ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರ ಅಪರೂಪಕ್ಕೆ ಈ ರೀತಿ ಕಾಣುತ್ತದೆ, ಇಲ್ಲಿದೆ ನೋಡಿ ವಿಧಗಳು..

|
Google Oneindia Kannada News

"ಬ್ಲಡ್ ಮೈಕ್ರೋ ಮೂನ್" ಎಂಬುವುದು ಬಹಳ ಅಪರೂಪದ, ಶತಮಾನದ ಅತ್ಯಂತ ದೀಘ್ರಾವಧಿಯ ಚಂದ್ರಗ್ರಹಣವಾಗಿದೆ. 580 ವರ್ಷಗಳ ನಂತರವು ಈ ದೀರ್ಘಾವಧಿಯ ಚಂದ್ರಗ್ರಹಣ ಸಂಭವಿಸಲಿದೆ. ನಾಸಾ ಪ್ರಕಾರ ಶುಕ್ರವಾರ, ನವೆಂಬರ್ 19 ರ ಬೆಳಿಗ್ಗೆ, ಈ ಚಂದ್ರಗ್ರಹಣವು ಆಗಲಿದೆ. ಶೇಕಡ 97 ರಷ್ಟು ಸಂಪೂರ್ಣ ಚಂದ್ರಗ್ರಹಣ ಆಗಲಿದೆ.

ಅಂದರೆ ಚಂದ್ರನ ಮೇಲ್ಮೈ ಬಹುತೇಕ ಭೂಮಿಯ ನೆರಳಿನಲ್ಲಿ ಮುಚ್ಚಿಹೋಗಲಿದೆ. ನವೆಂಬರ್ ಹುಣ್ಣಿಮೆಯಂದು ಶುಕ್ರವಾರ, ನವೆಂಬರ್ 19 ರಂದು ಭಾರತದಲ್ಲಿ 11.30 ರಿಂದ 5.33 ಕ್ಕೆ ಚಂದ್ರಗ್ರಹಣ ಆಗಲಿದೆ. ಈ ಸಂದರ್ಭದಲ್ಲಿ ಚಂದ್ರನು ಬಹಳ ದೊಡ್ಡದಾಗಿ ಕಾಣಲಿದೆ. ಸೂರ್ಯ, ಭೂಮಿ ಮತ್ತು ಚಂದ್ರರು ಪ್ರತಿ ವರ್ಷವೂ ಆಗಾಗ ಒಂದಾಗುತ್ತವೆ. ಆದರೆ ಈ ಶುಕ್ರವಾರದ ಚಂದ್ರಗ್ರಹಣವು ಕೆಲವು ಕಾರಣಗಳಿಗಾಗಿ ಅಪರೂಪವಾಗಿದೆ. ಮೊದಲನೆಯದಾಗಿ ಇದರ ಸಮಯ. ಈ ಚಂದ್ರಗ್ರಹಣವು ಶುಕ್ರವಾರದಂದು ಸುಮಾರು 6.02 ಮತ್ತು 12.30 ಯುಟಿಸಿ (ಭಾರತೀಯ ಸಮಯ 11.30 ರಿಂದ 5.33) ವರೆಗೆ ಇರುತ್ತದೆ. ಇದು ಶತಮಾನಗಳ ಸುದೀರ್ಘ ಚಂದ್ರಗ್ರಹಣಗಳಲ್ಲಿ ಒಂದಾಗಿದೆ.

'ಬ್ಲಡ್ ಮೈಕ್ರೋ ಮೂನ್': ಈ ಚಂದ್ರಗ್ರಹಣ ಏಕೆ ಅಪರೂಪ?'ಬ್ಲಡ್ ಮೈಕ್ರೋ ಮೂನ್': ಈ ಚಂದ್ರಗ್ರಹಣ ಏಕೆ ಅಪರೂಪ?

