ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರರ ಮೇಲಿನ ದಾಳಿಗೆ ಎಂಥ ಸಿದ್ಧತೆ, ಎಂಥೆಂಥ ವಿಮಾನ, ಅದೆಂಥ ತಂತ್ರಜ್ಞಾನ?

By ಅನಿಲ್ ಆಚಾರ್
|
Google Oneindia Kannada News

ಭಾರತೀಯ ವಾಯುಸೇನೆಯನ್ನು 1999ರ ಕಾರ್ಗಿಲ್ ಬಿಕ್ಕಟ್ಟಿನ ವೇಳೆ ನಿಯೋಜಿಸಲಾಗಿತ್ತು. 1971ರಲ್ಲಿ ಪಾಕಿಸ್ತಾನದ ಒಳಗೆ ನುಗ್ಗಿದ್ದ ಭಾರತದ ವಾಯುಸೇನೆಯ ಮಂಗಳವಾರದಂದು ಮತ್ತೆ ಅದೇ ಸಾಹಸ ಮಾಡಿತು. ಇಡೀ ಕಾರ್ಯಾಚರಣೆಗೆ ಒಪ್ಪಿಗೆ ಸಿಕ್ಕಿದ್ದು ಕಳೆದ ವಾರವಷ್ಟೇ. ಒಂದು ಗಂಟೆಗೂ ಕಡಿಮೆ ಸಮಯದಲ್ಲಿ ಎಲ್ಲ ಮುಗಿಯಿತು.

ಇದ್ದದ್ದು ಒಂದೇ ಗುರಿ. ಅಪಾಯ ಹೆಚ್ಚೇ ಇತ್ತು. ಶತಾಯಗತಾಯ ಯಶಸ್ಸು ಸಾಧಿಸಲೇ ಬೇಕಿತ್ತು. ಭಾರತೀಯು ವಾಯು ಸೇನೆಯು ಈ ದಾಳಿಗೆಂದೇ ತನ್ನ ಅತ್ಯುತ್ತಮ ಪೈಲಟ್, ಅತ್ಯುತ್ತಮ ಯುದ್ಧ ವಿಮಾನಗಳು, ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಸಿದ್ಧಪಡಿಸಿಕೊಳ್ಳಲಾಯಿತು. ಗುರಿ ಯಾವುದು ಎಂಬ ಬಗ್ಗೆ ಸ್ಪಷ್ಟತೆ ಇತ್ತು. ಬಾಲಾಕೋಟ್ ನಲ್ಲಿರುವ ಜೈಶ್-ಇ-ಮೊಹ್ಮದ್ ಉಗ್ರ ನೆಲೆ ದಾಳಿಯ ಗುರಿಯಾಗಿತ್ತು.

ದಿನದ ಮುಖ್ಯ ಸುದ್ದಿ: ಭಾರತದ ಪ್ರತೀಕಾರ ಹೇಗಿತ್ತು? ಪಾಕ್ ಪ್ರತಿಕ್ರಿಯೆ ಹೇಗಿತ್ತು?ದಿನದ ಮುಖ್ಯ ಸುದ್ದಿ: ಭಾರತದ ಪ್ರತೀಕಾರ ಹೇಗಿತ್ತು? ಪಾಕ್ ಪ್ರತಿಕ್ರಿಯೆ ಹೇಗಿತ್ತು?

ಮಂಗಳವಾರ ನಸುಕಿನ 3.45ರ ಹೊತ್ತಿಗೆ ಜಭಾ ಟಾಪ್ ನ ಬಾಲಾಕೋಟ್ ಮೇಲೆ ಮೊದಲ ದಾಳಿ ಆಗಿದೆ. ಅದಾಗಿ ಎಂಟು ನಿಮಿಷಗಳು ಸತತವಾಗಿ ಶಸ್ತ್ರಾಸ್ತ್ರಗಳಿಂದ ಸುರಿ ಮಳೆಯಾಗಿದೆ. ಬಿಬಿಸಿ ವರ್ಲ್ಶ್ಗ್ ಸರ್ವೀಸ್ ಟಿವಿ (ಉರ್ದು) ಇಬ್ಬರು ಸ್ಥಳೀಯ ಪ್ರತ್ಯಕ್ಷದರ್ಶಿಗಳ ಹೇಳಿಕೆ ಪಡೆದಿದೆ. ಅವರ ಪ್ರಕಾರ, ಐದು ಸ್ಫೋಟ ಸಂಭವಿಸಿದೆ. ಜತೆಗೆ ಭೂಕಂಪನ ಆದಂತೆ 5ರಿಂದ 10 ನಿಮಿಷ ಅನುಭವ ಆಗಿದೆ.

