ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Summer Health Tips: ಬೇಸಿಗೆಯಲ್ಲಿ ಉತ್ತಮ ಆರೋಗ್ಯದ ಬಗ್ಗೆ ಮುಂಜಾಗ್ರತಾ ಕ್ರಮಗಳೇನು?

|
Google Oneindia Kannada News

ಬೇಸಿಗೆಯ ಬಿಸಿಲು ಇನ್ನಿಲ್ಲದಂತೆ ಕಾಡುತ್ತಿದೆ. ಸದಾ ನೆರಳು ಬಯಸುವ ಪರಿಸ್ಥಿತಿ ಎದುರಾಗಿದೆ. ಫ್ಯಾನ್ ಕೆಳಗೆ, ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಕೆಲಸ ಮಾಡುವವರು ಹೊರಗೆ ಬಂದಾಗ ಪರದಾಡಿದರೆ, ಬಿಸಿಲಲ್ಲೇ ಕೆಲಸ ಮಾಡುವವರು ಶಿವ ಶಿವ ಎನ್ನುವಂತಾಗಿದೆ.

ಕಳೆದ ಎರಡು ವರ್ಷಗಳ ಬೇಸಿಗೆಯನ್ನು ನಾವು ಕೊರೊನಾ ಸೋಂಕಿನ ಭಯದಲ್ಲಿ ಕಳೆದಿದ್ದೇವೆ. ಮನೆಯಿಂದ ಹೊರಗೆ ಬಂದು ಕೆಲಸ ಮಾಡಿದ್ದು ಕಡಿಮೆಯೇ ಹಲವು ಸಂಕಷ್ಟದ ನಡುವೆ ಮನೆಯಲ್ಲಿದ್ದುಕೊಂಡೇ ಬೇಸಿಗೆಯನ್ನು ಕಳೆದಿದ್ದೇವೆ.

ಬೇಸಿಗೆಯಲ್ಲಿ ಸೌತೆಕಾಯಿ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿಬೇಸಿಗೆಯಲ್ಲಿ ಸೌತೆಕಾಯಿ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ

 ನಿರ್ಲಕ್ಷ್ಯ ಮಾಡದೆ ಎಚ್ಚರಿಕೆ ವಹಿಸಿ

ನಿರ್ಲಕ್ಷ್ಯ ಮಾಡದೆ ಎಚ್ಚರಿಕೆ ವಹಿಸಿ

ಕೊರೊನಾ ಸೋಂಕು ಕಡಿಮೆಯಾದ ಕಾರಣ ಜನಜೀವನ ಯಥಾಸ್ಥಿತಿಗೆ ಮರಳಿದೆ. ಜನ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಮನೆಯಿಂದ ಹೊರಬಂದು ದುಡಿಮೆಯಲ್ಲಿ ತೊಡಗಿಕೊಂಡಿದ್ದಾರೆ. ಎಂದಿನಂತೆ ಜಾತ್ರೆ, ಹಬ್ಬ, ಶುಭ ಸಮಾರಂಭಗಳು ನಡೆಯುತ್ತಿವೆ. ಜನ ಮನೆಯಿಂದ ಹೊರ ಬರುತ್ತಿದ್ದಾರೆ. ಎಂದಿನಂತೆ ಜನಜಂಗುಳಿ ಶುರುವಾಗಿದೆ.

ಭೂಮಿ ಮೇಲೆ ಕಾಣಿಸಿಕೊಂಡ ರೋಗಗಳು ಯಾವುದೂ ಹೋಗಿಲ್ಲ. ಅವು ನಿಯಂತ್ರಣಕ್ಕೆ ಬಂದಿವೆ. ಹಾಗೆಯೇ ಕೊರೊನಾ ಸೋಂಕು ಕಡಿಮೆಯಾಯಿತು ಎಂದು ನಿರ್ಲಕ್ಷ್ಯ ಮಾಡದೆ ಎಚ್ಚರಿಕೆ ವಹಿಸಬೇಕಾಗಿದೆ. ಮಾಸ್ಕ್ ಧರಿಸುವುದನ್ನು ಮರೆಯಬಾರದು.

 ನಿರ್ಲಕ್ಷ್ಯ ಮಾಡದೆ ಎಚ್ಚರಿಕೆ ವಹಿಸಿ

ನಿರ್ಲಕ್ಷ್ಯ ಮಾಡದೆ ಎಚ್ಚರಿಕೆ ವಹಿಸಿ

ಕೊರೊನಾ ಸೋಂಕು ಕಡಿಮೆಯಾದ ಕಾರಣ ಜನಜೀವನ ಯಥಾಸ್ಥಿತಿಗೆ ಮರಳಿದೆ. ಜನ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಮನೆಯಿಂದ ಹೊರಬಂದು ದುಡಿಮೆಯಲ್ಲಿ ತೊಡಗಿಕೊಂಡಿದ್ದಾರೆ. ಎಂದಿನಂತೆ ಜಾತ್ರೆ, ಹಬ್ಬ, ಶುಭ ಸಮಾರಂಭಗಳು ನಡೆಯುತ್ತಿವೆ. ಜನ ಮನೆಯಿಂದ ಹೊರ ಬರುತ್ತಿದ್ದಾರೆ. ಎಂದಿನಂತೆ ಜನಜಂಗುಳಿ ಶುರುವಾಗಿದೆ.

