ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣ ಕಣ: ಜೆಡಿಎಸ್ ಅಭ್ಯರ್ಥಿ ಶ್ರೀಶೈಲ ನಿಂಗಪ್ಪ ಯಾರು?

|
Google Oneindia Kannada News

ಬೆಂಗಳೂರು, ಮೇ 23: ಪಶ್ಚಿಮ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ಶ್ರೀಶೈಲ ನಿಂಗಪ್ಪ ಗಡದಿನ್ನಿ ಅವರನ್ನು ಕಣಕ್ಕೆ ಇಳಿಸಿದೆ. ಶ್ರೀಶೈಲ ನಿಂಗಪ್ಪ ಯಾರು ? ಅವರ ಹಿನ್ನೆಲೆ, ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಅವರು ಹಂಚಿಕೊಂಡಿರುವ ವಿಚಾರಗಳು ಇಲ್ಲಿವೆ.

ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಪ್ರೌಢ ಶಾಲೆಯಲ್ಲಿ ಗಣಿತ ಶಿಕ್ಷಕರಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದಿರುವ ಶ್ರೀಶೈಲ ನಿಂಗಪ್ಪ ಅವರು, ಶಿಕ್ಷಕರ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಸರಳತೆ ಮೂಲಕ ಶಿಕ್ಷಕ ವಲಯದಲ್ಲಿ ಚಿರಪರಿಚಿತ. ಶಿಕ್ಷಕರ ಸಂಘಟನೆ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಸ್ತುತ ಕರ್ನಾಟಕ ರಾಜ್ಯ ಶಿಕ್ಷಣ ಸಂಸ್ಥೆಗಳ ನೌಕರರ ಸಂಘದ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಶೈಲ ಗಡದಿನ್ನಿ ಗುರುತಿಸಿಕೊಂಡಿದ್ದಾರೆ. ಇದೀಗ ಇವರ ಸೇವೆಯನ್ನು ಪರಿಗಣಿಸಿ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್ ಕಣಕ್ಕೆ ಇಳಿಸಿದೆ.

ಹೊರಟ್ಟಿ ವಿರುದ್ಧ ಜೆಡಿಎಸ್ ಶ್ರೀಶೈಲ ನಿಂಗಪ್ಪ ಗಡದಿನ್ನಿ ಅವರಿಗೆ ಟಿಕೆಟ್ ಘೋಷಿಸಿದೆ. ಮಾಜಿ ಸಿಎಂ ಎಚ್‌. ಡಿ. ಕುಮಾರಸ್ವಾಮಿ ಅವರು ನಿಂಗಪ್ಪ ಗಡದಿನ್ನಿ ಅವರಿಗೆ ಟಿಕೆಟ್ ನೀಡಿರುವುದನ್ನು ಖಚಿತ ಪಡಿಸಿದ್ದಾರೆ. ಪಕ್ಷಾಂತರಗೊಂಡು ಬಿಜೆಪಿಯಿಂದ ಕಣಕ್ಕೆ ಇಳಿದಿರುವ ಹೊರಟ್ಟಿ ವಿರುದ್ಧ ಶ್ರೀಶೈಲ ನಿಂಗಪ್ಪ ಅಭ್ಯರ್ಥಿಯಾಗಿದ್ದಾರೆ.

ಶಿಕ್ಷಣ ಕ್ಷೇತ್ರವು ಗೊಂದಲದ ಗೂಡಾಗಿದೆ. ಪವಿತ್ರವಾದ ಶಿಕ್ಷಕ ವೃತ್ತಿಯಲ್ಲಿರುವರು ಇಂದು ಭಯಾನಕ ವಾತಾವರಣದಲ್ಲಿ ಪಾಠ ಪ್ರವಚನ ಮಾಡುವಂತ ವಾತಾವರಣವಿದೆ. ವೇತನ ಬಡ್ತಿಮ ಪಿಂಚಣಿ, ಅನುದಾನ ರಹಿತ ಶಾಲೆಗಳಲ್ಲಿ ಕನಿಷ್ಠ ವೇತನ, ಸೇವಾ ಭದ್ರತೆ ವಿಚಾರದಲ್ಲಿ ಮಹತ್ವದ ಬದಲಾವಣೆ ತರುವ ಅಗತ್ಯವಿದೆ ಎಂಬುದು ಅವರ ಅಂತರಾಳದ ಮಾತು. ಸದನದಲ್ಲಿ ಶಿಕ್ಷಕ ಸಮಸ್ಯೆಗಳನ್ನು ಸಮರ್ಥವಾಗಿ ಪ್ರತಿಬಿಂಬಿಸಲು ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಶಿಕ್ಷಕರ ಮತಕ್ಷೇತ್ರಕ್ಕೆ ಸ್ಪರ್ಧಿಸುವುದಾಗಿ ಶ್ರೀಶೈಲ ನಿಂಗಪ್ಪ ತಿಳಿಸಿದ್ದಾರೆ.

ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ

ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ

"ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಆಡಳಿತ ಮಂಡಳಿಗಳು ಕೇವಲ ವ್ಯವಹಾರಿಕ ಸಂಸ್ಥೆಗಳಾಗಿವೆ. ಮುಗ್ಧ ಪ್ರಾಮಾಣಿಕ ಶಿಕ್ಷಕರು ಬಲಿಪಶುಗಳಾಗುತ್ತಿದ್ದಾರೆ. ಅಮಾಯಕ ಶಿಕ್ಷಕ ರ ಮೇಲೆ ದರ್ಪ, ದೌರ್ಜನ್ಯ, ಚಿತ್ರಹಿಂಸೆ ಮುಗಿಲು ಮುಟ್ಟಿದೆ. ಅನುದಾನರಹಿತ ಅವಧಿಯ ಕಾಲ್ಪನಿಕ ವೇತನ ಬಡ್ತಿ, ನಿವೃತ್ತಿಯ ನಂತರದ ಪಿಂಚಣೆ, ಅನುದಾನರಹಿತರ ಕನಿಷ್ಠ ವೇತನ ಹಾಗೂ ಸೇವಾ ಭದ್ರತೆ ಒದಗಿಸಬೇಕು. ಈ ವಿಚಾರವಾಗಿ ಸರ್ಕರದ ಗಮನ ಸೆಳೆದು ಹೋರಾಟ ಮಾಡುತ್ತೇನೆ," ಎಂಬುದು ಶ್ರೀಶೈಲ ನಿಂಗಪ್ಪ ಅವರು ಹೇಳಿದ ಮಾತು.

ತಾರತಮ್ಯ ನಿವಾರಣೆ ಅಗತ್ಯ:

ತಾರತಮ್ಯ ನಿವಾರಣೆ ಅಗತ್ಯ:

ಜ್ಯೋತಿ ಸಂಜೀವಿನಿ ಆರೋಗ್ಯ ವಿಮಾ ಯೋಜನೆಯನ್ನು ಅನುದಾನ ರಹಿತರಿಗೂ ವಿಸ್ತರಿಸಬೇಕಿದೆ. ವಿದ್ಯಾರ್ಥಿ-ವಿದ್ಯಾರ್ಥಿಗಳ ನಡುವೆ ಮತ್ತು ಶಿಕ್ಷಕ-ಶಿಕ್ಷಕರ ನಡುವಿನ ಸೌಲಭ್ಯಗಳ ತಾರತಮ್ಯ ನಿವಾರಣೆ ನಿವಾರಣೆಯಗಬೇಕಿದೆ. ಶಿಕ್ಷಕರ /ವಿದ್ಯಾರ್ಥಿಗಳ ನಡುವಿನ ಅನುಪಾತ 1.70 ನ್ನು 1.50 ಕ್ಕೆ ಇಳಿಸಬೇಕಿದೆ. ಕೆಜಿಯಿಂದ ಹಿಡಿದು ಪಿಜಿ ವರೆಗಿನ ಶೈಕ್ಷಣಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ಶಿಕ್ಷಕ ಕ್ಷೇತ್ರದಿಂದ ಆಯ್ಕೆಯಾದ ಪ್ರತಿನಿಧಿಗಳಿಗೆ ಅನೇಕ ಸಲ ಮನವಿ ಮಾಡಿಕೊಂಡರೂ, ಹೋರಾಟ ಮಾಡಿದರೂ ಫಲಿತಾಂಶ ಶೂನ್ಯ. ಈ ನಿಟ್ಟಿನಲ್ಲಿ ಶಿಕ್ಷಕ ವೃತ್ತಿಗೆ ರಾಜೀನಾಮೆ ಕೊಟ್ಟು ವಿಧಾನ ಪರಿಷತ್ ಚುನಾವಣಾ ಕಣಕ್ಕೆ ಇಳಿದಿರುವುದಾಗಿ ಶ್ರೀಶೈಲ ನಿಂಗಪ್ಪ ಅವರು ಸ್ಪಷ್ಟಪಡಿಸಿದ್ದಾರೆ.

