ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಜವಾದ ಜೀವಂತಿಕೆಯ ಚಿತ್ರಗಳಿಗೆ ಸ್ವಾರಸ್ಯಕರ ಸುಳ್ಳು ಕಥೆಗಳು

|
Google Oneindia Kannada News

ವಾರಕ್ಕೆ ಬರುವುದು ಒಂದೇ ವೀಕೆಂಡ್‌, ಅದೂ ಬರುವುದು ವಾರದ ಕೊನೆಗೆ!, ಸೋಮವಾರವೇ ಏಕೆ ವೀಕೆಂಡ್ ಬರಬಾರದು, ಭಾನಾವಾರ ಕಳೆದ ಕೂಡಲೇ ಸೋಮವಾರ ಬಂದು ಬಿಡುತ್ತದೆ ಆದರೆ ಸೋಮವಾರ ಮುಗಿದ ಕೂಡಲೇ ಭಾನುವಾರ ಬರುವುದಿಲ್ಲವೇಕೆ? ಇದೆಂತಹಾ ಅನ್ಯಾಯ.

ಇರಲಿ, ವಾರದ ಚಕ್ರದ ಬಗ್ಗೆ ಆಲೋಚಿಸುತ್ತಾ ಇರುವ ವೀಕೆಂಡ್‌ ಅನ್ನು ಕಳೆದುಕೊಳ್ಳುವುದು ಬೇಡ. ಮರಳುಗಾಡಿನಲ್ಲಿ ದಿಕ್ಕು-ದೆಸೆಯಿಲ್ಲದೆ ಒಂಟೆಯಂತೆ ಓಡುತ್ತಿರುವವರಿಗೆಲ್ಲಾ ವೀಕೆಂಡ್ ಎಂಬುದು ಓಯಸಿಸ್. ಇಂತಹಾ ವೀಕೆಂಡ್‌ ಅನ್ನು ಅದೇ ಹಳಸಲು ರಾಜಕೀಯ, ಅಪರಾಧ ಸುದ್ದಿಗಳು ನುಂಗಿಹಾಕಬೇಕೆ?.

ಲೋಕಸಭಾ ಚುನಾವಣೆ ವಿಶೇಷ ಪುಟ

ರಾಹುಲ್‌ ಗಾಂಧಿಯ ರಿಪೀಟೆಡ್‌ ಡೈಲಾಗ್‌ಗಳು, ನರೇಂದ್ರ ಮೋದಿಯ ಕಿವಿಗಡಚಿಕ್ಕುವ ಮಾತುಗಳು, ದೀದಿ ಬಾಯಿಯ ಬೆಂಕಿ ಉಂಡೆಗಳು, ಅಮಿತ್‌ ಶಾರ ಕುತಂತ್ರಭರಿತ ಹೇಳಿಕೆಗಳು ಯಾವ ಚಾನೆಲ್ ಹಾಕಿದರೂ ಇವೇ ಸುದ್ದಿ. ರಾಜ್ಯದಲ್ಲಿಯಂತೂ ಮಂಡ್ಯ ರಾಜಕೀಯ ಹಾಗೂ ಹನುಮನ ಹಾಡು ಬಿಟ್ಟು ಇನ್ನೇನೂ ಇಲ್ಲ ಬಿಡಿ. ರಾಜಕೀಯದಲ್ಲಿ ಹಾಸ್ಯ ಹುಡುಕುವುದು ಮಂಡ್ಯದಲ್ಲಿ ಸೇಬು ಬೆಳೆದಂತೆ, ಅದು ಅಸಾಧ್ಯ.

ಕೈಬೆರಳಿಗೆ ಹಾಕೋ ಮಸಿ ನಂಗ್ ಸ್ವಲ್ಪ ಕೊಡ್ತಿಯೇನು? ಕೈಬೆರಳಿಗೆ ಹಾಕೋ ಮಸಿ ನಂಗ್ ಸ್ವಲ್ಪ ಕೊಡ್ತಿಯೇನು?