ಭೂಮಿ ಮೇಲೆ ಕಾಣಿಸಿಕೊಂಡ ರೋಗಗಳು ಯಾವುದೂ ಹೋಗಿಲ್ಲ. ಅವು ನಿಯಂತ್ರಣಕ್ಕೆ ಬಂದಿವೆ. ಹಾಗೆಯೇ ಕೊರೊನಾ ಸೋಂಕು ಕಡಿಮೆಯಾಯಿತು ಎಂದು ನಿರ್ಲಕ್ಷ್ಯ ಮಾಡದೆ ಎಚ್ಚರಿಕೆ ವಹಿಸಬೇಕಾಗಿದೆ. ಮಾಸ್ಕ್ ಧರಿಸುವುದನ್ನು ಮರೆಯಬಾರದು.

 ಸರಳ ಕ್ರಮಗಳಿಂದ ಅಪಾಯ ತಪ್ಪಿಸಿ

ಸರಳ ಕ್ರಮಗಳಿಂದ ಅಪಾಯ ತಪ್ಪಿಸಿ

ಕೊರೊನಾ ಸೋಂಕು ಕಡಿಮೆಯಾದರೂ ಸಾಮಾನ್ಯವಾಗಿ ಬೇಸಿಗೆಯಲ್ಲಿ ಕಾಣಿಸಿಕೊಳ್ಳುವ ಸೋಂಕುಗಳು ನಮ್ಮನ್ನು ಬಾಧಿಸಿದರೂ ಬಾಧಿಸಬಹುದು ಹೀಗಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದರೊಂದಿಗೆ ಬೇಸಿಗೆಯಲ್ಲಿ ಬಿಸಿಲಿನಿಂದ ಆಗಬಹುದಾದ ಸಮಸ್ಯೆಗಳನ್ನು ನಿಭಾಯಿಸಲು ಕೆಲವೊಂದು ಸರಳ ಕ್ರಮಗಳನ್ನು ನಾವು ನಮ್ಮ ನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಬಹು ಅಗತ್ಯವಾಗಿದೆ.

ಬೇಸಿಗೆಯಲ್ಲಿ ವೈಯಕ್ತಿಕ ಸ್ವಚ್ಛತೆ ಜತೆಗೆ ನಮ್ಮ ಸುತ್ತಮುತ್ತಲ ಪರಿಸರ ಸ್ವಚ್ಛವಾಗಿರುವಂತೆ ನೋಡಿಕೊಳ್ಳುವುದು ಬಹುಮುಖ್ಯವಾಗಿದೆ. ನಗರ ಪ್ರದೇಶಗಳಲ್ಲಿ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯದೆ ಅಲ್ಲಲ್ಲಿ ಕೊಳಚೆ ನೀರು ನಿಂತು ಅಲ್ಲಿ ಸೊಳ್ಳೆಗಳ ಉತ್ಪಾದನೆಗೆ ಕಾರಣವಾಗಬಹುದು. ಈ ಸೊಳ್ಳೆಗಳು ಸೋಂಕು ಹರಡುವ ಮೂಲಕ ನಮ್ಮ ಆರೋಗ್ಯಕ್ಕೆ ಮಾರಕವಾಗಬಹುದು. ಆದ್ದರಿಂದ ಮನೆ ಸುತ್ತಮುತ್ತ ತ್ಯಾಜ್ಯ ನೀರು ನಿಲ್ಲದಂತೆ ನೋಡಿಕೊಳ್ಳುವ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡಬೇಕು.

 ಕುಡಿಯುವ ನೀರು ಸದಾ ಜತೆಗಿರಲಿ

ಕುಡಿಯುವ ನೀರು ಸದಾ ಜತೆಗಿರಲಿ

ಬೆಳಗ್ಗಿನಿಂದಲೇ ಬಿಸಿಲಿನ ಧಗೆ ಸುಸ್ತು ಹೊಡೆಸಬಹುದು. ಅದರಲ್ಲೂ ಮಧ್ಯಾಹ್ನ ಮೈಸುಡುವ ಬಿಸಿಲಿಗೆ ಸಂಚರಿಸುವುದಂತು ಹಿಂಸೆಯೇ. ಆದರೂ ನಾವು ಸುಮ್ಮನಿರುವುದಕ್ಕೆ ಆಗಲ್ಲ. ತಮ್ಮ ದೈನಂದಿನ ಕೆಲಸಗಳನ್ನು ಮಾಡಲೇ ಬೇಕಾಗಿದೆ. ಆದ್ದರಿಂದ ಒಂದಷ್ಟು ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಬೇಸಿಗೆಯನ್ನು ಕಳೆಯಲು ಮುಂದಾಗಬೇಕಿದೆ.

