ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡ್ರಗ್ಸ್ ವಿಲೇವಾರಿ ಪ್ರಕ್ರಿಯೆ ಹೇಗಿರುತ್ತೆ, ನಿಯಮಗಳೇನು?

|
Google Oneindia Kannada News

ಬೆಂಗಳೂರು, ಸಪ್ಟೆಂಬರ್.11: ಕರ್ನಾಟಕದಲ್ಲಿ ಡ್ರಗ್ಸ್, ಗಾಂಜಾ ಸೇರಿದಂತೆ ಮಾದಕ ವಸ್ತುಗಳ ವಿಚಾರವೇ ಹೆಚ್ಚು ಸದ್ದು ಮಾಡುತ್ತಿದೆ. ಇದರ ನಡುವೆ ಬೆಂಗಳೂರಿನ ಶೇಷಾದ್ರಿಪುರಂ ಠಾಣೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಭರ್ಜರಿ 1352 ಕೆಜಿ ಗಾಂಜಾವನ್ನು ಕಲಬುರಗಿಯಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.

ಬೆಂಗಳೂರು ಗಾಯತ್ರಿನಗರದ ಆಟೋ ಚಾಲಕ ಜ್ಞಾನಶೇಖರ್ ಎಂಬ ಆರೋಪಿಯನ್ನು ಬಂಧಿಸಿದ ಪೊಲೀಸರಿಗೆ ಗಾಂಜಾ ಸಂಗ್ರಹಿಸಿಟ್ಟಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಆರೋಪಿ ನೀಡಿದ ಮಾಹಿತಿ ಆಧರಿಸಿ ಕಾರ್ಯಾಚರಣೆಗೆ ಇಳಿದ ಬೆಂಗಳೂರು ಪೊಲೀಸರು ಕಲಬುರಗಿ ಲಕ್ಷ್ಮಣ್ ನಾಯಕ್ ತಾಂಡಾದಲ್ಲಿರುವ ಕುರಿ ಸಾಕಾಣಿಕೆ ಕೇಂದ್ರದ ನೆಲಮಾಳಿಗೆಯಲ್ಲಿ ಸಂಗ್ರಹಿಸಿಟ್ಟ 1352 ಕೆಜಿ ಗಾಂಜಾವನ್ನು ವಶಕ್ಕೆ ಪಡೆದುಕೊಂಡಿದ್ದರು. ಇದರ ಜೊತೆಗೆ ಈವರೆಗೂ ವಿಜಯಪುರದ ಸಿದ್ಧನಾಥ್, ಬೀದರ್ ನಾಗನಾಥ್, ಕಲಬುರಗಿಯ ಚಂದ್ರಕಾಂತ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬೆಂಗಳೂರು ಪೊಲೀಸರ ಕಾರ್ಯಚರಣೆ; ಕಲಬುರಗಿಯಲ್ಲಿ 1,352 ಕೆಜಿ ಗಾಂಜಾ ವಶಬೆಂಗಳೂರು ಪೊಲೀಸರ ಕಾರ್ಯಚರಣೆ; ಕಲಬುರಗಿಯಲ್ಲಿ 1,352 ಕೆಜಿ ಗಾಂಜಾ ವಶ

ಕಲಬುರಗಿಯಲ್ಲಿ ಭಾರಿ ಪ್ರಮಾಣದ ಗಾಂಜಾ ವಶಕ್ಕೆ ಪಡೆದ ನಂತರ ಇದೀಗ ಹೀಗೆ ವಶಕ್ಕೆ ಪಡೆದ ಗಾಂಜಾವನ್ನು ಹೇಗೆ ವಿಲೇವಾರಿ ಮಾಡುತ್ತಾರೆ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಕೇಂದ್ರ ಸರ್ಕಾರವು ಗಾಂಜಾ ವಿಲೇವಾರಿ ಬಗ್ಗೆ ಹೊರಡಿಸಿರುವ ಆದೇಶವೇನು, ಗಾಂಜಾ ವಿಲೇವಾರಿಗೆ ಅನುಸರಿಸಬೇಕಾದ ನಿಯಮಗಳೇನು. ಗಾಂಜಾ ವಿಲೇವಾರಿ ಪ್ರಕ್ರಿಯೆ ಹೇಗಿರುತ್ತದೆ ಎನ್ನುವುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ.

