ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

COVID TIME: ಕಾಯಕಕ್ಕೂ ವೆಬಿನಾರ್... ಜ್ಞಾನದ ಹಸಿವಿಗೂ ವೆಬಿನಾರ್...

|
Google Oneindia Kannada News

ಕೊರೊನಾ ವೈರಸ್ ಸಂಕಷ್ಟದಲ್ಲಿ ಜಗತ್ತು ತಲ್ಲಣಿಸುತ್ತಿರುವಾಗ ಲಾಕ್ ಡೌನ್, ಸೀಲ್ ಡೌನ್ ಎಂದು ಜನರು ತಾವಿದ್ದಲ್ಲೇ ಹೆಚ್ಚಿನ ಸಮಯವನ್ನು ಕಳೆಯುವ ಪರಿಸ್ಥಿತಿ ಇದೆ. ಹೀಗೆ "ನಮ್ಮದೇನೂ ಪ್ರಯತ್ನವಿಲ್ಲದೆ" ಸಿಕ್ಕಿರುವ ಸಮಯ ವೃಥಾ ಕಾಲಹರಣವೂ ಆಗಬಹುದು. ಕೆಲವೊಮ್ಮೆ ಕ್ರಿಯಾಶೀಲವಾಗಿಯೂ ಇರಬಹುದು. ಎದುರಿಗೆ ವಿಶಾಲವಾಗಿ ಹರವಿಕೊಂಡಿರುವ ಈ "ಸಮಯ"ವನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವುದು ಅವರವರ ಇಚ್ಛೆ, ಆಸಕ್ತಿ ಮತ್ತು ತುರ್ತು.

ಅದೇ ರೀತಿ ಸಭೆ ಸಮಾರಂಭಗಳನ್ನು ಏರ್ಪಡಿಸಲು ನಿರ್ಬಂಧವಿರುವ ಈ ಕಾಲದಲ್ಲಿ online meeting ಗಳು ಹೆಚ್ಚು ಪ್ರಸಿದ್ಧಿ ಪಡೆಯುತ್ತಿವೆ. ಅಗತ್ಯಕ್ಕನುಗುಣವಾಗಿ ಎಲ್ಲಾ ವಯೋಮಾನದವರೂ virtual engagements ನಲ್ಲಿ ಭಾಗವಹಿಸಲು ಬೇಕಾದ Do's, Don'ts ನಿಧಾನವಾಗಿ ಅರಿಯತೊಡಗಿದ್ದಾರೆ. ಯಶಸ್ವಿಯಾಗಿ ಭಾಗವಹಿಸುತ್ತಲೂ ಇದ್ದಾರೆ. ಇದೇ ವಾರ ಎರಡು ವೆಬಿನಾರ್ ಗಳ ಬಗ್ಗೆ ವರದಿ ಮಾಡುವ ಸನ್ನಿವೇಶ ನನಗೇ ಎದುರಾಯಿತು. ಕಾಲದ ನಿಯಮ. It's absolutely fine.

ಕೋವಿಡ್ ಸಂಕಷ್ಟದಲ್ಲಿ ಮೀನುಗಾರಿಕೆ ಭವಿಷ್ಯದ ಬಗ್ಗೆ ರಾಷ್ಟ್ರೀಯ ವೆಬಿನಾರ್ಕೋವಿಡ್ ಸಂಕಷ್ಟದಲ್ಲಿ ಮೀನುಗಾರಿಕೆ ಭವಿಷ್ಯದ ಬಗ್ಗೆ ರಾಷ್ಟ್ರೀಯ ವೆಬಿನಾರ್

ಯಾವುದೋ ಸಂಸ್ಥೆಯ routine ಕೆಲಸಗಳನ್ನು ಚಾಲ್ತಿಯಲ್ಲಿಡಲು, ಅನಿವಾರ್ಯ ಅಗತ್ಯವೆಂಬ ಸರ್ಕಾರಿ-ಖಾಸಗಿ ಸಂಸ್ಥೆಗಳ ಚಟುವಟಿಕೆಗಳನ್ನು ತಹಬಂದಿಯಲ್ಲಿಡಲು, ಒಂದು ನಿರ್ದಿಷ್ಟ ವಿಷಯವಾಗಿ ಚಳವಳಿಗಳು ತಮ್ಮ ನೋಟ ಹಾಗೂ ತೀರ್ಮಾನವನ್ನು ಪ್ರಕಟಿಸಲು, ಕೊರೊನಾ ಸಂಕಷ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಎದುರಾಗಿರುವ ಸಂಕಷ್ಟಗಳ ಬಗ್ಗೆ ಬೆಳಕು ಚೆಲ್ಲಲು, ಆಯಾ ಕ್ಷೇತ್ರಗಳ ಮುಂದಿನ ಹಾದಿಯೇನೆಂಬುದರ ಬಗ್ಗೆ road map ತಯಾರಿಸಲು; ಹೀಗೆ ಹಲವು ಅನಿವಾರ್ಯ ಅಗತ್ಯ ಕಾರಣಗಳಿಗಾಗಿ ಪ್ರಸ್ತುತ ಸಂದರ್ಭದಲ್ಲಿ ವೆಬಿನಾರ್ ಗಳು ನಡೆಯುತ್ತಿರುವುದು ಸಾಮಾನ್ಯ.

