ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಬ್ಬಚ್ಚಿಗಳ ಜೊತೆ ಆಟವಾಡಿದ ಬಾಲ್ಯದ ನೆನಪುಗಳು

By ಸಮರ್ಥ ಕಾಂತಾವರ, ಬೆಂಗಳೂರು
|
Google Oneindia Kannada News

ಇಂದು ವಿಶ್ವ ಗುಬ್ಬಚ್ಚಿಗಳ ದಿನ. ಪ್ರತಿ ವರ್ಷ ಮಾರ್ಚ್ 20ರಂದು ವಿಶ್ವ ಗುಬ್ಬಚ್ಚಿ ದಿನವೆಂದು ಆಚರಿಸಲಾಗುತ್ತದೆ. ನಮ್ಮಿಂದ ಕಣ್ಮರೆಯಾಗುತ್ತಿರುವ ಈ ಪುಟ್ಟ ಹಕ್ಕಿಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡೋಣ.

ಒಂದು ಕಾಲದಲ್ಲಿ ಚಿವ್ ಚಿವ್ ಎಂದು ಮುಂಜಾನೆಯಿಂದ ಸಂಜೆಯವರೆಗೆ ಮನೆಯ ಅಟ್ಟದಲ್ಲಿ ಮನೆಮಾಡಿಕೊಂಡಿದ್ದ ಈ ಪುಟ್ಟ ಹಕ್ಕಿ ಈ ಆಧುನಿಕ ನಾಗರೀಕತೆಯಿಂದ ಕಣ್ಮರೆಯಾಗುತ್ತಿದೆ. ಈ ಪುಟ್ಟ ಹಕ್ಕಿಯನ್ನು ನಮ್ಮ ಮುಂದಿನ ಪೀಳಿಗೆಗೆ ಚಿತ್ರದಲ್ಲಿ ತೋರಿಸುವ ಬದಲು ಉಳಿಸಿಕೊಳ್ಳುವ ಪ್ರಯತ್ನ ಮಾಡೋಣ.

ಚಿಲಿಪಿಲಿ ಗುಬ್ಬಚ್ಚಿಯ ನಿಗೂಢ ಕಣ್ಮರೆ... ವಿಶ್ವ ಗುಬ್ಬಿ ದಿನದ ಆತಂಕಚಿಲಿಪಿಲಿ ಗುಬ್ಬಚ್ಚಿಯ ನಿಗೂಢ ಕಣ್ಮರೆ... ವಿಶ್ವ ಗುಬ್ಬಿ ದಿನದ ಆತಂಕ

ಗುಬ್ಬಿ ಹೆಸರು ಕೇಳಿದರೆ ಬಾಲ್ಯದ ನೆನಪು... ಆ ಹೆಂಚು ಅಥವಾ sheetನ ಮನೆಯಲ್ಲಿ ಕಟ್ಟುತ್ತಿದ್ದ ಗೂಡು, ಅಂಗಳದಲ್ಲಿ ಸದಾ ನಮ್ಮೊಡನೆ ಸುಳಿದಾಡುತ್ತ, ಕೆಲವೊಮ್ಮೆ ಮೇಲಿಂದ ಮರಿ ಬಿದ್ದಾಗ ಅಮ್ಮ ಮುಟ್ಟಬೇಡಿ, ಆಮೇಲೆ ಅದರ ಅಮ್ಮ ಅದನ್ನು ಗೂಡಿಗೆ ಸೇರಿಸಲ್ಲ.. ಅಂತ ಹೇಳುತ್ತಾ ಇದ್ದರು... ನಾವು ಪಿಳಿಪಿಳಿ ಕಣ್ಣು ಬಿಟ್ಟುಕೊಂಡು ದೂರದಿಂದ ನೋಡ್ತ ಇದ್ದದ್ದು.