ಇನ್ನು ಇದು ಭೂಮಿಯಿಂದ ಅತ್ಯಂತ ದೂರದಲ್ಲಿದ್ದು, ಈ ಗ್ರಹಣ ಸಂದರ್ಭದಲ್ಲಿ "ಮೈಕ್ರೋಮೂನ್" ಆಗಲಿದೆ. ಅಷ್ಟು ದೂರ ಅಂದರೆ ಕಡಿಮೆ ಗುರುತ್ವಾಕರ್ಷಣೆ ಇರುತ್ತದೆ. ಇದರ ಪರಿಣಾಮವಾಗಿ ಚಂದ್ರನು ನಿಧಾನವಾಗಿ ಚಲಿಸುತ್ತದೆ ಹಾಗೂ ಭೂಮಿಯ ನೆರಳಿನ ಮೂಲಕ ಹೆಚ್ಚು ದೀಘ್ರವಾಗಿ ಸಾಗುತ್ತದೆ. ಇದು ಸಾಮಾನ್ಯವಾಗಿ ತಿಳಿದಿರುವ "ಸೂಪರ್‌ಮೂನ್" ವಿದ್ಯಮಾನಗಳಿಗೆ ವಿರುದ್ಧವಾಗಿದೆ. ಮುಂಬರುವ ತಿಂಗಳುಗಳಲ್ಲಿ, ವರ್ಷಗಳಲ್ಲಿ ಕೆಲವು ಅಪರೂಪದ ಚಂದ್ರಗಳು ಇಲ್ಲಿವೆ..

 ಸೂಪರ್ ಮೂನ್

ಸೂಪರ್ ಮೂನ್

"ಸೂಪರ್‌ಮೂನ್" ಸಾಮಾನ್ಯವಾಗಿ ರಾತ್ರಿ ಆಕಾಶದಲ್ಲಿ ಕಾಣುವ ಸಾಮಾನ್ಯ ಚಂದ್ರನಿಗಿಂತ ದೊಡ್ಡದಾಗಿ ನಮಗೆ ಗೋಚರಿಸುತ್ತದೆ. ಸೂಪರ್ ಮೂನ್ ಭೂಮಿಗೆ ಸ್ವಲ್ಪ ಹತ್ತಿರವಾಗಿರುವುದರಿಂದ ದೊಡ್ಡದಾಗಿ ಕಾಣುತ್ತದೆ. "ಸೂಪರ್‌ಮೂನ್" ಎಂಬುದು ಖಗೋಳಶಾಸ್ತ್ರಜ್ಞರು ಪೆರಿಜಿಯನ್ ಹುಣ್ಣಿಮೆ ಎಂದು ಕರೆಯುವ ಅಡ್ಡಹೆಸರು ಆಗಿದೆ. ಈ ಚಂದ್ರನು ಭೂಮಿಯ ಸುತ್ತ ತನ್ನ ಕಕ್ಷೆಯಲ್ಲಿ ಹತ್ತಿರವಾಗಿರುತ್ತದೆ.

 ಬ್ಲಡ್ ಮೂನ್

ಬ್ಲಡ್ ಮೂನ್

"ಬ್ಲಡ್ ಮೂನ್" (ರಕ್ತ ಚಂದ್ರ) ಎಂದರೆ ಈ ಚಂದ್ರವು ಕೆಂಪಾಗಿ ಇರುವುದು ಆಗಿದೆ. ಈ ರಕ್ತ ಚಂದ್ರವು ಸಂಪೂರ್ಣ ಚಂದ್ರಗ್ರಹಣದ ಸಮಯದಲ್ಲಿ ಸಂಭವಿಸುತ್ತದೆ. ಸಂಪೂರ್ಣ ಚಂದ್ರಗ್ರಹಣದ ಸಮಯದಲ್ಲಿ, ಭೂಮಿಯು ಚಂದ್ರ ಮತ್ತು ಸೂರ್ಯನ ನಡುವೆ ಇರುತ್ತದೆ, ಇದು ಸೂರ್ಯನ ಬೆಳಕಿನಿಂದ ಚಂದ್ರನನ್ನು ಮರೆ ಮಾಡುತ್ತದೆ. ಈ ಕಾರಣದಿಂದಾಗಿ ಈ ಸಂದರ್ಭದಲ್ಲಿ ಚಂದ್ರ ಕೆಂಪಾಗಿ ಕಾಣು‌ತ್ತದೆ. ಈ ಸಂದರ್ಭದಲ್ಲಿ ಚಂದ್ರನ ಮೇಲೆ ಬೀಳುವುದು ಭೂಮಿಯ ವಾತಾವರಣದ ಬೆಳಕು ಮಾತ್ರ. ಭೂಮಿಯಿಂದ ಗಾಳಿಯ ಅಣುಗಳು ಹೆಚ್ಚಿನ ನೀಲಿ ಬೆಳಕನ್ನು ಚದುರಿಸುತ್ತದೆ. ಉಳಿದ ಬೆಳಕು ಚಂದ್ರನ ಮೇಲ್ಮೈಗೆ ಕೆಂಪಾಗಿ ಪ್ರತಿಫಲಿಸುತ್ತದೆ. ಇದರಿಂದಾಗಿ ರಾತ್ರಿ ಆಕಾಶದಲ್ಲಿ ಚಂದ್ರನು ಕೆಂಪು ಬಣ್ಣವಾಗಿ ಕಾಣುತ್ತದೆ. ಇನ್ನು ಸಾಮಾನ್ಯವಾಗಿ ಬ್ಲಡ್‌ ಮೂನ್‌ ಎಂಬ ಹೆಸರನ್ನು ಆಕಾಶದಲ್ಲಿ ಧೂಳು, ಹೊಗೆ ಅಥವಾ ಮಬ್ಬುಗಳಿಂದ ಕೆಂಪು ಬಣ್ಣದಲ್ಲಿ ಕಾಣುವ ಚಂದ್ರನನ್ನು ಕರೆಯಲು ಬಳಸಲಾಗುತ್ತದೆ. ಭೂಮಿಯಲ್ಲಿ ಎಲೆಗಳು ಕೆಂಪು ಬಣ್ಣಕ್ಕೆ ತಿರುಗಿದ ಸಂದರ್ಭದಲ್ಲಿ ಈ ಸಂಪೂರ್ಣ ಚಂದ್ರನು ಕಾಣುತ್ತದೆ.