ನಮ್ಮ ರಾಜಕಾರಣಿಗಳಿಗೆ ಹಾಸ್ಯ ಪ್ರಜ್ಞೆ ಇಲ್ಲವೇ ಇಲ್ಲ ಬಿಡಿ, ಆದರೆ ಮತದಾರನಿಗಿದೆಯಲ್ಲ, ಇಲ್ಲಿ ಕೆಲವು ರಾಜಕಾರಣಿಗಳ ಚಿತ್ರಗಳಿವೆ. ಇವು ಬೇರೆ ಬೇರೆ ಸಂದರ್ಭದಲ್ಲಿ ತೆಗೆದವಾದರೂ ಅದರ ಮೂಲ ಸಂದರ್ಭವನ್ನು ಮರೆಮಾಚಿ ಬೇರೆಯದೇ ತೆಳು ಹಾಸ್ಯಮಯ ಅರ್ಥವನ್ನು ನೀಡಲಾಗಿದೆ. ಈ ಚಿತ್ರಗಳನ್ನು ನೋಡಿ ನಿಮಗೇನನ್ನಿಸಿತು ಎಂಬುದನ್ನು ಕಮೆಂಟ್ ಮಾಡಿಬಿಡಿ.

ಮನುಷ್ಯರಿಗೊಂದು ನ್ಯಾಯ, ಪ್ರಾಣಿಗಳಿಗೊಂದು ನ್ಯಾಯ

ಮನುಷ್ಯರಿಗೊಂದು ನ್ಯಾಯ, ಪ್ರಾಣಿಗಳಿಗೊಂದು ನ್ಯಾಯ

ಅಲ್ಲಾ ಈ ಪೋಲೀಸಪ್ಪನಿಗೆ ಬುದ್ಧಿ ಇದೆಯಾ, ಈತನಿಗೆ ಸ್ವಲ್ಪವಾದರೂ ಕರ್ತವ್ಯ ಪ್ರಜ್ಞೆ ಇದೆಯಾ, ಆ ಗೂಳಿ ಅಷ್ಟು ವೇಗವಾಗಿ ಓಡಿ ಬರುತ್ತಿದೆ, ಓವರ್‌ ಸ್ಪೀಡ್ ಕೇಸ್ ಹಾಕುವುದು ಬಿಟ್ಟು ಹೀಗೆ ಕಡ್ಡಿಗಳ ಮಧ್ಯೆ ಹಾರಿ ಏರೋಬಿಕ್ಸ್‌ ಮಾಡ್ತಾ ಇದ್ದಾನಲ್ಲಾ. ಹೋಗಲಿ ಆ ಗೂಳಿ ಕನಿಷ್ಟ ಹೆಲ್ಮೆಟ್ ಸಹ ಧರಿಸಿಲ್ಲ ಅದನ್ನಾದರೂ ಕೇಳಬಾರದೆ? ಅದೇ ಮನುಷ್ಯರಾಗಿದ್ದರೆ ಹೀಗೆ ಸುಮ್ಮನೇ ಬಿಡುತ್ತಿದ್ದೇ ಇವರು, ಪ್ರಾಣಿಗಳಿಗೊಂದು ಕಾನೂನು, ಮನುಷ್ಯರಿಗೊಂದಾ? ಎಂತಹಾ ಮೃಗೀಯ ನೀತಿ ಸ್ವಾಮಿ ನಮ್ ಪೋಲೀಸ್ನೋರ್ದು. ಓಹ್, ಈ ಘಟನೆ ನಡೆದಿರೋದು ಉತ್ತರ ಪ್ರದೇಶದಲ್ಲಿ ಅಲ್ಲಿ ಮನುಷ್ಯರಿಗಿಂತ ಗೋವು ಮತ್ತು ಅದರ ಅಣ್ಣ-ತಮ್ಮಂದಿರಾದ ಗೂಳಿ, ಎತ್ತುಗಳಿಗೆ ಗೌರವ ಜಾಸ್ತಿ.