We should make an attempt to save Sparrows

ಬೆಳಿಗ್ಗೆ ಎದ್ದ ತಕ್ಷಣ ಅದಕ್ಕೆ ಒಂದು ಹಿಡಿ ಅಕ್ಕಿ ಹಾಕುತ್ತಿದ್ದ ಅಜ್ಜಿ. ತಿಂಡಿಗೆ ಅಮ್ಮ ಅಕ್ಕಿ ಆರಿಸುವಾಗ ಅದರ ನುಚ್ಚು ತಿನ್ನಲು ಅವರ ಸುತ್ತಾ ಸುತ್ತುತ್ತಾ ನುಚ್ಚಿಗೋಸ್ಕರ ಕಾಯುವ ಪುಟ್ಟ ಪಕ್ಷಿ ಗುಬ್ಬಚ್ಚಿ. ಬೆಳಿಗ್ಗೆ ಕಿಟಕಿ ಸಂದಿಯಲ್ಲಿ ತೂರಿ ಬಂದು ಅಡುಗೆ ಮನೆಯಲ್ಲಿ ಅದರ ಲೂಟಿ, ಸಂಜೆ ಸೂರ್ಯ ಮುಳುಗುವ ಸಮಯದಲ್ಲಿ light ಕಂಬದ ತಂತಿಗಳ ಮೇಲೆ ಸಾಲಾಗಿ ಕುಳಿತು ಅದರ meeting. ಇದೆಲ್ಲಾ ನಮ್ಮ ಬಾಲ್ಯದ ದಿನದ ನೆನಪು ಇದನ್ನು ಮರೆಯಲು ಸಾಧ್ಯವೇ?

ಕಾಂಕ್ರೀಟ್ ಕಾಡು, ಸೇತುವೆಗಳು, ಮೆಟ್ರೋ, ವಾಣಿಜ್ಯ ಸಂಕೀರ್ಣ, ಮೊಬೈಲ್ ಟವರುಗಳ ರೇಡಿಯೇಷನ್, ಗೂಡುಕಟ್ಟಲು ಜಾಗವಿಲ್ಲದ ಗಗನ ಚುಂಬಿ ಕಟ್ಟಡ.. ಎಂದು ಅಭಿವೃದ್ಧಿಯತ್ತ ಸಾಗುತ್ತಿರುವ ನಾವು ಅದರ ಸಂತತಿಯನ್ನು ಕಳೆದುಕೊಳ್ಳುವ ಪರಿಸ್ಥಿತಿಗೆ ತಂದುಕೊಂಡಿದ್ದೇವೆ. ಈಗ ಅದು ಒಂದು ಅಳಿವಿನಂಚಿಗೆ ಸೇರಿರುವ ಪಕ್ಷಿ ಸಂಕುಲಕ್ಕೆ ಸೇರಿದೆ.

ಚಿಂವ್ ಚಿಂವ್ ಗುಬ್ಬಚ್ಚಿ ಕಣ್ಣಿಗೇಕೋ ಕಾಣದಮ್ಮ...ಚಿಂವ್ ಚಿಂವ್ ಗುಬ್ಬಚ್ಚಿ ಕಣ್ಣಿಗೇಕೋ ಕಾಣದಮ್ಮ...