ಆಯಾ ಪೊಲೀಸ್ ಸ್ಟೇಷನ್ ಎದುರಲ್ಲೇ ಮಾದಕವಸ್ತು ನಾಶ

ಆಯಾ ಪೊಲೀಸ್ ಸ್ಟೇಷನ್ ಎದುರಲ್ಲೇ ಮಾದಕವಸ್ತು ನಾಶ

ಕಳೆದ 2018ಕ್ಕಿಂತ ಮೊದಲು ಪೊಲೀಸರು ವಶಕ್ಕೆ ಪಡೆದ ಮಾದಕ ವಸ್ತುಗಳನ್ನು ಆಯಾ ಪೊಲೀಸ್ ಠಾಣೆಗಳ ಎದುರಿನಲ್ಲಿ ನಾಶಪಡಿಸುತ್ತಿದ್ದರು. ನಾರ್ಕೋಟಿಕ್ ಡ್ರಗ್ಸ್ ಆಂಡ್ ಸೈಕೋಟ್ರೊಪಿಕ್ ಸಬ್ ಸ್ಟೆನ್ಸಸ್ ಆಕ್ಟ್ ಅಡಿಯಲ್ಲಿ ಬೃಹತ್ ಪ್ರಮಾಣದ ಮಾದಕ ವಸ್ತುಗಳನ್ನು ಪೊಲೀಸ್ ಠಾಣೆಗಳ ಎದುರಿನಲ್ಲಿ ನಾಶಪಡಿಸುವುದು ಕಾಯ್ದೆಗೆ ವಿರುದ್ಧವಾಗಿದೆ. ಈ ಹಿನ್ನೆಲೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಮತ್ತು ಉಪ ಪೊಲೀಸ್ ಆಯುಕ್ತರು ನೋಡಲ್ ಅಧಿಕಾರಿಗಳು ಮಾದಕ ವಸ್ತುಗಳನ್ನು ಪರಿಸರ ಸ್ನೇಹಿಯಾಗಿ ವಿಲೇವಾರಿ ಮಾಡುವುದಕ್ಕೆ ಕ್ರಮ ತೆಗೆದುಕೊಳ್ಳುತ್ತಾರೆ.

ಮಾದಕ ವಸ್ತುಗಳ ವಿಲೇವಾರಿಗೆ ಹೊಸ ಸಮಿತಿ

ಮಾದಕ ವಸ್ತುಗಳ ವಿಲೇವಾರಿಗೆ ಹೊಸ ಸಮಿತಿ

2015ರಲ್ಲೇ ಕೇಂದ್ರ ಹಣಕಾಸು ಸಚಿವಲಾಯದ ಅಧೀನದಲ್ಲಿರುವ ಕಂದಾಯ ಇಲಾಖೆಯು ಎಲ್ಲ ರಾಜ್ಯ ಸರ್ಕಾರಗಳಿಗೆ ಒಂದು ಆದೇಶವನ್ನು ಹೊರಡಿಸಿತ್ತು. ಈ ಆದೇಶದ ಅನ್ವಯ ಮಾಲಿನ್ಯ ನಿಯಂತ್ರಣ ಮಂಡಳಿ ಮಾನದಂಡಗಳಿಗೆ ಅನುಗುಣವಾಗಿ ಮಾದಕ ವಸ್ತುಗಳನ್ನು ವಿಲೇವಾರಿ ಪ್ರಕ್ರಿಯೆ ನಡೆಸಲಾಗುತ್ತದೆ. ಪೊಲೀಸ್ ವರಿಷ್ಠಾಧಿಕಾರಿ, ಕಂದಾಯ ಅಧಿಕಾರಿ, ಅಬಕಾರಿ ಜಂಟಿ ಆಯುಕ್ತರು, ಕಂದಾಯ ಇಲಾಖೆ ಗುಪ್ತಚರ ನಿರ್ದೇಶನಾಲಯದ ಜಂಟಿ ನಿರ್ದೇಶಕರ ಜೊತೆಗೆ ಪಿಸಿಬಿ ಅಧಿಕಾರಿಗಳ ಸಮಿತಿಯೊಂದರನ್ನು ರಚಿಸಲಾಗುತ್ತದೆ. ಈ ಸಮಿತಿ ಸಮ್ಮುಖದಲ್ಲಿಯೇ ಮಾದಕ ವಸ್ತುಗಳ ವಿಲೇವಾರಿ ಪ್ರಕ್ರಿಯೆ ನಡೆಸುವುದಕ್ಕೆ ಆದೇಶಿಸಲಾಗಿದೆ. ಪೊಲೀಸರ ಸಮ್ಮುಖದಲ್ಲೇ ಮಾದಕ ವಸ್ತುಗಳ ವಿಲೇವಾರಿ ನಡೆಸುವುದಕ್ಕೆ ನಿಗದಿತ ಪ್ರಮಾಣವನ್ನು ಗುರುತುಪಡಿಸಲಾಗಿದೆ.

