿ)

English summary
What in Panama Papers?, Explained In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X