ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Explained: ವಿದೇಶ ಪ್ರಯಾಣಕ್ಕೆ ವ್ಯಾಕ್ಸಿನ್ ಪಾಸ್‌ಪೋರ್ಟ್‌ ಕಡ್ಡಾಯ

|
Google Oneindia Kannada News

ನವದೆಹಲಿ, ಮಾರ್ಚ್.10: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಂತರ ಜಗತ್ತಿನ ಚಿತ್ರಣ ಬದಲಾಗಲಿದೆ. ದೈನಂದಿನ ಬದುಕಿನಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ಕೊವಿಡ್-19 ಶಿಷ್ಟಾಚಾರ, ನಿಯಮ ಮತ್ತು ಮಾರ್ಗಸೂಚಿಗಳನ್ನು ಪಾಲಿಸಬೇಕಿದೆ.

ಅಂತಾರಾಷ್ಟ್ರೀಯ ಪ್ರಯಾಣಿಕರು ಈ ವ್ಯಾಕ್ಸಿನ್ ಪಾಸ್‌ಪೋರ್ಟ್‌ ಹೊಂದುವುದು ಕಡ್ಡಾಯವಾಗಲಿದೆ. ಕೊರೊನಾವೈರಸ್ ಸೋಂಕಿನ ನಿಯಂತ್ರಣ ಮತ್ತು ಹರಡುವಿಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಾರಿಗೊಳಿಸಿದ ಹೊಸ ನಿಯಮಗಳಲ್ಲಿ ವ್ಯಾಕ್ಸಿನ್ ಪಾಸ್‌ಪೋರ್ಟ್‌ ಸಹ ಸೇರಿದೆ.

ಒಂದು ವರ್ಷದ ಕಥೆ: ಭಾರತದಲ್ಲೇ ಕೊರೊನಾ ಮೊದಲ ಸಾವು ಸಂಭವಿಸಿದ್ದೆಲ್ಲಿ? ಒಂದು ವರ್ಷದ ಕಥೆ: ಭಾರತದಲ್ಲೇ ಕೊರೊನಾ ಮೊದಲ ಸಾವು ಸಂಭವಿಸಿದ್ದೆಲ್ಲಿ?

ಕೊರೊನಾವೈರಸ್ ಭೀತಿ ನಂತರದ ದಿನಗಳಲ್ಲೂ ಕೂಡಾ ಜಾಗತಿಕ ಮಟ್ಟದಲ್ಲಿ ವ್ಯಾಕ್ಸಿನ್ ಪಾಸ್‌ಪೋರ್ಟ್‌ ಎಂಬುದು ಪ್ರಯಾಣಿಕರು ಹೊಂದಬೇಕಾದ ಪ್ರಮುಖ ದಾಖಲೆಯಾಗಿದೆ. ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಈಗಾಗಲೇ ಹಲವು ರಾಷ್ಟ್ರಗಳು ಷರತ್ತುಬದ್ಧ ಅನುಮತಿ ನೀಡಿವೆ. ವಿದೇಶಗಳಿಗೆ ಸಂಚರಿಸುವ ಪ್ರಯಾಣಿಕರು ಸ್ಥಳೀಯ ಸರ್ಕಾರದಿಂದ ಲಸಿಕೆ ಪಡೆದುಕೊಂಡಿರುವ ಬಗ್ಗೆ ಖಾತ್ರಿಪಡಿಸುವುದಕ್ಕಾಗಿ ನೀಡುವ ಒಂದು ದಾಖಲೆಯೇ ವ್ಯಾಕ್ಸಿನ್ ಪಾಸ್‌ಪೋರ್ಟ್‌ ಆಗಿದೆ. ವ್ಯಾಕ್ಸಿನ್ ಪಾಸ್‌ಪೋರ್ಟ್‌ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.