ಡ್ರಗ್ಸ್, ಗಾಂಜಾ ವಿಲೇವಾರಿಗೂ ನಿರ್ದಿಷ್ಟ ಪ್ರಮಾಣ ನಿಗದಿ

ಡ್ರಗ್ಸ್, ಗಾಂಜಾ ವಿಲೇವಾರಿಗೂ ನಿರ್ದಿಷ್ಟ ಪ್ರಮಾಣ ನಿಗದಿ

ಸರ್ಕಾರದ ಆದೇಶದ ಮೇರೆಗೆ ನಿರ್ದಿಷ್ಟ ಪ್ರಮಾಣದಲ್ಲಿ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಲ್ಲಿ ಅದನ್ನು ಪೊಲೀಸರ ಎದುರಿನಲ್ಲಿಯೇ ನಾಶಪಡಿಸುವುದಕ್ಕೆ ಅನುಮತಿಯಿದೆ. 100 ಅಥವಾ 200 ಗ್ರಾಂ ಪ್ರಮಾಣದಲ್ಲಿ ವಶಕ್ಕೆ ಪಡೆದ ಗಾಂಜಾ, ಹಶಿಶ್ ಮತ್ತು ಹಶಿಶ್ ಆಯಿಲ್ ನ್ನು ಪೊಲೀಸರೇ ವಿಲೇವಾರಿ ಮಾಡುತ್ತಾರೆ. ಆದರೆ ಒಂದು ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಲ್ಲಿ ಅದನ್ನು ನಾಶಪಡಿಸುವುದಕ್ಕೂ ಮೊದಲು ಸಮಿತಿಯೊಂದನ್ನು ರಚಿಸಬೇಕಾಗುತ್ತದೆ. ಆ ಸಮಿತಿ ಸಮ್ಮುಖದಲ್ಲಿಯೇ ಮಾದಕ ವಸ್ತುವನ್ನು ನಾಶಪಡಿಸಬೇಕು ಎಂಬ ನಿಯಮವೂ ಇದೆ. ಹಾಗಿದ್ದರೆ ಯಾವ ಮಾದಕ ವಸ್ತುವಿಗೆ ಯಾವ ಪ್ರಮಾಣವನ್ನು ನಿಗದಿಗೊಳಿಸಲಾಗಿದೆ ಎನ್ನುವುದರ ಪಟ್ಟಿ ಇಲ್ಲಿದೆ ನೋಡಿ.