'ನಿಖಿಲ್ ಎಲ್ಲಿದ್ದೀಯಪ್ಪಾ' ನೋಡಿದ ಮೋದಿ

'ನಿಖಿಲ್ ಎಲ್ಲಿದ್ದೀಯಪ್ಪಾ' ನೋಡಿದ ಮೋದಿ

ಕನ್ನಡಿಗ ಟ್ರೋಲ್‌ಗಳು ಎಲ್ಲಿವರೆಗೂ ತಲುಪಿದ್ದಾರೆ ನೋಡಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಪ್ರಧಾನಿ ಮೋದಿ ಅವರಿಗೆ 'ನಿಖಿಲ್ ಎಲ್ಲಿದ್ದೀಯಪ್ಪಾ' ಟ್ರಾಲ್ ವಿಡಿಯೋಗಳನ್ನು ತೋರಿಸಿದ್ದಾರೆ. ಕನ್ನಡಿಗರ ಹಾಸ್ಯ ಪ್ರಜ್ಞೆಗೆ ನಕ್ಕು-ನಕ್ಕು ಸುಸ್ತಾದ ಮೋದಿ ಕೊಡಗಟ್ಟಲೆ ನೀರು ಕುಡಿದಿದ್ದಾರೆ. ತಮ್ಮ ಮುಂದಿನ ಭಾಷಣದಲ್ಲಿ 'ನಿಖಿಲ್ ಕಹಾ ಹೇ ಭಾಯ್' ಎಂದು ಹೇಳುವ ಮೂಲಕ ಕನ್ನಡಿಗರು ಪ್ರಾರಂಭಿಸಿದ ಟ್ರೋಲ್ ಅಭಿಯಾನವನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯುವುದಾಗಿ ಮೋದಿ ಅವರು ನಿಶ್ಚಯಿಸಿದ್ದಾರಂತೆ.

ಕಿಮ್ಮಣ್ಣ, ಪುಟ್ಟಣ್ಣ ಮಾತುಕತೆ

ಕಿಮ್ಮಣ್ಣ, ಪುಟ್ಟಣ್ಣ ಮಾತುಕತೆ

ವ್ಲಾಡಿಮಿರ್ ಪುಟಿನ್: ನೋಡೋ ಕಿಮ್ಮಣ್ಣ ನಿಂಗೇನೋ ತಲೆ ಮೇಲೆ ಕೂದ್ಲು ಬೇಜಾನ್ ಇದೆ, ಅದ್ಕೆ ನಿಮ್ಮ ದೇಶದ ಜನರಿಗೆ ನಿಂತ ಥರಾನೇ ಕಟಿಂಗ್ ಮಾಡಿಸ್ಕಳ್ರೋ ಅಂದೆ, ನಾನೇನು ಮಾಡ್ಲಿ ನನ್ನ ತಲೇಮೇಲೆ ಕೂದ್ಲೇ ಇಲ್ಲ.
ಕಿಮ್ ಜಾಂಗ್ ಉನ್: ಪುಟ್ಟಣ್ಣ, ಭಾರತದಾಗೆ ಯಾರೋ ಬಾಬಾ ಒಬ್ರು ಅವ್ರೆ, ಅವ್ರ ಗಡ್ಡದಾಗೆ ಹುಡುಗೀರ ತಲೆಗಿಂತಾ ಶಾನೆ ಕೂದ್ಲು ಅವೆ, ಅವ್ರು ಯಾವ್ದೊ ಪತಂಜಲಿ ತೈಲ ಹಚ್ತಾರಂತೆ, ಮೋದಿ ಚಾಚಾ ನಂಗೆ ಬಾಳ ಹತ್ರ, ನಾನು ಮಾತಾಡಿ ಕೊಡಿಸ್ತೀನಿ ಬಿಡು, ಆ ಟ್ರಂಪ್‌ಗೂ ನಾನೇ ಕೊಡ್ಸಿದ್ದು, ಅದ್ನ ಕೊಡಿಸಿದ್ ಮ್ಯಾಕೆ ಆವಯಂಗೂ ನಂಗೂ ದೋಸ್ತಿ ಆಗಿದ್ದು.