ಮನೆಯಿಂದ ಹೊರಗೆ ಓಡಾಡಿದಾಗ ಬಿಸಿಲಿನ ತಾಪಕ್ಕೆ ಸುಸ್ತು, ನೀರಡಿಕೆ, ತಲೆಸುತ್ತು ಮೊದಲಾದವುಗಳು ಬಾಧಿಸಬಹುದು, ಜತೆಗೆ ತಲೆನೋವು ಕಾಡುವ ಸಾಧ್ಯತೆಯೂ ಹೆಚ್ಚಿರುತ್ತದೆ. ಆದ್ದರಿಂದ ಮನೆಯಿಂದ ಹೊರಗೆ ಹೋಗುವಾಗ ಆದಷ್ಟು ತೆಳು ಬಣ್ಣದ ಸಡಿಲವಾದ ಹತ್ತಿಯ ಬಟ್ಟೆ ಧರಿಸುವುದನ್ನು ರೂಢಿಸಿಕೊಳ್ಳಬೇಕು. ಕೈಗೆಟುಕುವಂತೆ ಕುಡಿಯುವ ನೀರನ್ನು ಇಟ್ಟುಕೊಳ್ಳಬೇಕು. ಆಗಾಗ್ಗೆ ಧಾರಾಳವಾಗಿ ಉಪ್ಪು, ಸಕ್ಕರೆ ಮಿಶ್ರಿತ ನೀರು, ಹಣ್ಣಿನ ರಸ ಪಾನಕ ಸೇವಿಸಬೇಕು.

 ಮಸಾಲೆ ರಹಿತ ಆಹಾರಕ್ಕೆ ಆದ್ಯತೆ ಇರಲಿ

ಮಸಾಲೆ ರಹಿತ ಆಹಾರಕ್ಕೆ ಆದ್ಯತೆ ಇರಲಿ

ಕಾಫಿ, ಟೀ ಸೇವನೆ ಆದಷ್ಟು ಕಡಿಮೆ ಮಾಡಬೇಕು. ಮಾರುಕಟ್ಟೆಯಲ್ಲಿ ಸಿಗುವ ಕಾರ್ಬೋನೇಟೆಡ್ ಪಾನೀಯಗಳನ್ನು ತ್ಯಜಿಸಿ ಆಗಾಗ್ಗೆ ಶುದ್ಧವಾದ ನೀರು, ಮಜ್ಜಿಗೆ, ಹಣ್ಣಿನ ಜ್ಯೂಸ್, ಎಳನೀರು ಕುಡಿಯಬೇಕು. ಬೆಚ್ಚಗಿನ ಮಸಾಲೆರಹಿತ ಶುದ್ದ ಆಹಾರ ಸೇವಿಸಬೇಕು. ಶೂ ಧರಿಸುವುದರಿಂದ ಕಾಲು ಬೆವರಿ ದುರ್ವಾಸನೆ ಬೀರಬಹುದು. ಆದ್ದರಿಂದ ಸಾಕ್ಸ್‌ಗಳನ್ನು ಒಗೆದು ಸ್ವಚ್ಛವಾಗಿಟ್ಟುಕೊಳ್ಳಬೇಕು, ಗಾಳಿಯಾಡುವಂತಹ ಪಾದರಕ್ಷೆ ಧರಿಸಿದರೆ ಉತ್ತಮ.

ಕೆಲವೊಮ್ಮೆ ಬಿಸಿಲಿಗೆ ದೇಹದ ಉಷ್ಣಾಂಶ ಹೆಚ್ಚಾಗಿ ಇದ್ದಕ್ಕಿದ್ದಂತೆ ತೊಂದರೆಯೂ ಕಾಣಿಸಬಹುದು. ಕೆಲವೊಮ್ಮೆ ಯಾರಾದರೂ ತೊದಲು ಮಾತು ಅಥವಾ ಅರ್ಥರಹಿತವಾಗಿ ಬಡಬಡಿಸಿದಲ್ಲಿ ಕೂಡಲೇ ಅಂತಹವರನ್ನು ನೆರಳಿನ ಪ್ರದೇಶಕ್ಕೆ ಕರೆದೊಯ್ದು ಕೆಳಗೆ ಮಲಗಿಸಿ ಕಾಲುಗಳನ್ನು ಮೇಲಕ್ಕೆ ಎತ್ತಬೇಕು. ಹಣೆ, ಕತ್ತು, ಪಾದ, ತೊಡೆಗಳನ್ನು ಒದ್ದೆ ಬಟ್ಟೆಯಿಂದ ಒರೆಸಬೇಕು. (ತಂಪಾದ ಅಥವಾ ಐಸ್ ನೀರನ್ನು ಒರೆಸಲು ಬಳಸಬಾರದು) ಉಪ್ಪು, ಸಕ್ಕರೆ ಬೆರೆತ ನೀರನ್ನು ಕುಡಿಸಬೇಕು. ಬಳಿಕ ವೈದ್ಯರ ಬಳಿಗೆ ಕರೆದೊಯ್ಯಬೇಕು.