ಚಂದ್ರ ಗ್ರಹಣ ವೇಳೆ ಏನು ಮಾಡಬಾರದು ಎಂದು ಪುರಾಣಗಳು ಹೇಳುತ್ತವೆಚಂದ್ರ ಗ್ರಹಣ ವೇಳೆ ಏನು ಮಾಡಬಾರದು ಎಂದು ಪುರಾಣಗಳು ಹೇಳುತ್ತವೆ

 ಬ್ಲೂ ಮೂನ್‌

ಬ್ಲೂ ಮೂನ್‌

ಈ ನೀಲಿ ಚಂದ್ರ ಅಥವಾ ಬ್ಲೂ ಮೂನ್‌ ಬಹಳ ಅಪರೂಪವಾಗಿ ಕಾಣುವ ಚಂದ್ರ ಆಗಿದೆ. ಆದರೆ ಇಲ್ಲಿ ನೀವು ಗಮನಿಸಬೇಕಾದದ್ದು ನೀಲಿ ಚಂದ್ರ ನೀಲಿ ಬಣ್ಣದಲ್ಲಿ ಇರುವುದಿಲ್ಲ ಎಂಬುವುದು. ವಾಸ್ತವವಾಗಿ ನೀಲಿ ಚಂದ್ರ ಸಾಮಾನ್ಯವಾಗಿ, ಮಾಸಿಕ ಹುಣ್ಣಿಮೆಗಿಂತ ಭಿನ್ನವಾಗಿ ಕಾಣುವುದಿಲ್ಲ. ಆದರೆ ನೀಲಿ ಚಂದ್ರ ವಿಶೇಷವಾದುದು. ಏಕೆಂದರೆ, ಇದು ನಾಲ್ಕು ಹುಣ್ಣಿಮೆಗಳನ್ನು ಹೊಂದಿರುವ ಋತುವಿನಲ್ಲಿ ಹೆಚ್ಚುವರಿ ಚಂದ್ರನಾಗಿರುತ್ತದೆ. ಇದು ಸಾಮಾನ್ಯವಾಗಿ ಪ್ರತಿ ಎರಡೂವರೆ ವರ್ಷಗಳಿಗೊಮ್ಮೆ ಸಂಭವಿಸುತ್ತದೆ. 1940 ರ ದಶಕದಿಂದಲೂ, "ಬ್ಲೂ ಮೂನ್" ಎಂಬ ಪದವನ್ನು ತಿಂಗಳಲ್ಲಿ ಎರಡನೇ ಹುಣ್ಣಿಮೆಗೆ ಸಹ ಬಳಸಲಾಗುತ್ತದೆ. ಇದು ಸಾಮಾನ್ಯವಾಗಿ ಪ್ರತಿ ಎರಡೂವರೆ ವರ್ಷಗಳಿಗೊಮ್ಮೆ ಸಂಭವಿಸುತ್ತದೆ.