ವ್ಯಾಕ್ಸಿನ್ ಪಾಸ್‌ಪೋರ್ಟ್‌ ಮೂಲಕ ಸುರಕ್ಷಿತ ಪ್ರಯಾಣ

ವ್ಯಾಕ್ಸಿನ್ ಪಾಸ್‌ಪೋರ್ಟ್‌ ಮೂಲಕ ಸುರಕ್ಷಿತ ಪ್ರಯಾಣ

ಅಂತಾರಾಷ್ಟ್ರೀಯ ಪ್ರಯಾಣವನ್ನು ಸುರಕ್ಷಿತ ರೀತಿಯಲ್ಲಿ ಪುನಾರಂಭಿಸುವುದಕ್ಕಾಗಿ ಹಲವು ರೀತಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ವಿಶ್ವಸಂಸ್ಥೆಯ ವಿಶ್ವ ಪ್ರವಾಸೋದ್ಯಮ ಸಂಸ್ಥೆ(UNWTO)ಯ ಪ್ರಧಾನ ಕಾರ್ಯದರ್ಶಿ ಜುರಬ್ ಪೊಲೊಲಿಕಾಶ್ವಿಲಿ ತಿಳಿಸಿದ್ದಾರೆ. ಇತ್ತೀಚಿಗೆ ನಡೆದ ಯುಎನ್‌ಡಬ್ಲ್ಯುಟಿಒ ಸಭೆಯು ಅಂತಾರಾಷ್ಟ್ರೀಯ ಆರೋಗ್ಯ ಮತ್ತು ಪ್ರಯಾಣ ಸಂಸ್ಥೆಗಳಿಗೆ ಪ್ರಮಾಣೀಕೃತ ಡಿಜಿಟಲ್ ಪ್ರಮಾಣೀಕರಣ ವ್ಯವಸ್ಥೆಯನ್ನು ಸಮನ್ವಯಗೊಳಿಸಿದ ಪರೀಕ್ಷಾ ಶಿಷ್ಟಾಚಾರಗಳಿಗೆ ಕರೆ ನೀಡಲಾಗಿದೆ.

ವ್ಯಾಕ್ಸಿನ್ ಪಾಸ್‌ಪೋರ್ಟ್‌ ಎಂದರೆ ಏನು?

ವ್ಯಾಕ್ಸಿನ್ ಪಾಸ್‌ಪೋರ್ಟ್‌ ಎಂದರೆ ಏನು?

ವ್ಯಾಕ್ಸಿನ್ ಪಾಸ್‌ಪೋರ್ಟ್‌ ಎನ್ನುವುದು ಹಳದಿ ಕಾರ್ಡ್ ನಂತೆ ಇರುತ್ತದೆ. ಆಫ್ರಿಕನ್ ದೇಶಗಳಿಂದ ಅಮೆರಿಕಾ ಮತ್ತು ಭಾರತಕ್ಕೆ ಪ್ರಯಾಣಿಸುವವವರು ಹಳದಿ ಜ್ವರಕ್ಕೆ ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದು ಸಾಬೀತುಪಡಿಸುವುದಕ್ಕೆ ಈ ದಾಖಲೆಯನ್ನು ಸಲ್ಲಿಸಬೇಕಾಗುತ್ತದೆ. ವ್ಯಾಕ್ಸಿನ್ ಪಾಸ್‌ಪೋರ್ಟ್‌ ಎನ್ನುವುದು ಕೊವಿಡ್-19 ಸೋಂಕಿಗೆ ಲಸಿಕೆ ಹಾಕಿಸಿಕೊಂಡನ್ನು ಖಾತ್ರಿ ಪಡಿಸಲು ನೀಡುವ ಡಿಜಿಟಲ್ ದಾಖಲೆಯಾಗಿದೆ. ದೇಶಾದ್ಯಂತ ಲಸಿಕೆ ಪಡೆದಿರುವುದಕ್ಕೆ ಇದು ಡಿಜಿಟಲ್ ದಾಖಲೆಯಾಗಿ ಉಳಿಯಲಿದೆ.

ಡಿಜಿಟಲ್ ಪಾಸ್‌ಪೋರ್ಟ್‌ ಮೇಲೆ ಕಂಪನಿಗಳ ಕಾರ್ಯ

ಡಿಜಿಟಲ್ ಪಾಸ್‌ಪೋರ್ಟ್‌ ಮೇಲೆ ಕಂಪನಿಗಳ ಕಾರ್ಯ

ಅಂತಾರಾಷ್ಟ್ರೀಯ ಮಟ್ಟದಲ್ಲಿ ತಂತ್ರಜ್ಞಾನ ಕಂಪನಿಗಳು ಸುರಕ್ಷಿತ ರೀತಿಯ ಡಿಜಿಟಲ್ ಪಾಸ್‌ಪೋರ್ಟ್ಗಳನ್ನು ಬಳಸಿಕೊಂಡು ಕಾರ್ಯ ನಿರ್ವಹಿಸುವುದಕ್ಕೆ ಮುಂದಾಗಿದೆ. ಈ ಕುರಿತು ಅಂತಾರಾಷ್ಟ್ರೀಯ ಕಂಪನಿಗಳ ಮಾಹಿತಿಗಾಗಿ ಮುಂದೆ ಓದಿ:

ಕಾಮನ್ ಪಾಸ್: ಕಾಮನ್ ಪಾಸ್‌ಅನ್ನು ಪ್ರಾರಂಭಿಸಲು ವಿಶ್ವ ಆರ್ಥಿಕ ವೇದಿಕೆ ಮತ್ತು ಸಾರ್ವಜನಿಕ ಮತ್ತು ಖಾಸಗಿ ಪಾಲುದಾರರ ವಿಶಾಲ ಒಕ್ಕೂಟ ಸಹಕರಿಸುತ್ತಿದೆ. ಪ್ರಯಾಣಿಕರು ತಮ್ಮ ಕೊವಿಡ್-19 ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿ. ದೇಶಗಳಲ್ಲಿ ಪ್ರವೇಶ ಪಡೆಯಲು ಅಗತ್ಯವಿರುವ ದತ್ತಾಂಶವನ್ನು ಈ ದಾಖಲೆಯು ಸಹಕಾರಿ ಆಗಲಿದೆ.