ಮಾದಕ ವಸ್ತು ಪ್ರಮಾಣ

ಹೆರಾಯಿನ್ - 5 ಕೆಜಿ

ಹಶಿಶ್(ಚರಸ್) - 100 ಕೆಜಿ

ಹಶಿಶ್ ಆಯಿಲ್ - 20 ಕೆಜಿ

ಗಾಂಜಾ - 1000 ಕೆಜಿ

ಕೊಕೈನ್ - 2 ಕೆಜಿ

ಮಂದ್ರಾಕ್ಸ್ - 3000 ಕೆಜಿ

ಪಾಪ್ಪಿ ಸ್ಟ್ರಾವ್ - 10 ಎಂ - ಗಿಂತ ಹೆಚ್ಚು

ಕೋರ್ಟ್ ಆದೇಶಕ್ಕೂ ಮೊದಲು ಗಾಂಜಾ, ಡ್ರಗ್ಸ್ ನಾಶಪಡಿಸುವಂತಿಲ್ಲ

ಕೋರ್ಟ್ ಆದೇಶಕ್ಕೂ ಮೊದಲು ಗಾಂಜಾ, ಡ್ರಗ್ಸ್ ನಾಶಪಡಿಸುವಂತಿಲ್ಲ

ಬೆಂಗಳೂರು ಪೊಲೀಸರು ಕಲಬುರಗಿಯಲ್ಲಿ ವಶಕ್ಕೆ ಪಡೆದ ಗಾಂಜಾವನ್ನು ಸದ್ಯಕ್ಕೆ ಪೊಲೀಸ್ ಆಯುಕ್ತರ ಕಟ್ಟಡದಲ್ಲಿ ಸಂಗ್ರಹಿಸಿಡಲಾಗಿದೆ. ಈ ರೀತಿ ಸಂಗ್ರಹಿಸಿದ ಎಲ್ಲ ರೀತಿಯ ಮಾದಕ ವಸ್ತುಗಳ ಫೋಟೋ ಮತ್ತು ವಿಡಿಯೋವನ್ನು ಸೆರೆ ಹಿಡಿದು ಮ್ಯಾಜಿಸ್ಟ್ರೇಟ್ ಗೆ ಸಲ್ಲಿಸಲಾಗುತ್ತದೆ. ಅದಾದ ಬಳಿಕ ಮ್ಯಾಜಿಸ್ಟ್ರೇಟರ್ ಮಾದಕ ವಸ್ತುಗಳ ವಿಲೇವಾರಿ ಮಾಡುವಂತೆ ಆದೇಶ ನೀಡುತ್ತಾರೆ. ಹೀಗೆ ನ್ಯಾಯಾಲಯದ ಆದೇಶದ ಬಳಿಕವೇ ವಶಕ್ಕೆ ಪಡೆದ ಮಾದಕ ವಸ್ತುಗಳನ್ನು ವಿಲೇವಾರಿ ಮಾಡಬೇಕು ಎಂದು 2015ರ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

Recommended Video

Indo China Clash : ಇದು ಅಪ್ಪಟ ಸುಳ್ಳು, ಇಲ್ಲಿದೆ ಸತ್ಯವಾದ ಕಥೆ | Oneindia Kannada
ಮಾದಕ ವಸ್ತುಗಳ ವಿಲೇವಾರಿ ಮಾಡುವುದು ಹೇಗೆ?

ಮಾದಕ ವಸ್ತುಗಳ ವಿಲೇವಾರಿ ಮಾಡುವುದು ಹೇಗೆ?

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಾಯದಿಂದ 2018ರಲ್ಲಿ ಮಾಗಡಿಯಲ್ಲಿ ಕಾರ್ಖಾನೆಯೊಂದನ್ನು ಗುರುತಿಸಲಾಗಿದೆ. ಈ ಕಾರ್ಖಾನೆಯಲ್ಲಿ ಸುಮಾರು 1000 ಡಿಗ್ರಿ ತಾಪಮಾನ ಹೊಂದಿರುವ ಬಾಯ್ಲರ್ ಬಳಸಿ ಮಾದಕ ವಸ್ತುಗಳನ್ನು ವಿಲೇವಾರಿ ಮಾಡಲಾಗುತ್ತದೆ. "ಸಿಂಥೆಟಿಕ್ ಡ್ರಗ್ಸ್ ಮರುಬಳಿಕೆಗೆ ಅವಕಾಶವಿರುದ ಹಿನ್ನೆಲೆ ಎನ್ ಡಿಪಿಎಸ್ ಕಾಯ್ದೆ ಅಡಿಯಲ್ಲಿ ಹರಾಜು ಹಾಕುವುದಕ್ಕೆ ಅನುಮತಿ ನೀಡಲಾಗುತ್ತದೆ. ಹೀಗಿದ್ದರೂ ಡ್ರಗ್ಸ್ ದುರ್ಬಳಕೆ ಆತಂಕ ಹೆಚ್ಚಾಗಿರುವ ಹಿನ್ನೆಲೆ ಹರಾಜು ಪ್ರಕ್ರಿಯೆ ನಡೆಸಲಾಗುವುದಿಲ್ಲ" ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

English summary
What Happens To Drugs Seized By Police Department? Explanation in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X