ಹೊರಟ್ಟಿ ವಿರುದ್ಧ ತೂಕದ ಅಭ್ಯರ್ಥಿ

ಹೊರಟ್ಟಿ ವಿರುದ್ಧ ತೂಕದ ಅಭ್ಯರ್ಥಿ

ಬಸವರಾಜ ಹೊರಟ್ಟಿ ಜೆಡಿಎಸ್ ನ ಅಭ್ಯರ್ಥಿಯಾಗಿ ಪಶ್ಚಿಮ ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಇದೀಗ ಬಿಜೆಪಿ ಸೇರ್ಪಡೆಯಾಗಿ ಆ ಪಕ್ಷದಿಂದ ಕಣಕ್ಕೆ ಇಳಿಯುತ್ತಿದ್ದಾರೆ. ಜೆಡಿಎಸ್ ನ ನಿಷ್ಠಾವಂತ ರಾಜಕಾರಣಿ ಎಂದೇ ಬಿಂಬಿಸಿಕೊಂಡಿದ್ದ ಹೊರಟ್ಟಿ ಏಕಾಏಕಿ ಬಿಜೆಪಿ ಕದ ತಟ್ಟಿದ್ದರು. ಹೊರಟ್ಟಿ ಅವರನ್ನು ಸೋಲಿಸುವ ಕಾರಣಕ್ಕೆ ಶ್ರೀಶೈಲ ನಿಂಗಪ್ಪ ಅವರನ್ನು ಜೆಡಿಎಸ್ ಕಣಕ್ಕೆ ಇಳಿಸಿದೆ. ಸಾಮಾನ್ಯ ಶಿಕ್ಷಕನಾಗಿ, ಶಿಕ್ಷಕರ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ನಿಂಗಪ್ಪ ಶಿಕ್ಷಕರ ಬಳಗದಲ್ಲಿ ಚಿರ ಪರಿಚಿತರಾಗಿದ್ದಾರೆ. ಹೊರಟ್ಟಿ ವಿರುದ್ಧ ಇವರು ಜಯ ಗಳಿಸಲು ಇರುವ ಅಭ್ಯರ್ಥಿ ಎಂದು ಮನವರಿಕೆಯಾದ ಬೆನ್ನಲ್ಲೇ ಸಾಮಾನ್ಯ ಶಿಕ್ಷಕನನ್ನು ಕಣಕ್ಕೆ ಇಳಿಸಿ ಜೆಡಿಎಸ್ ತೊಡೆ ತೊಟ್ಟಿದೆ. ಪಕ್ಷ ಬಿಟ್ಟು ಹೋದ ಹೊರಟ್ಟಿ ಅವರನ್ನು ಸೋಲಿಸುವ ಪಣ ತೊಟ್ಟಿರುವ ಜೆಡಿಎಸ್ ಶ್ರೀಶೈಲ ನಿಂಗಪ್ಪ ಅವರನ್ನು ಕಣಕ್ಕೆ ಇಳಿಸಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ಹೊರಟ್ಟಿ ವಿರುದ್ಧ ಜೆಡಿಎಸ್ ಅಭ್ಯರ್ಥಿ

ಹೊರಟ್ಟಿ ವಿರುದ್ಧ ಜೆಡಿಎಸ್ ಅಭ್ಯರ್ಥಿ

ಬಸವರಾಜ ಹೊರಟ್ಟಿ ಅವರು ಪಶ್ಚಿಮ ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್ ಪಕ್ಷದಿಂದ ಪ್ರತಿನಿಧಿಸುತ್ತಿದ್ದರು. ವಿಧಾನ ಪರಿಷತ್ ಸಭಾಪತಿ ಹುದ್ದೆಯನ್ನು ಸಹ ಅಲಂಕರಿಸಿದ್ದರು. ಜೆಡಿಎಸ್ ನ ನಿಷ್ಠಾವಂತ ನಾಯಕನಾಗಿ ಗುರುತಿಸಿಕೊಂಡಿದ್ದ ಬಸವರಾಜ ಹೊರಟ್ಟಿ ಇತ್ತೀಚೆಗೆ ಇದ್ದಕ್ಕಿದ್ದಂತೆ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದಾರೆ. ಹೊರಟ್ಟಿ ವಿರುದ್ಧ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತದೆಯೋ ಅಥವಾ ತಟಸ್ಥ ನೀತಿ ಅನುಸರಿಸುತ್ತದೋ ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿತ್ತು. ಈಗ ಅಂತಿಮವಾಗಿ ತನ್ನ ಅಭ್ಯರ್ಥಿಯನ್ನು ಜೆಡಿಎಸ್ ಘೋಷಿಸಿದೆ.

English summary
West teachers constituency MLC Election: Who is Srishila Ningappa gadadinni? Is Ningappa is winning candidate against Basavaraja horatti?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X