ಗುಬ್ಬಚ್ಚಿಯ ಬಗ್ಗೆ ವಿಕಿಪೀಡಿಯದಿಂದ

ಗುಬ್ಬಚ್ಚಿಯದು ಪ್ಯಾಸರೀನ್ ಕುಟುಂಬ. ಇದು ಎಲೆಲ್ಲೂ ಕಣ್ಣಿಗೆ ಬೀಳುವ ಒಂದು ಹಕ್ಕಿ. ಗುಬ್ಬಚ್ಚಿಗಳು ಯಾವಾಗಲೂ ಜೋಡಿಯಾಗಿರುತ್ತವೆ. ಅವುಗಳ ಬಣ್ಣ ಕಂದು. ಬೆನ್ನು ಮತ್ತು ಪಕ್ಕಗಳಲ್ಲಿ ಬಿಳಿ ಮತ್ತು ಕಪ್ಪು ಬಣ್ಣಗಳು ಮಿಶ್ರಿತವಾಗಿರುತ್ತದೆ. ಮುಂಭಾಗ ಬೆಳ್ಳಗಿರುತ್ತದೆ. ಗಂಡು ಗುಬ್ಬಿಗೆ ಗಂಟಲ ಮೇಲೆ ಕಪ್ಪು ಕಲೆ ಇರುತ್ತದೆ. ಇವು ಧಾನ್ಯಗಳನ್ನು, ಹುಳು-ಹುಪ್ಪಟೆ ಮತ್ತು ಗಿಡದ ಎಳೆ ಕುಡಿಗಳನ್ನು ತಿನ್ನುತ್ತವೆ. ಬೇಯಿಸಿದ ಆಹಾರ ಸಹ ಅದಕ್ಕೆ ತುಂಬ ಇಷ್ಟ.

ಜನಾರಣ್ಯದಲ್ಲಿ ಗೂಡು ಕಟ್ಟಲು ಗುಬ್ಬಚ್ಚಿಗೆ ಜಾಗವೆಲ್ಲಿ? ಜನಾರಣ್ಯದಲ್ಲಿ ಗೂಡು ಕಟ್ಟಲು ಗುಬ್ಬಚ್ಚಿಗೆ ಜಾಗವೆಲ್ಲಿ?

ತಾಯಿ ಗುಬ್ಬಿ ನಸು ಹಸಿರು ಮಿಶ್ರಿತ ಬಿಳಿ ಬಣ್ಣದ ಮೂರು ಅಥವ ನಾಲ್ಕು ಮೊಟ್ಟೆಗಳನ್ನು ವರುಷದಲಿ ಮೂರ್ನಾಲ್ಕು ಬಾರಿ ಇಡುತ್ತದೆ. ಗುಬ್ಬಚ್ಚಿಯ ಕಾಲುಗಳು ತೀರ ತೆಳ್ಳಗಿರುವದರಿಂದ ಅದು ತನ್ನ ಮೈಭಾರವನ್ನು ಹೊರಲಾರದು. ಗುಬ್ಬಿಗಳು ಕೂಡ ವಿಶ್ವವ್ಯಾಪಿ. ಗುಬ್ಬಿ ಕಿಟಕಿಯ ಅಡಿಭಾಗ, ಬಾಗಿಲಿನ ಮೇಲ್ಭಾಗ, ಅಲ್ಮೇರಾ, ಮನೆಯ ಮೂಲೆಗಳು, ಗೋಡೆಗಳಲ್ಲಿನ ರಂಧ್ರಗಳು ಎಲ್ಲಿ ಜಾಗ ಸಿಕ್ಕರೆ ಅಲ್ಲಿ ಗೂಡು ಕಟ್ಟುತ್ತದೆ. ಮರಿ ಇಡುವ ಕಾಲ ಬಂದಾಗ ಒಟ್ಟಾಗಿಯೇ ಗೂಡು ಕಟ್ಟಿ, ಮೊಟ್ಟೆ ಇಟ್ಟು ಮರಿಮಾಡಿ ಆ ಮರಿಗಳಿಗೆ ಹಾರಲು ಕಲಿಸುವವರೆಗೆ ಆದರ್ಶ ದಂಪತಿಗಳಂತೆ ಜೊತೆಯಾಗಿರುತ್ತದೆ.

ನಮ್ಮ ಮುಂದಿನ ಪೀಳಿಗೆಗೆ ಗುಬ್ಬಚ್ಚಿಯನ್ನು ಚಿತ್ರದಲ್ಲಿ ತೋರಿಸುವ ಬದಲು ಉಳಿಸುವ ಪ್ರಯತ್ನ ಮಾಡೋಣ.

English summary
March 20 is observed as World Sparrow Day. But, where are they now in cities? Sparrows have completely vanished from cities. We should make an attempt to save Sparrows.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X