ಎಲ್ಎಟಿಎ ಸಂಚಾರಿ ಪಾಸ್: ಕೊರೊನಾವೈರಸ್ ಸೋಂಕಿನಿಂದ ಸಮಸ್ಯೆ ಎದುರಿಸದ ಮತ್ತು ಹೊಸ ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ವಿಶ್ವ ಆರೋಗ್ಯ ಸಂಸ್ಥೆಯು ಹೆಚ್ಚು ಸುರಕ್ಷಿತವಾದ ಲಸಿಕೆ ಪಾಸ್ ನೀಡುವುದಕ್ಕಾಗಿ ಡಿಜಿಟಲ್ ಮಾನದಂಡಗಳನ್ನು ಅಭಿವೃದ್ಧಿಪಡಿಸುತ್ತಿದೆ. ಈ ಮೊಬೈಲ್ ಅಪ್ಲಿಕೇಶನ್ ಪ್ರಯಾಣಿಕರಿಗೆ 'ಡಿಜಿಟಲ್ ಪಾಸ್‌ಪೋರ್ಟ್' ರಚಿಸಲು, ಕೋವಿಡ್ -19 ಪರೀಕ್ಷೆ ಮತ್ತು ವ್ಯಾಕ್ಸಿನೇಷನ್ ಪ್ರಮಾಣಪತ್ರಗಳನ್ನು ಸ್ವೀಕರಿಸಲು ಮತ್ತು ಅವರ ಪ್ರಯಾಣಕ್ಕೆ ಈ ದಾಖಲೆಗಳು ಸಾಕಾಗುತ್ತದೆಯೇ ಎಂದು ಪರಿಶೀಲಿಸಲು ನೆರವಾಗಲಿದೆ.


ಎಓಕೆ ಪಾಸ್: ಐಸಿಸಿ ಎಒಕೆ ಪಾಸ್ ಎನ್ನುವುದು ಡಿಜಿಟಲ್ ದೃಢೀಕೃತ, ಸುರಕ್ಷಿತ ಮತ್ತು ವೈದ್ಯಕೀಯ ದಾಖಲೆಗಳನ್ನು ಒದಗಿಸುತ್ತದೆ. ವಿಕೇಂದ್ರೀಕರಿಸುವ ಮಾದರಿಯಲ್ಲಿ ಪಾಸ್‌ಗಳನ್ನು ರಚಿಸಲಾಗಿದ್ದು, ಇದರರ್ಥ ವೈದ್ಯಕೀಯ ದಾಖಲೆಗಳನ್ನು ನಿಮ್ಮ ಸಾಧನದಲ್ಲಿ ಮಾತ್ರ ಸಂಗ್ರಹಿಸಲಾಗುತ್ತದೆ. ಅವುಗಳನ್ನು ಬೇರೆಡೆ ಹಂಚಿಕೊಳ್ಳಲಾಗುವುದಿಲ್ಲ ಅಥವಾ ಸಂಗ್ರಹಿಸಲಾಗುವುದಿಲ್ಲ.

ಯಾವ ದೇಶಗಳಲ್ಲಿ ವ್ಯಾಕ್ಸಿನ್ ಪಾಸ್‌ಪೋರ್ಟ್ ಹೊಂದಿವೆ?

ಯಾವ ದೇಶಗಳಲ್ಲಿ ವ್ಯಾಕ್ಸಿನ್ ಪಾಸ್‌ಪೋರ್ಟ್ ಹೊಂದಿವೆ?

1. ಐಸ್ ಲ್ಯಾಂಡ್: ಜಗತ್ತಿನಲ್ಲೇ ಮೊದಲ ಬಾರಿಗೆ ವ್ಯಾಕ್ಸಿನ್ ಪಾಸ್ ಪೋರ್ಟ್ ವ್ಯವಸ್ಥೆಯನ್ನು ಈ ರಾಷ್ಟ್ರದಲ್ಲಿ ಜಾರಿಗೊಳಿಸಲಾಗಿದೆ. ಐಸ್ ಲ್ಯಾಂಡ್ ನಲ್ಲಿ ಪ್ರತಿಯೊಬ್ಬ ಪ್ರಜೆಗೂ ಕೊರೊನಾವೈರಸ್ ಲಸಿಕೆಯ ಎರಡು ಡೋಸ್‌ನ್ನು ನೀಡಲಾಗಿದೆ. ಈ ಹಿನ್ನೆಲೆ ಸುರಕ್ಷತೆ ದೃಷ್ಟಿಯಿಂದ ಹೊಸ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.