ವ್ಲಾಡಿಮಿರ್ ಪುಟಿನ್: ಸರಿ ಕಣ್ಲಾ, ತಕಾ ಈಗ ಎಣ್ಣೆ ಕುಡಿ.
ಕಿಮ್ ಜಾಂಗ್ ಉನ್: ಸರಿ ಪುಟ್ಟಣ್ಣ, ಎಣ್ಣೆ ನಿಮ್ದು, ಊಟ ನಮ್ದು. (ಶಿವಾ ಅಂತ ಇಬ್ರು ಬಾಟಮ್ ಸಿಪ್ ಎತ್ತಿದ್ರು)
ಹೆಗಲೇರಿ ಹಾಡಿದ ಹನುಮ

ಹೆಗಲೇರಿ ಹಾಡಿದ ಹನುಮ

ಆ ಹುಡುಗಿ ಹೆಗಲೇರಿರುವ ಹನುಮ, ನಮ್ಮ ಕರ್ನಾಟಕದ ಹೊಸ ಸೆಲೆಬ್ರಿಟಿ ಹನುಮನ ಫ್ಯಾನ್ ಆಗಿರಬಹುದಾ? ನಮ್ಮ ಹನುಮ ಮೈಕ್ ಹಿಡಿದಿದ್ದಾನೆ ಈ ಹನುಮ ಬಾಳೆ ಹಣ್ಣು. ನಮ್ಮ ಹನುಮ ಈಗಿರುವ ಜಾಗಕ್ಕಿಂತಲೂ (TV) ಬೆಟರ್ ಆದ ಜಾಗದಲ್ಲಿ ಈ ಬಾಳೆ ಹಣ್ಣು ಹನುಮ ಇದ್ದಾನೆ ಬಿಡಿ. ಶನಿ ಹೆಗಲೇರಿದರೆ ಕಟ್ಟದಾಗುತ್ತದಂತೆ ಹನುಮ ಆಕೆಯ ಹೆಗಲೇರಿದ್ದಾನೆಂದರೆ ಆಕೆಗೆ ಭಾಗ್ಯ ಗ್ಯಾರೆಂಟಿ, ಬಾಪ್‌ ಕಟ್ ಮಾಡಿಸಿ ಆ ಕನ್ನಡಕ ತೆಗೆದರೆ ಡಯಟ್ ಮಾಡಿರುವ ರಾಹುಲ್‌ ಗಾಂಧಿಯಂತೆ ಕಾಣುತ್ತಾಳೆ, ಪ್ರಧಾನಿ ಯೋಗ ಇದೆಯೋ ಏನೊ?. ಅಕಸ್ಮಾತ್ ಆ ಕೋತಿ ಆಕೆಯ ಹೆಗಲೇರುವ ಬದಲು ಆಕೆಯೇ ಕೋತಿಯ ಹೆಗಲೇರಿದ್ದರೆ, ಶನಿ ಹೆಗಲೇರಿತು ಎನ್ನಬಹುದಿತ್ತೆ? ಛೇ ಛೇ ಹಾಗಾಗದು, ಶನಿ ಪುಲ್ಲಿಂಗ.

ಕಾಂಗ್ರೆಸ್‌ಗೆ ಎರಡು ಹಸ್ತದ ಚಿಹ್ನೆ!

ಕಾಂಗ್ರೆಸ್‌ಗೆ ಎರಡು ಹಸ್ತದ ಚಿಹ್ನೆ!

ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ 40 ಸೀಟುಗಳಿಸಿತ್ತು, ಈ ಬಾರಿ ಅದನ್ನು ಹೆಚ್ಚು ಮಾಡಲೇಬೇಕು ಸಾರ್ ಎಂದು ಖರ್ಗೆ ಅವರು ರಾಹುಲ್ ಅವರನ್ನು ಕೇಳಿದ್ದಾರೆ. ಅದಕ್ಕೆ ಬಹಳ ಗಂಭೀರವಾಗಿ ಯೋಚಿಸಿದ ರಾಹುಲ್, ಕಾಂಗ್ರೆಸ್‌ನ ಒಂದು ಹಸ್ತದ ಚಿಹ್ನೆಯಿಂದ 40 ಸೀಟು ಗೆದ್ದಿದ್ದೇವೆ, ಈ ಬಾರಿ ಚುನಾವಣೆಯಲ್ಲಿ ಎರಡು ಹಸ್ತದ ಚಿಹ್ನೆ ಮಾಡಿಬಿಡೋಣ ಡಬಲ್ ಗೆಲ್ಲುತ್ತೇವೆ ಎಂದರಂತೆ.

English summary
It is a fun write up, photos used in the article were real but news is fake.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X