ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಕೆಶಿಗೆ ಸಿಕ್ಕಿದ್ದು ಜಾಮೀನಷ್ಟೇ, ಕ್ರಿಮಿನಲ್ ಕೇಸುಗಳು ಇನ್ನೂ ವಿಚಾರಣೆಯಲ್ಲಿವೆ!

|
Google Oneindia Kannada News

ಮನಿ ಲಾಂಡ್ರಿಂಗ್ ಪ್ರಕರಣದಲ್ಲಿ ಸಿಲುಕಿರುವ ಕರ್ನಾಟಕದ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ಬುಧವಾರ (ಅಕ್ಟೋಬರ್ 23) ದಂದು ದೆಹಲಿ ಹೈಕೋರ್ಟಿನ ನ್ಯಾ. ಸುರೇಶ್ ಕುಮಾರ್ ಕೈಟ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಡಿಕೆಶಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದ್ದರೆ, ತನಿಖಾ ಸಂಸ್ಥೆ ತನ್ನ ಕಾನೂನು ಹೋರಾಟ ಮುಂದುವರೆಸಿದೆ.

ಕನಕಪುರ ತಾಲೂಕಿನ ದೊಡ್ಡ ಅಲಹಳ್ಳಿ ಗ್ರಾಮದ ಕೆಂಪೇಗೌಡ, ಗೌರಮ್ಮ ದಂಪತಿಯ ಮಗ ಡಿಕೆ ಶಿವಕುಮಾರ್ ಉದ್ಯಮಿ, ಸಮಾಜ ಸೇವಕ, ಶಿಕ್ಷಣ ಸಂಸ್ಥೆಗಳ ಪಾಲಕರಾಗಿ ಗುರುತಿಸಿಕೊಂಡಿದ್ದಾರೆ.

ಡಿಕೆ ಶಿವಕುಮಾರ್ ಬೆಂಬಿಡದ ಇ.ಡಿ: ಸುಪ್ರೀಂಕೋರ್ಟ್ಡಿಕೆ ಶಿವಕುಮಾರ್ ಬೆಂಬಿಡದ ಇ.ಡಿ: ಸುಪ್ರೀಂಕೋರ್ಟ್

ಅವರ ಪುತ್ರಿ 23 ವರ್ಷ ಐಶ್ವರ್ಯಾ ಕೂಡಾ ರಿಯಲ್ ಎಸ್ಟೇಟ್, ಕಲ್ಲು ಗಣಿಗಾರಿಕೆ ಸೇರಿದಂತೆ ವಿವಿಧ ಉದ್ಯಮಗಳಲ್ಲಿ ಹಣ ತೊಡಗಿಸಿದ್ದಾರೆ. ಇದರಿಂದ ಸಕತ್ ಆಗಿ ರಿಟರ್ನ್ಸ್ ಬಂದಿದ್ದು, ಐಶ್ವರ್ಯಾರನ್ನು ಕೋಟ್ಯಧಿಪತಿಯನ್ನಾಗಿಸಿದೆ. ಜೊತೆಗೆ ಇಡೀ ಕುಟುಂಬದಲ್ಲಿ ಲೆಕ್ಕವಿಲ್ಲದಷ್ಟು ಪರಸ್ಪರ ನಗದು ವ್ಯವಹಾರ, ಸಾಲ ಸೋಲ ವಹಿವಾಟು ನಡೆದಿದೆ.

ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಶತಕೋಟಿಗಳ ಒಡತಿ ಆಗಿದ್ದೇಗೆ?ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಶತಕೋಟಿಗಳ ಒಡತಿ ಆಗಿದ್ದೇಗೆ?

2017ರಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಡಿಕೆ ಶಿವಕುಮಾರ್ ಅವರ ಮನೆ, ಕಚೇರಿ ಮೇಲೆ ದಾಳಿ ನಡೆಸಿ ಮನಿ ಲಾಂಡ್ರಿಂಗ್ (Prevention of Money Laundering Act(PMLA) ಕೇಸು ದಾಖಲಿಸಿಕೊಂಡಿದ್ದರು. ಇದಕ್ಕೆ ಡಿಕೆ ಶಿವಕುಮಾರ್ ನೀಡಿದ ಪ್ರತಿಕ್ರಿಯೆ, ಡಿಕೆಶಿ ವಿರುದ್ಧ ದಾಖಲಾದ ಪ್ರಕರಣಗಳ ವಿವರ ಮುಂದಿದೆ..