ಪಾಕ್ ನಿಂದ ಪ್ರತಿರೋಧ

ಪಾಕ್ ನಿಂದ ಪ್ರತಿರೋಧ

ಇನ್ನು ಸ್ಫೋಟಕಗಳು ಕೂಡ ನಿಖರವಾಗಿ ಗುರಿಯತ್ತಲೇ ಬಳಸಲಾಗಿದೆ. ‌ಇತ್ತೀಚೆಗೆ ಮೇಲ್ದರ್ಜೆಗೆ ಏರಿದ ಮಿರಾಜ್ ವಿಮಾನದಿಂದ ದಾಳಿ ವಿಚಾರವಾಗಿ ಬಹಳ ದೊಡ್ಡ ಅನುಕೂಲವಾಗಿದೆ. ಇದರಲ್ಲಿ ರಾತ್ರಿ ವೇಳೆ ಕೂಡ ಸ್ಪಷ್ಟವಾಗಿ ದಾರಿ ಗೋಚರಿಸುವಂಥ ಗಾಜನ್ನು ಕಾಕ್ ಪಿಟ್ ನಲ್ಲಿ ಬಳಸಲಾಗಿತ್ತು. ಇದರ ಜತೆಗೆ ನೇವಿಗೇಷನ್ ಹಾಗೂ ಐಎಫ್ ಎಫ್ (ಸ್ನೇಹಿತರು ಯಾರು ಹಾಗೂ ವೈರಿ ಯಾರು ಎಂದು ಗುರುತಿಸುವುದು) ವ್ಯವಸ್ಥೆ ಇತ್ತು. ಜತೆಗೆ ಮಲ್ಟಿ ಮೋಡ್ ಮಲ್ಟಿ ಲೇಯರ್ಡ್ ರಾಡಾರ್ ಮತ್ತು ಸಮಗ್ರವಾದ ಯುದ್ಧ ಬಳಕೆ ಎಲೆಕ್ಟ್ರಾನಿಕ್ ಸೂಟ್ ಇತ್ತು. ಹನ್ನೆರಡು ಮಿರಾಜ್ -2000 ಬಳಸಲಾಗಿದ್ದು, ಅವುಗಳ ಬೆಂಗಾವಲಾಗಿ ನಾಲ್ಕು ಸುಖೋಯ್ Su -30 ಬಳಸಲಾಗಿದೆ. ಏನಾದರೂ ದಾಳಿ ವೇಳೆ ಪಾಕ್ ನಿಂದ ಪ್ರತಿರೋಧ ಕಂಡುಬಂದರೆ ಅದಕ್ಕೆ ಉತ್ತರ ನೀಡಲು ಸುಖೋಯ್ ಬಳಸಲಾಗಿತ್ತು. ಆದರೆ ಹಾಗೆ ಪ್ರತಿರೋಧ ಬರಲೇ ಇಲ್ಲ.