Webinars Becoming Platform For Knowledge Sharing In This Covid Time

ಆದರೆ ವಿಶೇಷ ಉಪನ್ಯಾಸಗಳಿಗಾಗಿ ಅಂತರರಾಷ್ಟ್ರೀಯ ವೆಬಿನಾರ್ ಗಳನ್ನು ಆಯೋಜಿಸುವ ಪರಂಪರೆಯೂ ಖ್ಯಾತಿ ಪಡೆಯುತ್ತಿದೆ. ಅಂಥದೊಂದು ವೆಬಿನಾರ್ ಗೆ ಇಂದು ನಾನು ಸಾಕ್ಷಿಯಾದೆ (ಜುಲೈ 17).

ASSOCHAM ವೆಬಿನಾರ್; ಕರ್ನಾಟಕದ ಕೃಷಿ ಬಗ್ಗೆ ಬಿ.ಸಿ.ಪಾಟೀಲ್ ಮಾಹಿತಿASSOCHAM ವೆಬಿನಾರ್; ಕರ್ನಾಟಕದ ಕೃಷಿ ಬಗ್ಗೆ ಬಿ.ಸಿ.ಪಾಟೀಲ್ ಮಾಹಿತಿ

ಒಂದು ಬದಿಯಲ್ಲಿ ಬೆಂಗಳೂರಿನಿಂದ ನಿವೃತ್ತ ಐಎಎಸ್ ಅಧಿಕಾರಿ ಸಿ.ಸೋಮಶೇಖರ್, ಮತ್ತೊಂದು ತುದಿಯಲ್ಲಿ ಮಸ್ಕಾಟ್ ಬಸವ ಬಳಗದ ಶರಣ ಶರಣೆಯರು. ವಿಷಯ-ಬಸವ ತತ್ವದ ಬಗ್ಗೆ ವಿಶೇಷ ಉಪನ್ಯಾಸ. ಆ ಬದಿಯಲ್ಲಿ ಭಾಗವಹಿಸಿದ್ದ ಬಹುತೇಕರು ಸಿ.ಸೋಮಶೇಖರ್ ಅವರ ಅಭಿಮಾನಿಗಳೆಂದು ಸಂವಾದದಲ್ಲಿ ತಿಳಿಯಿತು. ಅನೇಕರು ಹೊಸಬರಿದ್ದರೆನ್ನಿ. ಒಟ್ಟಾರೆ ಭಾಗವಹಿಸಿದ್ದ ಪ್ರತಿಯೊಬ್ಬರೂ ತಮಗನಿಸಿದ್ದನ್ನು ಮಾತನಾಡಿದರು. ಪ್ರಶ್ನೆ ರೂಪದಲ್ಲಿಯೋ... ಅಭಿಪ್ರಾಯ ಹಂಚಿಕೊಳ್ಳುವ ಸಲುವಾಗಿಯೋ ಎಲ್ಲರನ್ನು ಮಾತನಾಡಿಸುವಲ್ಲಿ ಸೋಮಶೇಖರ್ ಯಶಸ್ವಿಯಾಗಿದ್ದರು.

Webinars Becoming Platform For Knowledge Sharing In This Covid Time

ಮಹಿಳಾ ಸಶಕ್ತತೆ, ನಾಯಕತ್ವ, ಸಮಾನತೆ ಹೀಗೆ ಸಾಮಾಜಿಕ ನ್ಯಾಯದ ಅನೇಕ ಮಜಲುಗಳನ್ನು ವಚನಗಳಲ್ಲಿ ಕಂಡುಕೊಳ್ಳುವ ಪ್ರಯತ್ನ, ಚಿಂತನ ಮಂಥನ ನಡೆಯಿತು.

ಸಂವಾದದಲ್ಲಿ, ಮಸ್ಕಾಟ್ ನೆಲದಲ್ಲಿ ಹುಟ್ಟಿ ಬೆಳೆದ ಪುಟಾಣಿಗಳು "ಕಳ ಬೇಡ ಕೊಲ ಬೇಡ ಹುಸಿಯ ನುಡಿಯಲು ಬೇಡ..." ಸೇರಿದಂತೆ ತಾವು ಕಲಿತ ವಚನಗಳನ್ನು ಹೇಳಿ ಸೋಮಶೇಖರ್ ಬಳಿ ಪ್ರಶಂಸೆ ಗಿಟ್ಟಿಸಿಕೊಂಡರು. ದೇಶ ವಿದೇಶಗಳಲ್ಲಿ ನೆಲೆಸಿರುವ ಶರಣ ಶರಣೆಯರು, ಬಸವಾಭಿಮಾನಿಗಳು ಬಸವ ತತ್ವ ಹಾಗೂ ವಚನಗಳ ಬಗ್ಗೆ ಆಸಕ್ತಿಯಿಂದ ಇಂಥ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿರುವ ಆಯೋಜಕರು ಅಭಿನಂದನಾರ್ಹರು. ಅಂದಹಾಗೆ ಈ ಚಟುವಟಿಕೆಗಳು ಬಸವ ಬಳಗದ ಅಂತಾರಾಷ್ಟ್ರೀಯ ವೇದಿಕೆಯೊಂದು ಸೃಷ್ಟಿಯಾಗಲು ಕಾರಣವಾಗಲೂಬಹುದು. ಮುಂದಿನ ದಿನಗಳಲ್ಲಿ ಕಾದು ನೋಡೋಣ.

English summary
International webinars and online meetings becoming popular now in this covid time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X