300ಕ್ಕೂ ಅಧಿಕ ಆಸ್ತಿ ಬಗ್ಗೆ ತನಿಖೆಗೆ ಆಗ್ರಹ

300ಕ್ಕೂ ಅಧಿಕ ಆಸ್ತಿ ಬಗ್ಗೆ ತನಿಖೆಗೆ ಆಗ್ರಹ

ಡಿಕೆ ಶಿವಕುಮಾರ್ ಅವರು 300ಕ್ಕೂ ಅಧಿಕ ಆಸ್ತಿ ಹೊಂದಿದ್ದು, ಕ್ರಿಕೆಟ್‌ನಲ್ಲಿ ಹೇಗೆ ತ್ರಿಬಲ್ ಸೆಂಚುರಿ ಬಾರಿಸುತ್ತಾರೋ ಹಾಗೆ ಡಿಕೆ ಶಿವಕುಮಾರ್ ಅವರು ಆಸ್ತಿ ಗಳಿಕೆಯಲ್ಲಿ ತ್ರಿಬಲ್ ಸೆಂಚುರಿ ಬಾರಿಸಿದ್ದಾರೆ" ಎಂದು ಜಾರಿ ನಿರ್ದೇಶನಾಲಯ ಪರ ವಕೀಲ ಕೆ.ಎಂ ನಟರಾಜ್ ವಾದ ಮಂಡಿಸಿದ್ದರು.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿ ಪುರಸ್ಕರಿಸದಂತೆ, ನ್ಯಾ. ಸುರೇಶ್ ಕುಮಾರ್ ಕೈಟ್ ಅವರ ಏಕಸದಸ್ಯ ನ್ಯಾಯಪೀಠದ ಮುಂದೆ ಇಡಿ ಆಕ್ಷೇಪ ವ್ಯಕ್ತಪಡಿಸಿತ್ತು.

317 ಬ್ಯಾಂಕ್ ಖಾತೆ ಬಗ್ಗೆ ತನಿಖೆ

317 ಬ್ಯಾಂಕ್ ಖಾತೆ ಬಗ್ಗೆ ತನಿಖೆ

ಡಿಕೆ ಶಿವಕುಮಾರ್ ಅವರ ಮೇಲಿನ ಮನಿ ಲಾಂಡ್ರಿಂಗ್ ಪ್ರಕರಣದಲ್ಲಿ ಅವರ ಸೋದರ ಡಿಕೆ ಸುರೇಶ್(27 ಅಕ್ರಮ ಆಸ್ತಿ), ತಾಯಿ ಗೌರಮ್ಮ(38 ಅಕ್ರಮ ಆಸ್ತಿ) ಹೊಂದಿದ್ದಾರೆ. ಮಿಕ್ಕಂತೆ ಡಿಕೆ ಶಿವಕುಮಾರ್ ಕುಟುಂಬದ ಸದಸ್ಯರ ಬಳಿ 300ಕ್ಕೂ ಹೆಚ್ಚು ಕೃಷಿಯೇತರ ಆಸ್ತಿಗಳಿವೆ. ಡಿಕೆಶಿ ಆಪ್ತರಾದ ಲಕ್ಷ್ಮಿ ಹೆಬ್ಬಾಳ್ಕರ್, ಆಂಜನೇಯ, ಹನುಮಂತ, ಸಚಿನ್ ನಾರಾಯಣ್, ಸುನಿಲ್ ಶರ್ಮಾ ಎಲ್ಲರೂ ಬೇನಾಮಿಗಳಾಗಿದ್ದಾರೆ. ಬಹುತೇಕ ಆಸ್ತಿಗಳನ್ನು ನಗದು ನೀಡಿ ಖರೀದಿಸಲಾಗಿದೆ ಎಂದು ಇಡಿ ಪರ ವಕೀಲ ಕೆ.ಎಂ ನಟರಾಜ್ ವಾದ ಮಂಡಿಸಿದ್ದರು.

ಡಿ.ಕೆ.ಶಿವಕುಮಾರ್ ಅವರ ಮೇಲೆ ಐಟಿ ದಾಳಿ ಆದಾಗ, ಬರೋಬ್ಬರಿ 77 ಮನೆಗಳ ಮೇಲೆ ದಾಳಿ ಮಾಡಲಾಗಿತ್ತು, ಅವರ ಎಲ್ಲ ಆಸ್ತಿಯನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಅದೆಲ್ಲವೂ ನಮ್ಮದೇ ಎಂದ್ರೆ ಹೇಗೆ?" ಎಂದು ಡಿಕೆ ಸುರೇಶ್ ಪ್ರಶ್ನಿಸಿದ್ದರು.