100 ಕಿಲೋಮೀಟರ್ ಫಾಸಲೆಯೊಳಗೆ ವಿಮಾನ ಗುರುತು

100 ಕಿಲೋಮೀಟರ್ ಫಾಸಲೆಯೊಳಗೆ ವಿಮಾನ ಗುರುತು

ಇನ್ನು ಸುಖೋಯ್ ವಿಮಾನ ಮುಂದಕ್ಕೆ ಸಾಗಿ, ಕಾವಲು ನಿಂತಂತೆ ಆಯಿತು. ಮಿರಾಜ್ ನಿಂದ ಶತ್ರು ನೆಲೆಗಳು ಧ್ವಂಸವಾಗುವ ಮುನ್ನ ಯಾವುದೇ ಪ್ರತಿರೋಧ ವ್ಯಕ್ತವಾಗದಂತೆ ನೋಡಿಕೊಳ್ಳಲಾಯಿತು. ಕೆಳ ಮಟ್ಟದಲ್ಲಿ ಹಾರಾಟ ನಡೆಸುವುದು ಸೇರಿದಂತೆ ವಿವಿಧ ತಂತ್ರವನ್ನು ಬಳಸಿ ಪಾಕಿಸ್ತಾನದ ರಾಡಾರ್ ನ ಕಣ್ಣು ತಪ್ಪಿಸಿ ಸಾಗುವುದು ನಮಗೆ ಸಾಧ್ಯ ಎಂದು ಭಾರತೀಯ ವಾಯು ಸೇನೆಯ ಮೂಲಗಳು ತಿಳಿಸಿವೆ. ಇಸ್ರೇಲ್ ನ ಫಾಲ್ಕನ್ ಏರ್ ಬೋರ್ನ್ ವಾರ್ನಿಂಗ್ ಅಂಡ್ ಕಂಟ್ರೋಲ್ ಸಿಸ್ಟಮ್ (AWACS) ಮತ್ತು ಸ್ವದೇಶಿ ನಿರ್ಮಿತ ನೇತ್ರಾ ಏರ್ ಬೋರ್ನ್ ಅರ್ಲಿ ವಾರ್ನಿಂಗ್ ಅಂಡ್ ಕಂಟ್ರೋಲ್ ಸಿಸ್ಟಮ್ (AEW&CS) ವಿಮಾನವನ್ನು ಈ ಕಾರ್ಯಾಚರಣೆಯನ್ನು ನಿಗಾ ಮಾಡುವ ಸಲುವಾಗಿಯೇ ನಿಯೋಜಿಸಲಾಯಿತು. ಕಾರ್ಯಾಚರಣೆ ನಡೆಯುವ ವೇಳೆ 100 ಕಿಲೋಮೀಟರ್ ಫಾಸಲೆಯೊಳಗೆ ಯಾವುದೇ ಬೇರೆ ವಿಮಾನಗಳಿಲ್ಲ ಎಂಬುದನ್ನು ಇವುಗಳಿಂದ ಖಾತ್ರಿಯಾಯಿತು.

ಉಗ್ರರ ನೆಲೆಗಳನ್ನು ಸೇನೆ ಧ್ವಂಸ ಮಾಡಿದ್ದು ಹೇಗೆ? ರೋಚಕ ಮಾಹಿತಿ ಉಗ್ರರ ನೆಲೆಗಳನ್ನು ಸೇನೆ ಧ್ವಂಸ ಮಾಡಿದ್ದು ಹೇಗೆ? ರೋಚಕ ಮಾಹಿತಿ