2. ಡೆನ್ಮಾರ್ಕ್: ಡ್ಯಾನಿಷ್ ರಾಷ್ಟ್ರಕ್ಕೆ ಪ್ರಯಾಣಿಸುವ ಪ್ರತಿಯೊಬ್ಬ ಪ್ರಜೆಯು ಕೊರೊನಾವೈರಸ್ ಲಸಿಕೆ ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ವಿದೇಶಕ್ಕೆ ತೆರಳುವ ತಮ್ಮ ಪ್ರಜೆಗಳಿಗೆ ವ್ಯಾಕ್ಸಿನ್ ಪಾಸ್‌ಪೋರ್ಟ್ ನೀಡುವ ಬಗ್ಗೆ ಕೇಂದ್ರ ಸಚಿವಾಲಯವು ಕೆಲಸ ಮಾಡುತ್ತಿದೆ.


3. ಇಸ್ರೇಲ್: ಇಸ್ರೇಲ್‌ನಲ್ಲಿ ಆರೋಗ್ಯ ಸಚಿವಾಲಯವು ಹಸಿರು ಪಾಸ್‌ಪೋರ್ಟ್‌ನ್ನು ಜಾರಿಗೊಳಿಸಿದೆ. ಈಗಾಗಲೇ ಲಸಿಕೆ ಪಡೆದ ಜನರು ವಿದೇಶಗಳಿಗೆ ಪ್ರಯಾಣಿಸಲು ಮತ್ತು ದೊಡ್ಡ ಕೂಟಗಳ ಭಾಗವಹಿಸಲು ಅನುವು ಮಾಡಿಕೊಡುತ್ತದೆ.

4. ಹಂಗೇರಿ: ಪೂರ್ವ ಯುರೋಪಿಯನ್ ದೇಶವು 'ರೋಗನಿರೋಧಕ ಪಾಸ್‌ಪೋರ್ಟ್‌ಗಳತ್ತ ಕೆಲಸ ಮಾಡುತ್ತಿದೆ. ಪ್ರಯಾಣಿಕನ್ನು ಎಂದಿಗೂ ಕೊರೊನಾವೈರಸ್‌ಗೆ ತುತ್ತಾಗಿಲ್ಲ, ಅಥವಾ ಅವರ ದೇಹದಲ್ಲಿ ಯಾವುದೇ ರೀತಿ ಕೊವಿಡ್-19 ಸೋಂಕಿನ ಲಕ್ಷಣಗಳಿಲ್ಲ ಎನ್ನುವುದನ್ನು ಈ ಪ್ರಮಾಣಪತ್ರವು ಸಾಬೀತುಪಡಿಸುತ್ತದೆ.

5. ಗ್ರೀಸ್: ಪ್ರಯಾಣಕ್ಕೆ ಅನುಕೂಲವಾಗುವಂತೆ ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಪರಿಚಯಿಸಲು ಗ್ರೀಕ್ ಪ್ರಧಾನಿ ಕಿರಿಯಾಕೋಸ್ ಮಿಟ್ಸೋಟಾಕಿಸ್ ಯುರೋಪಿಯನ್ ಆಯೋಗಕ್ಕೆ ಮನವಿ ಮಾಡಿದ್ದಾರೆ.

ಡಿಜಿಟಲ್ ಪಾಸ್‌ನಿಂದ ಆಗುವ ಪ್ರಯೋಜನಗಳೇನು?

ಡಿಜಿಟಲ್ ಪಾಸ್‌ನಿಂದ ಆಗುವ ಪ್ರಯೋಜನಗಳೇನು?

ಕೊರೊನಾವೈರಸ್ ಸೋಂಕಿನಿಂದ ಅಂತಾರಾಷ್ಟ್ರೀಯ ಪ್ರಯಾಣಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಜಾರಿಗೊಳಿಸಲು ಹೊರಟಿರುವ ವ್ಯಾಕ್ಸಿನ್ ಪಾಸ್‌ಪೋರ್ಟ್‌ನಿಂದಾಗಿ ಜಾಗತಿಕ ಮಟ್ಟದಲ್ಲಿ ಪ್ರವಾಸೋದ್ಯಮ ಮತ್ತು ಆಸ್ಪತ್ರೆ ಉದ್ಯಮಗಳಿಗೆ ಪ್ರಾಥಮಿಕವಾಗಿ ಲಾಭವಾಗಲಿದೆ.

English summary
Here We Explain What Are Vaccine Passports & Why Are They Becoming Every Traveler's Necessity in Kannada. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X