ಡಿಕೆಶಿ ವಿರುದ್ಧ ಪ್ರಕರಣಗಳು

ಡಿಕೆಶಿ ವಿರುದ್ಧ ಪ್ರಕರಣಗಳು

ಡಿಕೆ ಶಿವಕುಮಾರ್ ವಿರುದ್ಧ ದಾಖಲಾಗಿರುವ ಪ್ರಕರಣಗಳು
* ಐಪಿಸಿ ಸೆಕ್ಷನ್ 468 ಅಡಿಯಲ್ಲಿ ಫೋರ್ಜರಿ ಕೇಸ್.
* ಭ್ರಷ್ಟಾಚಾರ, ಸಂಚು ಆರೋಪದ ಮೇಲೆಐಪಿಸಿ ಸೆಕ್ಷನ್ 120(B), 169, 177, 417, 419, 465, 468 ಅನ್ವಯ ಪ್ರಕರಣ.
* ನಕಲಿ ದಾಖಲೆ ಸಲ್ಲಿಕೆ, ಭೂ ಅವ್ಯವಹಾರ, ಕಲ್ಲು ಗಣಿಗಾರಿಕೆ ಆರೋಪ, ಹಲ್ಲೆ ಸೇರಿದಂತೆ ಅನೇಕ ಕೇಸುಗಳು ಇನ್ನೂ ಬಾಕಿ ಇವೆ..
* ಇದಲ್ಲದೆ, ಇಡಿ ಹಾಕಿರುವ ಕೇಸುಗಳು 1860ರ ಐಪಿಸಿ ಸೆಕ್ಷನ್ 193,199,12 ಬಿ, ಆದಾಯ ತೆರಿಗೆ ಕಾಯ್ದೆ 1961 ಸೆಕ್ಷನ್ 276(1), 277 ಹಾಗೂ 278.

ಉತ್ತರ ಸಿಗದೆ ಉಳಿದ ಪ್ರಶ್ನೆಗಳು

ಉತ್ತರ ಸಿಗದೆ ಉಳಿದ ಪ್ರಶ್ನೆಗಳು

* ಐಶ್ವರ್ಯ ಅಕೌಂಟಿನಿಂದ ಕೆಫೆ ಕಾಫಿ ಡೇಗೆ ಮತ್ತು ಕೆಫೆ ಕಾಫಿ ಡೇಯಿಂದ ಐಶ್ವರ್ಯ ಅಕೌಂಟಿಗೆ 20 ಕೋಟಿ ರೂಪಾಯಿ ವರ್ಗಾವಣೆಯಾಗಿದೆ.

* ಕೋಲಾರದಲ್ಲಿರುವ ಅದಾನಿ ಗ್ರೀನ್ ಎನರ್ಜಿ ಪ್ರೈ ಲಿಮಿಟೆಡ್ ನಲ್ಲಿ ಐಶ್ವರ್ಯಾ ಕೋಟ್ಯಂತರ ರುಪಾಯಿ ಹೂಡಿಕೆ

* ಸೋಲ್ ಆಂಡ್ ಸೇಲ್ಸ್​ನಲ್ಲಿ 78 ಕೋಟಿ ರೂ ಹೂಡಿಕೆ ಕಂಪನಿಯ ಶೇ50ರಷ್ಟು ಷೇರು ಖರೀದಿ

* ಐಶ್ವರ್ಯಾ ಅವರ ಅಜ್ಜಿ ಗೌರಮ್ಮ 2001ಲ್ಲಿ ಐಶ್ವರ್ಯಾಗೆ ಬೆಂಗಳೂರಿನ ಉತ್ತರಹಳ್ಳಿಯಲ್ಲಿರುವ ತಮ್ಮ ಹೆಸರಿನ 3 ಎಕರೆ ಜಮೀನನ್ನು ಗಿಫ್ಟ್​ ಡೀಡ್ ಮಾಡಿಕೊಟ್ಟಿದ್ದರು
* ಡಿಕೆಶಿ, ಪತ್ನಿ ಉಷಾ, ಪುತ್ರಿ ಐಶ್ವರ್ಯಾ, ಸೇರಿದಂತೆ ಕುಟುಂಬಸ್ಥರಲ್ಲಿ ಹಂಚಿಕೆಯಾಗಿರುವ ಸ್ಥಿರಾಸ್ತಿ, ಪಿತ್ರಾರ್ಜಿತ ಆಸ್ತಿ, ಕೃಷಿಕರಾಗಿರುವ ಇವರು ಕುಟುಂಬಸ್ಥರಿಗೆ ನೀಡಿರುವ ಸಾಲದ ಪ್ರಮಾಣ ಹಾಗೂ ಗಳಿಕೆ ವಿವರ ಇವು ಜಾರಿನಿರ್ದೇಶನಾಲಯ ಕಂಡುಕೊಳ್ಳಲಾಗದ ಉತ್ತರಗಳಾಗಿವೆ.

English summary
PMLA Case: Delhi high court grants bail to the Karnataka Congress leader DK Shivakumar in money laundering case. Know more about cases pending against him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X