ಜನವಸತಿ ಇಲ್ಲ ಎಂಬ ಖಾತ್ರಿ

ಜನವಸತಿ ಇಲ್ಲ ಎಂಬ ಖಾತ್ರಿ

ಮೂಲಗಳು ಹೇಳುವ ಪ್ರಕಾರ: ಮಿರಾಜ್ 2000 ವಿಮಾನಗಳಿಗೆ ಯಾವುದು ಗುರಿ ಎಂಬುದನ್ನು ಹಾಗೂ ಉಗ್ರರ ನೆಲೆ ಮೇಲೆ ನಿರ್ದಿಷ್ಟವಾಗಿ ಶಸ್ತ್ರಾಸ್ತ್ರ ದಾಳಿಯನ್ನು ಮಾಡಲು ತಿಳಿಸಲಾಗಿತ್ತು. ಬಾಲಾಕೋಟ್ ನ ನೆಲೆಯನ್ನು ಗುಪ್ತಚರ ಇಲಾಖೆಯ ಮಾಹಿತಿ ಆಧಾರದಲ್ಲಿ ಗುರುತಿಸಲಾಗಿತ್ತು. ಆ ಸ್ಥಳದಲ್ಲಿ ಉಳಿದ ಜನವಸತಿ ಇಲ್ಲ ಹಾಗೂ ಪ್ರತಿಯಾಗಿ ಯಾವುದೇ ಅಪಾಯ ಇಲ್ಲ ಎಂಬ ಅಂಶಗಳನ್ನು ಪರಿಗಣಿಸಲಾಗಿತ್ತು. ಕಾರ್ಗಿಲ್ ಯುದ್ಧದ ವೇಳೆಯೂ ಈ ವಿಮಾನಗಳನ್ನು ಯಶಸ್ವಿಯಾಗಿ ಬಳಸಲಾಗಿತ್ತು. ಅವುಗಳಲ್ಲಿ SPICE-2000 ಮತ್ತು ಕ್ರಿಸ್ಟಲ್ ಮೇಜ್ ಮಾರ್ಕ್ 2 ಬಳಸಲಾಗಿತ್ತು. ಅದನ್ನು AGM 142 ಪೊಪೊಯೆ ಕ್ಷಿಪಣಿ ಅಂತಲೂ ಕರೆಯಲಾಗುತ್ತದೆ. ಇವೆರಡು ಶಸ್ತ್ರಾಸ್ತ್ರಗಳ ಸಹಾಯದಿಂದ ಭಾರತೀಯ ವಾಯು ಸೇನೆಯು ಗುರಿಯನ್ನು ಅಷ್ಟು ನಿಖರವಾಗಿ ಮುಗಿಸಲು ಸಾಧ್ಯವಾಗಿದೆ.

ಬಾಲಕೋಟ್ ಎಲ್ಲಿದೆ? ಲಾಡೆನ್ ಅಡಗುತಾಣದಲ್ಲೇ ಜೆಇಎಂ ಉಗ್ರರು?ಬಾಲಕೋಟ್ ಎಲ್ಲಿದೆ? ಲಾಡೆನ್ ಅಡಗುತಾಣದಲ್ಲೇ ಜೆಇಎಂ ಉಗ್ರರು?

ಆಗಸದಿಂದ ನೆಲಕ್ಕೆ ಗುರಿ ಮಾಡಬಹುದು

ಆಗಸದಿಂದ ನೆಲಕ್ಕೆ ಗುರಿ ಮಾಡಬಹುದು

ಇಸ್ರೇಲಿ ನಿರ್ಮಿತ ಮಧ್ಯಮ ದೂರದ ಸಾಂಪ್ರದಾಯಿಕ ಕ್ಷಿಪಣಿಯನ್ನು ತೊಂಬತ್ತು ಕಿ.ಮೀ. ದೂರದಿಂದ ಉಡಾಯಿಸಬಹುದು. ಗುರಿ ತಲುಪುವ ಸಲುವಾಗಿ ವಿಮಾನವು ಉದ್ದೋಉದ್ದಕ್ಕೆ ಗುರಿಯ ಕಡೆಗೆ ಮುಖ ಮಾಡಿ ಇರಬೇಕು ಅಂತಲೂ ಇಲ್ಲ. SPICE (ಸ್ಮಾರ್ಟ್ ಪ್ರಿಸೈಸ್ ಇಂಪ್ಯಾಕ್ಟ್ ಅಂಡ್ ಕಾಸ್ಟ್ ಎಫೆಕ್ಟಿವ್ ಗೈಡನ್ಸ್ ಕಿಟ್)-2000 ಇದು ಮುಂಚೂಣಿಯ ಮತ್ತು ಕೊನೆಯ ಸಲಕರಣೆ. ಪೊಪೆಯೆ ಕ್ಷಿಪಣಿಯಿಂದ ಇಸ್ರೇಲ್ ಇದನ್ನು ರೂಪಿಸಿದೆ. ಅದು ಎರಡು ಸಾವಿರ ಪೌಂಡ್ ತೂಕದ ಎಂಕೆ-84 ಅನಿರ್ದೇಶಿತ ಬಾಂಬ್ ಮೇಲಿದೆ.