Recommended Video

ಸಂತೋಷ್ ಆತ್ಮಹತ್ಯೆ ಪ್ರಕರಣ: ಈಶ್ವರಪ್ಪ ರಾಜೀನಾಮೆ ಕೊಡ್ತಾರಾ? | Oneindia Kannada
 ಪ್ರಥಮ ಚಿಕಿತ್ಸೆ ನೀಡಲು ಮರೆಯದಿರಿ

ಪ್ರಥಮ ಚಿಕಿತ್ಸೆ ನೀಡಲು ಮರೆಯದಿರಿ

ಬಿಸಿಲಿನ ಆಘಾತಕ್ಕೊಳಗಾದ ವ್ಯಕ್ತಿಗೆ ಪ್ರಥಮ ಚಿಕಿತ್ಸೆಯಾಗಿ ಮೊದಲಿಗೆ ಬಟ್ಟೆ, ಪಾದರಕ್ಷೆ ಸಡಿಲಿಸಿ ತೆಗೆಯಬೇಕು. ತಣ್ಣಗಿನ ನೀರನ್ನು ವ್ಯಕ್ತಿಯ ಮೇಲೆ ಸಿಂಪಡಿಸಬೇಕು. ತಂಪಾದ ನೆರಳಿನ ಜಾಗಕ್ಕೆ ಸ್ಥಳಾಂತರಿಸಿ ಗಾಳಿ ಬೀಸಬೇಕು. ದೇಹವನ್ನು ಅತಿಯಾಗಿ ತಕ್ಷಣವೇ ತಂಪು ಮಾಡಬಾರದು. ಯಾವುದೇ ಔಷಧ ನೀಡಬಾರದು. ಪ್ರಜ್ಞೆ ಬಂದ ನಂತರ ನಿಧಾನವಾಗಿ ಶುದ್ಧವಾದ ನೀರನ್ನು ಸ್ಪಲ್ಪ ಸ್ವಲ್ಪವಾಗಿ ನೀಡುವ ಮೂಲಕ ಆರೈಕೆ ಮಾಡಬೇಕು.

ಬೇಸಿಗೆಯಲ್ಲಿ ಪ್ರವಾಸ ತೆರಳುವುದು, ಶುಭ ಸಮಾರಂಭ, ಇತರೆ ಕಾರ್ಯಕ್ರಮಗಳು, ಕೆಲಸದ ನಿಮಿತ್ತ ಪ್ರಯಾಣ ಹೀಗೆ ಹೋಗುವವರು ಅಗತ್ಯವಾಗಿ ತಮ್ಮೊಂದಿಗೆ ಕುಡಿಯುವ ನೀರನ್ನು ಕೊಂಡೊಯ್ಯುವುದನ್ನು ಮರೆಯಬಾರದು. ಬಿಸಿಲಿನಲ್ಲಿ ಮಕ್ಕಳು. ವಯಸ್ಸಾದವರು ನಡೆಯುವಾಗ ಕಪ್ಪು ಬಣ್ಣವಲ್ಲದ ಛತ್ರಿ ಬಳಸುವುದು ಒಳ್ಳೆಯದು.

ಸಿಕ್ಕ, ಸಿಕ್ಕಲ್ಲಿ ಆಹಾರ ಪದಾರ್ಥಗಳನ್ನು ಸೇವಿಸದೆ ಶುಚಿತ್ವಕ್ಕೆ ಒತ್ತು ನೀಡಬೇಕು. ಮನೆಗೆ ಸರಬರಾಜಾಗಾಗುವ ನೀರನ್ನು ನೇರವಾಗಿ ಉಪಯೋಗಿಸದೆ ಕುದಿಸಿ ಆರಿಸಿ ಮಣ್ಣಿನ ಮಡಕೆಯಲ್ಲಿ ಸಂಗ್ರಹಿಸಿಟ್ಟುಕೊಂಡು ಸೇವನೆ ಮಾಡುವುದನ್ನು ಅಭ್ಯಾಸ ಮಾಡಿದರೆ ಉತ್ತಮ.

English summary
In addition to personal cleaning during the summer, it is important to keep our surroundings clean.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X