 ಹಾರ್ವೆಸ್ಟ್‌ ಮೂನ್‌

ಹಾರ್ವೆಸ್ಟ್‌ ಮೂನ್‌

"ಹಾರ್ವೆಸ್ಟ್‌ ಮೂನ್‌" (ಸುಗ್ಗಿ ಚಂದ್ರ) ಎಂದು ಶರತ್ಕಾಲದ ಆರಂಭದ ಸಮೀಪದಲ್ಲಿ ಸಂಭವಿಸುವ ಪೂರ್ಣ, ಪ್ರಕಾಶಮಾನವಾದ ಚಂದ್ರನನ್ನು ಕರೆಯಲಾಗುತ್ತದೆ. ರೈತರು ತಮ್ಮ ಬೆಳೆಗಳನ್ನು ತಡರಾತ್ರಿಯವರೆಗೆ ಕೊಯ್ಲು ಮಾಡಲು ಈ ಚಂದ್ರನ ಬೆಳಕನ್ನು ಅವಲಂಬಿಸಿದ್ದ ಸಂದರ್ಭದಿಂದ ಈ ಹೆಸರು ಬಂದಿದೆ. ದೇಶದಲ್ಲಿ ವಿದ್ಯುತ್‌ ಬಳಕೆ ಆರಂಭವಾಗುವ ಮುನ್ನವೇ ಈ ಹೆಸರು ಬಂದಿದೆ. ಕೊಯ್ಲುಗಳು ಹೆಚ್ಚಾಗಿ ಇದ್ದ ಸಂದರ್ಭದಲ್ಲಿ ಚಂದ್ರನ ಬೆಳಕು ವಿಶೇಷವಾಗಿ ಮುಖ್ಯವಾಗಿದೆ.

 ಪಿಂಕ್‌ ಮೂನ್‌

ಪಿಂಕ್‌ ಮೂನ್‌

"ಪಿಂಕ್‌ ಮೂನ್‌" (ಗುಲಾಬಿ ಚಂದ್ರ) ಎಂಬುವುದು ಏಪ್ರಿಲ್‌ನಲ್ಲಿ ಸಂಭವಿಸುವುದು ಹುಣ್ಣಿಮೆಯಾಗಿದೆ. ಈ ವಸಂತಕಾಲದ ಆರಂಭದಲ್ಲಿ ಅರಳುವ ಹಾಗೂ ಯುನೈಟೆಡ್‌ ಸ್ಟೇಟ್ಸ್‌ ಮತ್ತು ಕೆನಡಾದಾದ್ಯಂತ ಕಾಣಿಸಿಕೊಳ್ಳುವ ವೈಲ್ಡ್ ಗ್ರೌಂಡ್ ಫ್ಲೋಕ್ಸ್ ಎಂದು ಕರೆಯಲ್ಪಡುವ ಹೂವುಗಳ ಹೆಸರನ್ನು ಇಡಲಾಗಿದೆ. ನಾವು ನಿಜವಾಗಿ ಹೇಳಬೇಕಾದರೆ ಈ ಚಂದ್ರನು ಗುಲಾಬಿ ಬಣ್ಣದಲ್ಲಿ ಕಾಣುವುದಿಲ್ಲ.

 ಸ್ಟ್ರಾಬೆರಿ ಮೂನ್‌

ಸ್ಟ್ರಾಬೆರಿ ಮೂನ್‌

"ಸ್ಟ್ರಾಬೆರಿ ಮೂನ್‌" ಅಥವಾ ಸ್ಟ್ರಾಬೆರಿ ಚಂದ್ರ ಜೂನ್‌ನಲ್ಲು ಹುಣ್ಣಿಮೆ ಸಂದರ್ಭದಲ್ಲಿ ಕಾಣುವ ಚಂದ್ರ ಆಗಿದೆ. ಇದು ಸ್ಟ್ರಾಬೆರಿಯ ಕೆಂಪು ಬಣ್ಣದಲ್ಲಿ ಇರುವುದಿಲ್ಲ. ಬದಲಾಗಿ ಈ ಸಂದರ್ಭದಲ್ಲಿ ಚಂದ್ರನು ಸಾಮಾನ್ಯವಾಗಿ ಗುಲಾಬಿ ಅಥವಾ ಕೆಂಪು ಬಣ್ಣದಲ್ಲಿ ಇರುತ್ತದೆ.

(ಒನ್‌ಇಂಡಿಯಾ ಸುದ್ದಿ)

English summary
What are the rare types of Moon to watch out for and what they mean?.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X