ಈ ಕಾರಣಕ್ಕೆ ಸ್ಮಾರ್ಟ್ ನಿರ್ದೇಶಿತ ಆಗಸದಿಂದ ನೆಲಕ್ಕೆ ಗುರಿ ಮಾಡಬಹುದು. ಅರವತ್ತು ಕಿ.ಮೀ. ದೂರದಿಂದ ಇದನ್ನು ಬಳಸಬಹುದು.

ಮಿರಾಜ್ 2000 ಯುದ್ಧ ವಿಮಾನದ ಬಗ್ಗೆ ಒಂದಿಷ್ಟು ಮಾಹಿತಿಮಿರಾಜ್ 2000 ಯುದ್ಧ ವಿಮಾನದ ಬಗ್ಗೆ ಒಂದಿಷ್ಟು ಮಾಹಿತಿ

ಆಗಸದಲ್ಲೇ ಇಂಧನ ತುಂಬುವ ವಿಮಾನ

ಆಗಸದಲ್ಲೇ ಇಂಧನ ತುಂಬುವ ವಿಮಾನ

ಇದು ಹೇಗೆ ಅಂದರೆ ಇದರ ನೇವಿಗೇಷನ್ ಸಿಸ್ಟಮ್ ಮೂಲಕ ತಾನು ತಲುಪಬೇಕಾದ ಗುರಿಯನ್ನು ಆಟೋಮೆಟಿಕ್ ಆಗಿ ಸೇರುತ್ತದೆ. ಅನ್ ನೇಮ್ಡ್ ಏರಿಯಲ್ ವೆಹಿಕಲ್ (ಯುಎವಿ) ದ ಹೆರಾನ್ ಕೂಡ ಗುರಿಯ ಮೇಲೆ ನಿಗಾ ವಹಿಸುತ್ತದೆ, ಮೌಲ್ಯಮಾಪನ ಮಾಡುತ್ತದೆ. ಈ ಹೆರಾನ್ ನಿಂದ ದಾಳಿಗೊಳಗಾದ ಪ್ರದೇಶದ ಭಾವಚಿತ್ರಗಳನ್ನು ತೆಗೆಯಲಾಗುತ್ತದೆ. ಆ ನಂತರ ಎಷ್ಟು ಹಾನಿಯಾಗಿದೆ ಎಂದು ಮೌಲ್ಯಮಾಪನ ಮಾಡಲಾಗುತ್ತದೆ. ಆದರೆ ಎಷ್ಟು ಹಾನಿ ಮಾಡಲಾಗಿದೆ ಎಂಬ ಮಾಹಿತಿಯನ್ನು ಭಾರತೀಯ ವಾಯುಸೇನೆಯಿಂದ ಹಂಚಿಕೊಂಡಿಲ್ಲ. ಗುರಿಯನ್ನು ಮುಗಿಸಿ, ವಾಪಸ್ ಬರುವಾಗ ಅಗತ್ಯ ಬಿದ್ದರೆ ಇರಲಿ ಎಂಬ ಕಾರಣಕ್ಕೆ ಆಗಸದಲ್ಲೇ ಇಂಧನ ತುಂಬಿಸುವ ಎರಡು IL-78 ಟ್ಯಾಂಕರ್ ಗಳನ್ನು ಕಾರ್ಯಾಚರಣೆಯಲ್ಲಿ ಬಳಸಲಾಗಿದೆ. ಕಾರ್ಯಾಚರಣೆ ಪೂರ್ಣ ಮಾಡಿದ ಮೇಲೆ ವಿವಿಧ ನೆಲೆಗಳಿಗೆ ಹಿಂತಿರುಗುವಾಗ ಮಿರಾಜ್ 2000 ಹಾಗೂ ಸುಖೋಯ್ Su 30ಗೆ ಅಗತ್ಯ ಬೀಳಬಹುದು ಎಂದು ಇಂಥ ವ್ಯವಸ್ಥೆ ಮಾಡಲಾಗಿತ್ತು.

English summary
The IAF used its finest pilots, best aircraft and most modern weapons for the precision targeting air strike that hit the Jaish-e-Mohammad terror camp at Balakot. The Indian Express has learnt that the first munition to hit the Balakot camp at Jabha Top was at around 3.45 am and weapons continued to rain down on the hill-top for another eight minutes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X